Bigg Boss Kannada 11: ನಾನೇ ಹೀರೋ ಎಂದು ನಾಮಿನೇಷನ್‌ಗೂ ಭಯಪಡದೇ ಕೂತ ರಜತ್‌; ತ್ರಿವಿಕ್ರಂ ಕೊಟ್ಟ ಕಾರಣ ಏನು ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ನಾನೇ ಹೀರೋ ಎಂದು ನಾಮಿನೇಷನ್‌ಗೂ ಭಯಪಡದೇ ಕೂತ ರಜತ್‌; ತ್ರಿವಿಕ್ರಂ ಕೊಟ್ಟ ಕಾರಣ ಏನು ನೋಡಿ

Bigg Boss Kannada 11: ನಾನೇ ಹೀರೋ ಎಂದು ನಾಮಿನೇಷನ್‌ಗೂ ಭಯಪಡದೇ ಕೂತ ರಜತ್‌; ತ್ರಿವಿಕ್ರಂ ಕೊಟ್ಟ ಕಾರಣ ಏನು ನೋಡಿ

ಬಿಗ್ ಬಾಸ್‌ ಮನೆಯಲ್ಲಿ ವಾರದ ಆರಂಭದಲ್ಲಿ ನಾಮಿನೇಷನ್‌ ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತದೆ. ಈ ನಾಮಿನೇಷನ್‌ನಲ್ಲಿ ಯಾವ ತಂಡ ಗೆದ್ದಿದೆಯೋ ಆ ತಂಡ ಎದುರಾಳಿ ತಂಡದ ಯಾರನ್ನಾದರೂ ಒಬ್ಬರನ್ನು ನಾಮಿನೇಟ್ ಮಾಡಬೇಕಿರುತ್ತದೆ.

ನಾನೇ ಹೀರೋ ಎಂದು ನಾಮಿನೇಷನ್‌ಗೂ ಭಯಪಡದೇ ಕೂತ ರಜತ್‌
ನಾನೇ ಹೀರೋ ಎಂದು ನಾಮಿನೇಷನ್‌ಗೂ ಭಯಪಡದೇ ಕೂತ ರಜತ್‌

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಹಗ್ಗವನ್ನು ಎಳೆಯುತ್ತಾ ಆ ಹಗ್ಗದಲ್ಲಿ ಯಾವ ಬಣ್ಣ ಬರುತ್ತದೆಯೋ ಆ ಬಣ್ಣದ ಪೈಪ್‌ಗಳನ್ನು ಜೋಡಿಸುತ್ತಾ ಸಾಗಬೇಕಿತ್ತು. ಈ ಆಟದಲ್ಲಿ ಎರಡೂ ತಂಡಗಳಿಂದ ಒಬ್ಬೊಬ್ಬರನ್ನು ಕರೆಯಲಾಗುತ್ತದೆ. ಆಗ ತಂಡದ ಎಲ್ಲ ಸದಸ್ಯರೂ ಸಹ ಸೇರಿ ತಮ್ಮ ತಮ್ಮ ತಂಡದಿಂದ ಒಬ್ಬನನ್ನು ಆಯ್ಕೆ ಮಾಡುತ್ತಾರೆ. ಆ ಪ್ರಕಾರ ತ್ರಿವಿಕ್ರಂ ಹಾಗೂ ಹನುಮಂತ ಆಯ್ಕೆಯಾಗಿರುತ್ತಾರೆ. ಹನುಮಂತ ಅವರು ಆಟದಲ್ಲಿ ಸೋತ ಕಾರಣ ಅವರ ತಂಡದ ಒಬ್ಬರನ್ನು ನಾಮಿನೇಟ್ ಮಾಡಬೇಕಾಗಿರುತ್ತದೆ.

ರಜತ್ ನಾಮಿನೇಟೆಡ್

ತ್ರಿವಿಕ್ರಂ ಎದುರಾಳಿ ತಂಡದಿಂದ ಆಟದಲ್ಲಿ ಗೆದ್ದ ಕಾರಣ ಅವರೇ ಈ ಬಾರಿ ನಾಮಿನೇಷನ್ ಹೆಸರನ್ನು ಹೇಳಿದ್ದಾರೆ. ಮೊದಲು ಅವರ ತಂಡದಲ್ಲಿ ಚರ್ಚೆ ನಡೆಯುತ್ತದೆ. ಬಹುಪಾಲು ಹೆಸರು ರಜತ್ ಅವರದ್ದೇ ಆಗಿರುತ್ತದೆ. ಎಲ್ಲರೂ ರಜತ್ ಹೆಸರನ್ನು ಸೂಚಿಸಿದ ತಕ್ಷಣ ರಿಯಾಕ್ಟ್ ಮಾಡುತ್ತಾರೆ. ನೀವು ಕೊಟ್ಟ ರೀಸನ್ ಹಾಗೇ ಇರಲಿ ನಾನಂತೂ ಬದಲಾಗುವುದಿಲ್ಲ ಎನ್ನುತ್ತಾರೆ.

ಹಾಗಾದರೆ ತ್ರಿವಿಕ್ರಂ ಕೊಟ್ಟ ಕಾರಣ ಏನು?
ತ್ರಿವಿಕ್ರಂ ಕೊಟ್ಟ ಕಾರಣ ಏನು ಎಂದರೆ “ರಜತ್ ಅವರು ಎಲ್ಲರೂ ವಯಕ್ತಿಕವಾಗಿ ಆಟ ಆಡಿ ಎಂದು ಒತ್ತಾಯ ಮಾಡುತ್ತಾರೆ. ಯಾವಾಗಲೂ ತಾನೇ ಸುಪಿರಿಯರ್ ಎನ್ನುವ ಮನೋಭಾವ ಅವರಿಗಿದೆ” ಎಂದಾಗಿರುತ್ತದೆ. ರಜತ್ ಅದನ್ನು ಹೆಮ್ಮೆಯಿಂದ ಒಪ್ಪಿಕೊಳ್ಳುತ್ತಾರೆ. ನಿಮಗೆಲ್ಲ ವಯಕ್ತಿಕವಾಗಿ ಆಟ ಆಡುವ ತಾಕತ್ತಿಲ್ಲ. ಅದಿಕ್ಕೆ ಈ ರೀತಿ ಮಾತಾಡುತ್ತೀರಿ ಎಂದು ಹೇಳುತ್ತಾರೆ.

ಹೌದು ನಾನು ಸುಪೀರಿಯರ್‌, ನಾನು ಕರಾಬ್‌, ನಾನು ಮಸ್ತ್‌ ನೀವು ನಾಮಿನೇಷನ್ ಮಾಡಿದ ಮಾತ್ರಕ್ಕೆ ನಾನು ಬದಲಾಗೋದಿಲ್ಲ ಎಂದು ಹೇಳಿದ್ದಾರೆ. ತ್ರಿವಿಕ್ರಂ ಹಾಗೂ ಭವ್ಯ ಗೌಡ ಒಟ್ಟಿಗೆ ಕುಳಿತುಕೊಂಡು ಅವರು ಹೇಳುವುದನ್ನು ಕೇಳಿಸಿಕೊಂಡಿದ್ದಾರೆ. ಹಾಗೇ ಬಿಗ್‌ ಬಾಸ್‌ ಮನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ.

ಸುರೇಶ್‌ ಮನೆಯಿಂದಾಚೆ

ಬಿಗ್‌ಬಾಸ್‌ ಕನ್ನಡದ 11ನೇ ಸೀಸನ್‌ನಲ್ಲಿ ಭಾನುವಾರ ಶಿಶಿರ್‌ ತಮ್ಮ ಆಟವನ್ನು ಮುಗಿಸಿದರು. ಎಲಿಮಿನೇಟ್‌ ಆಗುವ ಮೂಲಕ ಮನೆಯಿಂದ ನಿರ್ಗಮಿಸಿದರು. ಆದರೆ, ಯಾರೂ ಊಹಿಸದ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಗೋಲ್ಡ್‌ ಸುರೇಶ್‌ ಸಹ ಮನೆಯಿಂದ ಹೊರ ನಡೆದಿದ್ದಾರೆ.ಬಿಗ್‌ ಬಾಸ್‌ ಅವರ ಈ ಆದೇಶ ಹೊರಬೀಳುತ್ತಿದ್ದಂತೆ, ಮನೆ ಮಂದಿ ಅರೇ ಕ್ಷಣ ಶಾಕ್‌ ಆದರು. ಕೊನೆಗೆ ಗೋಲ್ಡ್‌ ಸುರೇಶ್ ಈ ಕೂಡಲೇ ಹೊರಬನ್ನಿ ಎನ್ನುತ್ತಿದ್ದಂತೆ, ಆಕಾಶವೇ ತಲೆ ಮೇಲೆ ಬಿದ್ದಂತೆ, ಆತಂಕದಲ್ಲಿಯೇ ಮನೆಗೆ ಹೇಗೆ ಬಂದಿದ್ದರೋ ಅದೇ ಅವತಾರದಲ್ಲಿಯೇ ಮನೆಯಿಂದ ನಿರ್ಗಮಿಸಿದರು. ಅವರ ನಿರ್ಗಮನದ ಬಳಿಕ ಕೆಲ ಊಹಾಪೋಹಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದವು. ಸುರೇಶ್‌ ಅವರ ತಂದೆ ನಿಧನರಾಗಿದ್ದಾರೆ ಎಂಬ ಸುದ್ದಿ ಮುನ್ನೆಲೆಗೆ ಬಂದಿತ್ತು. ಆದರೆ, ಅಚ್ಚರಿಯ ಸಂಗತಿ ಏನೆಂದರೆ, ಸುರೇಶ್‌ ಅವರ ತಂದೆ ಶಿವಗೌಡ ಅವರಿಗೆ ಏನೂ ಆಗಿಲ್ಲ. ಇದನ್ನು ಸ್ವತಃ ಅವರೇ ಹೇಳಿದ್ದಾರೆ.

ರಜತ್ ಬಿಗ್ ಬಾಸ್ 11 ವಿನ್ನ ಆಗುವ ಲಕ್ಸಣ ಕಾಣ್ತಿದೆ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಯಾವುದೇ ಪ್ರೋಮೋಗಳನ್ನು ಹಾಕಿದರೂ ಜನರು ಗೌತಮಿಯ ಮುಖವಾಡ ಕಳಚಿ ಎಂದು ಕಾಮೆಂಟ್ ಮಾಡುತ್ತಾರೆ.

Whats_app_banner