ಖುಷಿಯಾಗಿರುವೆ, ಅಮೆರಿಕದಲ್ಲಿ ಅರೆಕಾಲಿಕ ಶಾಲಾ ಶಿಕ್ಷಕಿಯಾಗಿದ್ದೇನೆ;ಯುವ‌ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಇನ್‌ಸ್ಟಾಗ್ರಾಮ್‌ ಪೋಸ್ಟ್
ಕನ್ನಡ ಸುದ್ದಿ  /  ಮನರಂಜನೆ  /  ಖುಷಿಯಾಗಿರುವೆ, ಅಮೆರಿಕದಲ್ಲಿ ಅರೆಕಾಲಿಕ ಶಾಲಾ ಶಿಕ್ಷಕಿಯಾಗಿದ್ದೇನೆ;ಯುವ‌ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಇನ್‌ಸ್ಟಾಗ್ರಾಮ್‌ ಪೋಸ್ಟ್

ಖುಷಿಯಾಗಿರುವೆ, ಅಮೆರಿಕದಲ್ಲಿ ಅರೆಕಾಲಿಕ ಶಾಲಾ ಶಿಕ್ಷಕಿಯಾಗಿದ್ದೇನೆ;ಯುವ‌ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಇನ್‌ಸ್ಟಾಗ್ರಾಮ್‌ ಪೋಸ್ಟ್

ಸ್ಯಾಂಡಲ್‌ವುಡ್‌ ನಟ ಯವ ರಾಜ್‌ಕುಮಾರ್‌ ಹಾಗೂ ಪತ್ನಿ ಶ್ರೀದೇವಿ ಭೈರಪ್ಪ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದಾಗಿನಿಂದ ಬೇರೆ ಬೇರೆ ವಾಸಿಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಶ್ರೀದೇವಿ ಬೇಸರದಿಂದ ಹೊರ ಬಂದಿರುವೆ, ಅಮೆರಿಕದಲ್ಲಿ ಅರೆಕಾಲಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಕಷ್ಟದ ಸಮಯದಲ್ಲಿ ಧೈರ್ಯ ತುಂಬಿದವರಿಗೆ ಧನ್ಯವಾದ ಅರ್ಪಿಸಿದ ಯುವ‌ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ
ಕಷ್ಟದ ಸಮಯದಲ್ಲಿ ಧೈರ್ಯ ತುಂಬಿದವರಿಗೆ ಧನ್ಯವಾದ ಅರ್ಪಿಸಿದ ಯುವ‌ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ (PC: Sridevi Byrappa Instagram)

ವರನಟ ಡಾ ರಾಜ್‌ಕುಮಾರ್‌ ಅವರ ಕುಟುಂಬವನ್ನು ಅಭಿಮಾನಿಗಳು ದೊಡ್ಮನೆ ಎಂದೇ ಕರೆಯುತ್ತಾರೆ. ತುಂಬು ಕುಟುಂಬ, ಅಭಿಮಾನಿಗಳಲ್ಲಿ ದೇವರನ್ನು ಕಾಣುತ್ತಿದ್ದ ಅಣ್ಣಾವ್ರು, ಶಿವಣ್ಣ, ರಾಘಣ್ಣ, 3 ವರ್ಷಗಳ ಹಿಂದೆ ಕಣ್ಮರೆಯಾದ ಅಪ್ಪು ಎಲ್ಲರನ್ನೂ ಕನ್ನಡ ಸಿನಿಪ್ರಿಯರು ಆರಾಧಿಸುತ್ತಿದ್ದಾರೆ. ಆದರೆ ದೊಡ್ಮನೆಯಲ್ಲಿ ಯುವ ರಾಜ್‌ಕುಮಾರ್‌ ಹಾಗೂ ಪತ್ನಿ ಶ್ರೀದೇವಿ ನಡುವೆ ಬಿರುಕು ಉಂಟಾಗಿರುವ ವಿಚಾರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಪತಿಯಿಂದ ದೂರ ವಾಸಿಸುತ್ತಿರುವ ಶ್ರೀದೇವಿ, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಗಮನ ಸೆಳೆಯುತ್ತಿದೆ.

ಧೈರ್ಯ ತುಂಬಿದವರಿಗೆ ಧನ್ಯವಾದ ಅರ್ಪಿಸಿದ ಶ್ರೀದೇವಿ ಭೈರಪ್ಪ

ಕಳೆದ ಒಂದು ವರ್ಷದಿಂದ ನನ್ನ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಬಹಳ ಕಷ್ಟಪಟ್ಟೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನನ್ನ ಆತ್ಮೀಯ ಸ್ನೇಹಿತರು, ಕುಟುಂಬದವರು, ಗುರುಗಳು ಎಲ್ಲರೂ ನನಗೆ ಬಹಳ ಬೆಂಬಲವಾಗಿ ನಿಂತರು. ನನಗೆ ಧೈರ್ಯ ತುಂಬಿದರು. ಲಂಡನ್‌ನಲ್ಲಿರುವ ನನ್ನ ಸ್ನೇಹಿತೆ ನನ್ನೊಂದಿಗೆ ಪ್ರತಿದಿನ ಕರೆ ಮಾಡಿ ನನಗೆ ಸಮಾಧಾನ ಮಾಡುತ್ತಿದ್ದಳು. ನಾನು ಮನಸ್ಸು ಬಿಚ್ಚಿ ಮಾತನಾಡುವಂತೆ, ಭಾವನೆಗಳನ್ನು ಹಂಚಿಕೊಳ್ಳುವಂತೆ, ನಗುವಂತೆ ಸಲಹೆ ನೀಡಿದರು. ನೀನು ಬಹಳ ಸುಂದರವಾಗಿದ್ದೀಯ, ನೀನು ಇದಕ್ಕಿಂತ ಉತ್ತಮವಾದದ್ದನ್ನು ಪಡೆಯುವೆ ಎಂದೆಲ್ಲಾ ಮಾನಸಿಕ ಸ್ಥೈರ್ಯ ತುಂಬಿದರು.

ಅರೆಕಾಲಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ

ಈ ರೀತಿಯ ಬೆಂಬಲ ,ಪ್ರೋತ್ಸಾಹ ಸಿಕ್ಕಿರುವುದಕ್ಕೆ ಎಲ್ಲರಿಗೂ ನಾನು ಕೃತಜ್ಞತೆ ಅರ್ಪಿಸುತ್ತೇನೆ. ನಾನು ಈಗ ಮೊದಲಿನಂತೆ ಆಗುತ್ತಿದ್ದೇನೆ. ಖುಷಿಯಿಂದ ಬದುಕುತ್ತಿದೇನೆ. ಅಮೆರಿಕ ಸಂಸ್ಥೆಯೊಂದರಲ್ಲಿ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಅದ್ಭುತ ವ್ಯಕ್ತಿಗಳಿಂದ ಕೆಲಸ ಕಲಿಯುತ್ತಿದ್ದೇನೆ. ಅರೆಕಾಲಿಕ ಶಾಲಾ ಶಿಕ್ಷಕಿಯಾಗಿ ಕೂಡಾ ಕೆಲಸ ಮಾಡುತ್ತಿದ್ದೇನೆ. ಈ ವೃತ್ತಿಯನ್ನು ನಾನು ಬಹಳ ಪ್ರೀತಿಸುತ್ತೇನೆ, ವಯಸ್ಸಾದವರಿಗಿಂತ ಮಕ್ಕಳಿಂದ ನಾನು ಸಾಕಷ್ಟು ಕಲಿಯುತ್ತೇನೆ ಎಂದು ನಂಬಿದ್ದೇನೆ, ನಾನೀಗ ಖುಷಿಯಾಗಿದ್ದೇನೆ ಎಂದು ಶ್ರೀದೇವಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಕಪ್ಪು ಬಣ್ಣದ ನೆಕ್‌ಲೆಸ್‌ ಔಟ್‌ಫಿಟ್‌ ಧರಿಸಿರುವ ಶ್ರೀದೇವಿ, ಈ ಡ್ರೆಸ್‌ ಎಷ್ಟು ಚೆನ್ನಾಗಿದೆ ಅಲ್ಲವೇ, ಏಕೆಂದರೆ ಇದು ಬೆಂಗಳೂರಿನಲ್ಲಿ ತಯಾರಿಸಿದ್ದು ಅಷ್ಟೇ ಅಲ್ಲ ಇದಕ್ಕೆ ಪಾಕೆಟ್‌ ಕೂಡಾ ಇದೆ, ಇದನ್ನು ತಯಾರಿಸಿದವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಚಿಕ್ಕ ಮಕ್ಕಳಂತೆ ಸಂಭ್ರಮಿಸಿದ್ದಾರೆ.

2019ರಲ್ಲಿ ಮದುವೆಯಾಗಿದ್ದ ಯವ ರಾಜ್‌ಕುಮಾರ್-ಶ್ರೀದೇವಿ

ಯುವರಾಜ್‌ಕುಮಾರ್‌ ಹಾಗೂ ಶ್ರೀದೇವಿ ಇಬ್ಬರದ್ದೂ ಲವ್‌ ಮ್ಯಾರೇಜ್‌. 2019 ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಎಲ್ಲಾ ಚೆನ್ನಾಗಿದೆ ಎಂದುಕೊಳ್ಳುವಾಗಲೇ ಯುವ ಹಾಗೂ ಶ್ರೀದೇವಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ವೈರಲ್‌ ಅಯ್ತು. ಇದು ಸುಳ್ಳಾಗಿರಲಿ ಎಂದುಕೊಂಡ ಅಭಿಮಾನಿಗಳಿಗೆ ಸತ್ಯ ತಿಳಿದು ಶಾಕ್‌ ಆಯ್ತು. ಯುವರಾಜ್‌ಕುಮಾರ್‌ಗೆ ನಟಿಯೊಬ್ಬರ ಜೊತೆ ಅಫೇರ್‌ ಇದೆ ಎಂದು ಶ್ರೀದೇವಿ ಆರೋಪಿಸಿದರೆ, ಆಕೆಗೆ ಮದುವೆ ಮುಂಚಿನಿಂದ ಬಾಯ್‌ಫ್ರೆಂಡ್‌ ಇದ್ದು ಈಗಲೂ ಅಫೇರ್‌ ಇದೆ ಎಂದು ಯುವರಾಜ್‌ಕುಮಾರ್‌ ಆರೋಪಿಸಿದ್ದರು. 2024ರ ಜೂನ್ 6ರಂದು ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯಕ್ಕೆ ಶ್ರೀದೇವಿ ಅಮೆರಿಕದಲ್ಲಿ ನೆಲೆಸಿದ್ದಾರೆ.

ಶ್ರೀದೇವಿ ಪೋಸ್ಟ್‌ಗೆ ಕಾಮೆಂಟ್‌ ಮಾಡಿರುವ ಫಾಲೋವರ್‌ಗಳು ನಿಮ್ಮೊಂದಿಗೆ ನಾವೂ ಇದ್ದೇವೆ, ಹಳೆಯದನ್ನು ಮರೆತು ಹೀಗೇ ಖುಷಿಯಾಗಿರಿ ಎಂದು ಧೈರ್ಯ ಹೇಳುತ್ತಿದ್ದಾರೆ.

Whats_app_banner