ರಾಷ್ಟ್ರಪ್ರಶಸ್ತಿ ಪಡೆದ ರಿಷಬ್ ಶೆಟ್ಟಿಗೆ ಹರಿದು ಬಂದ ಶುಭಾಶಯ; ಯಶ್, ಪ್ರಭುದೇವ, ಜೂನಿಯರ್ ಎನ್‌ಟಿಆರ್ ವಿಶ್-sandalwood news yash jr ntr prabhudeva extend wishes to rishab shetty on 70th national film award kantara jra ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ರಾಷ್ಟ್ರಪ್ರಶಸ್ತಿ ಪಡೆದ ರಿಷಬ್ ಶೆಟ್ಟಿಗೆ ಹರಿದು ಬಂದ ಶುಭಾಶಯ; ಯಶ್, ಪ್ರಭುದೇವ, ಜೂನಿಯರ್ ಎನ್‌ಟಿಆರ್ ವಿಶ್

ರಾಷ್ಟ್ರಪ್ರಶಸ್ತಿ ಪಡೆದ ರಿಷಬ್ ಶೆಟ್ಟಿಗೆ ಹರಿದು ಬಂದ ಶುಭಾಶಯ; ಯಶ್, ಪ್ರಭುದೇವ, ಜೂನಿಯರ್ ಎನ್‌ಟಿಆರ್ ವಿಶ್

ರಾಷ್ಟ್ರಪ್ರಶಸ್ತಿ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿಗೆ ಚಿತ್ರರಂಗದ ವಿವಿಧ ಸ್ಟಾರ್‌ಗಳು ಹಾಗೂ ರಾಜಕೀಯ ಗಣ್ಯರು ಶುಭ ಹಾರೈಸಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌, ಜೂನಿಯರ್‌ ಎನ್‌ಟಿಆರ್‌ ಸೇರಿದಂತೆ ಹಲವರು ಟ್ವೀಟ್‌ ಮಾಡಿದ್ದಾರೆ.

ರಿಷಬ್ ಶೆಟ್ಟಿಗೆ ಹರಿದು ಬಂದ ಶುಭಾಶಯ; ಯಶ್, ಪ್ರಭುದೇವ, ಜೂನಿಯರ್ ಎನ್‌ಟಿಆರ್ ವಿಶ್
ರಿಷಬ್ ಶೆಟ್ಟಿಗೆ ಹರಿದು ಬಂದ ಶುಭಾಶಯ; ಯಶ್, ಪ್ರಭುದೇವ, ಜೂನಿಯರ್ ಎನ್‌ಟಿಆರ್ ವಿಶ್

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಆಗಿದ್ದು, ಕನ್ನಡ ಚಿತ್ರರಂಗ ಮತ್ತೆ ದೇಶಾದ್ಯಂತ ಗುರುತಿಸಿಕೊಂಡಿದೆ. ಕನ್ನಡ ಚಿತ್ರಂಗದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ್ದ ಕಾಂತಾರ ಹಾಗೂ ಕೆಜಿಎಫ್‌ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರಕಿದೆ. ಇದೇ ವೇಳೆ ಕಾಂತಾರ ಚಿತ್ರದಲ್ಲಿನ ನಟನೆಗಾಗಿ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಎರಡೆರಡು ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿರುವ ಕನ್ನಡದ ಸ್ಟಾರ್‌ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿವೆ. ರಾಕಿಂಗ್‌ ಸ್ಟಾರ್‌ ಯಶ್‌, ಜೂನಿಯರ್‌ ಎನ್‌ಟಿಆರ್‌ ಸೇರಿದಂತೆ ರಾಜಕೀಯ ನಾಯಕರು ಕೂಡಾ ವಿಶ್‌ ಮಾಡಿದ್ದಾರೆ.

ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ ಕಾಂತಾರ ಚಿತ್ರವು, ದೇಶದೆಲ್ಲೆಡೆ ದಾಖಲೆಯ ಅಭಿಮಾನಿಗಳನ್ನು ಸಂಪಾದಿಸಿತ್ತು. ಕೇವಲ 16 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಚಿತ್ರವು ಬರೋಬ್ಬರಿ 400ಕ್ಕೂ ಅಧಿಕ ಕೋಟಿ ಗಳಿಕೆ ಮಾಡಿತ್ತು. 2022ರ ಸೆಪ್ಟೆಂಬರ್‌ನಲ್ಲಿ ಕನ್ನಡದಲ್ಲಿ ಮಾತ್ರವೇ ರಿಲೀಸ್‌ ಆಗಿದ್ದ ಚಿತ್ರ, ಆ ಬಳಿಕ ಬೇರೆ ಭಾಷೆಗಳಲ್ಲಿ ಡಬ್‌ ಆಗಿ ತೆರೆಕಂಡಿತ್ತು. ಚಿತ್ರವನ್ನು ವಿವಿಧ ರಾಜ್ಯಗಳ ಜನರು ಇಷ್ಟಪಟ್ಟಿದ್ದರು. ಮುಖ್ಯವಾಗಿ ಕನ್ನಡ ಚಿತ್ರರಂಗ ಎಲ್ಲೆಡೆ ಗಮನಸೆಳೆಯುವಂತೆ ಮಾಡಿತು. ಇದೀಗ ಇದೇ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಬರುತ್ತಿದ್ದಂತೆ, ಶುಭಾಶಯಗಳ ಸುರಿಮಳೆ ಬರುತ್ತಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಜೂನಿಯರ್‌ ಎನ್‌ಟಿಆರ್‌, “ಕಾಂತಾರ ಚಿತ್ರದಲ್ಲಿ ಅದ್ಭುತ ನಟನೆಗಾಗಿ ಪ್ರಶಸ್ತಿ ಸಿಕ್ಕಿರುವುದಕ್ಕೆ ರಿಷಬ್ ಶೆಟ್ಟಿಯವರಿಗೆ ಅಭಿನಂದನೆಗಳು. ನಿಮ್ಮ ಅಭಿನಯವನ್ನು ನೆನಪಿಸಿಕೊಂಡಾಗ ಈಗಲೂ ನನಗೆ ರೋಮಾಂಚನವಾಗುತ್ತದೆ. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ಸಂಪೂರ್ಣ ಕಾಂತಾರ ತಂಡಕ್ಕೆ ಅಭಿನಂದನೆಗಳು” ಎಂದು ಅವರು ಹೇಳಿದ್ದಾರೆ.

ಯಶ್‌ ಟ್ವೀಟ್

ರಾಕಿಂಗ್‌ ಸ್ಟಾರ್‌ ಯಶ್‌ ಟ್ವೀಟ್‌ ಮಾಡಿ, “ಎಲ್ಲಾ ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ಹೃತ್ಪೂರ್ವಕ ಅಭಿನಂದನೆಗಳು. ರಿಷಬ್ ಶೆಟ್ಟಿ, ಪ್ರಶಾಂತ್‌ ನೀಲ್‌, ವಿಜಯ್‌ ಕಿರಗಂದೂರ್‌ ಮತ್ತು ಹೊಂಬಾಳೆ ಫಿಲ್ಮ್ಸ್‌ ತಂಡಕ್ಕೆ ವಿಶೇಷ ಅಭಿನಂದನೆಗಳು. ಇದು ನಿಜಕ್ಕೂ ಕನ್ನಡ ಚಿತ್ರರಂಗದ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ,” ಎಂದು ಯಶ್ ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಟ್ವೀಟ್‌ ಮಾಡಿದ್ದು, ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ರಿಷಭ್‌ ಶೆಟ್ಟಿ ಸೇರಿದಂತೆ ಅತ್ಯುತ್ತಮ ಮನೋರಂಜನಾ ಚಲನಚಿತ್ರ ಪ್ರಶಸ್ತಿ ಗೆದ್ದ ಕಾಂತಾರ ಚಿತ್ರತಂಡಕ್ಕೆ ಹಾಗೂ ನಾಡಿನ ಎಲ್ಲ ಪ್ರಶಸ್ತಿ ವಿಜೇತ ಸಾಧಕರಿಗೆ ಅಭಿನಂದನೆಗಳು, ಎಂದು ಬರೆದುಕೊಂಡಿದ್ದಾರೆ.‌

ಕೇಂದ್ರಸಚಿವ ಕುಮಾರಸ್ವಾಮಿ ಅಭಿನಂದನೆ

ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಟ್ವೀಟ್‌ ಮಾಡಿ, "ಕನ್ನಡ ಚಿತ್ರರಂಗದ ಮೈಲುಗಲ್ಲು 'ಕಾಂತಾರ' ಚಿತ್ರದ ಮನೋಜ್ಞ ಅಭಿನಯಕ್ಕಾಗಿ 2024ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಕನ್ನಡ ಚಿತ್ರರಂಗವು ಅನನ್ಯ ಪ್ರತಿಭೆಗಳ ಅಕ್ಷಯನಿಧಿ. ಹೀಗಾಗಿ ಇನ್ನಷ್ಟು ಅತ್ಯುತ್ತಮ ಸಿನಿಮಾಗಳು ತಯಾರಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿ ಕಿರೀಟಕ್ಕೆ ಮತ್ತಷ್ಟು ಗರಿಗಳು ಸೇರಲಿ ಎಂದು ಮನಸಾರೆ ಹಾರೈಸುತ್ತೇನೆ. ಕೆಜಿಎಫ್-2 ಅತ್ಯುತ್ತಮ ಕನ್ನಡ ಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವುದು ಸಂತಸದ ಸಂಗತಿ" ಎಂದು ಅವರ ಹೇಳಿದ್ದಾರೆ.

ನಿರ್ದೇಶಕ ಪ್ರಭುದೇವ, ವಿಧಾನಸಭಾ ಸ್ಪೀಕರ್‌ ಯುಟಿ ಖಾದರ್‌ ಸೇರಿದಂತೆ ಹಲವರು ವಿಶ್‌ ಮಾಡಿದ್ದಾರೆ. ಶುಭಹಾರೈಸಿದ ಎಲ್ಲರಿಗೂ ರಿಷಬ್ ಧನ್ಯವಾದ ಸಲ್ಲಿಸಿದ್ದಾರೆ.