Reels: ಅಮೃತವರ್ಷಿಣಿ ಸೀರಿಯಲ್ ನಟಿ ರಜಿನಿಗೆ ಸರಕಾರದಿಂದ ತಿಂಗಳಿಗೆ 2 ಸಾವಿರ ರೂ ಭಾಗ್ಯಲಕ್ಷ್ಮಿ ಹಣ ಬರ್ತಾ ಇಲ್ವಂತೆ
Viral Reels Today: ಅಮೃತವರ್ಷಿಣಿ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿರುವ ನಟಿ ರಜಿನಿ ಕೂಡ ಆಗಾಗ ರೀಲ್ಸ್ ಮಾಡುತ್ತ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಾರೆ. ಸದ್ಯ ಇವರು ಹಂಚಿಕೊಂಡಿರುವ "ಸರಕಾರದ 2 ಸಾವಿರಕ್ಕೆ ಅಳೆದಾಡಿ ಸಾಕಾಯ್ತು" ಎನ್ನುವ ಟಾಪಿಕ್ ಇರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ಕನ್ನಡದ ಕೆಲವು ಸಿನಿಮಾ ಮತ್ತು ಸೀರಿಯಲ್ ನಟಿಯರು, ನಟರು ಆಗಾಗ ಯಾವುದಾದರೂ ರೀಲ್ಸ್ ಹರಿಯಬಿಟ್ಟು ತಮ್ಮ ಅಭಿಮಾನಿಗಳಿಗೆ ಖುಷಿ ನೀಡ್ತಾ ಇರ್ತಾರೆ. ಅಮೃತವರ್ಷಿಣಿ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿರುವ ನಟಿ ರಜಿನಿ ಕೂಡ ಆಗಾಗ ರೀಲ್ಸ್ ಮಾಡುತ್ತ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಾರೆ. ಸದ್ಯ ಇವರು ಹಂಚಿಕೊಂಡಿರುವ "ಸರಕಾರದ 2 ಸಾವಿರಕ್ಕೆ ಅಳೆದಾಡಿ ಸಾಕಾಯ್ತು" ಎನ್ನುವ ಟಾಪಿಕ್ ಇರುವ ವಿಡಿಯೋ ವೈರಲ್ ಆಗಿದೆ.
ರಜಿನಿ ಹಂಚಿಕೊಂಡ ಹೊಸ ರೀಲ್ಸ್
ಭಾನುವಾರ ರಜಿನಿ ಹಂಚಿಕೊಂಡ ರೀಲ್ಸ್‌ನಲ್ಲಿ ಹಿನ್ನೆಲೆಯಲ್ಲಿ "ಬಂತ 2 ಸಾವಿರ ರೂಪಾಯಿ" ಎಂದು ಫಿಟ್ನೆಸ್ ಮಾಸ್ಟರ್ ಕೇಳುತ್ತಾರೆ. ಅದಕ್ಕೆ ರಜಿನಿ "ಬ್ಯಾಂಕ್‌ಗೆ ಹೋಗ್ತಾ ಇದ್ದೀನಿ, ಬರ್ತಾ ಇದ್ದೀನಿ, ಎರಡು ಸಾವಿರ ರೂಪಾಯಿ ನನ್ನದೇ ಹೊರಟೋಯ್ತು" ಎನ್ನುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಧ್ವನಿಗೆ ರಜಿನಿ ಸಖತ್ ಆಗಿ ಆಕ್ಟ್ ಮಾಡಿದ್ದು ನೆಟ್ಟಿಗರನ್ನು ಸೆಳೆದಿದೆ.
ರಜಿನಿ ಈ ಹಿಂದೆಯೂ ಅರುಣ್ ಗೌಡ ಮಿಸ್ಟರ್ ಇಂಡಿಯಾ ಜತೆ ಹಲವು ರೀಲ್ಸ್ ಮಾಡಿದ್ದಾರೆ. ಇವರು ವರ್ಕೌಟ್ ಮಾಡಲು ಉದಾಸೀನ ಮಾಡೋದು, ಫಿಟ್ನೆಸ್ ಗುರು ಇವರನ್ನು ಬೆಂಡೆತ್ತುವುದು ಇತ್ಯಾದಿ ಇವರ ರೀಲ್ಸ್‌ಗಳು ವೈರಲ್ ಆಗಿವೆ. ಮಿಸ್ಟರ್ ಇಂಡಿಯಾ ಜತೆ ಬೇಬಿ ಮಂಡ್ಯ ಎಂದು ಅಭಿಮಾನಿಗಳು ಇವರಿಗೆ ಕಾಮೆಂಟ್ ಮಾಡುತ್ತಾರೆ. ಸತತ ವರ್ಕೌಟ್ ಮೂಲಕ ಫಿಟ್ನೆಸ್ ಕಾಪಾಡಲು ರಜಿನಿ ಆದ್ಯತೆ ನೀಡುತ್ತಾರೆ.
ರಜಿನಿ ಅವರು ಇತ್ತೀಚೆಗೆ ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಭಗವಂತನ ಮಡದಿ ಪಾರ್ವತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಝೀ ಕನ್ನಡ ವಾಹಿನಿಯ ಮಹಾನಟಿ ಶೋನಲ್ಲಿ ಒಂದು ಸಂಚಿಕೆಯಲ್ಲಿ ದೇವಿಯಾಗಿ ಕಾಣಿಸಿಕೊಂಡಿದ್ದರು. ಹಲವು ಪೌರಾಣಿಕ ಪಾತ್ರಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ.
ರಜಿನಿ ಅವರು ಅಮೃತವರ್ಷಿಣಿ ಸೀರಿಯಲ್‌ನಲ್ಲಿ ನಟಿಸಿದ ಬಳಿಕ ಕಿರುತೆರೆ ಪ್ರೇಕ್ಷಕರಿಗೆ ಹತ್ತರವಾಗಿದ್ದರು. ಆ ಸೀರಿಯಲ್‌ನಲ್ಲಿ ಅಮೃತ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಕದ್ದಿದ್ದರು. ಇವರ ಹೆಸರೇ ಅಮೃತವರ್ಷಿಣಿಯ ಅಮೃತ ಎಂದು ಫೇಮಸ್ ಆಗಿತ್ತು. ಅಮೃತವರ್ಷಿಣಿ ಸೀರಿಯಲ್ ಬಳಿಕ ಆತ್ಮಬಂಧನ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇದು ಹಾರರ್ ಥ್ರಿಲ್ಲರ್ ಸೀರಿಯಲ್. ಇದಾದ ಬಳಿಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.
ಕಾಲಿಗೆ ಗಾಯವಾದ ಕಾರಣ ಡ್ಯಾನ್ಸ್ ಶೋನಿಂದ ಹೊರಬಂದಿದ್ದರು. ಮಜಾ ಟಾಕಿಸಿನ ಕೆಲವು ಎಪಿಸೋಡ್‌ನಲ್ಲೂ ಇವರು ಪಾಲ್ಗೊಂಡಿದ್ದಾರೆ. ಜೀ ಕನ್ನಡ ವಾಹಿನಿಯ ಸೂಪರ್ ಕ್ವೀನ್ ರಿಯಾಲಿಟಿ ಶೋನನಲ್ಲಿಯೂ ಭಾಗವಹಿಸಿದ್ದರು. ಅಂಬುಜಾ ಎಂಬ ಹಾರರ್ ಸಿನಿಮಾದಲ್ಲೂ ರಜಿನಿ ನಟಿಸುತ್ತಿದ್ದಾರೆ.