Bengaluru karaga 2023: ಬೆಂಗಳೂರು ಕರಗ ಉತ್ಸವ ಯಾವಾಗ? ದಿನಾಂಕ, ಸಮಯ ಮತ್ತು ಇತರೆ ವಿವರ ಇಲ್ಲಿದೆ
Bengaluru karaga 2023: ಶ್ರೀ ದ್ರೌಪದಿದೇವಿ "ಕರಗ ಶಕ್ತ್ಯೋತ್ಸವ" ಮತ್ತು ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವ ಏಪ್ರಿಲ್ 6ರ ಚೈತ್ರ ಪೂರ್ಣಿಮೆಯಂದು ನಡೆಯಲಿದೆ. ಇದರ ಆಹ್ವಾನ ಪತ್ರಿಕೆಯನ್ನು ಮಂಗಳವಾರ ಚಿಕ್ಕಪೇಟೆ ಶಾಸಕ ಡಾ.ಉದಯ ಬಿ.ಗರುಡಾಚಾರ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬಿಡುಗಡೆ ಮಾಡಿದರು.
ವಿಶ್ವ ವಿಖ್ಯಾತ ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವ ಜಾತ್ರೆಯು ಮಾ.29ರಿಂದ ಏಪ್ರಿಲ್ 8ರ ತನಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ.
ಶ್ರೀ ದ್ರೌಪದಿದೇವಿ "ಕರಗ ಶಕ್ತ್ಯೋತ್ಸವ" ಮತ್ತು ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವ ಏಪ್ರಿಲ್ 6ರ ಚೈತ್ರ ಪೂರ್ಣಿಮೆಯಂದು ನಡೆಯಲಿದೆ. ಇದರ ಆಹ್ವಾನ ಪತ್ರಿಕೆಯನ್ನು ಮಂಗಳವಾರ ಚಿಕ್ಕಪೇಟೆ ಶಾಸಕ ಡಾ.ಉದಯ ಬಿ.ಗರುಡಾಚಾರ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬಿಡುಗಡೆ ಮಾಡಿದರು.
ಈ ಕರಗ ಉತ್ಸವದ ಪೂರ್ವಭಾವಿ ಸಭೆ ಇಂದು ನಡೆದಿದ್ದು, ಸಭೆಯಲ್ಲಿ ಚರ್ಚಿಸಲ್ಪಟ್ಟ ಪ್ರಮುಖ ಅಂಶಗಳು ಹೀಗಿವೆ -
- ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಾರ್ಯಕ್ರವನ್ನು ನಡೆಸಬೇಕು.
- ಕರಗ ಶಕ್ತ್ಯೋತ್ಸವವು ಹೊರಡುವ ಮಾರ್ಗದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನು ನಡೆಸಬೇಕು.
- ಕರಗ ಉತ್ಸವ ನಡೆಯುವ ಬೀದಿಗಳಲ್ಲಿ ದೀಪಗಳ ಅಳವಡಿಕೆ ವ್ಯವಸ್ಥೆಯನ್ನು ಮಾಡಬೇಕು.
- ಪಾಲಿಕೆಯ ಆರೋಗ್ಯ ಇಲಾಖೆ ವತಿಯಿಂದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ನಿಯೋಜನೆ ಮಾಡುವುದು.
- ಭಕ್ತಾದಿಗಳು ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಇ-ಶೌಚಾಲಯಗಳ ವ್ಯವಸ್ಥೆ ಆಗಬೇಕು.
- ಬಿಬಿಎಂಪಿ ವತಿಯಿಂದ ಸಂಪಂಗಿರಾಮನಗರ ಕಲ್ಯಾಣಿಯ ಸ್ವಚ್ಚತೆ ಮಾಡುವುದು ಹಾಗೂ ಜಲಮಂಡಳಿ ವತಿಯಿಂದ ಕಲ್ಯಾಣಿಗೆ ನೀರು ತುಂಬಿಸುವುದು.
- ಜಲಮಂಡಳಿ ವತಿಯಿಂದ ಒಳಚರಂಡಿಗಳನ್ನು ಸ್ವಚ್ಛಗೊಳಿಸಿ, ಎಲ್ಲೂ ಕೊಳಚೆ ನೀರು ಹೊರಬಾರದಂತೆ ಅಗತ್ಯ ಕ್ರಮ ವಹಿಸುವುದು.
- ಸಂಚಾರ ದಟ್ಟಣೆಯಾಗದಂತೆ ಮಾರ್ಗ ಬದಾಲವಣೆ ಹಾಗೂ ವಾಹನಗಳ ನಿಲುಗಡೆಗೆ ಸ್ಥಳ ನಿಗದಿ ಮಾಡಬೇಕು.
- ಕರಗ ಮಹೋತ್ಸವ ನಡೆಯುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಆಗಬೇಕು.
- ಭಕ್ತಾದಿಗಳು ಹಾಗೂ ಸಾರ್ವಜನಿಕರ ಭದ್ರತೆಯ ಹಿತದೃಷ್ಟಿಯಿಂದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೂಡ ಆಗಬೇಕು.
ಸಭೆಯಲ್ಲಿ ಬಿಬಿಎಂಪಿಯ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್, ಪಿ.ಎನ್. ರವೀಂದ್ರ, ಡಾ. ದೀಪಕ್.ಆರ್.ಎಲ್, ಧರ್ಮರಾಯ ಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸತೀಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಜಾತ್ರಾ ಮಹೋತ್ಸವದ ವಿವರ ಹೀಗಿದೆ
ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಮಾ.29ರ ಚೈತ್ರ ಶುದ್ಧ ಅಷ್ಟಮಿಯಂದು ರಥೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನಡೆಯಲಿದೆ. ಈ ಕಾರ್ಯಕ್ರಮ ರಾತ್ರಿ 10 ಗಂಟೆಯಿಂದ ನಸುಕಿನ 3 ಗಂಟೆ ತನಕ ಇರಲಿದೆ.
ಮಾರ್ಚ್ 30ರಿಂದ ಏಪ್ರಿಲ್ 3ರ ತನಕ ಪ್ರತಿ ನಿತ್ಯ ರಾತ್ರಿ 7.30ಕ್ಕೆ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಲಿದೆ.
ಏಪ್ರಿಲ್ 3ರಂದು ಆರತಿ ದೀಪ, ಏಪ್ರಿಲ 4ರಂದು ಹಸಿ ಕರಗ, ಏಪ್ರಿಲ್ 5ರಂದು ಹೊಂಗಲು ಸೇವೆ, ಏಪ್ರಿಲ್ 6ರಂದು ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವ ನಡೆಯಲಿದೆ.
ಏಪ್ರಿಲ್ 7ರಂದು ದೇವಸ್ತಾನದಲ್ಲಿ ಗಾವು ಶಾಂತಿ, ಏಪ್ರಿಲ್ 8ರಂದು ವಸಂತೋತ್ಸವ ಮತ್ತು ಧ್ವಜಾವರೋಹಣ ನಡೆಯಲಿದೆ.
ಗಮನಿಸಬಹುದಾದ ಸುದ್ದಿಗಳು
M.Ed. Admission: ಎಂ.ಎಡ್ ಸ್ನಾತಕೋತ್ತರ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ
ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಸಂಯೋಜಿತ ಕಾಲೇಜುಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಎಂ.ಎಡ್ (M.ed) ಕೋರ್ಸಿನ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ
ರೆಗ್ಯುಲರ್ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಾ ಇದ್ರೂ, KSOUನಲ್ಲಿ ಶಿಕ್ಷಣ ಪಡೆಯಬಹುದು, ಪ್ರವೇಶಾತಿಗೆ 31 ಕೊನೇದಿನ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಕೋರ್ಸುಗಳ ಪ್ರವೇಶಾತಿ ಪ್ರಾರಂಭವಾಗಿದೆ. ರೆಗ್ಯುಲರ್ ಕಾಲೇಜಿಗೆ ಹೋಗಿ ಡಿಗ್ರಿ, ಪಿಜಿ ಪದವಿ ಪಡೆಯಿರಿ. ಅದರ ಜತೆಗೆ ಮುಕ್ತ ದೂರ ಶಿಕ್ಷಣದ ಮೂಲಕವೂ ಇನ್ನೊಂದು ಪದವಿ, ಸರ್ಟಿಫಿಕೇಟ್ ಕೋರ್ಸ್ ಮಾಡಿಕೊಳ್ಳುವುದಕ್ಕೆ ಈಗ ಅವಕಾಶ ಇದೆ. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ