FB Ads Data Visualisation: 40% ಸರ್ಕಾರ, ಭಾರತ್ ಜೋಡೋ, ಕೈ ಏರಿಸಿ ಕರುನಾಡಿಗಾಗಿ ಫೇಸ್‌ಬುಕ್ ಜಾಹೀರಾತಿಗೆ ಖರ್ಚು ಮಾಡಿದ್ದೆಷ್ಟು?
FB Ads Data Visualisation: ರಾಜ್ಯದಲ್ಲೀಗ ಚುನಾವಣಾ ವರ್ಷ. ರಾಜಕೀಯ ವಿಚಾರಗಳು ಬಹುಬೇಗ ಗಮನಸೆಳೆಯುತ್ತಿವೆ. ಇತ್ತೀಚೆಗೆ 40% ಸರ್ಕಾರ, ಭಾರತ್ ಜೋಡೋ, ಕೈ ಏರಿಸಿ ಕರುನಾಡಿಗಾಗಿ ಮುಂತಾದ ಅಭಿಯಾನಗಳು ಗಮನಸೆಳೆದಿದ್ದವು. ಈ ಅಭಿಯಾನಕ್ಕಾಗಿ 90 ದಿನಗಳಲ್ಲಿ ಎಷ್ಟು ಹಣ ಖರ್ಚಾಗಿದೆ. ಇಲ್ಲಿದೆ ದತ್ತಾಂಶ ಚಿತ್ರಣ.
ಮುಂದಿನ ವರ್ಷವೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಸಿ ಅದರ ಪ್ರಯೋಜನ ಪಡೆಯುವುದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಯತ್ನಿಸುತ್ತಿವೆ. ಅದೇ ರೀತಿ, ಆಡಳಿತಾರೂಢ ಬಿಜೆಪಿ ಕೂಡ ತನ್ನದೇ ಆದ ರೀತಿಯಲ್ಲಿ ಆಡಳಿತವನ್ನು ಸಮರ್ಥಿಸಿಕೊಂಡು ಮುನ್ನಡೆಯುತ್ತಿದೆ. ಇವುಗಳ ನಡುವೆ ತೀವ್ರ ಸದ್ದು ಮಾಡಿದ ಸುದ್ದಿ 40% ಸರ್ಕಾರ, ಭಾರತ್ ಜೋಡೋ, ಕೈ ಏರಿಸಿ ಕರುನಾಡಿಗಾಗಿ ಅಭಿಯಾನಗಳು. ಫೇಸ್‌ಬುಕ್ ಮೂಲಕ ನಿತ್ಯವೂ ಇದರ ವಿಡಿಯೋ, ಫೋಟೋಗಳು ಗಮನಸೆಳೆಯತ್ತಿದ್ದವು.
ಫೇಸ್‌ಬುಕ್ ಇದನ್ನು ಸುಖಾ ಸಮ್ಮನೆ ಎಲ್ಲರಿಗೂ ಈ ವಿಚಾರಗಳನ್ನು ತೋರಿಸಿಲ್ಲ ಮತ್ತು ತೋರಿಸುತ್ತಿಲ್ಲ. ಈ ಅಭಿಯಾನ ಪೇಯ್ಡ್ ಆಗಿದ್ದ ಕಾರಣ ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾ ಕಂಪನಿಯ ದತ್ತಾಂಶದ ಪೈಕಿ ಈ ವರ್ಷ ಆಗಸ್ಟ್ 16ರಿಂದ ನವೆಂಬರ್ 13ರ ತನಕದ ದತ್ತಾಂಶ ಗಮನಿಸಿದಾಗ ಅದರಲ್ಲಿ ಕರ್ನಾಟಕದ ಲೆಕ್ಕ ಸಿಕ್ಕಿತು.
ಆ ದತ್ತಾಂಶವನ್ನು ದತ್ತಾಂಶ ಚಿತ್ರಣಕ್ಕಾಗಿ ವಿಶ್ಲೇಷಿಸಿದಾಗ ಈ ಚಿತ್ರಣ ಕಂಡುಬಂತು.
ಕರ್ನಾಟಕದಲ್ಲಿ ವಿವಿಧ ಫೇಸ್‌ಬುಕ್ ಪುಟಗಳು ಖರ್ಚು ಮಾಡಿದ್ದೆಷ್ಟು?
ಫೇಸ್‌ಬುಕ್ ಆಡ್ ಲೈಬ್ರರಿ ರಿಪೋರ್ಟ್ ಪ್ರಕಾರ, 2022ರ ಆಗಸ್ಟ್ 16 ರಿಂದ ನವೆಂಬರ್ 13ರ ನಡುವಿನ ಅವಧಿಯಲ್ಲಿ ಕರ್ನಾಟಕದಲ್ಲಿ ಫೇಸ್‌ಬುಕ್ ಪೇಜ್ ಮೂಲಕ ಜಾಹೀರಾತಿಗೆ ಎಷ್ಟು ಹಣ ಯಾರು ವ್ಯಯಿಸಿದ್ದಾರೆ ಎಂಬುದರ ವಿವರ ಇಲ್ಲಿದೆ. ಬಲಬದಿಗೆ ಇರುವ ಪೇಜ್‌ನೇಮ್ ಡೌನ್‌ಬಟನ್ ಕ್ಲಿಕ್ ಮಾಡಿದರೆ ಅಲ್ಲಿ ಫೇಸ್‌ಬುಕ್ ಪುಟದ ಹೆಸರುಗಳು ಗೋಚರಿಸುತ್ತಿವೆ. ಇಲ್ಲಿರುವ ಡೇಟಾದಲ್ಲಿ 6,757 ಪುಟಗಳ ವಿವರ ಇದೆ. ಈ ಅವಧಿಯಲ್ಲಿ ಒಟ್ಟು 94,48,140 ರೂಪಾಯಿಯನ್ನು ಫೇಸ್‌ಬುಕ್‌ನಲ್ಲಿ ಪ್ರೊಮೋಷನ್‌ಗಾಗಿ ಕರ್ನಾಟಕದಿಂದ ಖರ್ಚು ಮಾಡಲಾಗಿದೆ.
ಅದರ ಚಿತ್ರಣ ಹೀಗಿದೆ ನೋಡಿ.
ಕರ್ನಾಟಕದಲ್ಲಿ ಫೇಸ್‌ಬುಕ್ ಪ್ರೊಮೋಷನ್‌ಗಾಗಿ ಯಾರು ಹೆಚ್ಚು ಖರ್ಚು ಮಾಡಿದರು?
ಫೇಸ್‌ಬುಕ್ ಪುಟಗಳಲ್ಲಿ ಪೋಸ್ಟ್‌ಗಳ ಪ್ರಮೋಷನ್‌ಗಾಗಿ, ಪೇಜ್ ಪ್ರೊಮೋಷನ್‌ಗಾಗಿ ಕಳೆದ 90 ದಿನಗಳ ಅವಧಿ (16.08.2022ರಿಂದ 13.11.2022)ಯಲ್ಲಿ ಯಾರು ಎಷ್ಟು ಖರ್ಚು ಮಾಡಿದ್ದಾರೆ ಎಂಬುದರ ದತ್ತಾಂಶ ಚಿತ್ರಣ ಇದು. ಗರಿಷ್ಠ 978,457 ರೂಪಾಯಿ ಖರ್ಚು ಮಾಡಲಾಗಿದೆ. ಗರಿಷ್ಠ ಖರ್ಚು ಮಾಡಿದ ಪುಟಗಳ ಗಾತ್ರ ಈ ದತ್ತಾಂಶಚಿತ್ರಣದಲ್ಲಿ ದೊಡ್ಡ ಗಾತ್ರದಲ್ಲಿದೆ. ಬಣ್ಣವೂ ಕಡುವರ್ಣದಲ್ಲಿದೆ. ಕಡಿಮೆ ಮಾಡಿದ ಪುಟಗಳ ಗಾತ್ರ ಚಿಕ್ಕದು ಮತ್ತು ವರ್ಣ ಪೇಲವವಾಗುತ್ತ ಹೋಗಿರುವುದನ್ನು ಇಲ್ಲಿ ಗಮನಿಸಬಹುದು.
ಕೇವಲ 90 ದಿನಗಳಲ್ಲಿ 1 ಲಕ್ಷ ರೂ. ಮೇಲ್ಪಟ್ಟು ಖರ್ಚು ಮಾಡಿದ ಫೇಸ್‌ಬುಕ್ ಪುಟಗಳಿವು…
ಕರ್ನಾಟಕದಲ್ಲಿ ಕಳೆದ 90 ದಿನಗಳ ಅವಧಿ (16.08.2022 ರಿಂದ 13.11.2022)ಯಲ್ಲಿ 1 ಲಕ್ಷ ರೂಪಾಯಿ ಮೇಲ್ಪಟ್ಟು ಗರಿಷ್ಠ 9.78,457 ರೂಪಾಯಿ ತನಕ ಖರ್ಚು ಮಾಡಿದ ಪುಟಗಳ ವಿವರಗಳನ್ನು ಪರಿಶೀಲಿಸಿದರೆ ಮೊದಲ ಸ್ಥಾನದಲ್ಲಿ 40% ಸರ್ಕಾರ ಕಾಣಸಿಗುತ್ತದೆ. ಕೊನೆಯ ಸ್ಥಾನದಲ್ಲಿ ಗೇಟ್ಸ್ ಫೌಂಡೇಶನ್ ಇದೆ. ಯಾವ ಫೇಸ್‌ಬುಕ್ ಪುಟ ಪ್ರೊಮೋಷನ್‌ಗಾಗಿ ಎಷ್ಟು ಹಣ ಖರ್ಚು ಮಾಡಿದೆ ಎಂಬ ವಿವರದ ದತ್ತಾಂಶ ಚಿತ್ರಣ ಇದು.
ಟಾಪ್ 10 ಪಟ್ಟಿಯಲ್ಲಿ ಕಾಂಗ್ರೆಸ್ ಪ್ರಚಾರ ವೆಚ್ಚ ಎಷ್ಟು?
ಫೇಸ್‌ಬುಕ್ ಜಾಹೀರಾತಿಗೆ 2 ಲಕ್ಷ ರೂಪಾಯಿ ಮೇಲ್ಪಟ್ಟು 10,00,000 ರೂಪಾಯಿ ಒಳಗೆ ಖರ್ಚು ಮಾಡಿರುವ ಪುಟಗಳಿವು. ಇವುಗಳೇ ಕಳೆದ 90 ದಿನ ಅಂದರೆ ಆಗಸ್ಟ್ 16ರಿಂದ ನವೆಂಬರ್ 13ರ ನಡುವೆ ಫೇಸ್‌ಬುಕ್ ಪ್ರೊಮೋಷನ್‌ಗೆ ಹೆಚ್ಚು ಖರ್ಚು ಮಾಡಿರುವ ಟಾಪ್ 10 ಪುಟಗಳು. ಇಲ್ಲಿರುವ ದತ್ತಾಂಶ ಚಿತ್ರಣದಲ್ಲಿಲ ಪುಟಗಳ ಹೆಸರು ಮತ್ತು ಅವುಗಳು ವ್ಯಯಿಸಿದ ಮೊತ್ತ (ಭಾರತದ ರೂಪಾಯಿ)ದ ವಿವರ ಇದೆ.