Ramachari Serial: ರಾತ್ರೋ ರಾತ್ರಿ ಮನೆಬಿಟ್ಟು ಹೋಗ್ತಾರಾ ಇಷ್ಟೊಂದು ಜನ? ಇದು ರಾಮಾಚಾರಿ ಚಾರು ಮಾಡಿದ ಉಪಾಯ
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ರಾತ್ರೋ ರಾತ್ರಿ ಮನೆಬಿಟ್ಟು ಹೋಗ್ತಾರಾ ಇಷ್ಟೊಂದು ಜನ? ಇದು ರಾಮಾಚಾರಿ ಚಾರು ಮಾಡಿದ ಉಪಾಯ

Ramachari Serial: ರಾತ್ರೋ ರಾತ್ರಿ ಮನೆಬಿಟ್ಟು ಹೋಗ್ತಾರಾ ಇಷ್ಟೊಂದು ಜನ? ಇದು ರಾಮಾಚಾರಿ ಚಾರು ಮಾಡಿದ ಉಪಾಯ

ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಹಾಗೂ ಮುರಾರಿ ಸೇರಿಕೊಂಡು ಒಂದು ಐಡಿಯಾ ಮಾಡಿದ್ದಾರೆ. ರುಕ್ಕುವನ್ನು ಮನೆಯಿಂದ ಕರೆದುಕೊಂಡು ಹೋಗಲು ಚಾರು ಎಲ್ಲ ತಯಾರಿ ಮಾಡಿಕೊಂಡಿದ್ದಾಳೆ. ಮುಂದೇನಾಯ್ತು ನೋಡಿ.

 ರಾತ್ರೋ ರಾತ್ರಿ ಮನೆಬಿಟ್ಟು ಹೋಗ್ತಾರಾ ಇಷ್ಟೊಂದು ಜನ?
ರಾತ್ರೋ ರಾತ್ರಿ ಮನೆಬಿಟ್ಟು ಹೋಗ್ತಾರಾ ಇಷ್ಟೊಂದು ಜನ? (ಕಲರ್ಸ್ ಕನ್ನಡ)

ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಕುವನ್ನು ಕರೆದುಕೊಂಡು ಬರಲು ಇಡೀ ರಾಮಾಚಾರಿ ಕುಟುಂಬವೇ ಹೋದಂತಿದೆ. ತುಂಬಾ ಜನ ಈಗ ಅಣ್ಣಾಜಿ ಮನೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಆದರೆ ಎಲ್ಲರನ್ನೂ ಈಗ ಅಲ್ಲಿಂದ ಹೊರಗಡೆ ಕರೆದುಕೊಂಡು ಹೋಗುವ ದೊಡ್ಡ ಜವಾಬ್ಧಾರಿ ರಾಮಾಚಾರಿ ಮೇಲಿದೆ. ಆದರೆ ರುಕ್ಕುಗೆ ಇದೆಲ್ಲ ಭಯ ಹುಟ್ಟಿಸಿದೆ. ನಿಮಗೆಲ್ಲ ತೊಂದ್ರೆ ಆಗುತ್ತೆ, ನೀವೆಲ್ಲ ಇಲ್ಲಿಂದ ಹೊರಟುಬಿಡಿ ಎಂದು ಹೇಳುತ್ತಿದ್ದಾಳೆ. ಆಗ ಚಾರು ಹೇಳುತ್ತಾಳೆ. ಇಲ್ಲ ರುಕ್ಕು ನಿನ್ನ ಬಿಟ್ಟು ನಾವೆಲ್ಲೂ ಹೋಗೋದಿಲ್ಲ ಎಂದು. ಆ ನಂತರ ಚಾರು ಮರು ಪ್ರಶ್ನೆ ಕೇಳುತ್ತಾಳೆ.

ಯಾಕೆ ರುಕ್ಕು ಆಗಿಂದ ನೀವು ಹೋಗಿ ಅಂತ ಹೇಳ್ತಾ ಇದೀಯಾ? ನಿನಗೆ ನಮ್ಮ ಜೊತೆ ಬರೋಕೆ, ಕೃಷ್ಣನ್ನಾ ನೋಡೋಕೆ ಇಷ್ಟ ಇಲ್ವಾ? ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಅವಳು ನನಗೇನೋ ಆಸೆ ಇದೆ. ಆದ್ರೆ ಅದೆಲ್ಲ ಸಾಧ್ಯ ಆಗ್ಬೇಕಲ್ಲ ಎಂದು ಹೇಳುತ್ತಾಳೆ. ಆಗ ರಾಮಾಚಾರಿ ತಾನು ಮಾಡಿರುವ ಉಪಾಯವನ್ನು ಎಲ್ಲರ ಎದುರು ಹಂಚಿಕೊಳ್ಳುತ್ತಾನೆ. ಜಾನಕಿಗೆ ಇದು ತುಂಬಾ ಕಠಿಣ ಎಂದು ಅನಿಸುತ್ತದೆ. ಆದರೂ ಅವಳು ಒಪ್ಪಿಕೊಳ್ಳುತ್ತಾಳೆ.

ನಂತರ ರುಕ್ಕು ಜೊತೆ ಇರುವವಳ ಹತ್ತಿರ ಒಂದು ಬಾಂಬ್ ಕೊಡುತ್ತಾನೆ. ಇದನ್ನು ನೀವು ಜೋರಾಗಿ ಸರಿಯಾದ ಸಮಯಕ್ಕೆ ನಿಮ್ಮ ಬಲ ಭಾಗಕ್ಕೆ ಎಸಿಯ ಬೇಕು. ಇಲ್ಲ ಅಂದ್ರೆ ಗೇಟ್ ಇಂದ ನಾವೆಲ್ಲ ದಾಟಿ ಹೋಗೋದಕ್ಕೆ ಆಗೋದಿಲ್ಲ ಎಂದು ಹೇಳುತ್ತಾನೆ. ಆಗ ಅವಳು ಒಪ್ಪಿಕೊಳ್ಳುತ್ತಾಳೆ. ಒಟ್ಟಿನಲ್ಲ ಒಂದಲ್ಲಾ ಒಂದು ರೀತಿಯಲ್ಲಿ ಉಪಾಯ ಫಲಿಸಿ ರುಕ್ಕು ಹೊರ ಬಂದರೆ ಅವರಿಗೆಲ್ಲ ಸಂತೋಷ

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner