ಕನ್ನಡ ಸುದ್ದಿ  /  ಮನರಂಜನೆ  /  Shobha Shetty: ಅಂಜನಿಪುತ್ರದಲ್ಲಿ ಅಪ್ಪು ಜತೆ ನಟಿಸಿದ್ದ ಶೋಭಾ ಶೆಟ್ಟಿಗೂ ತೆಲುಗು ನಟ ಯಶವಂತ್‌ ರೆಡ್ಡಿಗೂ ನಿಶ್ಚಿತಾರ್ಥ, ವಿಡಿಯೋ ನೋಡಿ

Shobha Shetty: ಅಂಜನಿಪುತ್ರದಲ್ಲಿ ಅಪ್ಪು ಜತೆ ನಟಿಸಿದ್ದ ಶೋಭಾ ಶೆಟ್ಟಿಗೂ ತೆಲುಗು ನಟ ಯಶವಂತ್‌ ರೆಡ್ಡಿಗೂ ನಿಶ್ಚಿತಾರ್ಥ, ವಿಡಿಯೋ ನೋಡಿ

Shobha Shetty Engagement: ಪುನೀತ್‌ ರಾಜ್‌ಕುಮಾರ್‌ ಜತೆ ಅಂಜನಿಪುತ್ರ ಸಿನಿಮಾದಲ್ಲಿ ಸಹೋದರಿ ಪಾತ್ರದಲ್ಲಿ, ಅಗ್ನಿಸಾಕ್ಷಿ, ಕಾರ್ತಿಕ ದೀಪಂ ಸೀರಿಯಲ್‌ಗಳಲ್ಲಿ ನಟಿಸಿರುವ ಶೋಭಾ ಶೆಟ್ಟಿಗೂ ತೆಲುಗು ನಟ ಯಶವಂತ್‌ ರೆಡ್ಡಿಗೂ ನಿಶ್ಚಿತಾರ್ಥ ನಡೆದಿದೆ.


Shobha Shetty: ಅಂಜನಿಪುತ್ರದಲ್ಲಿ ಅಪ್ಪು ಜತೆ ನಟಿಸಿದ್ದ ಶೋಭಾ ಶೆಟ್ಟಿಗೂ ತೆಲುಗು ನಟ ಯಶವಂತ್‌ ರೆಡ್ಡಿಗೂ ನಿಶ್ಚಿತಾರ್ಥ, ವಿಡಿಯೋ ನೋಡಿ
Shobha Shetty: ಅಂಜನಿಪುತ್ರದಲ್ಲಿ ಅಪ್ಪು ಜತೆ ನಟಿಸಿದ್ದ ಶೋಭಾ ಶೆಟ್ಟಿಗೂ ತೆಲುಗು ನಟ ಯಶವಂತ್‌ ರೆಡ್ಡಿಗೂ ನಿಶ್ಚಿತಾರ್ಥ, ವಿಡಿಯೋ ನೋಡಿ

ಬೆಂಗಳೂರು: ಕನ್ನಡದ ಅಗ್ನಿಸಾಕ್ಷಿ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಶೋಭಾ ಶೆಟ್ಟಿ ತೆಲುಗಿನಲ್ಲಿ ಕಾರ್ತಿಕ ದೀಪಂ ಎಂಬ ಸೂಪರ್‌ಹಿಟ್‌ ಧಾರಾವಾಹಿ ಮೂಲಕ ಫೇಮಸ್‌ ಆಗಿದ್ದಾರೆ. ಕಾರ್ತಿಕ ದೀಪಂ ಸೀರಿಯಲ್‌ನಲ್ಲಿ ಮೋನಿತಾಳಾಗಿ ಇವರು ಜನಪ್ರಿಯತೆ ಪಡೆದಿದ್ದಾರೆ. ಇತ್ತೀಚೆಗೆ ಬಿಗ್‌ಬಾಸ್‌ ತೆಲುಗು ಸೀಸನ್‌ 7ರಲ್ಲಿ ಶೋಭಾ ಶೆಟ್ಟಿ ಭಾಗವಹಿಸಿದ್ದರು. ಇವರಿಗೂ ತೆಲುಗು ನಟ ಯಶವಂತ ರೆಡ್ಡಿಗೂ ಇದೀಗ ನಿಶ್ಚಿತಾರ್ಥ ನಡೆದಿದೆ. ಇವರಿಬ್ಬರ ಎಂಗೇಜ್‌ಮೆಂಟ್‌ ಕುರಿತು ಕೆಲವು ತಿಂಗಳ ಹಿಂದೊಮ್ಮೆ ಸುದ್ದಿಯಾಗಿತ್ತು. ಇದೀಗ ಇವರಿಬ್ಬರು ಇನ್‌ಸ್ಟಾಗ್ರಾಂನಲ್ಲಿ ಅಧಿಕೃತವಾಗಿ ತಮ್ಮ ಎಂಗೇಜ್‌ಮೆಂಟ್‌ ವಿಡಿಯೋ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಶೋಭಾ ಶೆಟ್ಟಿ ಯಶವಂತ್‌ ರೆಡ್ಡಿ ನಿಶ್ಚಿತಾರ್ಥ

ಬಿಗ್‌ಬಾಸ್‌ ತೆಲುಗು ಸೀಸನ್‌ 7ನಲ್ಲಿ ಶೋಭಾ ಶೆಟ್ಟಿಯವರು ತಮ್ಮ ಬಾಯ್‌ಫ್ರೆಂಡ್‌ ಯಶವಂತ್‌ ರೆಡ್ಡಿಯನ್ನು ಪರಿಚಯಿಸಿದ್ದಾರೆ. ಇವರಿಬ್ಬರೂ ಕಾರ್ತಿಕಾ ದೀಪಂ ಸೀರಿಯಲ್‌ನಲ್ಲಿ ಜತೆಯಾಗಿ ನಟಿಸಿದ್ದಾರೆ. ಕೆಲವು ಶಾರ್ಟ್‌ ಮೂವಿಗಳಲ್ಲಿಯೂ ಒಟ್ಟಾಗಿ ನಟಿಸಿದ್ದಾರೆ. ಈ ಸಮಯದಲ್ಲಿ ಸ್ನೇಹ ಪ್ರೀತಿಗೆ ತಿರುಗಿದೆ. ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿದಾಗ ತನ್ನ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇವರಿಬ್ಬರು ಕಳೆದ ವರ್ಷವೇ ಎಂಗೇಂಜ್‌ಮೆಂಟ್‌ ಆಗಲು ನಿರ್ಧರಿಸಿದ್ದರು. ಕೆಲವೊಂದು ಕಾರಣಗಳಿಂದ ಎಂಗೇಂಜ್‌ಮೆಂಟ್‌ ಆಗಿರಲಿಲ್ಲ.

ಇದೀಗ ಇವರು ತಮ್ಮ ಎಂಗೇಂಜ್‌ಮೆಂಟ್‌ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯಾ ವೈರಲ್‌ ಆಗಿದೆ. ಬೆಂಗಳೂರಿನಲ್ಲಿರುವ ಶೋಭಾ ಶೆಟ್ಟಿಯವರ ನಿವಾಸದಲ್ಲಿ ಈ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ. ಆದರೆ, ಈ ಕುರಿತು ಯಾವುದೇ ಸುಳಿವನ್ನು ಶೋಭಾ ನೀಡಿಲ್ಲ.

ಶೋಭಾ ಶೆಟ್ಟಿ ವಿವಾಹ ಯಾವಾಗ?

ಬಿಗ್‌ಬಾಸ್‌ ತೆಲುಗಿನಲ್ಲಿ ಕಾಣಿಸಿಕೊಂಡಿದ್ದ ಕರ್ನಾಟಕದ ಚೆಲುವೆ ಶೋಭಾ ಶೆಟ್ಟಿಗೂ ಯಶವಂತ್‌ ರೆಡ್ಡಿಗೂ ಶೀಘ್ರದಲ್ಲೇ ವಿವಾಹ ನಡೆಯುವ ಸಾಧ್ಯತೆ ಇದೆ. ಇವರಿಬ್ಬರ ವಿವಾಹ ಯಾವಾಗ ಎಂಬ ಕುರಿತು ಸದ್ಯ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಮೇ 5ರ ಬಳಿಕ ಸದ್ಯ ಯಾವುದೇ ಶುಭ ಮಹೂರ್ತವಿಲ್ಲ. ಹೀಗಾಗಿ ಇನ್ನು ಕೆಲವು ತಿಂಗಳು ಇವರಿಬ್ಬರು ವಿವಾಹವಾಗುವ ಸೂಚನೆಯಿಲ್ಲ.

ನಟಿ ಶೋಭಾ ಶೆಟ್ಟಿ ಕನ್ನಡದ ಅಗ್ನಿಸಾಕ್ಷಿ ಸೀರಿಯಲ್‌ನಲ್ಲಿ ನಟಿಸಿದ್ದರು. ತೆಲುಗಿನಲ್ಲಿ ಶೋಭಾ ಶೆಟ್ಟಿ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಸದ್ಯ ಕಾರ್ತಿಕ ದೀಪಂ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. 2013ರಲ್ಲಿ ಅಗ್ನಿಸಾಕ್ಷಿ ಸೀರಿಯಲ್‌ ಮೂಲಕ ಮನರಂಜನಾ ಕ್ಷೇತ್ರಕ್ಕೆ ಆಗಮಿಸಿದರು. ಅದಕ್ಕೂ ಮೊದಲು ಅವರು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಅಂಜನಿಪುತ್ರ ಸಿನೆಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಸಹೋದರಿಯಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ನಟಿಸುವ ಸಲುವಾಗಿ ಅಗ್ನಿಸಾಕ್ಷಿ ಸೀರಿಯಲ್‌ ಅರ್ಧಕ್ಕೆ ಬಿಟ್ಟಿದ್ದರು. ಕಾವೇರಿ, ನಮ್ಮ ರುಕ್ಕು ಸೀರಿಯಲ್‌ಗಳಲ್ಲೂ ಇವರು ನಟಿಸಿದ್ದಾರೆ. ಬಳಿಕ ಇವರು ತೆಲುಗು ಸೀರಿಯಲ್‌ಗಳತ್ತ ತೆರಳಿದರು. ಇದೀಗ ತೆಲುಗು ಹುಡುಗನನ್ನೇ ಮದುವೆಯಾಗಲಿದ್ದಾರೆ.

IPL_Entry_Point