ಸವಿರುಚಿ ಸೀಸನ್‌ 3: ಮಟಮಟ ಮಧ್ಯಾಹ್ನ ಚಟಪಟ ಒಗ್ಗರಣೆ ಪಟಪಟ ಮಾತು, ಕಲರ್ಸ್‌ ಕನ್ನಡಕ್ಕೆ ಬೆಳ್ಳುಳ್ಳಿ ಕಬಾಬ್‌ ಚಂದ್ರು ಎಂಟ್ರಿ-televison news saviruchi colors kannada recipe programme start from april 9 ugadi belluli kabab fame chandru jahnavi pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸವಿರುಚಿ ಸೀಸನ್‌ 3: ಮಟಮಟ ಮಧ್ಯಾಹ್ನ ಚಟಪಟ ಒಗ್ಗರಣೆ ಪಟಪಟ ಮಾತು, ಕಲರ್ಸ್‌ ಕನ್ನಡಕ್ಕೆ ಬೆಳ್ಳುಳ್ಳಿ ಕಬಾಬ್‌ ಚಂದ್ರು ಎಂಟ್ರಿ

ಸವಿರುಚಿ ಸೀಸನ್‌ 3: ಮಟಮಟ ಮಧ್ಯಾಹ್ನ ಚಟಪಟ ಒಗ್ಗರಣೆ ಪಟಪಟ ಮಾತು, ಕಲರ್ಸ್‌ ಕನ್ನಡಕ್ಕೆ ಬೆಳ್ಳುಳ್ಳಿ ಕಬಾಬ್‌ ಚಂದ್ರು ಎಂಟ್ರಿ

Saviruchi TV Show: ಕಲರ್ಸ್‌ ಕನ್ನಡದ ಸವಿರುಚಿ ಅಡುಗೆ ಕಾರ್ಯಕ್ರಮವು ಇದೇ ಯುಗಾದಿಯಿಂದ ಏಪ್ರಿಲ್‌ 9ರಿಂದ ಆರಂಭವಾಗಲಿದೆ. ಈ ಬಾರಿಯ ಸವಿರುಚಿ ಕಾರ್ಯಕ್ರಮವನ್ನು ನಿರೂಪಕಿ ಜಾಹ್ವವಿ ಜತೆ ಬೆಳ್ಳುಳ್ಳಿ ಕಬಾಬ್‌ ಖ್ಯಾತಿಯ ಚಂದ್ರು ನಡೆಸಿಕೊಡಲಿದ್ದಾರೆ.

ಸವಿರುಚಿ ಸೀಸನ್‌ 3 ಏಪ್ರಿಲ್‌ 9ರಿಂದ ಆರಂಭ
ಸವಿರುಚಿ ಸೀಸನ್‌ 3 ಏಪ್ರಿಲ್‌ 9ರಿಂದ ಆರಂಭ

ಕಲರ್ಸ್‌ ಕನ್ನಡ ವಾಹಿನಿಯ ಸವಿರುಚಿ ಸೀಸನ್‌ 3 ಇದೇ ಏಪ್ರಿಲ್‌ 9ರಿಂದ ಆರಂಭವಾಗಲಿದೆ. ವಿಶೇಷವೆಂದರೆ ಈ ಬಾರಿ ಅಡುಗೆ ಕಾರ್ಯಕ್ರಮವನ್ನು ನಿರೂಪಕಿ ಜಾಹ್ವವಿ ಜತೆ ಬೆಳ್ಳುಳ್ಳಿ ಕಬಾಬ್‌ ಖ್ಯಾತಿಯ ಚಂದ್ರು ನಡೆಸಿಕೊಡಲಿದ್ದಾರೆ. ಬೆಳ್ಳುಳ್ಳಿ ಕಬಾಬ್‌ ಚಟಪಟ ಒನ್‌ಮೋರ್‌ ಒನ್‌ಮೋರ್‌ ವೈರಲ್‌ ಆದ ಬಳಿಕ ಚಂದ್ರುವಿಗೆ ಕಿರುತೆರೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ಸವಿರುಚಿ ಕಾರ್ಯಕ್ರಮದ ಮೂಲಕವೂ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಲು ಆಗಮಿಸುತ್ತಿದ್ದಾರೆ.

ಸವಿರುಚಿ ಕಾರ್ಯಕ್ರಮ ಪ್ರಸಾರ ವಿವರ

ಕಲರ್ಸ್‌ ಕನ್ನಡವು ಸವಿರುಚಿ ಕಾರ್ಯಕ್ರಮದ ಕುರಿತು ಪ್ರಮೋ ಬಿಡುಗಡೆ ಮಾಡಿದೆ. "ಐಟಮ್‌ ವೆರೈಟಿ ಸ್ಟೈಲು ಪಕ್ಕಾ ನಾಟಿ, ಹೊಸ ಗ್ಯಾಂಗ್‌ ಸವಿರುಚಿ, ಏಪ್ರಿಲ್‌ 9ರಿಂದ ಮಧ್ಯಾಹ್ನ 12" ಎಂದು ವಿಡಿಯೋ ಬಿಡುಗಡೆ ಮಾಡಿದೆ. "ಮಟಮಟ ಮಧ್ಯಾಹ್ನ ಚಟಪಟ ಒಗರಣೆ ಪಟಪಟ ಮಾತು" ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಜತೆಗೆ ಮನಸ್ಸಿನೊಳಗೆ ಖಾಲಿ ಖಾಲಿ ಓ ನಲ್ಲ ನಲ್ಲ ಹಿನ್ನೆಲೆ ಹಾಡೂ ಇದೆ. ಹೊಸ ಗ್ಯಾಂಗ್‌ನ ಹೊಸ ರಂಗಿನೊಂದಿಗೆ ಯುಗಾದಿ ಹಬ್ಬದ ಸಮಯದಲ್ಲಿ ಸವಿರುಚಿ ಕಾರ್ಯಕ್ರಮ ಆರಂಭವಾಗಲಿದೆ.

ಬೆಳ್ಳುಳ್ಳಿ ರೇಟ್‌ ಜಾಸ್ತಿ ಆಗಿದೆ!

ಕಲರ್ಸ್‌ ಕನ್ನಡದ ಪ್ರಮೋಗೆ ನೆಟ್ಟಿಗರು ಹಲವು ಬಗೆಯ ಕಾಮೆಂಟ್‌ ಮಾಡಿದ್ದಾರೆ. ಬೆಳ್ಳುಳ್ಳಿ ಕಬಾಬ್ ಒಂದು ಮಾಡ್ಬೇಡಿ ಈಗಲೇ ಬೆಳ್ಳುಳ್ಳಿ ರೇಟ್ ಜಾಸ್ತಿ ಆಗಿದೆ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. "ಜಾಹ್ನವಿ ಸ್ವಲ್ಪ ರುಬ್ಬಿ ಕೊಡಮ್ಮ" "ಸುವರ್ಣದಲ್ಲಿ ವೆಜ್‌, ಕಲರ್ಸ್‌ನಲ್ಲಿ ನಾನ್‌ ವೆಜ್‌, ವೆಜ್‌ ವರ್ಸಸ್‌ ನಾನ್‌ ವೆಜ್‌" "ಇದೊಂದು ಕಮ್ಮ ಇತ್ತು" "ಕಲರ್ಸ್ ಕನ್ನಡ ನೀವು ಬರೀ 60 ಮತ್ತು 65 ಅಷ್ಟೇ ಸಂಚಿಕೆಗಳನ್ನು ನಡೆಸುತ್ತೀರಾ... ಅದಕ್ಕೆ ನೀವು ಸವಿರಚಿ ಸೀಸನ್ 3 ನ ಚನಾಗೆ ನೆಟ್ಸ್ಕೊಡಿ ಮತ್ತು ಸಾವಿರ ಸಂಚಿಕೆಗಳನ್ನು ಮೂಡಿಸಿ ಪ್ಲೀಸ್ ಕಲರ್ಸ ಕನ್ನಡ... ನಮ್ ಸಪೋರ್ಟ್ ಯಾವತ್ತು ನಿಮಗೆ ಇರುತ್ತೆ... ದಯವಿಟ್ಟು ಪ್ರೇಕ್ಷಕರ ಆಸೆಗಳನ್ನು ಈಡೇರಿಸಿ" ಹೀಗೆ ನಾನಾ ಕಾಮೆಂಟ್‌ಗಳು ಬಂದಿವೆ.

ಯಾರಿದು ಬೆಳ್ಳುಳ್ಳಿ ಕಬಾಬ್‌ ಚಂದ್ರು?

ಬೆಳ್ಳುಳ್ಳಿ ಕಬಾಬ್‌ ರೆಸಿಪಿ ಮೂಲಕ ಚಂದ್ರು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದರು. ರಾಹುಲಾ ಸ್ವಲ್ಪ ಅಲ್ಲಾಡ್ಸಪ್ಪ ಎಂಬ ಡೈಲಾಗ್‌ ಗೈರಲ್‌ ಆಗಿತ್ತು. ಇವರ ರೆಸಪಿಯಲ್ಲಿ "ಒನ್ಸ್‌ ಮೋರ್‌ ಒನ್ಸ್‌ ಮೋರ್‌" ಸ್ವಲ್ಪ ರುಬ್ಬಿ ಕೊಡಪ್ಪ" ಇತ್ಯಾದಿ ಡೈಲಾಗ್‌ಗಳು ವೈರಲ್‌ ಆಗಿತ್ತು. ಇದೇ ಶೈಲಿಯಲ್ಲಿ ಈಗ ಕಲರ್ಸ್‌ ಕನ್ನಡ ಪ್ರಮೋ ಬಿಡುಗಡೆ ಮಾಡಿದೆ. ಇದೇ ಸಮಯದಲ್ಲಿ ರಾಹುಲ್ಲಾ ಕೂಡ ಜನಪ್ರಿಯತೆ ಪಡೆದಿದ್ದ. ಇವರು ಸುವರ್ಣ ವಾಹಿನಿಯ ಬೊಂಬಾಟ್‌ ಭೋಜನ ಕಾರ್ಯಕ್ರಮಕ್ಕೂ ಆಗಮಿಸಿ ಸಿಹಿಕಹಿ ಚಂದ್ರು ಜತೆ ಮಾತನಾಡಿದ್ದರು.

ಬೆಳ್ಳುಳ್ಳಿ ಕಬಾಬ್‌ ಚಂದ್ರು ಅವರು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅಂದರೆ, ಇವರು ಮೇಕಪ್‌ ಮ್ಯಾನ್‌ ಆಗಿದ್ರು. ನಟಿ ಮಾಲಾಶ್ರಿ ಜತೆ ಕೆಲಸ ಮಾಡಿದದ್ದರು. ಅಣ್ಣಾವ್ರ ಕುಟುಂಬದ ಜತೆಗೂ ಕೆಲಸ ಮಾಡಿದ್ರು. ಶಿವಣ್ಣ, ಅಂಬರೀಷ್‌ ಸೇರಿದಂತೆ ಹಲವು ಕಲಾವಿದರಿಗೆ ಇವರು ಅಡುಗೆ ಮಾಡಿಕೊಟ್ಟಿದ್ದಾರೆ. ಮೇಕಪ್‌ ಮ್ಯಾನ್‌ ಆಗಿದ್ದವರು ತನ್ನ ಅಡುಗೆ ಮೂಲಕ ಜನಪ್ರಿಯತೆ ಪಡೆದರು. ಬಳಿಕ ಸ್ವಂತ ಹೋಟೆಲ್‌ ಆರಂಭಿಸಿದರು. ಬೆಂಗಳೂರಿನ ಶಿವಾನಂದ ಸರ್ಕಲ್‌ ಬಳಿ ಪುಟ್ಟ ಹೋಟೆಲ್‌ ಆರಂಭಿಸಿದ್ದರು. ಈಗ ಅದು ದೊಡ್ಡ ಫ್ಯಾಮಿಲಿ ರೆಸ್ಟೂರೆಂಟ್‌ ಆಗಿದೆ.

mysore-dasara_Entry_Point