ಕನ್ನಡ ಸುದ್ದಿ  /  ಮನರಂಜನೆ  /  Pushpa 2: ಪುಷ್ಪ2 ಫಸ್ಟ್‌ ಸಿಂಗಲ್‌ ಬಿಡುಗಡೆಗೆ ಮುನ್ನ ಇದೇನಿದು ಪುಷ್ಪ ಪುಷ್ಪ ಮೀಮ್ಸ್‌ ಹಾವಳಿ; ಶಿವಣ್ಣ, ರವಿತೇಜ ಎಲ್ರೂ ಇದ್ದಾರೆ ನೋಡಿ

Pushpa 2: ಪುಷ್ಪ2 ಫಸ್ಟ್‌ ಸಿಂಗಲ್‌ ಬಿಡುಗಡೆಗೆ ಮುನ್ನ ಇದೇನಿದು ಪುಷ್ಪ ಪುಷ್ಪ ಮೀಮ್ಸ್‌ ಹಾವಳಿ; ಶಿವಣ್ಣ, ರವಿತೇಜ ಎಲ್ರೂ ಇದ್ದಾರೆ ನೋಡಿ

ಮೇ 1ರಂದು ಪುಷ್ಪ 2 ಸಿನಿಮಾದ ಫಸ್ಟ್‌ ಸಿಂಗಲ್‌ ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಪುಷ್ಪ ಪುಷ್ಪ ಎಂಬ ಹೊಸ ಮೀಮ್ಸ್‌ ಹೆಚ್ಚಿವೆ. ರವಿತೇಜ ಮತ್ತು ಫಹದ್ ಫಾಸಿಲ್‌ನಿಂದ ಹಿಡಿದು ಶಿವರಾಜ್‌ಕುಮಾರ್, ತ್ರಿಶಾ ಮತ್ತು ರಘು ಬಾಬು ಮುಂತಾದವರ ವಿಡಿಯೋಗಳನ್ನು ಪುಷ್ಪ ಪುಷ್ಪ ಮೀಮ್ಸ್‌ಗೆ ಅಳವಡಿಸಿ ಮಜಾತೆಗೆದುಕೊಳ್ಳುತ್ತಿದ್ದಾರೆ ಸಿನಿಪ್ರೇಮಿಗಳು.

ಪುಷ್ಪ2 ಫಸ್ಟ್‌ ಸಿಂಗಲ್‌ ಬಿಡುಗಡೆ ದಿನಾಂಕ ಪ್ರಕಟ
ಪುಷ್ಪ2 ಫಸ್ಟ್‌ ಸಿಂಗಲ್‌ ಬಿಡುಗಡೆ ದಿನಾಂಕ ಪ್ರಕಟ

ಬೆಂಗಳೂರು: ಪುಷ್ಪ 2: ದಿ ರೂಲ್‌ ಸಿನಿತಂಡವು ಮೇ 1ರಂದು ಪುಷ್ಪ 2 ಸಿನಿಮಾದ ಮೊದಲ ಸಿಂಗಲ್‌ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಈ ಸಂದರ್ಭದಲ್ಲಿ ದೇವಿಪ್ರಸಾದ್‌ ಸಂಯೋಜಿಸಿದ ಸುಮಾರು 20 ಸೆಕೆಂಡಿನ ಹಾಡಿನ ಕ್ಲಿಪ್‌ ಬಿಡುಗಡೆಯಾಗಿತ್ತು. ಇದರ ಫಲಿತಾಂಶವಾಗಿ ಟ್ವಿಟ್ಟರ್‌ನಲ್ಲಿ ಹಲವು ಬಗೆಯ ಮೀಮ್ಸ್‌ಗಳು ಹರಿದಾಡುತ್ತಿವೆ. ಬಹುತೇಕ ಮೀಮ್ಸ್‌ಗಳು ಕಾಮಿಡಿಯಾಗಿದ್ದು, ಚಿತ್ರವಿಚಿತ್ರವಾಗಿವೆ.

ಟ್ರೆಂಡಿಂಗ್​ ಸುದ್ದಿ

ಪುಷ್ಪ ಸಿನಿತಂಡವು ಸಣ್ಣ ವಿಡಿಯೋ ಕ್ಲಿಪ್‌ ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ಪುಷ್ಪ ಪುಷ್ಪ ಪುಷ್ಪ ಎಂಬ ಕೋರಸ್‌ ಧ್ವನಿ ಮಾತ್ರವಿದೆ. ಮೇ 1ರಂದು ಪುಷ್ಪ ಸಿನಿಮಾದ ಫಸ್ಟ್‌ ಸಿಂಗಲ್‌ ಬಿಡುಗಡೆಯಾಗಲಿದೆ. ಅಂದು 11.07 ಗಂಟೆಗೆ ಫಸ್ಟ್‌ ಸಿಂಗಲ್‌ ರಿಲೀಸ್‌ ಆಗಲಿದೆ. ಆದರೆ, ಸಿನಿಪ್ರೇಮಿಗಳಿಗೆ ಅಲ್ಲಿಯವರೆಗೆ ಕಾಯಲು ತಾಳ್ಮೆಯಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಪುಷ್ಪ ಪುಷ್ಪ ಎಂದು ಅಲ್ಲೋಲ್ಲ ಕಲ್ಲೋಲ ಮಾಡಿದ್ದಾರೆ.

ವಾಟ್‌ ಈಸ್‌ ದಿಸ್‌ ರಾ ರಾಣ ಎಂದು ಎಕ್ಸ್‌ ಬಳಕೆದಾರರೊಬ್ಬರು ರವಿತೇಜಾರ ವಿಡಿಯೋವನ್ನು ಹಂಚಿಕೊಂಡು ಹಿನ್ನೆಲೆಯಲ್ಲಿ "ಪುಷ್ಪ ಪುಷ್ಪ ಕೋರಸ್‌" ಹಾಕಿದ್ದಾರೆ. ಟಚ್‌ ಚೇಸಿ ಚೂಡು ಸಿನಿಮಾದ ಕ್ಲಿಪ್‌ ಹಾಕಿ "ಪುಷ್ಪ ಪುಷ್ಪ ಪುಷ್ಪದ ಅರ್ಥವೇನು? ಹೋಗು ಬೀಚ್‌ನಲ್ಲಿ ಕಾಳು ಸೇಲ್‌ ಮಾಡು" ಎಂದು ಪ್ರಶ್ನೆ ಕೇಳಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.

ಇನ್ನೊಬ್ಬರು 2005ರ ನುವ್ವೋಸ್ತಾನಂಟೆ ನೆನೊಡ್ಡಂಟಾನಾರ ರಘುಬಾಬು ಒಳಗೊಂಡಿರುವ ವಿಡಿಯೋಗೆ ಪುಷ್ಪ ತಂಡ ಬಿಡುಗಡೆ ಮಾಡಿರುವ ಆಡಿಯೋವನ್ನು ಬಳಸಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತ್ರಿಷಾರಿಗೆ ರೈಲಿನಲ್ಲಿ ಒಂದಿಷ್ಟು ಜನರು ಕೀಟಲೆ ಮಾಡುವ ದೃಶ್ಯವಿದೆ. ಇನ್ನೊಬ್ಬ ಅಭಿಮಾನಿ ನಮ್ಮ ಸ್ಯಾಂಡಲ್‌ವುಡ್‌ನ ಶಿವರಾಜ್‌ಕುಮಾರ್‌ ಅಭಿನಯದ ವೇದಾ ಸಿನಿಮಾದ ವಿಡಿಯೋ ಹಂಚಿಕೊಂಡಿದ್ದಾರೆ.

ಇನ್ನು ಕೆಲವು ಮೀಮ್ಸ್‌ಗಳಲ್ಲಿ ಪುಷ್ಪ ಸಿನಿಮಾದ ಸಿಂಗಲ್‌ ಬಿಡುಗಡೆಯ ಕುರಿತು ಸೆಲೆಬ್ರೆಷನ್‌ ಕಾಣಿಸುತ್ತಿದೆ. ಮಹೇಶ್‌ ಬಾಬು ನಟನೆಯ ಗುಂಟೂರು ಕಾರಂ ಸಿನಿಮಾದ ಕ್ಲಿಪ್‌ ಹಾಕಿ ಅಭಿಮಾನಿಯೊಬ್ಬರು ಸಂಭ್ರಮಿಸಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ಫಹಾದ್‌ ಫಾಸಿಲ್‌ ಮತ್ತು ಅಲ್ಲುಅರ್ಜುನ್‌ ಇದ್ದಾರೆ.

 

ಇನ್ನೊಂದು ವಿಡಿಯೋದಲ್ಲಿ ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಸಾಮಿ ಸಾಮಿ ಹಾಡಿಗೆ ಡ್ಯಾನ್ಸ್‌ ಮಾಡುವ ದೃಶ್ಯವಿದೆ. ಈ ವಿಡಿಯೋಗೆ ಈಗಿನ ಪುಷ್ಪ ಪುಷ್ಪ ಕೋರಸ್‌ ಆಡಿಯೋ ಸಿಂಕ್‌ ಮಾಡಲಾಗಿದೆ.

ಪುಷ್ಪ 2 ಸಿನಿಮಾ ಬಿಡುಗಡೆ ದಿನಾಂಕ

ಟಾಲಿವುಡ್‌ನಿಂದ ಬಾಲಿವುಡ್‌ವರೆಗೆ ಎಲ್ಲರೂ ಪುಷ್ಪ 2 ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. 2021ರಲ್ಲಿ ಅಲ್ಲು ಅರ್ಜುನ್ 'ಪುಷ್ಪ 1: ದಿ ರೈಸ್' ಬಿಡುಗಡೆಯಾಗಿ ಹಿಟ್‌ ಆಗಿತ್ತು. ಈ ಸಿನಿಮಾದ ಮೂಲಕ ಅಲ್ಲು ಅರ್ಜುನ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಹೊರಹೊಮ್ಮಿದರು. ಎಲ್ಲರ ಪ್ರೀತಿಯ ಪುಷ್ಪಾ ರಾಜ್‌ ಆದರು.. ಈ ಸಿನಿಮಾದ ಮುಂದುವರೆದ ಭಾಗವಾಗಿ ಬಿಡುಗಡೆಯಾಗುತ್ತಿರುವ ಪುಷ್ಪಾ 2 ಮೇಲೆ ನಿರೀಕ್ಷೆ ಹಚ್ಚಾಗಿದೆ. ಇದೇ ಕಾರಣಕ್ಕೆ ಈ ಸಿನಿಮಾದ ಬಜೆಟ್‌ ಹೆಚ್ಚಿಸಲಾಗಿದೆ. ಆಗಸ್ಟ್‌ 15ರಂದು ರಿಲೀಸ್‌ ಆಗಲಿದೆ.

IPL_Entry_Point