Bengaluru News; ಇದು ಸಿನಿಮಾ ಶೂಟಿಂಗ್‌ ಅಲ್ಲ; ಪೊಲೀಸರಿಂದ ಅವಮಾನಕ್ಕೆ ಒಳಗಾದ ಯುವಕ ವಿಧಾನಸೌಧದ ಎದುರು ಸ್ಕೂಟರ್ ಸುಟ್ಟು ಪ್ರತಿಭಟಿಸಿದ ರೀತಿ-bengaluru news challakere youth sets scooter on fire near vidhana soudha in protest against police ill treatment mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News; ಇದು ಸಿನಿಮಾ ಶೂಟಿಂಗ್‌ ಅಲ್ಲ; ಪೊಲೀಸರಿಂದ ಅವಮಾನಕ್ಕೆ ಒಳಗಾದ ಯುವಕ ವಿಧಾನಸೌಧದ ಎದುರು ಸ್ಕೂಟರ್ ಸುಟ್ಟು ಪ್ರತಿಭಟಿಸಿದ ರೀತಿ

Bengaluru News; ಇದು ಸಿನಿಮಾ ಶೂಟಿಂಗ್‌ ಅಲ್ಲ; ಪೊಲೀಸರಿಂದ ಅವಮಾನಕ್ಕೆ ಒಳಗಾದ ಯುವಕ ವಿಧಾನಸೌಧದ ಎದುರು ಸ್ಕೂಟರ್ ಸುಟ್ಟು ಪ್ರತಿಭಟಿಸಿದ ರೀತಿ

Bengaluru News; ಇದು ಸಿನಿಮಾ ಶೂಟಿಂಗ್‌ ಅಲ್ಲ. ಪೊಲೀಸರಿಂದ ಅವಮಾನಿತನಾದ ಯುವಕ ವಿಧಾನಸೌಧದ ಎದುರು ತನ್ನದೇ ಸ್ಕೂಟರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ ರೀತಿ ಇದು. ತಾಯಿ-ಮಗನ ಪ್ರೀತಿ ಕಳಕಳಿಯ ನಡುವೆ, ಪೊಲೀಸರ ವರ್ತನೆ ಟೀಕೆಗೆ ಒಳಗಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಇದು ಸಿನಿಮಾ ಶೂಟಿಂಗ್‌ ಅಲ್ಲ; ಪೊಲೀಸರಿಂದ ಅವಮಾನಕ್ಕೆ ಒಳಗಾದ ಯುವಕ ವಿಧಾನಸೌಧದ ಎದುರು ಸ್ಕೂಟರ್ ಸುಟ್ಟು ಪ್ರತಿಭಟಿಸಿದ ರೀತಿ.
ಇದು ಸಿನಿಮಾ ಶೂಟಿಂಗ್‌ ಅಲ್ಲ; ಪೊಲೀಸರಿಂದ ಅವಮಾನಕ್ಕೆ ಒಳಗಾದ ಯುವಕ ವಿಧಾನಸೌಧದ ಎದುರು ಸ್ಕೂಟರ್ ಸುಟ್ಟು ಪ್ರತಿಭಟಿಸಿದ ರೀತಿ.

ಬೆಂಗಳೂರು: ಇದು ಸಿನಿಮಾ ಶೂಟಿಂಗ್‌ ಅಲ್ಲ, ಆದರೂ ರಾಜ್ಯದ ಶಕ್ತಿಸೌಧ ವಿಧಾನಸೌಧದ ಮುಂದೆ, ಮೆಟ್ರೋ ಸ್ಟೇಶನ್‌ ಸಮೀಪ (Incident Near Vidhan Soudha Metro Station) ಬುಧವಾರ ಮಧ್ಯಾಹ್ನ ಹೈ ಡ್ರಾಮಾ ನಡೆದು ಹೋಗಿದೆ. ಪೊಲೀಸರ ಅಮಾನವೀಯ ವರ್ತನೆಯಿಂದ ಬೇಸತ್ತ ಯುವಕನೊಬ್ಬ ತನ್ನ ಸ್ಕೂಟರ್‌ ಗೆ ವಿಧಾನಸೌದದ ಎದುರು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.

ತನ್ನ ತಾಯಿಯನ್ನು ಪೊಲೀಸರು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ಈ ರೀತಿ ಬೆಂಕಿ ಹಚ್ಚಿದ ಯುವಕ ಚಳ್ಳಕೆರೆ ಮೂಲದ 27 ವರ್ಷದ ಪೃಥ್ವಿ ರಾಜ್‌. ಪೊಲೀಸರು ಪೃಥ್ವಿರಾಜ್‌ ಅವರನ್ನು ವಶಕ್ಕೆ ಪಡೆದಿದ್ದಾರೆ.

ತಾನು ಕಳೆದುಹೋಗಿದ್ದೇನೆ ಎಂದು ದೂರು ನೀಡಲು ತನ್ನ ತಾಯಿ ವಿವಿಧ ಪೊಲೀಸ್‌ ಠಾಣೆಗಳಿಗೆ ಅಲೆದಾಡಿದರೂ ಪೊಲೀಸರು ದೂರು ಸ್ವೀಕರಿಸಿದೆ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿ ಈ ರೀತಿ ನಡೆದುಕೊಂಡಿದ್ದಾರೆ.

ವಿಧಾನ ಸೌಧದ ಎದುರು ಹೈಡ್ರಾಮಾ

ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿ ಈ ಘಟನೆ ನಡೆದಿದೆ. ಬುಧವಾರ ಮಧ್ಯಾಹ್ನ 3.15ಕ್ಕೆ. ಪೃಥ್ವಿರಾಜ್‌ ತನ್ನ ದ್ವಿಚಕ್ರ ವಾಹನ ( ಕೆಎ03-3338) ವನ್ನು ವಿಧಾನಸೌದದ ಎದುರು ಅಂಬೇಡ್ಕರ್‌ ರಸ್ತೆಯಲ್ಲಿ ನಿಲ್ಲಿಸಿ ಬೆಂಕಿ ಹಚ್ಚಿದ್ದಾರೆ. ವಾಹನದ ಪೆಟ್ರೋಲ್‌ ಟ್ಯಾಂಕ್ ನ ಪೈಪ್‌ ತೆಗೆದು ಪೆಟ್ರೋಲ್‌ ಹರಿಯಲು ಬಿಟ್ಟು ಕೂಡಲೇ ಬೆಂಕಿ ಹಚ್ಚಿದ್ದಾರೆ.. ವಿಧಾನಸೌಧದಲ್ಲೇ ಇದ್ದ ಅಗ್ನಿಶಾಮಕ ದಳ ಕೂಡಲೇ ಸ್ಥಳಕ್ಕೆ ಆಗಮಿಸುವ ವೇಳೆಗೆ ವಾಹನ ಪೂರ್ಣವಾಗಿ ಸುಟ್ಟು ಹೋಗಿತ್ತು.

ಈ ಮಧ್ಯೆ ಕೆ ಆರ್‌ ವೃತ್ತ ಮತ್ತು ಮತ್ತೊಂದು ಕಡೆ ಪೊಲೀಸ್ ತಿಮ್ಮಯ್ಯ ವೃತ್ತದವೆರೆಗೆ ಸಾವಿರಾರು ಜನ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ಈ ದೃಶ್ಯವನ್ನು ನೋಡುತ್ತಿದ್ದರು. ಜತೆ ಜತೆಗೆ ಪೃಥ್ವಿರಾಜ್‌ ತನ್ನ ಸಂಕಷ್ಟ ಮತ್ತು ವಾಹನವನ್ನು ಸುಟ್ಟ ಕಾರಣವನ್ನು ಜೋರಾಗಿ ಹೇಳುತ್ತಿದ್ದರು. ಪೃಥ್ವಿರಾಜ್‌ ಬೆಂಗಳೂರಿನ ಯಶವಂತಪುರದ ನಿವಾಸಿಯಾಗಿದ್ದಾರೆ.

ಬೆಂಕಿ ಹಚ್ಚಲು ಕಾರಣ ಏನು?

ಪೃಥ್ವಿರಾಜ್‌ ಜುಲೈ 1ರಂದು ದ್ವಿಚಕ್ರ ವಾಹನದಲ್ಲೇ ಶೃಂಗೇರಿ ಮತ್ತು ಚಿಕ್ಕಮಗಳೂರಿಗೆ ಏಕಾಂಗಿಯಾಗಿ ಪ್ರವಾಸ ಹೋಗಿದ್ದರು. ಮರುದಿನ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಹಾಗಾಗಿ ಅವರು ತಮ್ಮ ತಾಯಿಗೆ ಕರೆ ಮಾಡಲು ಸಾಧ್ಯವಾಗಿರಲಿಲ್ಲ. ಆಗ ಚಳ್ಳಕೆರೆಯಲ್ಲಿದ್ದ ತನ್ನ ತಾಯಿ ಮಗ ಕಳೆದು ಹೋಗಿದ್ದಾನೆ ಎಂದು ದೂರು ನೀಡಲು ಸಮೀಪದ ಪೊಲೀಸ್‌ ಠಾಣೆಗೆ ಹೋಗಿದ್ದಾರೆ. ಆದರೆ ಪೊಲೀಸರು ಆಕೆಗೆ ಸ್ಪಂದಿಸಿಲ್ಲ. ಇದರಿಂದ ಕಂಗೆಟ್ಟ ತನ್ನ ತಾಯಿ ಬೆಂಗಳೂರಿಗೆ ಆಗಮಿಸಿ ಯಶವಂತಪುರ ಪೊಲೀಸ್‌ ಠಾಣೆಗೆ ದಾವಿಸಿದ್ದಾರೆ. ಅಲ್ಲಿ ಅವರ ದೂರನ್ನು ಪೊಲೀಸರು ಸ್ವೀಕರಿಸಿದ್ದಾರೆ.

ಪೃಥ್ವಿರಾಜ್‌ ತನ್ನ ತಾಯಿಗೆ ಜುಲೈ 10ರಂದು ಕರೆ ಮಾಡಿ ತಾನು ಕ್ಷೇಮವಾಗಿ ಇರುವುದಾಗಿ ತಿಳಿಸಿದ್ದಾರೆ. ಜುಲೈ21ರಂದು ಬೆಂಗಳೂರಿಗೆ ಹಿಂತಿರುಗಿದ ಅವರು ಯಶವಂತಪುರ ಠಾಣೆಗೆ ಭೇಟಿ ನೀಡಿ ವಿಷಯ ತಿಳಿಸಿದಾಗ ಅವರು ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ. ಜುಲೈ23ರಂದು ಚಳ್ಳಕೆರೆ ಪೊಲೀಸ್‌ ಠಾಣೆಗೆ ಭೇಟಿ ನೀಡಿ ವಿವರಣೆ ನೀಡಲು ಪ್ರಯತ್ನಿಸಿದಾಗ ಪೊಲೀಸರು ತನ್ನ ತಾಯಿಯನ್ನು ಅವಮಾನಿಸಿ ತನ್ನ ತಾಯಿಯ ಎದುರೇ ತನ್ನನ್ನು ಹೊಡೆದಿದ್ದಾರೆ ಎಂದು ಹೇಳಿದ್ದಾರೆ.

ಚಳ್ಳಕೆರೆ ಮತ್ತು ಚಿತ್ರದುರ್ಗದ ಅನೇಕ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಿದರೂ ಅವರೂ ಸಹ ಸೂಕ್ತವಾಗಿ ಸ್ಪಂದಿಸಿಲ್ಲ. ಆದ್ದರಿಂದ ತನ್ನ ಸ್ಕೂಟರ್‌ ಅನ್ನು ಸುಟ್ಟು ಹಾಕುವ ನಿರ್ಧಾರವನ್ನು ಕೈಗೊಂಡಿದ್ದಾಗಿ ಅಳಲು ತೋಡಿಕೊಂಡಿದ್ದಾರೆ.

ಚಿತ್ರದುರ್ಗದ ಪೊಲೀಸ್‌ ವರಿಷಾಧಿಕಾರಿ ದರ್ಮೇಂದ್ರ ಕುಮಾರ್‌ ಮೀನಾ ಅವರು ಪೃಥ್ವಿರಾಜ್‌ ತಮ್ಮನ್ನು ಭೆಟಿ ಮಾಡಲು ಆಗಮಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಎಎಸ್‌ ಐ ಮುತ್ತಪ್ಪ ಅವರನ್ನು ವಜಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

(ವರದಿ- ಎಚ್.ಮಾರುತಿ, ಬೆಂಗಳೂರು)