ಕನ್ನಡ ಸುದ್ದಿ  /  Entertainment  /  Televison News Mahanati Kannada Reality Show Actor Ramesh Aravind Judge In Zee Kannada Tv Programme Pcp

Mahanati: ಒಂದು ಶೋಗೆ ಎಷ್ಟು ಜಡ್ಜ್‌ ಸಾರ್‌? ಮಹಾನಟಿ ಕನ್ನಡ ರಿಯಾಲಿಟಿ ಶೋ ಜಡ್ಜ್‌ ಸೀಟ್‌ನಲ್ಲಿ ರಮೇಶ್‌ ಅರವಿಂದ್‌

ಕನ್ನಡದ ಪ್ರತಿಭಾನ್ವಿತ ನಟ, ನಿರ್ದೇಶಕ ರಮೇಶ್‌ ಅರವಿಂದ್‌ ಅವರು ಝೀ ವಾಹಿನಿಯ ಮಹಾನಟಿ ರಿಯಾಲಿಟಿ ಶೋ ಜಡ್ಜ್‌ ಸೀಟ್‌ನಲ್ಲಿ ಕುಳಿತುಕೊಳ್ಳುವುದು ಪಕ್ಕಾ ಆಗಿದೆ. ಕಾಟೇರ ನಿರ್ದೇಶಕ ತರುಣ್‌ ಸುಧೀರ್‌, ನಟಿ ಪ್ರೇಮಾ, ಸಪ್ತಮಿ ಗೌಡ ಕೂಡ ಮಹಾನಟಿ ಶೋ ಜಡ್ಜ್‌ಗಳಾಗಿದ್ದಾರೆ.

ಮಹಾನಟಿ ಕನ್ನಡ ರಿಯಾಲಿಟಿ ಶೋ ಜಡ್ಜ್‌ ಸೀಟ್‌ನಲ್ಲಿ ರಮೇಶ್‌ ಅರವಿಂದ್‌
ಮಹಾನಟಿ ಕನ್ನಡ ರಿಯಾಲಿಟಿ ಶೋ ಜಡ್ಜ್‌ ಸೀಟ್‌ನಲ್ಲಿ ರಮೇಶ್‌ ಅರವಿಂದ್‌

ಬೆಂಗಳೂರು: ಝೀ ವಾಹಿನಿಯಲ್ಲಿ ಸದ್ಯದಲ್ಲಿಯೇ ಆರಂಭವಾಗಲಿರುವ ಮಹಾನಟಿ ರಿಯಾಲಿಟಿ ಶೋ ಕುತೂಹಲ ಕೆರಳಿಸಿದೆ. ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಹಾನಟಿ ರಿಯಾಲಿಟಿ ಶೋಗೆ ವಾಹಿನಿಯು ಪ್ರತಿಭೆಗಳ ಅನ್ವೇಷಣೆ ಮಾಡಿತ್ತು. ಇದೀಗ ವಾಹಿನಿಯು ಮಹಾನಟಿ ರಿಯಾಲಿಟಿ ಶೋನ ಜಡ್ಜ್‌ ಯಾರೆಂಬ ಕುತೂಹಲವನ್ನು ಹೆಚ್ಚಿಸಿದೆ. ಈಗಾಗಲೇ ಈ ಜಡ್ಜ್‌ ಯಾರೆಂದು ಗುರುತಿಸಿ ಎಂದು ಹಲವು ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇಂದು ವಾಹಿನಿಯು ಹಂಚಿಕೊಂಡಿರುವ ವಿಡಿಯೋ ತುಣುಕಿನಲ್ಲಿ ಇರುವುದು ನಟ ರಮೇಶ್‌ ಅರವಿಂದ್‌ ಎಂದು ಖಚಿತವಾಗಿದೆ.

ಮಹಾನಟಿ ರಿಯಾಲಿಟಿ ಶೋಗೆ ರಮೇಶ್‌ ಅರವಿಂದ್‌

ಕನ್ನಡ ನಟ ರಮೇಶ್‌ ಅರವಿಂದ್‌ ಈಗಾಗಲೇ ಹಲವು ಟಿವಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಪರಿಚಯ, ಪ್ರೀತಿಯಿಂದ ರಮೇಶ್‌, ಕನ್ನಡದ ಕೋಟ್ಯಧಿಪತಿ, ವೀಕೆಂಡ್‌ ವಿತ್‌ ರಮೇಶ್‌ ಮುಂತಾದ ರಿಯಾಲಿಟಿ ಶೋಗಳನ್ನು, ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಕಿರುತೆರೆ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಝೀ ಕನ್ನಡ ವಾಹಿನಿಯು ಸದ್ಯದಲ್ಲಿಯೇ ಆರಂಭಿಸಲಿರುವ ಮಹಾನಟಿ ಶೋಗೂ ಜಡ್ಜ್‌ ಆಗಿ ರಮೇಶ್‌ ಅರವಿಂದ್‌ ಅವರು ಭಾಗವಹಿಸಿವುದು ಪಕ್ಕಾ ಆಗಿದೆ. ವಾಹಿನಿಯು ಇಂದು ಹಂಚಿಕೊಂಡಿರುವ ವಿಡಿಯೋದಲ್ಲಿರುವುದು ರಮೇಶ್‌ ಅರವಿಂದ್‌ ಎಂದು ತಿಳಿದುಬಂದಿದೆ.

ಇತರೆ ಜಡ್ಜ್‌ಗಳು

ಮಹಾನಟಿ ಶೋ ಎಂದರೆ ಹಲವು ಪ್ರತಿಭಾನ್ವಿತರ ಪ್ರದರ್ಶನವನ್ನು ಗಮನಿಸಿ ಉತ್ತಮ ನಟಿಯರನ್ನು ಆಯ್ಕೆ ಮಾಡುವಂತಹ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಹಲವು ಜಡ್ಜ್‌ಗಳು ಇರುವ ಸೂಚನೆಯಿದೆ. ಈಗಾಗಲೇ ಹಲವು ಜಡ್ಜ್‌ಗಳ ವಿಡಿಯೋವನ್ನು "ಈ ಜಡ್ಜ್‌ ಯಾರೆಂದು ಗುರುತಿಸಿ" ಎಂಬ ಕ್ಯಾಪ್ಷನ್‌ನಡಿ ಹಂಚಿಕೊಳ್ಳಲಾಗಿದೆ. ಈಗಾಗಲೇ ಹಲವು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ನಿನ್ನೆ ವಾಹಿನಿಯು ಹಂಚಿಕೊಂಡ ವಿಡಿಯೋದಲ್ಲಿ ಜಡ್ಜ್‌ ಆಗಿ ಕಾಟೇರ ನಿರ್ದೇಶಕರಾದ ತರುಣ್‌ ಸುಧೀರ್‌ ಆಗಮಿಸುವುದು ಖಾತ್ರಿಯಾಗಿದೆ.

ಇನ್ನೊಂದು ವಿಡಿಯೋದಲ್ಲಿ ನಟಿ ಸಪ್ತಮಿ ಗೌಡ ಇರುವುದು ಕಾಣಿಸಿದೆ. ಹೀಗಾಗಿ ಮಹಾನಟಿ ರಿಯಾಲಿಟಿ ಶೋದ ಜಡ್ಜ್‌ ಸೀಟ್‌ನಲ್ಲಿ ನಟಿ ಸಪ್ತಮಿ ಗೌಡ ಕುಳಿತುಕೊಳ್ಳಲಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ನಟಿ ಪ್ರೇಮಾ ಕೂಡ ಮಹಾನಟಿ ರಿಯಾಲಿಟಿ ಶೋಗೆ ಆಗಮಿಸುವುದು ಖಚಿತವಾಗಿದೆ.

ಮಹಾನಟಿ ರಿಯಾಲಿಟಿ ಶೋ ಯಾವಾಗ ಆರಂಭವಾಗಲಿದೆ ಎಂದು ಝೀ ಕನ್ನಡ ವಾಹಿನಿ ಇನ್ನೂ ಪ್ರಕಟಿಸಿಲ್ಲ. ಸದ್ಯದ ಸಿದ್ಧತೆಗಳನ್ನು ನೋಡಿದರೆ ಕೆಲವೇ ದಿನಗಳಲ್ಲಿ ಈ ಶೋ ಆರಂಭವಾಗುವ ಸೂಚನೆಯಿದೆ. ಕಳೆದ ಹಲವು ದಿನಗಳಲ್ಲಿ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ನಟಿಯರಾಗಬಯಸುವವರನ್ನು ಅಡಿಷನ್‌ ನಡೆಸಲಾಗಿತ್ತು. ಈ ರೀತಿ ಅಡಿಷನ್‌ನಲ್ಲಿ ಆಯ್ಕೆಯಾದವರು ಈ ರಿಯಾಲಿಟಿ ಶೋದಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಬಹುದು. ಇವರು ಮುಂದೊಂದು ದಿನ ಸಿನಿಮಾ, ಸೀರಿಯಲ್‌ಗಳಲ್ಲಿ ಅವಕಾಶ ಪಡೆಯಬಹುದು.

ರಮೇಶ್‌ ಅರವಿಂದ್‌ ನಟಿಸಿದ ಚಲನಚಿತ್ರಗಳು

ಕನ್ನಡ ನಟ ರಮೇಶ್‌ ಅರವಿಂದ್‌ ಅವರು ಹಲವು ಸಿನಿಮಾಗಳನ್ನು ಸ್ಯಾಂಡಲ್‌ವುಡ್‌ಗೆ ನೀಡಿದ್ದಾರೆ. ಸದ್ಯ ಕೆಡಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಿವಾಜಿ ಸುರತ್ಕಲ್‌, ಹೇ ಸರಸು, ಸುಂದರಾಂಗ ಜಾಣ, ಪುಷ್ಪಕ ವಿಮಾನ, ಮಹಾಶರಣ ಹರಳಯ್ಯ. ಮಂಗನ ಕೈಯಲ್ಲಿ ಮಾಣಿಕ್ಯ, ನಮ್ಮಣ್ಣ ಡಾನ್‌, ಕಲ್ಲ ಮಲ್ಲ ಸುಳ್ಳ, ರಂಗಪ್ಪ ಹೋಗ್ಬಿಟ್ನ, ಆಃಆತ, ಎಲುವೆಯೇ ನಿನ್ನ ನೋಡಲು, ಹೆಂಡ್ತಿರ್‌ ದರ್ಬಾರ್‌, ಕೃಷ್ಣ ನೀ ಲೇಟಾಗಿ ಬಾರೋ, ನಾನೂ ನನ್ನ ಕನಸು, ಹುಚ್ಚು ಕುಟುಂಬ, ಮೂರು ಗುಟ್ಟು ಒಂದು ಸುಳ್ಳು ಒಂದು ನಿಜ, ಸಂಕಟದಲ್ಲಿ ವೆಂಕಟ, ಅಪಘಾತ, ಸತ್ಯವಾನ್‌ ಸಾವಿತ್ರಿ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

IPL_Entry_Point