ಕನ್ನಡ ಸುದ್ದಿ  /  ಕರ್ನಾಟಕ  /  Hassan Sex Scandal: ಬಿಜೆಪಿ ನಾಯಕನಿಗೆ ನಾನು ಮೊದಲು ಪೆನ್‌ಡ್ರೈವ್ ಕೊಟ್ಟಿದ್ದು, ಕಾಂಗ್ರೆಸ್‌ನವರಿಗೆ ಕೊಟ್ಟಿಲ್ಲ; ಕಾರ್ ಚಾಲಕನ ಹೇಳಿಕೆ

Hassan Sex Scandal: ಬಿಜೆಪಿ ನಾಯಕನಿಗೆ ನಾನು ಮೊದಲು ಪೆನ್‌ಡ್ರೈವ್ ಕೊಟ್ಟಿದ್ದು, ಕಾಂಗ್ರೆಸ್‌ನವರಿಗೆ ಕೊಟ್ಟಿಲ್ಲ; ಕಾರ್ ಚಾಲಕನ ಹೇಳಿಕೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ. ಬಿಜೆಪಿ ನಾಯಕನಿಗೆ ನಾನು ಮೊದಲು ಪೆನ್‌ಡ್ರೈವ್ ಕೊಟ್ಟಿದ್ದು, ಕಾಂಗ್ರೆಸ್‌ನವರಿಗೆ ಕೊಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜ್ವಲ್ ರೇವಣ್ಣ (ಎಡಚಿತ್ರ) ಅವರ ಅಶ್ಲೀಲ ವಿಡಿಯೋ ಹಗರಣ; ಬಿಜೆಪಿ ನಾಯಕ ದೇವರಾಜೇಗೌಡ (ಮಧ್ಯದಲ್ಲಿರುವವರು)ನಿಗೆ ನಾನು ಮೊದಲು ಪೆನ್‌ಡ್ರೈವ್ ಕೊಟ್ಟಿದ್ದು, ಕಾಂಗ್ರೆಸ್‌ನವರಿಗೆ ಕೊಟ್ಟಿಲ್ಲ ಎಂದು ಕಾರ್ ಚಾಲಕ ಕಾರ್ತಿಕ್ (ಬಲಚಿತ್ರ) ಹೇಳಿಕೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ (ಎಡಚಿತ್ರ) ಅವರ ಅಶ್ಲೀಲ ವಿಡಿಯೋ ಹಗರಣ; ಬಿಜೆಪಿ ನಾಯಕ ದೇವರಾಜೇಗೌಡ (ಮಧ್ಯದಲ್ಲಿರುವವರು)ನಿಗೆ ನಾನು ಮೊದಲು ಪೆನ್‌ಡ್ರೈವ್ ಕೊಟ್ಟಿದ್ದು, ಕಾಂಗ್ರೆಸ್‌ನವರಿಗೆ ಕೊಟ್ಟಿಲ್ಲ ಎಂದು ಕಾರ್ ಚಾಲಕ ಕಾರ್ತಿಕ್ (ಬಲಚಿತ್ರ) ಹೇಳಿಕೆ ನೀಡಿದ್ದಾರೆ.

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಹಗರಣ ಕೇಸ್‌ನಲ್ಲಿ ಇದೇ ಮೊದಲ ಬಾರಿಗೆ ಅವರ ಮಾಜಿ ಚಾಲಕ ಕಾರ್ತಿಕ್ ಹೇಳಿಕೆ ನೀಡಿದ್ದು, ಬಿಜೆಪಿ ನಾಯಕನಿಗೆ ನಾನು ಮೊದಲು ಪೆನ್‌ಡ್ರೈವ್ ಕೊಟ್ಟಿದ್ದು, ಕಾಂಗ್ರೆಸ್‌ನವರಿಗೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಕುಟುಂಬದ ಮಾಜಿ ಕಾರು ಚಾಲಕ ಕಾರ್ತಿಕ್ ಹೇಳಿಕೆಯೊಂದಿಗೆ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಕೇಸ್‌ಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಕೆಲವು ತಿಂಗಳ ಹಿಂದೆಯೇ ಈ ಆಶ್ಲೀಲ ವಿಡಿಯೋ, ಫೋಟೋ ಬಹಿರಂಗಗೊಳಿಸದಂತೆ ಕಾರ್ತಿಕ್ ವಿರುದ್ಧ ಕೋರ್ಟ್‌ನಿಂದ ಸ್ಟೇ ಆರ್ಡರ್ ಕೂಡ ಪ್ರಜ್ವಲ್ ರೇವಣ್ಣ ತಂದಿದ್ದರು ಎಂಬ ಅಂಶ ಮತ್ತೆ ಮುನ್ನೆಲೆಗೆ ಬಂದಿದೆ.

ಬಿಜೆಪಿ ನಾಯಕ ಜಿ ದೇವರಾಜ್ ಅವರಿಗಷ್ಟೇ ಆ ಪೆನ್‌ ಡ್ರೈವ್ ನೀಡಿದ್ದೆ. ನನ್ನ ಬಳಿ ಇದ್ದ ಒಂದೇ ಒಂದು ಪೆನ್‌ ಡ್ರೈವ್ ಅದಾಗಿತ್ತು. ಅವರೂ ನನಗೆ ನ್ಯಾಯಕೊಡಿಸುವ ಮಾತನಾಡುತ್ತ, ನಂಬಿಸಿ ಮೋಸ ಮಾಡಿದರು ಎಂದು ಕಾರ್ತಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್; ಕಾರು ಚಾಲಕ ಕಾರ್ತಿಕ್ ಮಾತಿನ 10 ಮುಖ್ಯಅಂಶಗಳಿವು

1) ಹತ್ತು ಹದಿನೈದು ವರ್ಷ ಕಾಲ ಪ್ರಜ್ವಲ್ ರೇವಣ್ಣ, ರೇವಣ್ಣ ಕುಟುಂಬದವರಿಗೆ ಕಾರು ಚಾಲಕನಾಗಿ ಕೆಲಸ ಮಾಡಿದ್ದೆ. ಈ ಅವಧಿಯಲ್ಲಿ ನನ್ನ ಹೆಂಡ್ತಿಯನ್ನು ಕರೆಯಿಸಿಕೊಂಡು ಅವರ ಮೇಲೆ ಹಲ್ಲೆ ಮಾಡಿ, ನನ್ನ ಮೇಲೂ ಹಲ್ಲೆ ಮಾಡಿ ನಮ್ಮ ಜಮೀನನ್ನು ಬರೆಯಿಸಿಕೊಂಡಿದ್ದಾರೆ. ಅದಾದ ಬಳಿಕ ನಾನು ಅವರಲ್ಲಿ ಕೆಲಸಕ್ಕೆ ಹೋಗುವುದನ್ನು ಬಿಟ್ಟುಬಿಟ್ಟಿದ್ದೆ. ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೆ.

ಇದನ್ನೂ ಓದಿ| ಲೈಂಗಿಕ ಹಗರಣ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಯಾರು?, ಶಿಕ್ಷಣ, ಆಸ್ತಿ ಮತ್ತು ಇತರೆ 5 ಅಂಶಗಳ ವಿವರ

2) ಬಿಜೆಪಿ ಮುಖಂಡ ಜಿ.ದೇವರಾಜೇ ಗೌಡ ಅವರನ್ನು ಸಂಪರ್ಕಿಸಿದ್ದೆ. ಅವರು ನಂಬಿಕೆ ಹುಟ್ಟಿಸಿದರೇ ಹೊರತು ನ್ಯಾಯ ಕೊಡಿಸುವ ಕೆಲಸ ಮಾಡಲಿಲ್ಲ. ಹೀಗಾಗಿ ಅವರ ಮೇಲೆ ನಂಬಿಕೆ ಹೋದ ಕಾರಣ ಬೇರೆ ವಕೀಲರನ್ನು ಸಂಪರ್ಕಿಸಿ ಅವರ ಮೂಲಕ ಕೇಸ್ ದಾಖಲಿಸಿದ್ದೇನೆ. ಇದರ ನಡುವೆ, ಒಂದು ಲಾಯರ್ ನೋಟಿಸ್ ಬಂತು. ಅದೂ ಅಲ್ಲದೆ, ತಡೆಯಾಜ್ಞೆಯೂ ಬಂತು.

3) ಪ್ರಜ್ವಲ್ ರೇವಣ್ಣ ಅವರು ಕೋರ್ಟ್‌ಗೆ ಹೋಗಿ, ಅವರ ಅಶ್ಲೀಲ ವಿಡಿಯೋ ಬಹಿರಂಗಗೊಳಿಸದಂತೆ ತಂದ ತಡೆಯಾಜ್ಞೆ ಅದಾಗಿತ್ತು. ಅದು ಏನೆಂದು ಅರ್ಥವಾಗದೇ ಮತ್ತೆ ವಕೀಲರಾಗಿದ್ದ ಬಿಜೆಪಿ ಮುಖಂಡ ಜಿ.ದೇವರಾಜೇ ಗೌಡ ಅವರ ಬಳಿ ಹೋಗಿದ್ದೆ. ಅವರು ನ್ಯಾಯ ಒದಗಿಸುವುದಾಗಿ ಹೇಳುತ್ತ, ಕಾನೂನು ಮಾರ್ಗದಲ್ಲಿ ಹೋದರೆ ನ್ಯಾಯ ಸಿಗದು. ಸುದ್ದಿಗೋಷ್ಠಿ ಮಾಡಿ ಜನರಿಗೆ ತಿಳಿಸೋಣ ಎಂದು ಹೇಳಿದ್ದರು. ಅದರಂತೆ ಅಂದು ಕೂಡ ಸುದ್ದಿಗೋಷ್ಠಿ ಮಾಡಿ, ನನಗೆ ಆಗಿದ್ದ ಅನ್ಯಾಯವನ್ನು ತೋಡಿಕೊಂಡಿದ್ದೆ.

4) ಅದೇ ಸಂದರ್ಭದಲ್ಲಿ, ನಿನ್ನ ಬಳಿ ಕೆಲವು ಅಶ್ಲೀಲ ವಿಡಿಯೋ, ಫೋಟೋಸ್ ಇವೆಯಂತಲ್ಲ. ಅದನ್ನು ಬಹಿರಂಗಗೊಳಿಸಬಾರದು ಎಂದು ಪ್ರಜ್ವಲ್ ರೇವಣ್ಣ ತಡೆಯಾಜ್ಞೆ ತಂದಿದ್ದಾರೆ. ನನ್ನ ಬಳಿ ಅಶ್ಲೀಲ ವಿಡಿಯೋ, ಫೋಟೋಸ್ ಇರೋದು ಅವರಿಗೆ ಹೇಗೆ ಗೊತ್ತಾಯಿತು ಎಂದು ದೇವರಾಜೇಗೌಡ ಅವರನ್ನು ಕೇಳಿದ್ದೆ. ಅದಕ್ಕೆ ಅವರು, ನೀನುಂಟು ಪ್ರಜ್ವಲ್ ರೇವಣ್ಣ ಅವರುಂಟು. ನನಗೆ ಗೊತ್ತಿಲ್ಲ ಎಂದಿದ್ದರು. ಆ ವಿಚಾರ ದೇವರಾಜೇಗೌಡರನ್ನು ಬಿಟ್ಟರೆ ಬೇರೆ ಯಾರಬಳಿಯೂ ಹೇಳಿರಲಿಲ್ಲ.

5) ಕೊನೆಗೆ ಈಗ ತಡೆಯಾಜ್ಞೆಯಿಂದ ಮುಕ್ತಿಸಿಗಬೇಕಾದರೆ, ನಿನಗೆ ನ್ಯಾಯ ಬೇಕಾದರೆ ಆ ವಿಡಿಯೋ ಇರುವ ಪೆನ್‌ಡ್ರೈವ್ ಕೊಡು. ಅದನ್ನು ನೇರವಾಗಿ ನ್ಯಾಯಮೂರ್ತಿಯವರಿಗೆ ಸಲ್ಲಿಸೋಣ. ಎಲ್ಲ ಸಮಸ್ಯೆ ಪರಿಹಾರವಾಗುತ್ತೆ ಎಂದು ದೇವರಾಜೇ ಗೌಡರು ಹೇಳಿದ ಕಾರಣ ಅವರಿಗೆ ಅದನ್ನು ಕೊಟ್ಟಿದ್ದೆ. ದೇವರಾಜೇ ಗೌಡರು ಬಿಜೆಪಿಯಲ್ಲಿರುವ ಕಾರಣ ಅವರಿಂದ ನ್ಯಾಯ ಸಿಗಬಜಹುದು ಎಂದು ನಾನು ಭರವಸೆ ಇಟ್ಟುಕೊಂಡಿದ್ದೆ. ಅದು ಆಗಲಿಲ್ಲ. ಅವರು ಅದನ್ನು ಬೇರೆಯೇ ರೀತಿ ಬಳಿಸಿಕೊಂಡರು. ನನ್ನನ್ನೂ ಸುದ್ದಿಗೋಷ್ಠಿಯಲ್ಲಿ ಕೂರಿಸಿಕೊಂಡು ಮಾತನಾಡುವಂತೆ ಮಾಡಿದರು.

6) ಕಾಂಗ್ರೆಸ್ ಪಕ್ಷದವರ ಜೊತೆಗೆ ರೇವಣ್ಣ ಕುಟುಂಬ ಚೆನ್ನಾಗಿದೆ. ಹೀಗಾಗಿ, ಕೇಸ್ ದಾಖಲಾದರೂ ಅದರಿಂದ ಹೊರಬರುವುದು ಆ ಕುಟುಂಬಕ್ಕೆ ಚೆನ್ನಾಗಿ ಗೊತ್ತಿದೆ ಎಂಬ ಅರಿವು ಇರವು ಕಾರಣವೇ ನನ್ನಂತೆ ಇತರರಿಗೆ ಅನ್ಯಾಯ ಆಗಬಾರದು. ಈಗಾಗಲೇ ಅನ್ಯಾಯ ಆದವರಿಗೆ ನ್ಯಾಯ ಸಿಗಬೇಕು ಎಂದು ಆ ಪೆನ್‌ಡ್ರೈವ್‌ ದೇವರಾಜೇಗೌಡರಿಗೆ ಕೊಟ್ಟಿದ್ದೆ. ಆದರೆ ಅವರು ಅದನ್ನು ಪಡೆದ ಬಳಿಕ ಮಾಡಿದ್ದೇ ಬೇರೆ.

ಇದನ್ನೂ ಓದಿ| ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಸಂಚಲನ, ಬಿಜೆಪಿ ನಾಯಕ ದೇವರಾಜೇ ಗೌಡರ ತುರ್ತು ರಹಸ್ಯ ಪತ್ರ ವೈರಲ್, 5 ಅಂಶಗಳು

7) ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಅವರ ಮನೆಯ ಪ್ರತಿ ಆಗುಹೋಗುಗಳು ನನಗೆ ಗೊತ್ತಿತ್ತು. ನನಗೇ ಅವರು ಅನ್ಯಾಯ ಮಾಡಿದಾಗ, ತಡೆಯಲಾಗಲಿಲ್ಲ. ನ್ಯಾಯಕ್ಕಾಗಿ ಹೋರಾಟ ನಡೆಸಲು ಮುಂದಾದೆ. ಆ ವಿಡಿಯೋಗಳಿರುವ ಪೆನ್‌ಡ್ರೈವ್ ತಗೊಂಡಿದ್ದೆ. ನಿನ್ನೆ ಇದೇ ಪೆನ್‌ಡ್ರೈವ್ ಕಾಂಗ್ರೆಸ್‌ನವರಿಗೂ ಕೊಟ್ಟಿದೇನೆ ಎಂದು ದೇವರಾಜೇ ಗೌಡರು ಆರೋಪಿಸಿದ್ದು, ನೋಡಿ ಸಹಿಸಲಾಗಿಲ್ಲ. ಅವರು ಸುಳ್ಳು ಹೇಳುತ್ತಿದ್ದಾರೆ.

8) ದೇವರಾಜೇ ಗೌಡ ಅವರು ಬಚಾವ್ ಆಗುವ ಸಲುವಾಗಿ ನನ್ನ ಮೇಲೆ ಆರೋಪ ಮಾಡ್ತಿದ್ದಾರೆ. ಅವರು ಪೆನ್‌ಡ್ರೈವ್‌ನಿಂದ ಕಾಪಿ ಮಾಡಿಕೊಂಡು ಎಷ್ಟು ಪ್ರತಿ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ನಾನು ಕಾಂಗ್ರೆಸ್‌ ಪಕ್ಷದವರಿಗೆ ಕೊಟ್ಟಿಲ್ಲ. ನಾನು ರಾಜಕೀಯ ಪಕ್ಷದವನಲ್ಲ. ಜನ ಸಾಮಾನ್ಯ. ದೇವರಾಜೇ ಗೌಡರು ರಾಜಕೀಯ ಲಾಭಕ್ಕಾಗಿ ಏನೇನು ಮಾಡಿಕೊಂಡಿದ್ದಾರೋ ಗೊತ್ತಿಲ್ಲ.

9) ನಾನು ಕಾಂಗ್ರೆಸ್‌ನವರಿಗೆ ಆ ವಿಡಿಯೋ ಪೆನ್‌ಡ್ರೈವ್ ಕೊಡುವುದಾಗಿದ್ದರೆ ಈ ದೇವರಾಜೇ ಗೌಡರ ಬಳಿ ಯಾಕೆ ಹೋಗ್ತಿದ್ದೆ. ನಾನೂ ರಾಜಕೀಯವಾಗಿಯೇ ಮುಂದುವರಿಯಬಹುದಿತ್ತು. ಇದಕ್ಕೆ ಎಲ್ಲದಕ್ಕೂ ಉತ್ತರ ವಿವರವಾಗಿ ಎಸ್‌ಐಟಿ ವಿಚಾರಣೆ ಬಳಿಕ ನೀಡುತ್ತೇನೆ.

10) ಈಗ ಎಸ್‌ಐಟಿ ರಚನೆಯಾಗಿದೆ. ನ್ಯಾಯ ಸಿಗಬಹುದು ಎಂಬ ಭರವಸೆ ಇದೆ. ವಿವರವಾಗಿ ಎಲ್ಲ ವಿಚಾರವನ್ನೂ ಎಸ್‌ಐಟಿ ಅಧಿಕಾರಿಗಳ ಎದುರು ಹೇಳುತ್ತೇನೆ. ತನಿಖೆ, ವಿಚಾರಣೆ ಮುಗಿದ ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತೇನೆ. ಎಲ್ಲವನ್ನೂ ವಿವರವಾಗಿ ತಿಳಿಸುತ್ತೇನೆ.

ಯಾರು ಈ ಜಿ ದೇವರಾಜೇ ಗೌಡ?

ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ವಿಧಾನಸಭಾ ಚುನಾವಣೆಗೆ ಕಳೆದ ಬಾರಿ ಸ್ಪರ್ಧಿಸಿದ್ದವರು ಜಿ ದೇವರಾಜೇ ಗೌಡ. ಬಿಜೆಪಿ ಅಭ್ಯರ್ಥಿಯಾಗಿ ಅವರು ಚುನಾವಣೆ ಎದುರಿಸಿ ಸೋಲು ಅನುಭವಿಸಿದ್ದರು. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಅವರು ಬರೆದ ಪತ್ರ ಈ ಪ್ರಕರಣ ಮುನ್ನೆಲೆಗೆ ಬಂದ ನಂತರದಲ್ಲಿ ವೈರಲ್ ಆಗಿತ್ತು.

ಎರಡು ಪುಟಗಳ ಪತ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಸೇರ್ಪಡೆ ಮಾಡುವಾಗ ಎಚ್ಚರವಹಿಸಬೇಕು. ಪಕ್ಷದ ತತ್ತ್ವ ಸಿದ್ಧಾಂತಗಳ ಪಾಲನೆ ಮಾಡಿ ಆರೋಗ್ಯಕರ ತೀರ್ಮಾನಕ್ಕೆ ಬಂದರೆ ಒಳಿತು. ಈ ಬಗ್ಗೆ ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಪಕ್ಷದ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ದೇವರಾಜೇ ಗೌಡ ಮನವಿ ಮಾಡಿ ಎಚ್ಚರಿಸಿದ್ದರು.

IPL_Entry_Point