Gurudev Hoysala Success: ‘ಹೊಯ್ಸಳ’ ಗೆಲುವು ‘ಉತ್ತರಕಾಂಡ’ಕ್ಕೆ ಮತ್ತಷ್ಟು ಶಕ್ತಿ ತುಂಬಿದೆ; ಕೆಆರ್‌ಜಿ ಕಡೆಯಿಂದ ಸಕ್ಸಸ್ ಪತ್ರ..‌-the success of gurudev hoysala movie has further increased the responsibility says krg studios ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Gurudev Hoysala Success: ‘ಹೊಯ್ಸಳ’ ಗೆಲುವು ‘ಉತ್ತರಕಾಂಡ’ಕ್ಕೆ ಮತ್ತಷ್ಟು ಶಕ್ತಿ ತುಂಬಿದೆ; ಕೆಆರ್‌ಜಿ ಕಡೆಯಿಂದ ಸಕ್ಸಸ್ ಪತ್ರ..‌

Gurudev Hoysala Success: ‘ಹೊಯ್ಸಳ’ ಗೆಲುವು ‘ಉತ್ತರಕಾಂಡ’ಕ್ಕೆ ಮತ್ತಷ್ಟು ಶಕ್ತಿ ತುಂಬಿದೆ; ಕೆಆರ್‌ಜಿ ಕಡೆಯಿಂದ ಸಕ್ಸಸ್ ಪತ್ರ..‌

ಗುರುದೇವ್‌ ಹೊಯ್ಸಳ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರಿಗೆ ಚಿತ್ರನಿರ್ಮಾಣ ಸಂಸ್ಥೆ ಕೆಆರ್‌ಜಿ ಸ್ಡುಡಿಯೋಸ್‌ ಪತ್ರದ ಮೂಲಕ ಧನ್ಯವಾದ ಅರ್ಪಿಸಿದೆ.

‘ಹೊಯ್ಸಳ’ ಗೆಲುವು ‘ಉತ್ತರಕಾಂಡ’ಕ್ಕೆ ಮತ್ತಷ್ಟು ಶಕ್ತಿ ತುಂಬಿದೆ; ಕೆಆರ್‌ಜಿ ಕಡೆಯಿಂದ ಸಕ್ಸಸ್ ಪತ್ರ..
‘ಹೊಯ್ಸಳ’ ಗೆಲುವು ‘ಉತ್ತರಕಾಂಡ’ಕ್ಕೆ ಮತ್ತಷ್ಟು ಶಕ್ತಿ ತುಂಬಿದೆ; ಕೆಆರ್‌ಜಿ ಕಡೆಯಿಂದ ಸಕ್ಸಸ್ ಪತ್ರ..

Gurudev Hoysala Success: ಡಾಲಿ ಧನಂಜಯ್‌ ನಟನೆಯ 25ನೇ ಸಿನಿಮಾ ‘ಗುರುದೇವ್ ಹೊಯ್ಸಳ’‌ ಮಾರ್ಚ್‌ 30ರಂದು ರಾಜ್ಯಾದ್ಯಂತ ಬಿಡುಗಡೆ ಆಗಿತ್ತು. ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾಕ್ಕೆ ಅಷ್ಟೇ ಒಳ್ಳೆಯ ಪ್ರತಿಕ್ರಿಯೆ ಸಹ ಸಿಕ್ಕಿತ್ತು. ಈಗ ಮೂರನೇ ವಾರಕ್ಕೆ ಕಾಲಿರಿಸಿದೆ ಈ ಸಿನಿಮಾ. ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರಿಗೆ ಚಿತ್ರನಿರ್ಮಾಣ ಸಂಸ್ಥೆ ಕೆಆರ್‌ಜಿ ಸ್ಡುಡಿಯೋಸ್‌ ಪತ್ರದ ಮೂಲಕ ಧನ್ಯವಾದ ಅರ್ಪಿಸಿದೆ.

ಕೆಆರ್‌ಜಿ ಸ್ಡುಡಿಯೋಸ್‌ ಬರೆದ ಪತ್ರ ಹೀಗಿದೆ.

"ಕಳೆದ ವಾರ ಬಿಡುಗಡೆಯಾದ ನಮ್ಮ ಸಂಸ್ಥೆ ನಿರ್ಮಿಸಿರುವ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಸಿಕ್ಕಿದ್ದು, ಚಿತ್ರ ಎರಡನೆಯ ವಾರಕ್ಕೆ ಕಾಲಿಟ್ಟಿದೆ. ರಾಜ್ಯದಲ್ಲಿ ಚುನಾವಣೆಗಳ ಕಾವು ಮತ್ತು ಐಪಿಎಲ್ ಜ್ವರದ ನಡುವೆಯೂ ಚಿತ್ರಕ್ಕೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬಂದು ನೋಡಿ ಗೆಲ್ಲಿಸಿದ್ದಾರೆ. ಈ ಪ್ರಶಂಸೆಯಿಂದ ನಮ್ಮ ತಂಡಕ್ಕೆ ಸಾರ್ಥಕ ಭಾವ ಮೂಡಿದೆ.

ನಮ್ಮ ಕೆಆರ್‌ಜಿ ಸ್ಟುಡಿಯೋಸ್‌ನ ಮೊದಲ ಚಿತ್ರ ‘ರತ್ನನ್ ಪ್ರಪಂಚ’, ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಅತ್ಯಂತ ಹೆಚ್ಚು ವೀಕ್ಷಣೆಯಾದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

ಈಗ ನಮ್ಮ ಸಂಸ್ಥೆಯ ಎರಡನೆಯ ಚಿತ್ರಕ್ಕೂ ಜನಮನ್ನಣೆ ಸಿಕ್ಕಿರುವುದು ನಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮರ್ಯಾದೆ ಹತ್ಯೆ ಎಂಬ ಗಹನವಾದ ಸಮಸ್ಯೆಯ ಕುರಿತ ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ನಮಗೆ ಈ ತರಹದ ಇನ್ನಷ್ಟು ಸೂಕ್ಷ್ಮ ಸಂವೇದನೆಯ ಚಿತ್ರಗಳನ್ನು ನಿರ್ಮಿಸುವುದಕ್ಕೆ ಪ್ರೇರೇಪಿಸಿದೆ.

ಈ ಎರಡೂ ಚಿತ್ರಗಳ ಯಶಸ್ಸಿನಿಂದ ಸದ್ಯದಲ್ಲೇ ನಮ್ಮ ಸಂಸ್ಥೆಯ ಮೂರನೆಯ ಪ್ರಯತ್ನವಾದ ಉತ್ತರಕಾಂಡ ಚಿತ್ರವನ್ನು ಸದ್ಯದಲ್ಲೇ ಶುರು ಮಾಡಲಿದ್ದೇವೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ನಡೆಯುವ ಈ ಕಥೆಯಲ್ಲೂ ಧನಂಜಯ ನಟಿಸುತ್ತಿದ್ದಾರೆ. ಇದಲ್ಲದೆ ಇನ್ನಷ್ಟು ಚಿತ್ರಗಳನ್ನು ನಮ್ಮ ಸಂಸ್ಥೆಯಡಿ ನಿರ್ಮಿಸುತ್ತಿದ್ದು, ಸದ್ಯದಲ್ಲೇ ಈ ಬಗ್ಗೆ ಘೋಷಣೆಯಾಗಲಿದೆ.

ನಮಗೆ ಸಲಹೆ, ಸೂಚನೆ ಮತ್ತು ಅಪರಿಮಿತ ಪ್ರೀತಿ ತೋರಿಸುತ್ತಾ ಬಂದಿರುವ ವಿಜಯ್ ಕಿರಗಂದೂರು ಮತ್ತು ನನ್ನ ಎಲ್ಲ ಹಿತೈಷಿಗಳಿಗೂ ನಾನು ಚಿರಋಣಿ. ಇಂದು ಕೆ ಆರ್ ಜಿ ಸ್ಟುಡಿಯೋಸ್ ಮತ್ತು ಕೆ ಆರ್ ಜಿ ಕನೆಕ್ಟ್ಸ್ ಈ ಹಂತಕ್ಕೆ ಬೆಳೆಯುತ್ತಿರುವುದಕ್ಕೆ ನಮ್ಮ ತಂಡದ ಪ್ರೀತಿ ಮತ್ತು ಪರಿಶ್ರಮ ಸಹ ಕಾರಣ. ಮುಂದಿನ ದಿನಗಳಲ್ಲಿ ನಿಮ್ಮನ್ನು ಇನ್ನಷ್ಟು ಮನರಂಜಿಸುವುದಕ್ಕೆ ಉತ್ಸುಕರಾಗಿದ್ದೇವೆ ಎಂದು ಕೆ ಆರ್ ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ತಿಳಿಸಿದ್ದಾರೆ.

ವಿಜಯ್‌ ಎನ್‌ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ಡಾಲಿ ಧನಂಜಯ್‌ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಅಮೃತಾ ಅಯ್ಯಂಗಾರ್‌ ಜೋಡಿಯಾದರೆ, ಇನ್ನುಳಿದಂತೆ ನವೀನ್‌ ಶಂಕರ್‌ ಬಲಿ ಪಾತ್ರದಲ್ಲಿ ನೆಗೆಟಿವ್‌ ಶೇಡ್‌ನಲ್ಲಿ ಅಬ್ಬರಿಸಿದ್ದಾರೆ. ಪ್ರತಾಪ್‌ ನಾರಾಯಣ್‌ ಸೇರಿ ಹಲವರು ನಟನೆಯಿಂದಲೇ ಮೆಚ್ಚುಗೆ ಪಡೆದುಕೊಂಡಿದ್ದಾರೆ.