ಕನ್ನಡ ಸುದ್ದಿ  /  ಕರ್ನಾಟಕ  /  Karnataka Sslc Exam -2 Results: ಕರ್ನಾಟಕದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಫಲಿತಾಂಶ ಪ್ರಕಟ

Karnataka SSLC exam -2 results: ಕರ್ನಾಟಕದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಫಲಿತಾಂಶ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು (ಜುಲೈ 10) ರಂದು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ಮಂಡಳಿಯ kseab.karnataka.gov.in ಅಥವಾ karresults.nic.in ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶ ಪರಿಶೀಲಿಸಬಹುದು.

ಕರ್ನಾಟಕ ಎಸ್‌ಎಸ್‌ಎಲ್‌ಸಿ 2  ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ 2 ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಬೆಂಗಳೂರು: ಕಳೆದ ತಿಂಗಳು ನಡೆದಿದ್ದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ-2 ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈಗಾಗಲೇ ತಿಳಿಸಿದಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ(Karnataka School Examination and Assessment Board) ಫಲಿತಾಂಶವನ್ನು ಪ್ರಕಟಿಸಿದೆ. https://www.karresults.nic.in/first_sl_kar.asp ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಅಧ್ಯಕ್ಷರಾಗಿರುವ ಐಎಎಸ್‌ ಅಧಿಕಾರಿ ಎನ್‌.ಮಂಜುಳಾ ತಿಳಿಸಿದ್ದಾರೆ.

ಫಲಿತಾಂಶ ನೋಡುವುದು ಹೇಗೆ?

kseab.karnataka.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

https://www.karresults.nic.in ಅನ್ನು ಕ್ಲಿಕ್‌ ಮಾಡಿ.

ಟ್ರೆಂಡಿಂಗ್​ ಸುದ್ದಿ

ಹೋಮ್‌ ಪೇಜ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಫಲಿತಾಂಶದ ಲಿಂಕ್‌ ಕ್ಲಿಕ್‌ ಮಾಡಿ

ಸ್ಕ್ರೀನ್‌ನಲ್ಲಿ ಹೊಸ ಪುಟ ಕಾಣಿಸುತ್ತದೆ

ನಿಮ್ಮ ರೋಲ್‌ ನಂಬರ್‌, ಜನ್ಮ ದಿನಾಂಕ ಸೇರಿದಂತೆ ಅಲ್ಲಿ ಕೇಳಲಾಗುವ ಮಾಹಿತಿಯನ್ನು ನಮೂದಿಸಿ

ಸ್ಕ್ರೀನ್‌ ಮೇಲೆ ನಿಮ್ಮ ಫಲಿತಾಂಶ ಕಾಣುತ್ತದೆ

ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿ ಅಥವಾ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ

ಇದನ್ನೂ ಓದಿ: ಕರ್ನಾಟಕಕ್ಕೆ ಹೊಸ ಪ್ರವಾಸೋದ್ಯಮ ನೀತಿ, ಉದ್ಯೋಗ ಸೃಷ್ಟಿಗೆ ಒತ್ತು, ಪ್ರತಿ ಜಿಲ್ಲೆಗೂ ಮಾಸ್ಟರ್‌ಪಾನ್‌ ರೂಪಿಸಿ

ಜೂನ್‌ 14 ರಿಂದ 21 ವರೆಗೆ ನಡೆದಿದ್ದ ಪರೀಕ್ಷೆ-2

ಹೊಸ ವ್ಯವಸ್ಥೆಯ ಪ್ರಕಾರ, ಪೂರಕ ಪರೀಕ್ಷೆಯನ್ನು ಪರೀಕ್ಷೆ 2 (exam 2) ಎಂದು ಮರು ನಾಮಕರಣ ಮಾಡಲಾಗಿದೆ. ಇದರಲ್ಲಿ ಪ್ರತಿ ವರ್ಷ ಪರೀಕ್ಷೆ 1, 2 ಮತ್ತು 3 ಎಂದು ಒಟ್ಟು ಮೂರು ಪರೀಕ್ಷೆಗಳು ಇರುತ್ತವೆ. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಜೂನ್‌ 14 ರಿಂದ ಜೂನ್‌ 21 ವರೆಗೆ ನಡೆಸಲಾಗಿತ್ತು. ನಂತರ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾದರಿ ಉತ್ತರಗಳನ್ನು ಬಿಡುಗಡೆ ಮಾಡಿತ್ತು.

ಇನ್ನು ಈ ವರ್ಷ ನಡೆದಿದ್ದ ಮುಖ್ಯ ಹಾಗೂ ಮೊದಲ ಪರೀಕ್ಷೆಯ ಮುಖ್ಯ ಫಲಿತಾಂಶವನ್ನು ಮೇ 9ರಂದು ಪ್ರಕಟಿಸಲಾಗಿತ್ತು. ಈ ವರ್ಷ ಒಟ್ಟು 73.40 ಶೇಕಡಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 859967 ವಿದ್ಯಾರ್ಥಿಗಳ ಪೈಕಿ 631204 ಮಂದಿ ಪಾಸ್‌ ಆಗಿದ್ದರು. ಆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಹಾಗೂ ಅಂಕಗಳನ್ನು ಉತ್ತಮಗೊಳಿಸಲು ಬಯಸಿದ್ದ ವಿದ್ಯಾರ್ಥಿಗಳು ಮತ್ತೆ ನಡೆದ ಪೂರಕ ಪರೀಕ್ಷೆ ಬರೆದಿದ್ದರು.

ಶೀಘ್ರದಲ್ಲೇ ಪರೀಕ್ಷೆ-3ರ ವೇಳಾಪಟ್ಟಿ ಪ್ರಕಟ

ಪರೀಕ್ಷೆ2 ಪೂರಕ ಫಲಿತಾಂಶಗಳ ಪ್ರಕಟವಾದ ನಂತರ, ಯಾವುದೇ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ ಅಥವಾ ಪರೀಕ್ಷೆ 2ಗೆ ಹಾಜರಾಗಿರಲು ಸಾಧ್ಯವಾಗಿರದಿದ್ದರೆ ಅಂಥಹ ವಿದ್ಯಾರ್ಥಿಗಳು ಪರೀಕ್ಷೆ -3 ಕ್ಕೆ ನೋಂದಾಯಿಸಿಕೊಳ್ಳಬಹುದು. ಪರೀಕ್ಷೆ-2 ರ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಮಂಡಳಿಯು ಮುಖ್ಯ ಪರೀಕ್ಷೆ-3 ನೋಂದಣಿ ಲಿಂಕ್ ಮತ್ತು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಈ ಪರೀಕ್ಷೆಗಳು ಬಹುತೇಕ ಜುಲೈ ಕೊನೆಯ ವಾರದಲ್ಲ ನಡೆಯಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ತಿಳಿಸಿದೆ.