ಬೆಂಗಳೂರಿನಲ್ಲಿ 4 ವರ್ಷದ ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್ ಶುರುಮಾಡಲಿದೆ ಏರ್ ಇಂಡಿಯಾ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ 4 ವರ್ಷದ ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್ ಶುರುಮಾಡಲಿದೆ ಏರ್ ಇಂಡಿಯಾ

ಬೆಂಗಳೂರಿನಲ್ಲಿ 4 ವರ್ಷದ ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್ ಶುರುಮಾಡಲಿದೆ ಏರ್ ಇಂಡಿಯಾ

Air India BMTO: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಸುಪಾಸಿನಲ್ಲಿ 4 ವರ್ಷದ (2+2 ವರ್ಷದ) ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್ ಅನ್ನು ಏರ್ ಇಂಡಿಯಾ ಶುರುಮಾಡಲಿದೆ. ಇದರ ವಿವರ ಇಲ್ಲಿದೆ.

ಏರ್ ಇಂಡಿಯಾ. ಬೆಂಗಳೂರಿನಲ್ಲಿ 4 ವರ್ಷದ ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್ ಶುರುಮಾಡಲಿದೆ. (ಸಾಂಕೇತಿಕ ಚಿತ್ರ)
ಏರ್ ಇಂಡಿಯಾ. ಬೆಂಗಳೂರಿನಲ್ಲಿ 4 ವರ್ಷದ ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್ ಶುರುಮಾಡಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಭವಿಷ್ಯದ ಅಗತ್ಯವನ್ನು ಮನಗಂಡು ಏರ್ ಇಂಡಿಯಾ ಬೆಂಗಳೂರಿನಲ್ಲಿ 2+2 ವರ್ಷದ ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್ ಶುರುಮಾಡಲಿದೆ. ಇದಕ್ಕೆ ಸಂಬಂಧಿಸಿದ ಡಿಜಿಸಿಎ ಅನುಮೋದನೆಯನ್ನೂ ಅದು ಪಡೆದುಕೊಂಡಿದ್ದು, ಬೆಂಗಳೂರಿನಲ್ಲಿ ಶೀಘ್ರವೇ ಬೇಸಿಕ್ ಮೇನ್‌ಟೆನೆನ್ಸ್ ಟ್ರೇನಿಂಗ್ ಆರ್ಗನೈಸೇಷನ್‌ (Basic Maintenance Training Organisation) ಅನ್ನು ಸ್ಥಾಪಿಸುವುದಾಗಿ ಏರ್ ಇಂಡಿಯಾ ಘೋಷಿಸಿದೆ. ಈ ಉಪಕ್ರಮವು ಭವಿಷ್ಯದಲ್ಲಿ ಸಿದ್ಧವಾಗುವ ವಾಯುಯಾನ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಅದರ ಫ್ಲೀಟ್ ಅನ್ನು ವಿಸ್ತರಿಸಿದಂತೆ ಏರ್‌ಲೈನ್‌ನಲ್ಲಿ ಹೆಚ್ಚುತ್ತಿರುವ ನುರಿತ ನಿರ್ವಹಣಾ ಎಂಜಿನಿಯರ್‌ಗಳ ಅಗತ್ಯವನ್ನು ಪೂರೈಸುತ್ತದೆ ಎಂದು ಏರ್ ಇಂಡಿಯಾ ಹೇಳಿಕೊಂಡಿದೆ.

ಬೆಂಗಳೂರಿನಲ್ಲಿ ಶುರುವಾಗಲಿದೆ ಬೇಸಿಕ್ ಮೇನ್‌ಟೆನೆನ್ಸ್ ಟ್ರೇನಿಂಗ್ ಆರ್ಗನೈಸೇಷನ್‌

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಬಿಐಎಎಲ್‌ನ ಅಂಗ ಸಂಸ್ಥೆ ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್ (ಬಿಎಸಿಎಲ್) ಜತೆಗೆ ಏರ್‌ ಇಂಡಿಯಾ ಒಪ್ಪಂದ ಮಾಡಿಕೊಂಡಿದ್ದು, ಬೆಂಗಳೂರು ಏರ್‌ಪೋರ್ಟ್ ಸಿಟಿಯಲ್ಲಿ 86,000 ಚದರ ಅಡಿಗಳಷ್ಟು ಉದ್ದೇಶಿತ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ. ಅಲ್ಲಿ ಆಧುನಿಕ ತರಗತಿ ಕೊಠಡಿಗಳು, ಅತ್ಯಾಧುನಿಕ ಪ್ರಯೋಗಾಲಯಗಳು ನಿರ್ಮಾಣವಾಗಲಿದೆ. ಪರಿಣತರ ತರಬೇತುದಾರರೊಂದಿಗೆ 2026ರ ಮಧ್ಯಭಾಗದಲ್ಲಿ ತರಬೇತಿ ಸಂಸ್ಥೆ ಕಾರ್ಯಾಚರಣೆ ಶುರುಮಾಡಲಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿಮಾಡಿದೆ.

ಅಲ್ಲಿಯವರೆಗೆ, ಏರ್ ಇಂಡಿಯಾ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿರುವ ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದ ಮೂಲಕ ಕೆಡೆಟ್ ಎಎಂಇ ಕಾರ್ಯಕ್ರಮವನ್ನು ಜಾರಿಗೊಳಿಸುತ್ತದೆ. ಎಎಂಇ ಶಿಕ್ಷಣ ಮತ್ತು ಉದ್ಯೋಗಿಗಳ ಅಭಿವೃದ್ಧಿಯಲ್ಲಿ ನಿರಂತರತೆಯನ್ನು ಖಚಿತಪಡಿಸುತ್ತದೆ.

ಬೇಸಿಕ್ ಮೇನ್‌ಟೆನೆನ್ಸ್ ಟ್ರೇನಿಂಗ್ ಆರ್ಗನೈಸೇಷನ್‌ ಬಗ್ಗೆ ಯಾರು ಏನು ಹೇಳಿದ್ರು

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಾಮೀಪ್ಯವು ಕೆಡೆಟ್‌ಗಳಿಗೆ ನೈಜ-ಪ್ರಪಂಚದ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಮತ್ತು ಏರ್‌ಲೈನ್‌ನ ನಿರ್ವಹಣೆ ಅಗತ್ಯಗಳಿಗಾಗಿ ಅವರನ್ನು ಸಿದ್ಧಪಡಿಸುತ್ತದೆ. ಏರ್ ಇಂಡಿಯಾದ ಗುಣಮಟ್ಟಕ್ಕೆ ತರಬೇತಿ ಪಡೆದ ಇಂಜಿನಿಯರ್‌ಗಳ ಸ್ಥಿರ ಪೂರೈಕೆಯನ್ನು ಬೇಸಿಕ್ ಮೇನ್‌ಟೆನೆನ್ಸ್ ಟ್ರೇನಿಂಗ್ ಆರ್ಗನೈಸೇಷನ್‌ (ಬಿಎಂಟಿಒ) ಒದಗಿಸಲಿದೆ ಎಂದು ಏರ್ ಇಂಡಿಯಾದ ಏವಿಯೇಷನ್ ​​ಅಕಾಡೆಮಿಯ ನಿರ್ದೇಶಕ ಸುನಿಲ್ ಭಾಸ್ಕರನ್ ಪಿಟಿಐಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶುರುವಾಗಲಿರುವ ಈ ಕೋರ್ಸ್‌ ಪದವೀಧರರಿಗೆ ವಿಶೇಷವಾದ ವೃತ್ತಿ ಮಾರ್ಗಗಳನ್ನು ನೀಡುತ್ತದೆ ಮತ್ತು ವಿಶ್ವವಿದ್ಯಾಲಯದ ಸಹಭಾಗಿತ್ವದ ಮೂಲಕ ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಪ್ರೋತ್ಸಾಹಿಸುತ್ತದೆ. ಅದೇ ರೀತಿ, ಅವರ ಶೈಕ್ಷಣಿಕ ಮತ್ತು ವೃತ್ತಿಪರ ಅವಕಾಶಗಳನ್ನು ವಿಸ್ತರಿಸುತ್ತದೆ. ಈ ಉಪಕ್ರಮವು ಸ್ವಾವಲಂಬಿ ಉದ್ಯೋಗಿಗಳನ್ನು ರಚಿಸುವ ಮತ್ತು ಅದರ ಪರಿವರ್ತನೆಯ ಪ್ರಯಾಣವನ್ನು ಬೆಂಬಲಿಸುವ ಏರ್ ಇಂಡಿಯಾದ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ವರದಿ ವಿವರಿಸಿದೆ.

Whats_app_banner