Anushka On Kantara: ತನ್ನ ನೆಲದ ಕಥೆಯ ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಹೀಗಂದ್ರು..
ಕನ್ನಡ ಸುದ್ದಿ  /  ಮನರಂಜನೆ  /  Anushka On Kantara: ತನ್ನ ನೆಲದ ಕಥೆಯ ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಹೀಗಂದ್ರು..

Anushka On Kantara: ತನ್ನ ನೆಲದ ಕಥೆಯ ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಹೀಗಂದ್ರು..

ಸೋಷಿಯಲ್‌ ಮೀಡಿಯಾದಿಂದ ತುಂಬ ಅಂತರ ಕಾಯ್ದುಕೊಳ್ಳುವ ನಟಿ ಅನುಷ್ಕಾ ಶೆಟ್ಟಿ, ಅಲ್ಲಿ ಕಾಣಿಸುವುದೇ ತುಂಬ ಅಪರೂಪ. ಇದೀಗ ಮತ್ತೆ ಜಾಲತಾಣಕ್ಕೆ ಎಂಟ್ರಿಕೊಟ್ಟಿದ್ದಾರೆ. ಅದಕ್ಕೆ ಕಾರಣ; ‘ಕಾಂತಾರ’.

<p>ತನ್ನ ನೆಲದ ಕಥೆಯ ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಹೀಗಂದ್ರು..</p>
ತನ್ನ ನೆಲದ ಕಥೆಯ ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಹೀಗಂದ್ರು.. (Instagram/ Anushka Shetty)

‘ಕಾಂತಾರ’ ಸಿನಿಮಾ ಸದ್ಯ ಇಡೀ ದೇಶದಲ್ಲಿ ಸುದ್ದಿಯಲ್ಲಿರುವ ಚಿತ್ರ. ಸೋಷಿಯಲ್‌ ಮೀಡಿಯಾದಿಂದ ದೊಡ್ಡ ಮಟ್ಟದ ಹೈಪ್‌ ಗಿಟ್ಟಿಸಿಕೊಂಡು, ಗಳಿಕೆ ವಿಚಾರದಲ್ಲಿಯೂ ಮುನ್ನುಗ್ಗುತ್ತಿರುವ ಸ್ಯಾಂಡಲ್‌ವುಡ್‌ ಸಿನಿಮಾ. ಆ ಯಶಸ್ಸಿನ ಹಿನ್ನೆಲೆಯಲ್ಲಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿಯೂ ‘ಕಾಂತಾರ‘ (Kantara ) ಸಿನಿಮಾ ಮಿಂಚುತ್ತಿದೆ. ಕರ್ನಾಟಕದಲ್ಲಿ ಚಿತ್ರಕ್ಕೆ ಸಿಕ್ಕ ಮೆಚ್ಚುಗೆ ಒಂದೆಡೆಯಾದರೆ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೂ ಡಬ್‌ ಆಗಿ ತೆರೆಕಂಡಿರುವ ಈ ಸಿನಿಮಾ ಅಲ್ಲಿನ ಭಾಷಿಕರನ್ನೂ ಸೆಳೆದಿದೆ.

ಸಿನಿಮಾ ವೀಕ್ಷಿಸಿದ ಪ್ರೇಕ್ಷಕನಿಂದ ಮಾತ್ರವಲ್ಲ, ಸಿನಿಮಾ ಸೆಲೆಬ್ರಿಟಿ ವಲಯದಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈಗಾಗಲೇ ತಮಿಳಿನಲ್ಲಿ ಸಿನಿಮಾ ಬಿಡುಗಡೆ ಆಗಿದ್ದು, ಚಿತ್ರ ವೀಕ್ಷಿಸಿದ ನಟ ಧನುಷ್‌, ಕಾರ್ತಿ, ಪ್ರಭಾಸ್‌ ಸೇರಿ ಸಾಕಷ್ಟು ನಟ, ನಟಿಯರು ಚಿತ್ರದ ಬಗ್ಗೆ ಮುಕ್ತಕಂಠದಿಂದ ಹೊಗಳಿದ್ದಾರೆ. ಚಿತ್ರ ಮೂಡಿ ಬಂದಿರುವ ರೀತಿ, ನಿರ್ದೇಶಕರ ಪರಿಶ್ರಮವನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ಮಂಗಳೂರು ಮೂಲದ ಪರಭಾಷಾ ನಟಿ ಅನುಷ್ಕಾ ಶೆಟ್ಟಿ ಸಹ ತನ್ನ ನೆಲದ ಕಥೆಗೆ ಉಘೇ ಎಂದಿದ್ದಾರೆ..

ಅನುಷ್ಕಾ ಹೇಳಿದ್ದೇನು? ಇಲ್ಲಿದೆ ನೋಡಿ..

ಸೋಷಿಯಲ್‌ ಮೀಡಿಯಾದಿಂದ ತುಂಬ ಅಂತರ ಕಾಯ್ದುಕೊಳ್ಳುವ ನಟಿ ಅನುಷ್ಕಾ ಶೆಟ್ಟಿ, ಅಲ್ಲಿ ಕಾಣಿಸುವುದೇ ತುಂಬ ಅಪರೂಪ. ಇದೀಗ ಮತ್ತೆ ಜಾಲತಾಣಕ್ಕೆ ಎಂಟ್ರಿಕೊಟ್ಟಿದ್ದಾರೆ. ಅದಕ್ಕೆ ಕಾರಣ; ‘ಕಾಂತಾರ’. ಈ ಸಿನಿಮಾ ವೀಕ್ಷಣೆ ಮಾಡಿರುವ ಅನುಷ್ಕಾ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ಕನ್ನಡದ ಕಾಂತಾರ ಸಿನಿಮಾ ನೋಡಿದೆ. ಇಡೀ ಚಿತ್ರ ನನಗೆ ತುಂಬ ತುಂಬ ಇಷ್ಟವಾಯಿತು. ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಸೇರಿ ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಒಂದು ಹೊಸ ಅನುಭವ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ರಿಷಬ್​ ಶೆಟ್ಟಿ ನೀವು ಅದ್ಬುತ. ಎಲ್ಲವೂ ಈ ಚಿತ್ರವನ್ನು ಥಿಯೇಟರ್‌ಗಳಲ್ಲಿಯೇ ನೋಡಿ’ ಎಂದು ಮನವಿ ಮಾಡಿದ್ದಾರೆ.

ಕಾಂತಾರ ಮೆಚ್ಚಿದ ಧನುಷ್‌

ಈ ಮೊದಲು ತಮಿಳಿನಲ್ಲಿ ಕಾಂತಾರ ಸಿನಿಮಾ ನೋಡಿರುವ ಧನುಷ್‌ ಸಹ ಚಿತ್ರದ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ. "ಕಾಂತಾರ .. ಮೈಂಡ್‌ ಬ್ಲೋಯಿಂಗ್!! ಈ ಸಿನಿಮಾ ಪ್ರತಿಯೊಬ್ಬರೂ ನೋಡಲೇಬೇಕು.. ರಿಷಬ್ ಶೆಟ್ಟಿ, ನಿಮ್ಮ ಬಗ್ಗೆ ನೀವು ತುಂಬಾ ಹೆಮ್ಮೆ ಪಡಬೇಕು. ಅಂಥ ಸಿನಿಮಾ ತೆರೆಮೇಲೆ ತಂದಿದ್ದಕ್ಕೆ. ಅಭಿನಂದನೆಗಳು ಹೊಂಬಾಳೆ ಫಿಲಂಸ್.. ಹೀಗೆ ಎಲ್ಲ ಗಡಿಗಳನ್ನು ದಾಟುತ್ತಲೇ ಇರಿ. ಚಿತ್ರದ ಎಲ್ಲಾ ನಟರು ಮತ್ತು ತಂತ್ರಜ್ಞರಿಗೆ ನನ್ನ ಕಡೆಯಿಂದ ಒಂದು ದೊಡ್ಡ ಅಪ್ಪುಗೆ. ದೇವರು ಒಳ್ಳೆಯದು ಮಾಡಲಿ.." ಎಂದು ಧನುಷ್‌ ಟ್ವಿಟ್‌ ಮಾಡಿದ್ದಾರೆ.

ಹೊಂಬಾಳೆ ಸಂಸ್ಥೆಯ ಪ್ರತಿಕ್ರಿಯೆ ಹೀಗಿತ್ತು

ಧನುಷ್‌ ಅವರ ಟ್ವಿಟ್‌ಗೆ ಪ್ರತಿಯಾಗಿ ಹೊಂಬಾಳೆ ಸಂಸ್ಥೆ ಹೀಗೆ ಪ್ರತಿಕ್ರಿಯೆ ನೀಡಿದೆ. "ನಂಬಿಕೆಯು ಎಲ್ಲದಕ್ಕೂ ಪರಿಹಾರವಾಗಿದೆ ಮತ್ತು ನಾವು ಸರ್ವಶಕ್ತನಲ್ಲಿ ಮತ್ತು ದೈವತ್ವದಲ್ಲಿ ನಂಬಿಕೆ ಹೊಂದಿದ್ದೇವೆ. ಹಾಗಾಗಿಯೇ ಈ ಗೆಲುವು ಫಲಿಸಿತು. ನಾವು ಪ್ರಭು ಮತ್ತು ಕಧೀರ್ ಇಬ್ಬರನ್ನು ಇಷ್ಟಪಟ್ಟಿದ್ದೇವೆ. "ನಾನೇ ವರುವೇನ್‌ʼ ಇಂಟರ್‌ವಲ್‌ ಸಮಯದಲ್ಲಿ ನಿಮ್ಮ ಸಿನಿಮಾ ನಮ್ಮನ್ನೆಲ್ಲ ಸೀಟಿನ ತುದಿಗೆ ತಂದು ಕೂರಿಸಿತ್ತು" ಎಂದು ಇತ್ತೀಚೆಗೆ ಬಿಡುಗಡೆಯಾದ ಧನುಷ್‌ ಸಿನಿಮಾ ಬಗ್ಗೆಯೂ ಹೊಂಬಾಳೆ ಟ್ವಿಟ್‌ ಮಾಡಿದೆ.

2022 ಸ್ಯಾಂಡಲ್‌ವುಡ್‌ ಪಾಲಿಗೆ ನಿಜಕ್ಕೂ ಐತಿಹಾಸಿಕ ವರ್ಷ

2022 ಸ್ಯಾಂಡಲ್‌ವುಡ್‌ ಪಾಲಿಗೆ ನಿಜಕ್ಕೂ ಐತಿಹಾಸಿಕ ವರ್ಷ. ಬಹುನಿರೀಕ್ಷಿತ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಮಿಂಚಿವೆ. ಕಲೆಕ್ಷನ್‌ ವಿಚಾರದಲ್ಲಿ ಹೊಸ ದಾಖಲೆ ಬರೆದಿವೆ. ಕೆಜಿಎಫ್‌, ಜೇಮ್ಸ್‌, ವಿಕ್ರಾಂತ್‌ ರೋಣ, ಚಾರ್ಲಿ ಹೀಗೆ ಒಂದೊಂದು ಮೈಲಿಗಲ್ಲನ್ನು ತಲುಪಿವೆ. ಇದೀಗ ಕಾಂತಾರ ಚಿತ್ರವೂ ಅದೇ ಹಾದಿಯಲ್ಲಿ ದಾಪುಗಾಲಿಟ್ಟಿದೆ. ಕರ್ನಾಟಕದಲ್ಲಿ ದೊಡ್ಡ ಯಶಸ್ಸು ಗಳಿಸಿರುವ ಈ ಸಿನಿಮಾ, IMDB ರೇಟಿಂಗ್‌ನಲ್ಲಿಯೂ ಮುಂದಿಡಿ ಇರಿಸಿದೆ.

RRR, ಕೆಜಿಎಫ್‌ ಚಿತ್ರದ ದಾಖಲೆ ಮುರಿದ ಕಾಂತಾರ...

ಐಎಮ್‌ಡಿಬಿಯ( ಇಂಟರ್‌ನ್ಯಾಷನಲ್ ಮೂವಿ ಡೇಟಾಬೇಸ್) ರ್ಯಾಂಕಿಂಗ್‌ನಲ್ಲಿ ಕಾಂತಾರ ಸಿನಿಮಾ ಕೆಜಿಎಫ್‌ ಮತ್ತು ಆರ್‌ಆರ್‌ಆರ್‌ ಚಿತ್ರವನ್ನು ಹಿಂದಿಕ್ಕಿದೆ. ಕೆಜಿಎಫ್‌ ಸಿನಿಮಾ 8.4 ರೇಟಿಂಗ್‌ ಪಡೆದುಕೊಂಡು ದಾಖಲೆ ಬರೆದಿತ್ತು. ರಾಜಮೌಳಿಯ ಆರ್‌ಆರ್‌ಆರ್‌ ಚಿತ್ರವೂ 8 ರೇಟಿಂಗ್‌ ಗಿಟ್ಟಿಸಿಕೊಂಡಿತ್ತು. ಇದೀಗ ರಿಷಬ್‌ ಶೆಟ್ಟಿಯ ಕಾಂತಾರ ಸಿನಿಮಾ ಬರೋಬ್ಬರಿ 9.6 ರೇಟಿಂಗ್‌ ಪಡೆದು ಹೊಸ ದಾಖಲೆ ಬರೆದಿದೆ. ಕನ್ನಡದ ಚಾರ್ಲಿ 9, ಜೈ ಭೀಮ್‌ 8.9, ವಿಕ್ರಂ 8.4 ರ್ಯಾಂಕಿಂಗ್‌ ಪಡೆದುಕೊಂಡಿತ್ತು. ಇದೀಗ ಅದೆಲ್ಲ ದಾಖಲೆಯನ್ನು ಕಾಂತಾರ ಮುರಿದಿದೆ. ಅಷ್ಟೇ ಅಲ್ಲ ಈಗಾಗಲೇ ಬುಕ್‌ಮೈ ಶೋ ಇತಿಹಾಸದಲ್ಲಿಯೇ ಶೇ. 99 ರೇಟಿಂಗ್‌ ಪಡೆದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಯೂ ಈ ಸಿನಿಮಾಕ್ಕಿದೆ.

ಹಿಂದಿಯಲ್ಲಿ 2500 ತೆರೆಗಳ ಮೇಲೆ ಕಾಂತಾರ..

ಒಳ್ಳೆಯ ಕಥಾವಸ್ತುವುಳ್ಳ ಚಿತ್ರವನ್ನು ಚಿತ್ರ ರಸಿಕರು ಮೆಚ್ಚಿಕೊಳ್ಳುತ್ತಾರೆ ಎನ್ನುವುದಕ್ಕೆ 'ಕಾಂತಾರ' ಚಿತ್ರದ ಯಶಸ್ಸೇ ಸಾಕ್ಷಿ. ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮನ ಮುಟ್ಟುವಂತೆ ಈ ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಉತ್ತಮ ಚಿತ್ರವನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಹಾಗೂ ಚಿತ್ರವನ್ನು ನಿರ್ದೇಶಿಸಿರುವ ರಿಷಬ್ ಶೆಟ್ಟಿ ಅವರ ಬಗ್ಗೆ ಕನ್ನಡಿಗರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಈಗ ಎಲ್ಲಿ ನೋಡಿದರೂ 'ಕಾಂತಾರ' ಚಿತ್ರದ್ದೇ ಮಾತು. ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಇಂತಹ ಅದ್ಭುತ ಸಿನಿಮಾ ಬೇರೆ ಬೇರೆ ರಾಜ್ಯಗಳಲ್ಲಿ, ಅಯಾ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಅಕ್ಟೋಬರ್ 14, ಶುಕ್ರವಾರ ಹಿಂದಿ ಭಾಷೆಯಲ್ಲೂ 'ಕಾಂತಾರ ' ಚಿತ್ರ ತೆರೆ ಕಾಣುತ್ತಿದೆ. ಮುಂಬೈ ಸೇರಿದಂತೆ ವಿವಿಧೆಡೆ ಸುಮಾರು 2500 ಕ್ಕೂ ಅಧಿಕ ಸ್ಕೀನ್‌ಗಳಲ್ಲಿ 'ಕಾಂತಾರ' ಪ್ರದರ್ಶನವಾಗಲಿದೆ.

Whats_app_banner