Lakshmi Baramma: ಕಾವೇರಿ ಕಣ್ಣೆದುರೇ ಬಂದ್ಲು ಕೀರ್ತಿ; ಗೊಂಬೆ ಆಡಿಸುವವನ ಮಾತು ನಿಜವಾಗಿ ಕಾವೇರಿ ಎದೆಯಲ್ಲಿ ಶುರುವಾಯ್ತು ನಡುಕ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma: ಕಾವೇರಿ ಕಣ್ಣೆದುರೇ ಬಂದ್ಲು ಕೀರ್ತಿ; ಗೊಂಬೆ ಆಡಿಸುವವನ ಮಾತು ನಿಜವಾಗಿ ಕಾವೇರಿ ಎದೆಯಲ್ಲಿ ಶುರುವಾಯ್ತು ನಡುಕ

Lakshmi Baramma: ಕಾವೇರಿ ಕಣ್ಣೆದುರೇ ಬಂದ್ಲು ಕೀರ್ತಿ; ಗೊಂಬೆ ಆಡಿಸುವವನ ಮಾತು ನಿಜವಾಗಿ ಕಾವೇರಿ ಎದೆಯಲ್ಲಿ ಶುರುವಾಯ್ತು ನಡುಕ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿಗೆ ತುಂಬಾ ದೊಡ್ಡ ಶಾಕ್ ಕಾದಿದೆ. ಕೀರ್ತಿ ಅವಳ ಎದುರೇ ಕಾಣಿಸಿಕೊಂಡಿದ್ದಾಳೆ. ಇನ್ನು ಬೊಂಬೆ ಆಡಿಸುವವನು ಅವಳ ಜೀವನದಲ್ಲಿ ಎದುರಾದಾಗಲೆಲ್ಲ ಬರಿ ಚಿಂತೆಯೇ ಅವಳಿಗೆ ಕಾಡುತ್ತದೆ. ಈ ಬಾರಿಯೂ ಹಾಗೇ ಆಗಿದೆ.

 ಕಾವೇರಿ ಕಣ್ಣೆದುರೇ ಬಂದ್ಲು ಕೀರ್ತಿ
ಕಾವೇರಿ ಕಣ್ಣೆದುರೇ ಬಂದ್ಲು ಕೀರ್ತಿ

ಕಾವೇರಿ ಲಕ್ಷ್ಮೀಯನ್ನು ಹೇಗಾದರೂ ಮಾಡಿ ಸಾಯಿಸಬೇಕು ಎಂದು ಅಂದುಕೊಂಡಾಗಲೆಲ್ಲ ಒಂದಲ್ಲ ಒಂದು ರೀತಿಯ ತಡೆ ಆಗುತ್ತದೆ. ನಾಟಕ ನಡೆಯುತ್ತಿರುವ ಸಂದರ್ಭದಲ್ಲಿ ಹೇಗಾದರೂ ಮಾಡಿ ಲಕ್ಷ್ಮೀಯನ್ನು ಕೊಲ್ಲಬೇಕು ಎಂದು ಕಾವೇರಿ ಅಂದುಕೊಂಡಿರುತ್ತಾಳೆ. ಆದರೆ ಅದು ಈ ಬಾರಿ ಸಾಧ್ಯ ಆಗುವುದಿಲ್ಲ. ಆ ನಂತರದಲ್ಲಿ ಯಾವಾಗಲೂ ತನಗೆ ಸೋಲೇ ಆಗುತ್ತಿದೆ ಎಂದು ಬೇಸರ ಮಾಡಿಕೊಂಡು ಕಾವೇರಿ ಬೇರೆ ಯಾವುದಾದರೂ ಉಪಾಯ ನಾನು ಮಾಡಬಲ್ಲೆ ಎಂಬ ಆಲೋಚನೆಯಲ್ಲಿ ಸಾಗುತ್ತಿರುತ್ತಾಳೆ. ಆಗ ದಾರಿ ಮಧ್ಯದಲ್ಲಿ ಬೊಂಬೆ ಆಡಿಸುವವನು ಎದುರಾಗುತ್ತಾನೆ. ಅವನು ಕಾವೇರಿ ಬಳಿ ಮಾತಾಡುತ್ತಾನೆ.

ಅವನು ಯಾವಾಗ ಸಿಕ್ಕಿ ಮಾತನಾಡಿದರೂ ಕಾವೇರಿಗೆ ಚಿಂತೆಯೇ ಆಗಿದೆ. ಅವನು ಹೇಳಿದ ಹಾಗೇ ಅವಳ ಜೀವನದಲ್ಲಿ ಎಲ್ಲವೂ ನಡೆದಿದೆ. ಹೀಗಿರುವಾಗ ಅವನ ಮೇಲೆ ಸಿಟ್ಟಾಗಿ ಅವನ ಹತ್ತಿರ ಕಾವೇರಿ ಮಾತಾಡುತ್ತಾಳೆ. ಅವನು ಹೇಳುತ್ತಾನೆ, ನಿನ್ನ ಮನೆಯಿಂದ ಈ ಬಾರಿ ನೀನೇ ಹೊರಗಡೆ ಹೋಗುತ್ತೀಯಾ. ನೀನು ಮಾಡಿದ ಪಾಪಗಳೆಲ್ಲ ಈಗ ಎಲ್ಲರೆದುರು ಬಯಲಾಗುತ್ತದೆ ಎಂದು ಹೇಳುತ್ತಾನೆ. ಆ ಮಾತನ್ನು ಕೇಳಿ ಇವಳಿಗೆ ಕೋಪ ಬರುತ್ತದೆ.

ಹಿಂದೆ ಯಾರೋ ನಿಂತು ದೊಡ್ಡದಾಗಿ ನಗುತ್ತಿದ್ದಂತೆ ಕೇಳಿಸುತ್ತದೆ. ನಂತರ ಹಿಂದಿರುಗಿ ನೋಡುವಷ್ಟರಲ್ಲಿ ಅಲ್ಲಿ ಕೀರ್ತಿ ಕಾಣಿಸುತ್ತಾಳೆ. ಕೀರ್ತಿಯನ್ನು ಕಂಡು ಕಾವೇರಿಗೆ ಶಾಕ್ ಆಗಿದೆ. ಸತ್ತು ಹೋದವಳು ಈಗ ಮತ್ತೆ ಮರಳಿ ಯಾಕೆ ಬಂದಿದ್ದಾಳೆ ಎಂದು ಅವಳಿಗೆ ಆಲೋಚನೆ ಆಗುತ್ತದೆ. ತನ್ನ ಕಣ್ಣುಗಳನ್ನೇ ತನ್ನಿಂದ ನಂಬಲು ಸಾಧ್ಯವಾಗುವುದಿಲ್ಲ.

ಕಾವೇರಿ ಇಷ್ಟೂ ದಿನ ಲಕ್ಷ್ಮೀಯನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿದ್ದಾಳೆ. ಇನ್ನು ಮುಂದಿನ ದಿನಗಳಲ್ಲಿ ಇದ್ಯಾವುದನ್ನೂ ನಾನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ ಎಂದು ಈಗ ಲಕ್ಷ್ಮೀ ಕೂಡ ನಿರ್ಧಾರ ಮಾಡಿದ್ದಾಳೆ. ಮನೆಯಲ್ಲೂ ಈಗ ಕಾವೇರಿ ಗುಣ ಏನು ಎನ್ನುವುದು ಸ್ವಲ್ಪ ಮಟ್ಟಿಗೆ ಅನುಮಾನ ಹುಟ್ಟು ಹಾಕಿದೆ. ಆದರೂ ಸಾಕ್ಷಿ ಇಲ್ಲದೆ ವೈಷ್ಣವ್ ಮಾತ್ರ ಯಾವುದನ್ನೂ ನಂಬೋದಿಲ್ಲ

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner