ಸೀತಾ ಈ ಮನೆ ಸೊಸೆಯೇ ಅಲ್ಲ ಎಂದ ಸೂರ್ಯಪ್ರಕಾಶ್‌! ಸಿಹಿ ಸಲುವಾಗಿ ಕಾನೂನಿನ ಮೊರೆ ಹೋದ ಶ್ಯಾಮ್‌, ರಾಮನ ಮುಂದಿನ ನಡೆ ಏನು?
ಕನ್ನಡ ಸುದ್ದಿ  /  ಮನರಂಜನೆ  /  ಸೀತಾ ಈ ಮನೆ ಸೊಸೆಯೇ ಅಲ್ಲ ಎಂದ ಸೂರ್ಯಪ್ರಕಾಶ್‌! ಸಿಹಿ ಸಲುವಾಗಿ ಕಾನೂನಿನ ಮೊರೆ ಹೋದ ಶ್ಯಾಮ್‌, ರಾಮನ ಮುಂದಿನ ನಡೆ ಏನು?

ಸೀತಾ ಈ ಮನೆ ಸೊಸೆಯೇ ಅಲ್ಲ ಎಂದ ಸೂರ್ಯಪ್ರಕಾಶ್‌! ಸಿಹಿ ಸಲುವಾಗಿ ಕಾನೂನಿನ ಮೊರೆ ಹೋದ ಶ್ಯಾಮ್‌, ರಾಮನ ಮುಂದಿನ ನಡೆ ಏನು?

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿ ಹುಟ್ಟಿನ ವಿಚಾರ ಇದೀಗ ಎಲ್ಲರಿಗೂ ಗೊತ್ತಾಗಿದೆ. ಸೀತಾ ಮೇಲೆ ಮಾವಯ್ಯ ಕೊಂಚ ಕಟುವಾದರೆ, ರಾಮ್‌ ಆಕೆಯ ಜಗತೆಗಿದ್ದಾನೆ. ಇತ್ತ ಸಿಹಿ ಸಲುವಾಗಿ ಕೋರ್ಟ್‌ ಮೆಟ್ಟಿಲೇರಿದ್ದಾನೆ ಶ್ಯಾಮ್‌.

ಸಿಹಿ ಸಲುವಾಗಿ ಕಾನೂನಿನ ಮೊರೆ ಹೋದ ಶ್ಯಾಮ್‌, ರಾಮನ ಮುಂದಿನ ನಡೆ ಏನು?
ಸಿಹಿ ಸಲುವಾಗಿ ಕಾನೂನಿನ ಮೊರೆ ಹೋದ ಶ್ಯಾಮ್‌, ರಾಮನ ಮುಂದಿನ ನಡೆ ಏನು?

Seetha Rama serial October 21st episode: ಸಿಹಿ ವಿಚಾರಕ್ಕೆ ರಾಮ್‌ ಮನೆಯಲ್ಲಿ ಚರ್ಚೆ ನಡೆದಿದೆ. ಸಿಹಿ ನನ್ನ ಮಗಳು, ಆಕೆಯನ್ನು ನನಗೊಪ್ಪಿಸಿ ಎಂದು ಮೇಘಶ್ಯಾಮ್‌ ಪಟ್ಟು ಹಿಡಿದಿದ್ದಾನೆ. ತಾತ ಸೂರ್ಯ ಪ್ರಕಾಶ್‌ ಮಧ್ಯಸ್ತಿಕೆಯಲ್ಲಿ ಗಂಭೀರ ಮಾತುಕತೆ ನಡೆದಿದೆ. ರಾಮ್‌ ಮತ್ತು ಶ್ಯಾಮ್‌ ನಡುವೆ ಸಂದರ್ಭ ಕೊಂಚ ಬಿರುಸಾಗಿದೆ. ನನ್ನ ಮಗುವನ್ನು ತಮ್ಮ ಮಗು ಅಂತ ಕರೆದೊಯ್ಯಲು ಬಂದಿದ್ದಾರೆ. ಸಿಹಿ ನನ್ನ ಮತ್ತು ಸೀತಾ ಮಗಳು ಆಕೆಯನ್ನು ನಾನು ಎಲ್ಲಿಗೂ ಕಳಿಸಲ್ಲ ಎಂದಿದ್ದಾನೆ ರಾಮ್‌. ಸೀತಾ ಬಾಡಿಗೆ ತಾಯಿ ಅಂದ್ರೆ ಏನು ಅರ್ಥ ಎಂದು ತಾತ ಕೊಂಚ ಗರಂ ಆಗಿಯೇ ಪ್ರಶ್ನೆ ಮಾಡಿದ್ದಾನೆ.

ಈ ಬಾಡಿಗೆ ತಾಯಿ ವಿಚಾರ ನಿನಗೂ ಗೊತ್ತಿರಲಿಲ್ವ ಭಾರ್ಗವಿ? ಎಂದು ಮಾವಯ್ಯ ಪ್ರಶ್ನೆ ಮಾಡಿದ್ದಾರೆ. ಸೀತಾ ತಾನು ಬಾಡಿಗೆ ತಾಯಿ ಅನ್ನೋದನ್ನು ಮುಚ್ಚಿಟ್ಟಿದ್ದಳು. ಸಿಹಿಗೆ ತಂದೆ ಇಲ್ಲ ಅನ್ನೋದನ್ನ ನಂಬಿಸಿದಳು. ಮೊದಲೇ ನನಗೆ ಯಾಕೆ ಈ ಮಾತನ್ನು ಹೇಳಲಿಲ್ಲ. ಸೀತಾ ಪರವಾಗಿ ನಿಂತ ರಾಮ್‌, ಎಲ್ಲ ವಿಚಾರವನ್ನು ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದಿದ್ದಾನೆ. ಸಿಹಿ ನನ್ನ ಮಗಳು ಆಕೆಯನ್ನು ನಾನು ಎಲ್ಲಿಗೂ ಕಳಿಸಲ್ಲ ಎಂದ ರಾಮನಿಗೆ, ನೀನೇ ನನ್ನ ಮಗಳನ್ನು ತಂದು ಕೊಡ್ತಿಯಾ ನೋಡ್ತಿರು. ಕೋರ್ಟ್‌ನಲ್ಲಿ ಭೇಟಿಯಾಗೋಣ ಎಂದಿದ್ದಾನೆ ಶ್ಯಾಮ್.‌

ಇತ್ತ ಈ ಕಟು ಸತ್ಯ ತಿಳಿದ ತಾತ ನಲುಗಿದ್ದಾನೆ. ಮೊಮ್ಮಗನ ಬದುಕು ಹೀಗ್ಯಾಕಾಯ್ತು ಎಂದೂ ಸೋತ ಭಾವದಲ್ಲಿ ಕೂತಿದ್ದಾನೆ. ಸದ್ಯ ದೇಸಾಯಿ ಮನೆಯಲ್ಲೀಗ ನೀರವ ಮೌನ ಆವರಿಸಿದೆ. ಇನ್ನೊಂದು ಅವಕಾಶ ಕೊಡಿ ಅನ್ನೋಕೆ ನೀವು ಯಾವ ತಪ್ಪೂ ಮಾಡಿಲ್ಲ ಸೀತಾ. ಇದೇ ವಿಚಾರವನ್ನು ನನ್ನ ಬಳಿ ಹೇಳಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ರಿ ಆದರೆ, ನಾನೇ ಸರಿಯಾಗಿ ಗಮನಿಸಲಿಲ್ಲ ಎಂದಿದ್ದಾನೆ ರಾಮ್.‌ ಅಲ್ಲಿಗೆ ಸೀತಾ ಕೊಂಚ ನಿಟ್ಟುಸಿರು ಬಿಟ್ಟಿದ್ದಾಳೆ. ನಿಮ್ಮ ಮೇಲಿನ ಗೌರವ ಇನ್ನಷ್ಟು ಜಾಸ್ತಿ ಆಯ್ತು ಎಂದಿದ್ದಾನೆ ರಾಮ್.‌ ಇನ್ಮೇಲೆ ನೀವೇ ಸಿಹಿಯ ತಾಯಿ ಅಂತ ಪ್ರೂವ್‌ ಮಾಡಬೇಕಿದೆ. ಈ ರಾಮ ನಿಮ್ಮ ಜತೆ ಯಾವತ್ತೂ ಇರ್ತಾನೆ.

ಸೀತಾ ಈ ಮನೆಯ ಸೊಸೆಯಲ್ಲ..

ಇತ್ತ ಎಲ್ಲ ವಿಷ್ಯ ಗೊತ್ತಿದ್ದರೂ, ಮಾವಯ್ಯನ ಬಳಿ ಬಂದು ಸೀತಾಳ ಈ ವಿಚಾರ ನನಗೆ ಗೊತ್ತೇ ಇಲ್ಲ ಎಂದಿದ್ದಾಳೆ ಭಾರ್ಗವಿ. ಸೀತಾ ಮಾಡಿದ್ದು ಎಷ್ಟರ ಮಟ್ಟಿಗೆ ನ್ಯಾಯ ಎಂದು ಅತ್ತು ಕರೆದು ನಾಟಕ ಮುಂದುವರಿಸಿದ್ದಾಳೆ. ನಮ್ಮ ಮನೆ ಸೊಸೆಯಿಂದ ತಪ್ಪಾಗಿದೆ. ಇಡೀ ಮನೆಯವರೂ ತಪ್ಪಿತಸ್ತರೇ. ಆದರೆ, ದೇಸಾಯಿ ಮನೆ ಮೇಲೆ ಕಳಂಕ ಬರಲು ನಾನು ಬಿಡಲ್ಲ ಮಾವಯ್ಯ ಎಂದಿದ್ದಾಳೆ. ನೀವು ಯಾವುದೇ ಕಾರಣಕ್ಕೂ ಸೀತಾಳ ಮೇಲೆ ಕೋಪಿಸಿಕೊಳ್ಳಬೇಡಿ ಎಂದಿದ್ದಾಳೆ. ಭಾರ್ಗವಿ ಮಾತಿಗೆ, ಇಂಥ ದೊಡ್ಡ ತಪ್ಪು ಮಾಡಿದರೂ, ಅದರ ಹೊಣೆ ಹೊರದ ಸೀತಾ, ಈ ಮನೆಯ ಸೊಸೆ ಆಗಿರಲು ಅರ್ಹತೆ ಇಲ್ಲ ಎಂದಿದ್ದಾನೆ ಸೂರ್ಯಪ್ರಕಾಶ್.‌ ಅಲ್ಲಿಗೆ ಭಾರ್ಗವಿ ಪ್ಲಾನ್‌ ವರ್ಕೌಟ್‌ ಆಗಿದೆ. ಮುಖದಲ್ಲಿ ಗೆದ್ದ ನಗು ಮೂಡಿದೆ.

ಕಾನೂನು ಮೊರೆ ಹೋದ ಶ್ಯಾಮ್

ಇತ್ತ ಚಾಂದಿನಿ ಶ್ಯಾಮ್‌ ಬಳಿ ಮಾತಿಗಿಳಿದಿದ್ದಾಳೆ. ಸಿಹಿ ಬರೀ ಲೀಗಲ್‌ ಆಗಿ ಮಾತ್ರವಲ್ಲ, ಬಯಾಲಜಿಕಲಿ, ಎಥಿಕಲಿ ನಮಗೇ ಸೇರಬೇಕು. ಸಿಹಿ ಇನ್ಮೇಲೆ ನಮ್ಮ ಮನೆಯಲ್ಲಿಯೇ ಇರ್ತಾಳೆ. ಇನ್ಮೇಲೆ ನಾನು ಮಾತನಾಡಲ್ಲ, ಕೋರ್ಟ್‌ ಮಾತನಾಡುತ್ತೆ ಎಂದು ಕೋರ್ಟ್‌ ಮೊರೆ ಹೋಗಿದ್ದಾರೆ. ಮುಂದುವರಿದು ರಾಮ್‌ ಮನೆಗೆ ಕೋರ್ಟ್‌ ಕಡೆಯಿಂದ ನೋಟೀಸ್‌ ಸಹ ಕಳಿಸಿದ್ದಾನೆ. ಇತ್ತ ಸೀತಾ ಪರವಾಗಿ ನಿಂತಿದ್ದಾನೆ ರಾಮ್.‌ ಹಾಗಾದರೆ ಸಿಹಿ ಯಾರ ಪಾಲಾಗ್ತಾಳಾ?

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಮೇಘಶ್ಯಾಮ- ನಾಗಾರ್ಜುನ್‌ ಬಿ.ಆರ್‌

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

Whats_app_banner