ವಾರಾಂತ್ಯಕ್ಕೆ ನೋಡಲು ಇಲ್ಲಿದೆ ನೋಡಿ ಹಳೆಯ ಕನ್ನಡ ಸಿನಿಮಾಗಳ ಪಟ್ಟಿ; ಈ ಭಾನುವಾರ ನಿಶ್ಚಿಂತೆಯಿಂದ ಕಳೆಯಿರಿ
ಈ ವಾರಾಂತ್ಯದಲ್ಲಿ ಏನು ಮಾಡೋದು ಎಂದು ನೀವು ಆಲೋಚಿಸುತ್ತಿದ್ದರೆ ಒಂದಿಷ್ಟು ಹಳೆಯ ಕನ್ನಡ ಸಿನಿಮಾಗಳನ್ನು ನೋಡಿ. ಕೆಲವೊಂದು ಸಿನಿಮಾಗಳನ್ನು ನೀವು ಒಂದು ಬಾರಿ ನೋಡಿದ್ದರು ಮತ್ತೆ ಮತ್ತೆ ನೋಡುವ ಮನಸಾಗುತ್ತದೆ. ಅಂತಹ ಸಿನಿಮಾಗಳ ಲಿಸ್ಟ್ ಇಲ್ಲಿದೆ.
ನೀವು ಈ ವಾರ ಕಾಮಿಡಿ ಕನ್ನಡ ಸಿನಿಮಾಗಳನ್ನು ನೋಡಲು ಬಯಸಿದರೆ ಒಂದಿಷ್ಟು ಹಳೆಯ ಸಿನಿಮಾಗಳನ್ನು ತಪ್ಪದೆ ನೋಡಿ. ಯುಟ್ಯೂಬ್‌ನಲ್ಲಿ ಸಾಕಷ್ಟು ಸಿನಿಮಾಗಳು ಲಭ್ಯವಿದೆ. ನೀವು ಯಾವುದೇ ಓಟಿಟಿಗೆ ಹಣ ನೀಡದೆ ಕೇವಲ ನೆಟ್ ಪ್ಯಾಕ್ ಒಂದಿದ್ದರೆ ಸಾಕು ನೀವು ಈ ಸಿನಿಮಾಗಳನ್ನು ನೋಡಬಹುದು. ಚರಣ್ ಸಿನಿಮಾಗಳು, ನಟ ರಮೇಶ್ ಅರವಿಂದ್, ದೊಡ್ಡಣ್ಣ, ಜಗ್ಗೇಶ್ ಹೀಗೆ ನಾನಾ ಕಲಾವಿದರು ಅಭಿನಯಿಸಿದ ಸಾಕಷ್ಟು ಕಾಮಿಡಿ ಮೂವಿಗಳು ಯುಟ್ಯೂಬ್‌ನಲ್ಲಿ ಲಭ್ಯವಿದೆ.
ಜೈ ಲಲಿತಾ
ಇದು ಕನ್ನಡದ ಕಾಮಿಡಿ ಸಿನಿಮಾ ಇದರಲ್ಲಿ ಚರಣ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ರವಿಶಂಕರ್ ಗೌಡ, ಹರೀಶ್ ರಾಜ್, ಐಶ್ವರ್ಯ ದೇವನ್, ಸಾಧು ಕೋಕಿಲ ಮತ್ತು ಇತರರು ಕೂಡ ಈ ಸಿನಿಮಾದಲ್ಲಿ ಭಾಗಿಯಾಗಿದ್ದಾರೆ. ಚರಣ್ ಇದರಲ್ಲಿ ಸ್ತ್ರೀವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನೋಡುತ್ತಾ ನೀವು ನಗುವಿನಲ್ಲಿ ಮುಳುಗಿ ಹೋಗ್ತೀರಾ. ನಿರ್ದೇಶಕ ಪಿ ಕುಮಾರ್ ಹಾಸ್ಯವನ್ನು ಕೇಂದ್ರೀಕರಿಸಿಕೊಂಡು ಈ ಸಿನಿಮಾ ಮಾಡಿದ್ದಾರೆ.
ಡಕೋಟಾ ಎಕ್ಸಪ್ರೆಸ್
ಚಿತ್ರದಲ್ಲಿ ರಾಕ್‌ಲೈನ್ ವೆಂಕಟೇಶ್ ಮತ್ತು ಓಂ ಪ್ರಕಾಶ್ ರಾವ್ ನಟಿಸಿದ್ದಾರೆ. ಇವರಿಬ್ಬರ ನಟನೆಯೇ ಈ ಸಿನಿಮಾಕ್ಕೆ ಗೆಲುವು ತಂದುಕೊಟ್ಟಿದೆ. ಎಷ್ಟು ಬಾರಿ ನೊಡಿದರೂ ಈ ಸಿನಿಮಾ ಬೋರ್‌ಎಂದು ಅನಿಸುವುದಿಲ್ಲ. ಒಂದು ಬಸ್‌ಅನ್ನು ಕಥೆಯ ಮೂಲವಾಗಿ ಇಟ್ಟುಕೊಂಡು ಈ ಸಿನಿಮಾವನ್ನು ಹೆಣೆಯಲಾಗಿದೆ. ಡಕೋಟಾ ಎಕ್ಸಪ್ರೆಸ್ ಉಂಟುಮಾಡುವ ಅವಾಂತರಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಮನೆ ಅಳಿಯ
ಕಲ್ಯಾಣಕುಮಾರ್, ಜಯಲಲಿತಾ, ಕೆ.ಎಸ್.ಅಶ್ವಥ್, ಬಾಲಕೃಷ್ಣ, ನರಸಿಂಹರಾಜು, ಡಿಕ್ಕಿ ಮಾಧವರಾವ್, ಎಂ.ಪಿ.ಶಂಕರ್, ಗುಗ್ಗು, ರಂಗಭೂಮಿ ನಾರಾಯಣ್, ಹನುಮಂತಾಚಾರ್ ಹೀಗೆ ಸಾಕಷ್ಟು ಪರಿಣಿತರು ಅಭಿನಯಿಸಿದ ಈ ಸಿನಿಮಾವನ್ನು ನೀವು ನೋಡಬಹುದು. ನರಸಿಂಹ ರಾಜು ಅವರ ಕಾಮಿಡಿ ಈ ಚಿತ್ರದಲ್ಲಿ ನಿಮ್ಮನ್ನು ರಂಜಿಸಲಿದೆ. ಇದು ಕಪ್ಪುಬಿಳುಪಿನ ಚಿತ್ರವಾಗಿದ್ದು 1969ರಲ್ಲಿ ಬಿಡುಗಡೆಯಾಗಿದೆ.
ಗುರು ಶಿಷ್ಯರು
ಗುರು ಶಿಷ್ಯರು 2022ರಲ್ಲಿ ಬಿಡುಗಡೆಯಾದ ಚಿತ್ರ. ಖೋ-ಖೋ ಆಟ ಆಡುತ್ತಾ ಊರಿನ ಭವಿಷ್ಯವೇ ನಿರ್ಧಾರ ಆಗುತ್ತದೆ ಎನ್ನುವ ಮಟ್ಟಿಗೆ ಬಂದು ನಿಲ್ಲುವ ಒಂದು ಮೇಸ್ಟ್ರ್ ಜೀವನದ ಕಥೆ ಇದು. ಪೇಟೆಯಲ್ಲಿ ಯಾವುದೂ ಉದ್ಯೋಗ ಇಲ್ಲದೇ ಇರುವವನೊಬ್ಬ ಹಳ್ಳಿಗೆ ಬಂದು ಆ ಜೀವನ ಶೈಲಿಯನ್ನು ಅರ್ಥ ಮಾಡಿಕೊಳ್ಳುತ್ತಾ ಅಲ್ಲಿನ ಮಕ್ಕಳಿಗೆ ಪಾಠ ಹೇಳುಕೊಡುವ ಬಗ್ಗೆ ಈ ಸಿನಿಮಾ ಇದೆ. ಈ ಸಿನಿಮಾದುದ್ದಕ್ಕೂ ನೀವು ಕಾಮಿಡಿಯನ್ನು ನೋಡಬಹುದು.
ರಾಮ ಶಾಮ ಭಾಮ
ರಾಮ ಶಾಮ ಭಾಮಾ 2005ರಲ್ಲಿ ತೆರೆಕಂಡ ಸಿನಿಮಾ. ರಮೇಶ್ ಅರವಿಂದ ಅವರ ಚೊಚ್ಚಲ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ಕಮಲ್ ಹಾಸನ್ , ಊರ್ವಶಿ , ಡೈಸಿ ಬೋಪಣ್ಣ ಮತ್ತು ಶ್ರುತಿ ಪೋಷಕ ಪಾತ್ರಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. ಈ ಸಿನಿಮಾವನ್ನು ಒಮ್ಮೆ ನೋಡಿದರೆ ನೀವು ಇನ್ನೊಮ್ಮೆ ನೋಡಲು ಬಯಸುತ್ತೀರಿ. ಸಿನಿಮಾ ಆರಂಭದಿಂದ ಕೊನೆಯವರೆಗೂ ನೀವು ಈ ಸಿನಿಮಾವನ್ನು ಎಂಜಾಯ್ ಮಾಡಬಹುದು. ಈ ಚಿತ್ರದ ಛಾಯಾಗ್ರಹಣ ಮತ್ತು ಸಂಕಲನವನ್ನು ಪಿಕೆಹೆಚ್ ದಾಸ್ ಮತ್ತು ನಾಗೇಂದ್ರ ಅರಸ್ ಮಾಡಿದ್ದಾರೆ.