ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಜೂನ್ 1 ರಿಂದ 6 ರ ತನಕ ಸಿಗಲ್ಲ ಮದ್ಯ, ವೈನ್ ಸ್ಟೋರ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ ಸೇರಿ ಎಲ್ಲೂ ಮದ್ಯ ಮಾರಾಟ ಇರಲ್ಲ

ಬೆಂಗಳೂರಲ್ಲಿ ಜೂನ್ 1 ರಿಂದ 6 ರ ತನಕ ಸಿಗಲ್ಲ ಮದ್ಯ, ವೈನ್ ಸ್ಟೋರ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ ಸೇರಿ ಎಲ್ಲೂ ಮದ್ಯ ಮಾರಾಟ ಇರಲ್ಲ

ವಿಧಾನ ಪರಿಷತ್ ಚುನಾವಣೆ ಮತ್ತು ಲೋಕಸಭಾ ಚುನಾವಣಾ ಮತ ಎಣಿಕೆ ಕಾರ್ಯಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದ್ದು, ಬೆಂಗಳೂರಲ್ಲಿ ಜೂನ್ 1 ರಿಂದ 6 ರ ತನಕ ಮದ್ಯ ಸಿಗಲ್ಲ. ವೈನ್ ಸ್ಟೋರ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ ಸೇರಿ ಎಲ್ಲೂ ಮದ್ಯ ಮಾರಾಟ ಇರಲ್ಲ.

ಬೆಂಗಳೂರಲ್ಲಿ ಜೂನ್ 1 ರಿಂದ 6 ರ ತನಕ ವೈನ್ ಸ್ಟೋರ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ ಸೇರಿ ಎಲ್ಲೂ ಮದ್ಯ ಮಾರಾಟ ಇರಲ್ಲ. (ಸಾಂಕೇತಿಕ ಚಿತ್ರ)
ಬೆಂಗಳೂರಲ್ಲಿ ಜೂನ್ 1 ರಿಂದ 6 ರ ತನಕ ವೈನ್ ಸ್ಟೋರ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ ಸೇರಿ ಎಲ್ಲೂ ಮದ್ಯ ಮಾರಾಟ ಇರಲ್ಲ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಜೂನ್ 1 ರಿಂದ 6 ರ ತನಕ ವೈನ್ ಸ್ಟೋರ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ ಸೇರಿ ಎಲ್ಲೂ ಮದ್ಯ ಮಾರಾಟ ಇರಲ್ಲ. ಆದಾಗ್ಯೂ, ಪಬ್‌ ಮತ್ತು ಬಾರ್‌ಗಳಲ್ಲಿ ಗ್ರಾಹಕರಿಗೆ ಆಲ್ಕೋಹಾಲ್ ರಹಿತ ಪಾನೀಯ ಮತ್ತು ಆಹಾರವನ್ನು ಪೂರೈಸಲು ಅನುಮತಿ ಇದೆ.

ಟ್ರೆಂಡಿಂಗ್​ ಸುದ್ದಿ

ವಿಧಾನ ಪರಿಷತ್ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಮತ ಎಣಿಕೆ ಜೂನ್ 1 ರಿಂದ 6 ರ ಅವಧಿಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಕರ್ನಾಟಕದ ಹಾಲಿ ವಿಧಾನ ಪರಿಷತ್‌ ಸದಸ್ಯರ ನಿವೃತ್ತಿಯ ನಂತರ ಖಾಲಿ ಇರುವ ವಿಧಾನ ಪರಿಷತ್ ಸ್ಥಾನಗಳಿಗೆ ಜೂನ್ 3 ರಂದು ಚುನಾವಣೆ ನಡೆಯಲಿದ್ದು, ಜೂನ್ 6 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ.

ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಡಾ.ಚಂದ್ರಶೇಖರ್ ಬಿ.ಪಾಟೀಲ್, ನೈಋತ್ಯ ಪದವೀಧರ ಕ್ಷೇತ್ರದ ಆಯನೂರು ಮಂಜುನಾಥ, ಬೆಂಗಳೂರು ಪದವೀಧರ ಕ್ಷೇತ್ರದ ಎ.ದೇವೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದ ಡಾ.ವೈ.ಎ.ನಾರಾಯಣಸ್ವಾಮಿ, ನೈಋತ್ಯ ಶಿಕ್ಷಕರ ಕ್ಷೇತ್ರದ ಎಸ್.ಎಲ್.ಭೋಜೇಗೌಡ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ಮರಿತಿಬ್ಬೇಗೌಡ ಅವರು ಜೂನ್ 21ರಂದು ನಿವೃತ್ತರಾಗಲಿದ್ದಾರೆ.

ಬೆಂಗಳೂರಲ್ಲಿ ಮದ್ಯ ಸಿಗದ ದಿನಗಳಿವು

ಜೂ.1 ರ ಸಂಜೆಯಿಂದ ಮದ್ಯ ನಿಷೇಧ (ಜೂ.3ಕ್ಕೆ ಪದವೀಧರ ಕ್ಷೇತ್ರಕ್ಕೆ ಚುನಾವಣೆ ಕಾರಣ)

ಜೂ.4ಕ್ಕೆ ಲೋಕಸಭಾ ಚುನಾವಣೆ ಎಣಿಕೆ, ಜೂ.4ರಂದು ಮದ್ಯ ಮಾರುವಂತಿಲ್ಲ

ಜೂ.6ಕ್ಕೆ ಪದವೀಧರರ ಕ್ಷೇತ್ರದ ಮತ ಎಣಿಕೆ. ಹಾಗಾಗಿ ಅಂದು ಮದ್ಯ ನಿಷೇಧ

ಬೆಂಗಳೂರಲ್ಲಿ 5 ದಿನ ಮದ್ಯ ಮಾರಾಟ ಯಾಕಿಲ್ಲ

ಬೆಂಗಳೂರು ವಿಧಾನ ಪರಿಷತ್ ಚುನಾವಣೆ, ಲೋಕ ಸಭಾ ಚುನಾವಣೆಯ ಮತ ಎಣಿಕೆ ಕಾರಣ ಬರೋಬ್ಬರಿ ಐದು ದಿನ ಮದ್ಯದಂಗಡಿಗಳು ಬಂದ್ ಆಗಿರಲಿವೆ. ಬೆಂಗಳೂರು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಲ್ಲಿ ಜೂ.3 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಜೂ.1ರ ಸಂಜೆ 4 ಗಂಟೆಯಿಂದ ಜೂ.3ರ ಸಂಜೆ 4ಗಂಟೆ ವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಜೂ.4ರಂದು ನಡೆಯುವುದರಿಂದ ಅಂದು ಸಹ ರಾಜ್ಯಾದ್ಯಂತ ಮದ್ಯ ಮಾರಾಟ ಇರಲ್ಲ. ವೈನ್ ಸ್ಟೋರ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ನವರು ಸೇರಿ ಯಾರೂ ಮದ್ಯ ಮಾರಾಟ ಮಾಡದಂತೆ ನಿರ್ಬಂಧಿಸಲಾಗಿದೆ.

ಈ ನಡುವೆ, ಜೂ.5ರಂದು ಎಂದಿನಂತೆ ಮದ್ಯ ಮಾರಾಟಕ್ಕೆ ಅವಕಾಶವಿದೆ. ಆದರೆ, ಜೂ.6 ರಂದು ಪುನಃ ನಗರದಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಅಂದು ವಿಧಾನ ಪರಿಷತ್‌ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಹೀಗಾಗಿ ಮದ್ಯ ಮಾರಾಟ ಇರಲ್ಲ. 

ಟಿ20 ವರ್ಲ್ಡ್‌ಕಪ್ 2024