ಕನ್ನಡ ಸುದ್ದಿ  /  Karnataka  /  India News Indian Railway Vande Bharat Express Train Service Will Start Soon Between Bangalore And Tiruchanapally Mrt

ರೈಲು ಪ್ರಯಾಣಿಕರಿಗೆ ಶುಭಸುದ್ದಿ; ಶೀಘ್ರದಲ್ಲೇ ಬೆಂಗಳೂರು-ತಿರುಚಿನಾಪಳ್ಳಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಆರಂಭ

ಬೆಂಗಳೂರು ಹಾಗೂ ತಿರುಚಿನಾಪಳ್ಳಿ ನಡುವೆ ಶೀಘ್ರದಲ್ಲೇ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲಿದೆ. ಬಹುದಿನಗಳಿಂದ ಪ್ರಯಾಣಿಕರು ಈ ಮಾರ್ಗದಲ್ಲಿ ವಂದೇ ಭಾರತ್‌ ರೈಲಿಗೆ ಬೇಡಿಕೆ ಇಟ್ಟಿದ್ದರು. ಈ ರೈಲು ಸಂಚರಿಸುವ ಮಾರ್ಗ, ಎಂದಿನಿಂದ ಆರಂಭವಾಗಲಿದೆ ಎಂಬಿತ್ಯಾದಿ ವಿವರ ಇಲ್ಲಿದೆ (ವರದಿ: ಎಚ್‌. ಮಾರುತಿ)

ಬೆಂಗಳೂರು-ತಿರುಚಿನಾಪಳ್ಳಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಆರಂಭ
ಬೆಂಗಳೂರು-ತಿರುಚಿನಾಪಳ್ಳಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಆರಂಭ

ಬೆಂಗಳೂರು: ರೈಲು ಪ್ರಯಾಣಿಕರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಬೆಂಗಳೂರು-ತಿರುಚನಾಪಳ್ಳಿ ನಡುವೆ ಶೀಘ್ರವೇ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲಿದೆ. ಬಹುದಿನಗಳಿಂದ ಸಾರ್ವಜನಿಕರು ಈ ಬೇಡಿಕೆಯನ್ನು ಮುಂದಿಟ್ಟಿದ್ದರು. ಸೆಮಿ ಹೈಸ್ಪೀಡ್ ರೈಲು ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ತಿರುಚ್ಚಿ ಜಂಕ್ಷನ್ ರೈಲ್ವೇ ನಿಲ್ದಾಣದ ನಡುವೆ ಸಂಚಾರ ಆರಂಭವಾಗಲಿದೆ.

ತಿರುಚ್ಚಿ-ಬೆಂಗಳೂರು ನಡುವೆ ಹಗಲಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಿಸುವಂತೆ ದಕ್ಷಿಣ ರೈಲ್ವೆಗೆ ತಿರುಚ್ಚಿ ರೈಲ್ವೇ ವಿಭಾಗ ಪತ್ರ ಬರೆದಿದೆ. ಪ್ರಸ್ತುತ ವಂದೇ ಭಾರತ್ ರೈಲು ತಿರುಚ್ಚಿ ಜಂಕ್ಷನ್ ರೈಲ್ವೇ ನಿಲ್ದಾಣದಿಂದ ಮುಂಜಾನೆ ಹೊರಟು ಅದೇ ದಿನ ಸಂಜೆ ಹಿಂತಿರುಗಲಿದೆ.

ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್, ಲೈಟಿಂಗ್, ವಾಷಿಂಗ್ ಲೈನ್, ಓವರ್ ಹೆಡ್ ಸಲಕರಣೆ, ನೀರಿನ ವ್ಯವಸ್ಥೆ, ದಿನ ನಿತ್ಯದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಮತ್ತು ಪ್ರಯಾಣಿಕರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇದು ರೈಲು ಪ್ರಯಾಣಿಕರ ಬಹುದಿನಗಳ ಕನಸು ಹೌದು.

ಆದರೂ ಈ ರೈಲು ಸಂಚಾರ ಆರಂಭಿಸುವ ದಿನಾಂಕ ಮತ್ತು ಸಮಯ ಇನ್ನೂ ನಿಗದಿಯಾಗಿಲ್ಲ. ಈ ಹೈ ಸ್ಪೀಡ್ ರೈಲು ತಮಿಳುನಾಡು ಮತ್ತು ಕರ್ನಾಟಕವನ್ನು ಸಂಪರ್ಕಿಸಲಿದೆ.

ಹಗಲಿನಲ್ಲಿ ಬೆಂಗಳೂರು- ತಿರುಚನಾಪಳ್ಳಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರಕ್ಕೆ ಪ್ರಯಾಣಿಕರ ಬೇಡಿಕೆ ಇದೆ. ಇದಕ್ಕಾಗಿ ರಾತ್ರಿ ವೇಳೆ ಪರಿಶೀಲನೆಗೆ ವ್ಯವಸ್ಥೆ ಲಭ್ಯ ಇದೆ. ಎಲ್ಲ ವ್ಯವಸ್ಥೆಗಳು ಸರಿ ಹೋದಲ್ಲಿ ರಾತ್ರಿ ವೇಳೆಯೂ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಸಾಧ್ಯತೆಗಳಿವೆ. ಈ ಬಗ್ಗೆ ತಿರುಚ್ಚಿ ಜಂಕ್ಷನ್ ರೈಲ್ವೇ ಅಧಿಕಾರಿಗಳು ರೈಲ್ವೇ ಇಲಾಖೆಗೆ ಪತ್ರವನ್ನೂ ಬರೆದಿದ್ದಾರೆ.

ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನಿಂದ ವರ್ಚುವಲ್ ಕಾರ್ಯಕ್ರಮದ ಮೂಲಕ ಚೆನ್ನೈ–ಬೆಂಗಳೂರು–ಮೈಸೂರು ನಡುವಿನ ಎರಡನೇ ವಂದೇ ಭಾರತ್ ರೈಲಿಗೆ ‍ ಹಸಿರು ನಿಶಾನೆ ತೋರಿಸಿದ್ದರು.

ಚೆನ್ನೈ- ಬೆಂಗಳೂರು- ಮೈಸೂರು ನಡುವೆ ವಂದೇ ಭಾರತ್

ಮಾರ್ಚ್ 14ರಿಂದ ಏಪ್ರಿಲ್ 4ರವರೆಗೆ ಈ ರೈಲು (Train No-20663/20664) ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದ ಮಧ್ಯೆ ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆ ಮಾಹಿತಿ ನೀಡಿದೆ.

ಅಂದರೆ ಮಾರ್ಚ್ 14ರಿಂದ ಏಪ್ರಿಲ್ 4ರವರೆಗೆ ಈ ಹೊಸ ವಂದೇ ಭಾರತ್ ರೈಲು ಮೈಸೂರುವರೆಗೆ ಸಂಚರಿಸುವುದಿಲ್ಲ. ಈ ವೇಳೆ ತಮಿಳುನಾಡಿನ ಕಾಟಪಡಿ-ಕೆ.ಆರ್. ಪುರ ಮಧ್ಯ ಮಾತ್ರ ನಿಲುಗಡೆ ಮಾಡಲಿದೆ.

ರೈಲು ಬುಧವಾರ ಹೊರತುಪಡಿಸಿ ಪ್ರತಿ ದಿನ ಸಂಜೆ 5 ಗಂಟೆಗೆ ಚೆನ್ನೈನಿಂದ ಹೊರಟು ಅಂದೇ ರಾತ್ರಿ 9:25ಕ್ಕೆ ಬೆಂಗಳೂರಿನ ಸರ್‌ ಎಂ.ವಿ ರೈಲು ನಿಲ್ದಾಣ ತಲುಪಲಿದೆ. 358 ಕಿಮೀ ದೂರವನ್ನು ಕೇವಲ 4 ಗಂಟೆ 25 ನಿಮಿಷಗಳಲ್ಲಿ ಕ್ರಮಿಸಲಿದೆ.

ಪುನಃ ಮಾರನೇ ದಿನ ಬೆಳಿಗ್ಗೆ 7.25ಕ್ಕೆ ಸರ್‌ ಎಂ.ವಿ ರೈಲು ನಿಲ್ದಾಣದಿಂದ ಹೊರಟು ಮಧ್ಯಾಹ್ನ 12:25ಕ್ಕೆ ಚೆನ್ನೈ ಸೆಂಟ್ರಲ್ ತಲುಪಲಿದೆ. ಈ ವೇಳೆ ಕೆ.ಆರ್‌. ಪುರ- ಕಾಟಪಡಿ ಮಧ್ಯ ಮಾತ್ರ ನಿಲುಗಡೆ ಇರಲಿದೆ. ಕೇವಲ 4 ಗಂಟೆ 35 ನಿಮಿಷಗಳಲ್ಲಿ ಕ್ರಮಿಸಲಿದೆ.

ಏಪ್ರಿಲ್ 5ರಿಂದ ನಿಗದಿತ ವೇಳಾಪಟ್ಟಿಯಂತೆ ಈ ಹೊಸ ವಂದೇ ಭಾರತ್ ರೈಲು ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಮೈಸೂರು ಮಧ್ಯ ಸಂಚಾರ ನಡೆಸಲಿದೆ.

ಬುಧವಾರ ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಮೈಸೂರಿನಿಂದ ಹೊರಡುವ ಈ ರೈಲು ಅಂದೇ ಮಧ್ಯಾಹ್ನ 12:25ಕ್ಕೆ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ. ಈ ವೇಳೆ ಮಂಡ್ಯ–ಕೆಎಸ್‌ಆರ್ ಬೆಂಗಳೂರು– (ಬೆಳಿಗ್ಗೆ 7.25ಕ್ಕೆ) ಸರ್. ಎಂವಿ–ಕೆಆರ್‌ ಪುರ–ಕಾಟಪಡಿ ಮಧ್ಯ ಮಾತ್ರ ನಿಲುಗಡೆ ಇರುತ್ತದೆ. 6 ಗಂಟೆ 20 ನಿಮಿಷಗಳಲ್ಲಿ ತಲುಪಲಿದೆ.

ಅಂದೇ ಚೆನ್ನೈನಿಂದ ಸಂಜೆ 5ಕ್ಕೆ ಹೊರಡುವ ಈ ರೈಲು ರಾತ್ರಿ 11.20 ಕ್ಕೆ ಮೈಸೂರು ತಲುಪಲಿದೆ. 497 ಕಿಮೀ ದೂರವನ್ನು 6ಗಂಟೆ 25 ನಿಮಿಷಗಳಲ್ಲಿ ತಲುಪಲಿದೆ.

ಕಳೆದ ವರ್ಷ ಮೈಸೂರು–ಬೆಂಗಳೂರು–ಚೆನ್ನೈ ನಡುವೆ ಮೊದಲ ವಂದೇ ಭಾರತ್ ಸಂಚಾರ ಪ್ರಾರಂಭಿಸಿತ್ತು. ಈ ರೈಲು ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ನೈರುತ್ಯ ರೈಲ್ವೆಗೆ ಸೇರಿದೆ. ಈಗ ಸಂಚಾರ ಆರಂಭಿಸಿರುವ ಹೊಸ ಎರಡನೇ ವಂದೇ ಭಾರತ್ ರೈಲು ಚೆನ್ನೈನಲ್ಲಿರುವ ದಕ್ಷಿಣ ರೈಲ್ವೆಗೆ ಸೇರಿದೆ.

IPL_Entry_Point