Lok Sabha Election 2024: ಶಸ್ತ್ರಾಸ್ತ್ರಗಳ ಠೇವಣಿಗೆ ಪೊಲೀಸ್ ಆಯುಕ್ತರ ಆದೇಶ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೀಗಿದೆ ವಿಧಾನ
ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Election 2024: ಶಸ್ತ್ರಾಸ್ತ್ರಗಳ ಠೇವಣಿಗೆ ಪೊಲೀಸ್ ಆಯುಕ್ತರ ಆದೇಶ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೀಗಿದೆ ವಿಧಾನ

Lok Sabha Election 2024: ಶಸ್ತ್ರಾಸ್ತ್ರಗಳ ಠೇವಣಿಗೆ ಪೊಲೀಸ್ ಆಯುಕ್ತರ ಆದೇಶ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೀಗಿದೆ ವಿಧಾನ

ಮಂಗಳೂರು ಕಮೀಷನರೇಟ್ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಆಯುಧ ಪರವಾನಿಗೆ ಹೊಂದಿರುವ ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳನ್ನು 2024ರ ಏ.1 ರೊಳಗೆ ಠೇವಣಿ ಇರಿಸಲು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರು ಆದೇಶ ಹೊರಡಿಸಿದ್ದಾರೆ.

ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸಾರ್ವಜನಿಕರಲ್ಲಿರುವ ಶಸ್ತ್ರಾಸ್ತ್ರಗಳನ್ನು ತಮ್ಮ ಸಮೀಪದ ಪೊಲೀಸ್ ಠಾಣೆಗಳಿಗೆ ಒಪ್ಪಿಸಬೇಕಿದೆ.
ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸಾರ್ವಜನಿಕರಲ್ಲಿರುವ ಶಸ್ತ್ರಾಸ್ತ್ರಗಳನ್ನು ತಮ್ಮ ಸಮೀಪದ ಪೊಲೀಸ್ ಠಾಣೆಗಳಿಗೆ ಒಪ್ಪಿಸಬೇಕಿದೆ.

ಮಂಗಳೂರು: ಕಾಡುಪ್ರಾಣಿಗಳನ್ನು ಹೆದರಿಸಲು ಸಹಿತ ಹಲವು ವಿಚಾರಗಳಿಗೆ ಸಂಬಂಧಿಸಿ ಕೋವಿ ಸಹಿತ ಶಸ್ತ್ರಾಸ್ತ್ರಗಳ ಪರವಾನಗಿ ಪಡೆದುಕೊಳ್ಳುವ ಸಂಪ್ರದಾಯ ಕಾಡಿನ ಹತ್ತಿರ ವಾಸಿಸುವ ಕೃಷಿಕರಿಗಿದೆ. ಪ್ರತಿ ಚುನಾವಣೆ ಬಂದಾಗ ಇದನ್ನು ಠೇವಣಿ ಇಡುವ ವಿಚಾರದಲ್ಲಿ ಸಂಘರ್ಷ ಏರ್ಪಡುತ್ತದೆ. ಈ ಬಾರಿಯೂ ಗೊಂದಲಗಳು ಏರ್ಪಟ್ಟ ಹಿನ್ನೆಲೆ, ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಶಸ್ತ್ರಾಸ್ತ್ರಗಳನ್ನು ಕೇವಲ ರೈತರು ಬಳಸುತ್ತಿಲ್ಲ. ಹೀಗಾಗಿ ಅನ್ಯಸಮಸ್ಯೆಗಳು ಉದ್ಭವ ಆಗಬಾರದು ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.

2024ರ ಏ.26 ರಂದು ಲೋಕಸಭಾ ಚುನಾವಣೆ (Lok Sabha Election 2024) ನಡೆಯಲಿದೆ. ಈ ಹಿನ್ನಲೆಯಲ್ಲಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಆಯುಧ ಪರವಾನಿಗೆ ಹೊಂದಿರುವ ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳನ್ನು 2024ರ ಏ.1 ರೊಳಗೆ ಠೇವಣಿ (Arms Deposit) ಇರಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಅನುಪಮ್ ಅಗ್ರವಾಲ್ ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಪ್ರಸಕ್ತ ಕಾನೂನು ಸುವ್ಯವಸ್ಥೆ ಸಾರ್ವಜನಿಕ ಶಾಂತಿ ಸುರಕ್ಷತೆಯ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಗೆ ಒಳಪಡುವ ಎಲ್ಲಾ ಬೆಳೆ ರಕ್ಷಣೆಗಾಗಿ ಮತ್ತು ಆತ್ಮ ರಕ್ಷಣೆಗಾಗಿ ಮಂಜೂರು ಮಾಡಲಾಗಿರುವ ಶಸ್ತ್ರಾಸ್ತ್ರ ಪರವಾನಿಗೆಗಳನ್ನು ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಚುನಾವಣಾ ಅವಧಿಯಲ್ಲಿ ಠೇವಣಿಯಲ್ಲಿರಿಸಲು ಆದೇಶ ಹೊರಡಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಆದೇಶ ಪ್ರಮುಖ ಅಂಶಗಳು ಇಲ್ಲಿವೆ

  • ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗೆ ಒಳವಡುವ ಆತ್ಮ ರಕ್ಷಣೆ ಹಾಗೂ ಕೃಷಿ ರಕ್ಷಣೆಯ ಎಲ್ಲಾ , 18-03-2024 800 13-06-2024 ರ ವರೆಗೆ ಶಸ್ತ್ರಾಸ್ತ್ರ ಕಾಯ್ದೆ 1959 ಕಲಂ 17(3)(ಬಿ) ರನ್ವಯ ಹಾಗೂ ಉಲ್ಲೇಖ (4) ರ ನಿಷೇಧ ಆದೇಶದಂತೆ ತಾತ್ಕಾಲಿಕ ಅವಧಿಗೆ ಅಮಾನತ್ತಿನಲ್ಲಿರಿಸಿ ಆದೇಶಿಸಲಾಗಿದೆ.
  • ಆತ್ಮ ರಕ್ಷಣೆ ಹಾಗೂ ಕೃಷಿ ರಕ್ಷಣೆಯ ಸಲುವಾಗಿ ಪಡೆದ ಪರವಾನಿಗೆಯಲ್ಲಿರುವ ಎಲ್ಲಾ ಆಯುಧಗಳನ್ನು ದಿನಾಂಕ. 31-03-2024 ರ ಒಳಗೆ ಪರವಾನಿಗೆದಾರರು ಅಧಿಕೃತ ಆಯುಧ ವಿತರಕರಲ್ಲಿ ಅಥವಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸುವಂತೆ ಆದೇಶಿಸಲಾಗಿದೆ.
  • ನ್ಯಾಷನಲ್ ರೈಫಲ್ ಅಸೋಸಿಯೇಷನ್ ಇದರ ಸದಸ್ಯರಾಗಿದ್ದು ಕ್ರೀಡಾ ಉದ್ದೇಶಕ್ಕೆ ಪರವಾನಿಗೆ ಹೊಂದಿರುವವರಿಗೆ ಈ ಆದೇಶ ಅನ್ವಯಿಸುವುದಿಲ್ಲ.
  • ಪರವಾನಗಿದಾರರಿಗೆ ಆತ್ಮ ರಕ್ಷಣೆ / ಕೃಷಿ ರಕ್ಷಣೆಗಾಗಿ ಆಯುಧವು ತೀರಾ ಅವಶ್ಯವಿದ್ದು ಪರವಾನಿಗೆ ಅಮಾನತ್ತಿನಿಂದ ವಿನಾಯತಿ ಬೇಕಾದಲ್ಲಿ ದಿನಾಂಕ: 28-03-2024 ರ ಒಳಗಾಗಿ ನೈಜಿ ದಾಖಲಾತಿಗಳೊಂದಿಗೆ ಈ ಕಛೇರಿಗೆ ಅರ್ಜಿಯನ್ನು ಸಲ್ಲಿಸಿದಲ್ಲಿ ಪರಿಶೀಲಿಸಿ ನಿರ್ಣಯ ಕೈಗೊಳ್ಳಲಾಗುವುದು ನಿಗದಿತ ಅವಧಿಯ ನಂತರ ಸ್ವೀಕೃತಗೊಳ್ಳುವ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ
  • ಅಮಾನತ್ತಿನ ಅವಧಿ ಮುಗಿದ ತಕ್ಷಣ ದಿನಾಂಕ: 13-06-2024 ಅಯುಧ ಠೇವಣಿ ಪಡೆದ ಅಧಿಕಾರಿಗಳು, ವಿತರಕರು ಅಂತಹ ಆಯುಧಗಳನ್ನು ಠೇವಣೆದಾರರಿಗೆ ಹಿಂದಿರುಗಿಸುವಂತೆಯೂ ಪರವಾನಿಗೆದಾರರು ತಮ್ಮ ಆಯುಧಗಳನ್ನು ಮರು ಪಡೆದುಕೊಳ್ಳಬಹುದಾಗಿಯೂ ಆದೇಶಿಸಲಾಗಿದೆ.
  • ಈ ಆದೇಶದನ್ವಯ ನಿಗಧಿತ ಅವಧಿಯಲ್ಲಿ ಅಯುಧವನ್ನು ಠೇವಣಿ ಇರಿಸದೇ ಇದ್ದಲ್ಲಿ ಸಂಬಂಧಪಟ್ಟ ಆಯುಧ ಪರವಾನಗಿದಾರರ ವಿರುದ್ಧ ಕಲಂ 188 ಐಪಿಸಿ ರಂತೆ ಠಾಣಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಅನುಪಮ್ ಅಗ್ರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

3 ಲಕ್ಷ ಮೌಲ್ಯದ ಡ್ರಗ್ ವಶಕ್ಕೆ

2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಅಕ್ರಮಗಳನ್ನು ತಡೆಹಿಡಿಯಲು ಜಿಲ್ಲೆಯಲ್ಲಿ ಒಟ್ಟು 8 ಖರ್ಚು ವೆಚ್ಚ ಪರೀವೀಕ್ಷಕರರನ್ನು, 72 ಪ್ಲೈಯಿಂಗ್ ಸ್ವ್ಯಾಡ್ (ಎಫ್.ಎಸ್.ಟಿ), 69 ಎಸ್.ಎಸ್.ಟಿ ತಂಡಗಳು ಮತ್ತು 8 ಅಬಕಾರಿ ತಂಡಗಳನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ.

2024ರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾರ್ಚ್ 20 ರವರೆಗೆ 12,300 ರೂಪಾಯಿ ಮೌಲ್ಯದ 21.34 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. 3,13,500 ರೂ.ಗಳ ಮೌಲ್ಯದ 1.65 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.

2024 ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾರ್ಚ್ 20 ವರೆಗೆ ದೂರವಾಣಿ ಮೂಲಕ (1950) 75 ಸಾರ್ವಜನಿಕರಿಂದ ಮಾಹಿತಿ ಕೋರಿಕೆಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ. ಸಿ-ವಿಸಿಲ್ ಆಪ್ ಮೂಲಕ ಇಲ್ಲಿಯವರೆಗೆ 11 ದೂರುಗಳು ಸ್ವೀಕೃತಗೊಂಡಿದ್ದು ಎಲ್ಲಾ ದೂರುಗಳನ್ನು ವಿಲೇವಾರಿ ಮಾಡಲಾಗಿರುತ್ತದೆ.

ಎನ್.ಜಿ.ಆರ್.ಎಸ್ ಪೋರ್ಟಲ್ (ರಾಷ್ಟ್ರೀಯ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ ) ಮೂಲಕ ಜಿಲ್ಲೆಯಲ್ಲಿ ಒಟ್ಟು 27 ದೂರುಗಳು ಸ್ವೀಕೃತಗೊಂಡಿದ್ದು, 22 ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು/ ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ. (ವರದಿ: ಹರೀಶ್ ಮಾಂಬಾಡಿ)

Whats_app_banner