Movie Review: ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶೆ; ಸುಂದರ ಸಂಗೀತದ ನಡುವೆ ನಿರ್ದೇಶಕರು, ಗಣೇಶ್‌ ಮರೆತದ್ದೇನು?-sandalwood news krishnam pranaya sakhi review ganesh kannada movie good or bad critic review pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Movie Review: ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶೆ; ಸುಂದರ ಸಂಗೀತದ ನಡುವೆ ನಿರ್ದೇಶಕರು, ಗಣೇಶ್‌ ಮರೆತದ್ದೇನು?

Movie Review: ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶೆ; ಸುಂದರ ಸಂಗೀತದ ನಡುವೆ ನಿರ್ದೇಶಕರು, ಗಣೇಶ್‌ ಮರೆತದ್ದೇನು?

Krishnam Pranaya Sakhi Kannada Movie Review: ಕೃಷ್ಣಂ ಪ್ರಣಯ ಸಖಿ ಸಿನಿಮಾ ಹೇಗಿದೆ? ದ್ವಾಪರ ದಾಟಲು ಸೇರಿದಂತೆ ಹಲವು ಹಾಡುಗಳ ಮೂಲಕ ಗಮನ ಸೆಳೆದ ಈ ಸಿನಿಮಾದ ಕಥೆ ಉತ್ತಮವಾಗಿದೆಯೇ? ಈ ಚಿತ್ರದಲ್ಲಿ ಇಷ್ಟವಾಗುವುದೇನು? ಇಷ್ಟವಾಗದ ಅಂಶಗಳೇನು? ಓದಿ ಕೃಷ್ಣಂ ಪ್ರಣಯ ಸಖಿ ವಿಮರ್ಶೆ.

Movie Review: ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶೆ
Movie Review: ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶೆ

Krishnam Pranaya Sakhi Review: ಬಹುನಿರೀಕ್ಷಿತ ಕೃಷ್ಣಂ ಪ್ರಣಯ ಸಖಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದ ಕುರಿತು ಕನ್ನಡ ಚಿತ್ರರಂಗ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಕಾಟೇರ ಯಶಸ್ಸಿನ ಬಳಿಕ ಕನ್ನಡ ಚಿತ್ರರಂಗದಲ್ಲಿ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಕುರಿತು ಹೆಚ್ಚಿನ ನಿರೀಕ್ಷೆ ಇತ್ತು. ದ್ವಾಪರ ದಾಟಲು, ಚಿನ್ನಮ್ಮ ಚಿನ್ನಮ್ಮ ಮುಂತಾದ ಹಾಡುಗಳ ಮೋಡಿಯೇ ಕೃಷ್ಣಂ... ಕುರಿತು ಜನರಲ್ಲಿ ಅತೀವ ನಿರೀಕ್ಷೆ ಹುಟ್ಟುಹಾಕಿತ್ತು. ಅತೀವ ನಿರೀಕ್ಷೆ ಇಟ್ಟುಕೊಂಡು ಈ ಸಿನಿಮಾಕ್ಕೆ ಹೋಗಬಹುದೇ? ಗಣೇಶ್‌ ನಟನೆಯ ಮುಂಗಾರು ಮಳೆಯನ್ನು ಸಖಿ ನೆನಪಿಸಬಹುದೇ? ಈ ಸಿನಿಮಾವನ್ನು ವೀಕ್ಷಿಸಿರುವ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಸಹೋದರಿ ಪೋರ್ಟಲ್‌ ಒಟಿಟಿಪ್ಲೇಯ ಪ್ರತಿಭಾ ಜಾಯ್‌ ವಿಮರ್ಶಿಸಿದ್ದಾರೆ. ಒಟಿಟಿಪ್ಲೇ ಪ್ರಕಟಿಸಿದ ಆ ವಿಮರ್ಶೆಯ ಕನ್ನಡ ಅನುವಾದ ಇಲ್ಲಿದೆ.

ಕನ್ನಡ ಸಿನಿಮಾ: ಕೃಷ್ಣಂ ಪ್ರಣಯ ಸಖಿ
ನಿರ್ದೇಶಕರು: ಶ್ರೀನಿವಾಸ ರಾಜು
ತಾರಾಗಣ: ಗೋಲ್ಡನ್‌ ಸ್ಟಾರ್‌ ಗಣೇಶ, ಮಾಲವಿಕ ನಾಯರ್‌, ಶರಣ್ಯ ಶೆಟ್ಟಿ, ಶಶಿ ಕುಮಾರ್‌, ಗಿರೀಶ್‌ ಶಿವಣ್ಣ, ರಂಗಾಯಣ ರಘು, ಸಾಧು ಕೋಕಿಲಾ, ಕುರಿ ಪ್ರತಾಪ್‌ ಮುಂತಾದವರು
ಸಂಗೀತ: ಅರ್ಜುನ್‌ ಜನ್ಯ
ನಿರ್ಮಾಪಕರು: ಪ್ರಶಾಂತ್‌ ಜಿ ರುದ್ರಪ್ಪ
ಸಂಕಲನ: ಕೆಎಂ ಪ್ರಕಾಶ್‌

ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶೆ

ಚಿತ್ರದ ನಾಯಕ ಕೃಷ್ಣ (ಗೋಲ್ಡನ್‌ ಸ್ಟಾರ್‌ ಗಣೇಶ್‌) ಯಶಸ್ವಿ ಉದ್ಯಮಿ ಮತ್ತು ಕೃಷ್ಣಾ ಗ್ರೂಪ್‌ ಆಫ್‌ ಕಂಪೆನೀಸ್‌ನ ಸಂಸ್ಥಾಪಕ. ಅನಾಥಾಶ್ರಮವನ್ನು ನಡೆಸುತ್ತಿರುವ ಪ್ರಣಯ (ಮಾಳವಿಕಾ ನಾಯರ್) ಮೇಲೆ ಈತನಿಗೆ ಲವ್‌ ಆಗುತ್ತದೆ. ಆದರೆ, ನಾನು ಶ್ರೀಮಂತನೆಂದು ತಿಳಿದರೆ (ಈತನ ಸಾಮಾಜಿಕ ಆರ್ಥಿಕ ಸ್ಥಿತಿ) ಆಕೆ ಪ್ರೀತಿ ರಿಜೆಕ್ಟ್‌ ಮಾಡಬಹುದು ಎಂಬ ಆತಂಕ ಈತನದ್ದು. ಇದಕ್ಕಾಗಿ ಆತ ಕೆಲಸ ಹುಡುಕುತ್ತಿರುವ ಚಾಲಕನಂತೆ ನಟಿಸುತ್ತಾನೆ. ಪ್ರಣಯಳ ಕಾರು ಚಾಲಕನಾಗಿ ಕೆಲಸ ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಈ ಮೂಲಕ ನಾನು ನಿಜವಾಗಿಯೂ ಎಷ್ಟು ಒಳ್ಳೆಯವನು ಎಂದು ಈಕೆಗೆ ತಿಳಿಯಬಹುದು, ಆಕೆ ನನ್ನನ್ನು ಪ್ರೀತಿಸಬಹುದು ಎಂದುಕೊಳ್ಳುತ್ತಾನೆ. ಇದಕ್ಕಾಗಿ ಈ ನಾಟಕವಾಡುತ್ತಾನೆ. ಇವನ ಪ್ಲ್ಯಾನ್‌ ಯಶಸ್ವಿಯಾಗುತ್ತದೆ. ಅವರಿಬ್ಬರ ಮದುವೆಯಾಗುತ್ತದೆ.

ಆದರೆ, ಪ್ರೀತಿಯ ಸಂತೋಷವನ್ನು ಅನುಭವಿಸುವ ಮೊದಲು ಕೃಷ್ಣ ಮತ್ತು ಪ್ರಣಯ ಹಿಂಸಾತ್ಮಕ ದಾಳಿಗೆ ಒಳಗಾಗುತ್ತಾರೆ. ಈ ದಂಪತಿಗೆ ಮುಂದಿನ ಭರವಸೆ ಏನು? ಇದೇ ಸಿನಿಮಾದ ಪ್ರಮುಖಾಂಶ.

ವಿಸ್ಮೃತಿ ಕುರಿತು ನಾನಾ ಭಾಷೆಗಳಲ್ಲಿ ಹಲವು ಸಿನಿಮಾಗಳು ಬಂದಿವೆ. ಇದನ್ನು ನವೀನವಾಗಿ ಬಳಸುವುದು, ಪ್ರೇಕ್ಷಕರಿಗೆ ತಾಜಾ ಅನುಭವ ನೀಡುವುದು ಪ್ರಮುಖ ಸವಾಲು. ಈ ವಿಷಯದಲ್ಲಿ ಕೃಷ್ಣಂ ಪ್ರಣಯ ಸಖಿ ದಯನೀಯವಾಗಿ ವಿಫಲವಾಗಿದೆ. ಮಾತ್ರವಲ್ಲದೆ ಮೊದಲಾರ್ಧ ಗೊಂದಲದ ಗೂಡು. ಪ್ರೇಕ್ಷಕರಿಗೆ ಈ ಸಿನಿಮಾದ ಕಥಾವಸ್ತುವಿನ ಕುರಿತು ಆಲೋಚನೆ ಮಾಡಲು ಅವಕಾಶ ದೊರಕುತ್ತದೆ.

ನಿರ್ದೇಶಕ ಶ್ರೀನಿವಾಸ ರಾಜು ಕಥೆ ಹೇಳುವ ಶೈಲಿ ನನ್ನನ್ನು ಗೊಂದಲಕ್ಕೆ ಈಡುಮಾಡಿತು. ಪ್ರಣಯಳನ್ನು ಪ್ರೀತಿಸುವ ಕೃಷ್ಟನ ದೃಶ್ಯಗಳನ್ನು ಮತ್ತು ನಂತರ ಅವಳು ಯಾರೆಂದು ತಿಳಿಯದೆ ಹೋಗುವ ದೃಶ್ಯಗಳನ್ನು ನೋಡುವಾಗ "ಕೃಷ್ಣ ನೆನಪಿನ ಶಕ್ತಿ ಕಳೆದುಕೊಂಡಿದ್ದಾನೆ" ಎಂದು ಸುಲಭವಾಗಿ ಅರ್ಥವಾಗುತ್ತದೆ. ಇದೇ ಈ ಸಿನಿಮಾದ ಕೇಂದ್ರ ವಸ್ತು. ಈ ವಿಷಯ ಮೊದಲೇ ತಿಳಿಯುವ ಕಾರಣ ಕುತೂಹಲ ಉಳಿಸಿಕೊಳ್ಳಲಿಲ್ಲ. ಇಂಟರ್‌ವಲ್‌ಗೆ ಮುನ್ನವೇ ಈ ಸಿನಿಮಾದ ಅಂತ್ಯದ ಕುರಿತು ಸ್ಪಷ್ಟವಾಗಿ ಅರಿವಾಗುತ್ತದೆ. ಇದೇ ಕಾರಣಕ್ಕೆ ಚಿತ್ರದ ಉಳಿದ ಭಾಗಗಳ ಆಸಕ್ತಿ ಕಡಿಮೆಯಾಗುತ್ತದೆ. ಗಣೇಶ್‌ ನಟನೆಯ ಬಾನದಾರಿಯಲ್ಲಿ ಸಿನಿಮಾದಲ್ಲೂ ಹೀಗೆಯೇ ಹಾಗಿತ್ತು. ಆ ಸಿನಿಮಾ ಆರಂಭವಾದ ಐದೇ ನಿಮಿಷದಲ್ಲಿ ನಾಯಕ ಕೀನ್ಯಾಕ್ಕೆ ಹೋಗುವ ಕಾರಣ ನನಗೆ ತಿಳಿದುಹೋಗಿತ್ತು. ಕುತೂಹಲದ ಮಾಹಿತಿಯನ್ನು ಹೇಳಿಬಿಟ್ಟರೆ ಸಿನಿಮಾ ನೋಡುವ ಕುತೂಹಲ ಹೊರಟು ಹೋಗುತ್ತದೆ.

ಹಾಗಂತ, ತಮಾಷೆ, ಮನರಂಜನೆಗೆ ಈ ಸಿನಿಮಾದಲ್ಲಿ ಕೊರತೆ ಇದೆ ಎಂದಲ್ಲ. ಕೃಷ್ಣಂ ಪ್ರಣಯ ಸಖಿ ಸಹಜವಾಗಿ ಗಣೇಶ್‌ಗೆ ಹೇಳಿ ಮಾಡಿಸಿದ ಪಾತ್ರ. ಇದು ಗಣೇಶ್‌ನ ಕಂಫರ್ಟ್‌ ಜೋನ್‌ ಅಥವಾ ಆರಾಮವಲಯ. ಈ ಹಿಂದಿನ ಚಿತ್ರಗಳಲ್ಲಿ ಕಾಣಿಸುವ ಗಣೇಶ್‌ ಇಲ್ಲಿದ್ದಾನೆ. ನೀವು ಒಬ್ಬ ನಟನ ಹಲವು ಸಿನಿಮಾಗಳಲ್ಲಿ ಒಂದೇ ರೀತಿಯ ಪಾತ್ರಗಳನ್ನು ನೋಡುತ್ತ ಹೋದರೆ ಹತಾಶೆ ಕಾಡಬಹುದು. ಕಾಮಿಡಿ, ರೋಮ್ಯಾಂಟಿಕ್‌ ಅಂಶಗಳು ಇಲ್ಲೂ ಮುಂದುವರೆದಿದೆ.

ಕೃಷ್ಣಂ ಪ್ರಣಯ ಸಖಿ ದೊಡ್ಡ ತಾರಾ ಬಳಗ ಹೊಂದಿದೆ. ಅವೆಲ್ಲ ಕೃಷ್ಣನ ಅವಿಭಕ್ತ ಕುಟುಂಬದ ಭಾಗವಾಗಿದೆ. ಸಾಕಷ್ಟು ಪರಿಚಿತ ಮುಖಗಳು ಒಂದೇ ಫ್ರೇಮ್‌ನಲ್ಲಿವೆ. ಆದರೆ, ಸುಮಾರು ಮೂರು ಗಂಟೆಯ ಸಿನಿಮಾದಲ್ಲಿ ಹೆಚ್ಚಿನ ಪಾತ್ರಗಳಿಗೆ ಎರಡು ಸೀನ್‌ಗಳಿಗಿಂತ ಹೆಚ್ಚು ಅವಕಾಶ ದೊರಕುವುದಿಲ್ಲ. ಈ ಸಿನಿಮಾದ ಎರಡನೇ ನಾಯಕಿಯಾಗಿ ಶರಣ್ಯಾ ಶೆಟ್ಟಿ ರೋಮ್ಯಾಂಟಿಕ್‌ ಆಗಿ ಗಮನ ಸೆಳೆದರೂ ಆಕೆಗೂ ಹೆಚ್ಚಿನ ಅವಕಾಶವಿಲ್ಲ. ಶ್ರೀನಿವಾಸ್‌ ಅವರು ಕೃಷ್ಣ ಮತ್ತು ಪ್ರಣಯಳ ಸುತ್ತ ಹೆಚ್ಚು ಗಮನ ನೀಡಿದ್ದಾರೆ. ಶಾಂತ ನಿರೂಪಣೆಯ ಮೂಲಕ ಸಿನಿಮಾ ಸಾಗುತ್ತದೆ.

ಈ ಸಿನಿಮಾದ ಸಂಗೀತ, ಹಾಡುಗಳು ಹಿಟ್‌ ಆಗಿವೆ. ಒಂದೊಂದೇ ಹಾಡುಗಳನ್ನು ಯೂಟ್ಯೂಬ್‌ನಲ್ಲಿ ಬಿಟ್ಟಾಗ ಸಿನಿರಸಿಕರು ಖುಷಿಪಟ್ಟರು. ಆದರೆ, ಹಾಡುಗಳ ಸಂಖ್ಯೆ 8-9ಕ್ಕೆ ತಲುಪಿದಾಗ ಅದೊಂದು ಎಚ್ಚರಿಕೆಯ ಗಂಟೆಯಂತೆಯೂ ಕಾಣಿಸಿತು.

ನಿಮಗೆ ವಿಂಟೇಜ್‌ ಗಣೇಶ್‌ ಇಷ್ಟವಾದರೆ, ಹಳೆಯ ಸಿನಿಮಾಗಳಲ್ಲಿರುವ ಗಣೇಶ್‌ನ ನಟನೆಯನ್ನು ಖುಷಿಯಿಂದ ನೋಡುವವರಾದರೆ ಖಂಡಿತಾ ಗೆ ಇಷ್ಟವಾಗಬಹುದು. ಈ ಸಿನಿಮಾ ನೋಡಿದಾಗ ಹಲವು ಸಿನಿಮಾಗಳು ನೆನಪಾಗಬಹುದು. ಒಂದಿಷ್ಟು ಹಾಸ್ಯ, ಸರಳವಾದ ಕೌಟಂಬಿಕ ನಾಟಕ ಇಷ್ಟಪಡುವವರಿಗೆ ಕೃಷ್ಣಂ ಪ್ರಣಯ ಸಖಿ ಆಪ್ತವಾಗಬಹುದು.

  • ಚಿತ್ರ ವಿಮರ್ಶೆ: ಪ್ರತಿಭಾ ಜಾಯ್‌, ಕೃಪೆ: ಒಟಿಟಿ ಪ್ಲೇ