Bigg Boss Kannada: ಪ್ರದೀಪ್, ಪ್ರತಾಪ್, ರಕ್ಷಕ್ ಎಲ್ಲ ಗ್ರಹಗಳು ಒಟ್ಟಿಗೆ ಸೇರಿವೆ, ಮುಂದೇನಾಗುತ್ತೋ? ನೆಟ್ಟಿಗರಿಂದ ಟ್ರೋಲ್
Bigg boss Kannada 10: ಬಿಗ್‌ಬಾಸ್ ಸೀಸನ್ 10ರ ಎರಡನೇ ದಿನ ಬಿಗ್ ಮನೆಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಎಂಟ್ರಿಕೊಟ್ಟಿದ್ದಾರೆ. ಬಿಳಿ ಉಡುಪಲ್ಲಿ ಡೊಳ್ಳು ಕುಣಿತದೊಂದಿಗೆ ಮನೆ ಪ್ರವೇಶಿಸಿದ್ದಾರೆ. ಇವರ ಆಗಮನವಾಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆ ಮಾತುಗಳು ಕೇಳಿಬರುತ್ತಿವೆ.
Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 10ರ ಆಟ ಶುರುವಾಗಿದೆ. 17 ಮಂದಿ ಹೊಸ ಬಿಗ್ ಬಾಸ್ ಮನೆ ಪ್ರವೇಶ ಪಡೆದಿದ್ದಾರೆ. ಆ ಪೈಕಿ ಆರು ಮಂದಿಗೆ ಒಂದು ವಾರದ ಗಡುವು ನೀಡಿ ಕಳುಹಿಸಿದ್ದಾರೆ ಕಿಚ್ಚ ಸುದೀಪ್. ಹೀಗಿರುವಾಗಲೇ ಇದೇ ರಿಯಾಲಿಟಿ ಶೋ ಅಂಗಳಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಎಂಟ್ರಿ ಕೊಟ್ಟಿದ್ದಾರೆ. ಶಾಸಕರನ್ನು ನೋಡಿದ ಸ್ಪರ್ಧಿಗಳೂ ಕೊಂಚ ಅಚ್ಚರಿಗೊಳಗಾಗಿದ್ದಾರೆ.
ಪ್ರದೀಪ್ ಈಶ್ವರ್ ತಮ್ಮ ಸ್ಪೂರ್ತಿದಾಯಕ ಮಾತುಗಳಿಂದಲೇ ಎಲ್ಲರ ಗಮನ ಸೆಳೆದವರು. ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ತಮ್ಮ ಡೈಲಾಗ್, ಮತ್ತು ಆಡುವ ಮಾತುಗಳಿಂದಲೇ ಜನರ ಬಾಯಲ್ಲಿ ನಲಿದಿದ್ದರು ಪ್ರದೀಪ್. ಚಿಕ್ಕಬಳ್ಳಾಪುರದಲ್ಲಿ ಪ್ರಬಲ ಬಿಜೆಪಿ ನಾಯಕ ಡಾ. ಕೆ. ಸುಧಾಕರ್ ಎದುರು ಕಾಂಗ್ರೆಸ್‌ನಿಂದ ಪ್ರದೀಪ್ ಕಣಕ್ಕಿಳಿದು ಅಚ್ಚರಿಯ ಗೆಲುವನ್ನೂ ಸಾಧಿಸಿದ್ದರು. ಜತೆಗೆ ಟ್ರೋಲ್ ಆಗುವುದರ ವಿಚಾರಕ್ಕೂ ಪ್ರದೀಪ್ ಮುಂದು.
ಇದೀಗ ಇದೇ ಶಾಸಕ ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಈ ಮೊದಲೇ ಈ ಸಲದ ಬಿಗ್‌ಬಾಸ್‌ಗೆ ಪ್ರದೀಪ್ ಈಶ್ವರ್ ಆಗಮಿಸುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಗ್ರ್ಯಾಂಡ್ ಓಪನಿಂಗ್ ದಿನ ಅವರ ಆಗಮನವಾಗಲಿಲ್ಲ. ಬದಲಿಗೆ ಮಾರನೇ ದಿನವಾದ ಇಂದು (ಅ. 9) ಬಿಗ್ ಬಾಸ್‌ಗೆ ಡೊಳ್ಳು ಕುಣಿತದ ಸದ್ದಿನ ಜತೆಗೆ ಎಂಟ್ರಿ ಕೊಟ್ಟಿದ್ದಾರೆ. ಡೊಳ್ಳು ಕುಣಿತದ ಸದ್ದು ಜೋರಾಗ್ತಿದ್ದಂತೆ, ಮನೆಯೊಳಗಿದ್ದ ಎಲ್ಲರೂ ಏನಾಯಿತೆಂದು ಹೊರಗೆ ನೋಡುತ್ತಿದ್ದಂತೆ, ಶಾಸಕ ಪ್ರದೀಪ್ ಈಶ್ವರ್ ಬಿಳಿ ಬಣ್ಣದ ಉಡುಪಿನಲ್ಲಿ ಆಗಮಿಸಿದ್ದಾರೆ.
ಬಿಗ್‌ಬಾಸ್ ಗ್ರ್ಯಾಂಡ್ ಓಪನಿಂಗ್ ದಿನವೇ ಶಾಸಕ ಪ್ರದೀಪ್, ಬಿಗ್ ಮನೆಗೆ ಸ್ಪರ್ಧಿಯಾಗಿ ಆಗಮಿಸಬೇಕಿತ್ತಂತೆ. ಸ್ಪರ್ಧಿಯಾಗಿ ನಿಮ್ಮ ಜತೆಗೆ ಜಾಯಿನ್ ಆಗಿದ್ದಕ್ಕೂ ಖುಷಿಯಾಗ್ತಿದೆ ಎಂದಿರುವ ಅವರು, ಕೊಂಚ ಸರ್ಪ್ರೈಸ್ ಇರಲಿ ಅನ್ನೋ ಕಾರಣಕ್ಕೆ ಒಂದು ದಿನ ತಡವಾಗಿ ಆಗಮಿಸಿದ್ದಾಗಿ ಇತರೆ ಸ್ಪರ್ಧಿಗಳ ಮುಂದೆ ಪ್ರದೀಪ್ ಹೇಳಿಕೊಂಡಿದ್ದಾರೆ. ಶಾಸಕರು ಹೀಗೆ ಆಗಮಿಸುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿಯೂ ಇವರ ಬಗ್ಗೆ ಚರ್ಚೆ ನಡೆದಿದೆ.
ಮತ್ತೆ ಟ್ರೋಲ್ ಆದ ಶಾಸಕ ಪ್ರದೀಪ್ ಈಶ್ವರ್
- ಮುಗೀತು, ಇವ್ರೊಬ್ಬರನ್ನು ಹೇಗೆ ಮರ್ತೋದ್ರು ಬಿಗ್‌ಬಾಸ್ ಎಂದು ಅನ್ಕೊಂಡಿದ್ದೆ.
- ಪ್ರದೀಪ್ ಈಶ್ವರ ಸ್ಪರ್ಧಿ ಅಲ್ಲ ಬಿಡಿ. ಬಹುಶಃ ಮೋಟಿವೇಷನಲ್ ಸ್ಪೀಚ್ ಕೋಡೋಕೆ ಕರೆಸಿರಬೇಕು
- ಪ್ರದೀಪ್, ಪ್ರತಾಪ್, ರಕ್ಷಕ್ ಸರಿಯಾಗಿ ಸೇರಿದ್ದಾರೆ..
- ಬರುವಾಗ ನಶ್ವರ , ಹೋಗುವಾಗ ನಶ್ವರ , ಬಂದು ಹೋಗುವಾಗ ನಡುವೆ ಇರಲಿ ನಮ್ಮ ಪ್ರದೀಪ್ ಈಶ್ವರ
- ಅಂತೂ ಕೊನೆಗೂ ರಾಜಕೀಯನು ಬಿಗ್ ಬಾಸ್ ಗೆ ತಂದ್ರು
- MLA ಆಗಿ BIGG BOSS ಹೋದ್ರೆ ಕೆಲಸ ಯಾರ್ ಮಾಡೋದೋ
- ಎಲ್ಲಾ ಗ್ರಹಗಳು ಒಟ್ಟಿಗೆ ಇದ್ದಾವೇ.. ಈ ಜಗಕ್ಕೆ ಏನೋ ಕಾದಿದೆ
- ನಮಸ್ಕಾರ ಬಾಸು .. ಮೋಟಿವೇಶನ್ ಬ್ರಹ್ಮ ಬಂದ್ರು ಜೈ
ಅಂದಹಾಗೆ ಈ ಸಲದ ಬಿಗ್‌ಬಾಸ್ ಕೊಂಚ ವಿಶೇಷ. JioCinemaದಲ್ಲಿ 24 ಗಂಟೆ ಲೈವ್ ಆಗಿಯೇ ಇಡೀ ಶೋ ವೀಕ್ಷಣೆ ಮಾಡಬಹುದು.