Bengaluru News: ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟ ತಾಯಿ, ಮಗು ಕೇಸ್‌ನಲ್ಲಿ 5 ಬೆಸ್ಕಾಂ ಉದ್ಯೋಗಿಗಳ ಬಂಧನ
ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಭಾನುವಾರ ಬೆಳಗ್ಗೆ ಫುಟ್‌ಪಾತ್‌ನಲ್ಲಿ ನಡೆದು ಹೋಗುತ್ತಿದ್ದ ತಾಯಿ ಮತ್ತು ಮಗು ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟ ಪ್ರಕರಣದಲ್ಲಿ 5 ಬೆಸ್ಕಾಂ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರು: ಕಾಡುಗೋಡಿ ಸಮೀಪ ವಿದ್ಯುತ್ ತಂತಿ ಮೆಟ್ಟಿ 23 ವರ್ಷದ ತಾಯಿ ಮತ್ತು 9 ತಿಂಗಳ ಹೆಣ್ಣು ಮಗು ಮೃತಪಟ್ಟ ದುರಂತಕ್ಕೆ ಸಂಬಂಧಿಸಿ ಕರ್ತವ್ಯ ನಿರ್ಲಕ್ಷ್ಯ ತೋರಿದ 5 ಬೆಸ್ಕಾಂ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಬೆಸ್ಕಾಂ ಅಧಿಕಾರಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಪ್ ಫಾರ್ಮ್ ಜಂಕ್ಷನ್ ಸಮೀಪ ಭಾನುವಾರ ಬೆಳಗ್ಗೆ ಈ ದುರಂತ ಸಂಭವಿಸಿದ್ದು, ಕರ್ತವ್ಯ ನಿರ್ಲಕ್ಷಿಸಿದ್ದ 5 ಸಿಬ್ಬಂದಿಯನ್ನು ಬೆಸ್ಕಾಂ ಅಮಾನತು ಮಾಡಿತ್ತು. ಇಂಧನ ಸಚಿವ ಕೆಜೆ ಜಾರ್ಜ್ ಅವರು ಮೃತ
ಬೆಸ್ಕಾಂನ 5 ಸಿಬ್ಬಂದಿ ವಿರುದ್ಧ ಪೊಲೀಸ್ ಕೇಸ್
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ)ನ ಮೂರು ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅವರ ಹೊರತಾಗಿ ಇನ್ನೂ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 304 ಎ ಅಡಿಯಲ್ಲಿ ಸಾವಿಗೆ ಕಾರಣವಾದ ನಿರ್ಲಕ್ಷ್ಯದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) (ವೈಟ್‌ಫೀಲ್ಡ್) ಶಿವಕುಮಾರ್ ಗುಣಾರೆ ತಿಳಿಸಿದ್ದರು.
ಆರೋಪಿ ಬೆಸ್ಕಾಂ ಅಧಿಕಾರಿಗಳಿವರು
ಕಾರ್ಯಪಾಲಕ ಎಂಜಿನಿಯರ್ ಶ್ರೀರಾಮ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುಬ್ರಮಣಿ, ಸಹಾಯಕ ಎಂಜಿನಿಯರ್ ಚೇತನ್ ಮತ್ತು ಸಿಬ್ಬಂದಿ ರಾಜಣ್ಣ, ಮಂಜು ಸೇರಿದಂತೆ ವೈಟ್‌ಫೀಲ್ಡ್ ಉಪವಿಭಾಗದ ಬೆಸ್ಕಾಂನ ಐವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ದುರಂತ
ಸ್ವಂತ ಊರು ಸೇಲಂನಲ್ಲಿ ದೀಪಾವಳಿ ಹಬ್ಬ ಆಚರಿಸಿ ಬೆಂಗಳೂರಿಗೆ ಪತಿಯೊಂಧಿಗೆ ಆಗಮನಿಸಿದ್ದ ಎಕೆಜಿ ಕಾಲನಿಯ ನಿವಾಸಿ, ಸೌಂದರ್ಯ ಮತ್ತು ಅವರ ಮಗು ಬೆಳಿಗ್ಗೆ 6 ಗಂಟೆ ಸುಮಾರಿಗೆ ತಮ್ಮ ಮಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದಾಗ ಅವರ ಅರಿವಿಗೆ ಬಾರದೆ ಪಾದಚಾರಿ ದಾರಿಯಲ್ಲಿದ್ದ ತಂತಿಯನ್ನು ಮೆಟ್ಟಿದ್ದರು. ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದುದು ಅವರ ಅರಿವಿಗೆ ಬಂದಿರಲಿಲ್ಲ. ಕೂಡಲೇ ಅವರಿಗೆ ವಿದ್ಯುತ್ ಆಘಾತವಾಗಿದ್ದು, ಮಗುವಿನ ಸಹಿತ ಅಲ್ಲೇ ಮೃತಪಟ್ಟರು. ಪತಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಪತಿ ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕು ಆಯೋಗದಿಂದ ಕರ್ನಾಟಕ ಸರ್ಕಾರಕ್ಕೆ ನೋಟಿಸ್
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಕೂಡ ಘಟನೆಯ ಕುರಿತು ಮಾಧ್ಯಮ ವರದಿಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಕಳುಹಿಸಿ ವಿವರಣೆ ಕೋರಿದೆ ಎಂದು ಮತ್ತೊಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ದುರಂತದ ದಿನ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಲೈನ್ ಮ್ಯಾನ್, ಸಹಾಯಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸೇರಿ ಮೂವರು ಬೆಸ್ಕಾಂ ನೌಕರರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಎಂದು ಕರ್ನಾಟಕ ಇಂಧನ ಸಚಿವ ಕೆ.ಜೆ.ಜಾರ್ಜ್ ಈ ಹಿಂದೆ ತಿಳಿಸಿದ್ದರು.
"ಇಲಾಖೇತರ ಮಾರಣಾಂತಿಕ ವಿದ್ಯುತ್ ಅಪಘಾತದಲ್ಲಿ, ಸೌಂದರ್ಯ (23) ಮತ್ತು ಅವರ ಮಗಳು ಲೀಲಾ (9 ತಿಂಗಳು) ಅವರು ಹೋಪ್ ಫಾರ್ಮ್ ಸಿಗ್ನಲ್ ಕಾಲುದಾರಿಯಲ್ಲಿ ಬಿದ್ದ 11 ಕೆವಿ ಲೈವ್ ತಂತಿ ಸಂಪರ್ಕಕ್ಕೆ ಬಂದು ಭಾನುವಾರ ಬೆಳಿಗ್ಗೆ 5.30 ರ ಸುಮಾರಿಗೆ ಮೃತಪಟ್ಟಿದ್ದಾರೆ" ಎಂದು ಬೆಸ್ಕಾಂ ಹೇಳಿಕೆ ತಿಳಿಸಿದ್ದಾಗಿ ಪಿಟಿಯ ವರದಿ ಮಾಡಿದೆ.