Indian Railways: ಕರಾವಳಿ ಕರ್ನಾಟಕಕ್ಕೆ ದೀಪಾವಳಿ ಹಬ್ಬದ ಪ್ರಯುಕ್ತ ಎರಡು ವಿಶೇಷ ರೈಲುಗಳು, ಬುಕ್ಕಿಂಗ್‌ ಆರಂಭ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಕರಾವಳಿ ಕರ್ನಾಟಕಕ್ಕೆ ದೀಪಾವಳಿ ಹಬ್ಬದ ಪ್ರಯುಕ್ತ ಎರಡು ವಿಶೇಷ ರೈಲುಗಳು, ಬುಕ್ಕಿಂಗ್‌ ಆರಂಭ

Indian Railways: ಕರಾವಳಿ ಕರ್ನಾಟಕಕ್ಕೆ ದೀಪಾವಳಿ ಹಬ್ಬದ ಪ್ರಯುಕ್ತ ಎರಡು ವಿಶೇಷ ರೈಲುಗಳು, ಬುಕ್ಕಿಂಗ್‌ ಆರಂಭ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯುವ ಬೆಂಗಳೂರಿನ ಯಶವಂತಪುರದಿಂದ ಕಾರವಾರದವರೆಗೂ ವಿಶೇಷ ರೈಲು ಓಡಿಸುವುದಾಗಿ ಪ್ರಕಟಿಸಿದೆ.ವರದಿ:ಹರೀಶ ಮಾಂಬಾಡಿ, ಮಂಗಳೂರು

ಬೆಂಗಳೂರಿನಿಂದ ಕಾರವಾರಕ್ಕೆ ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚರಿಸಲಿದೆ.
ಬೆಂಗಳೂರಿನಿಂದ ಕಾರವಾರಕ್ಕೆ ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚರಿಸಲಿದೆ.

ಮಂಗಳೂರು: ದೀಪಾವಳಿಗೆ ಊರಿಗೆ ಹೊರಟಿದ್ದೀರಾ, ಅದರಲ್ಲೂ ಮಲೆನಾಡು ಹಾಗೂ ಕರಾವಳಿ ಭಾಗದವರು ಊರಿಗೆ ಹೋಗಲು ವಿಶೇಷ ರೈಲು ಬೆಂಗಳೂರನಿಂದ ಹೊರಡಲಿದೆ. ತುಮಕೂರಿನ ಕುಣಿಗಲ್‌, ಹಾಸನ, ಸಕಲೇಶ ಪುರ, ದಕ್ಷಿಣ ಕನ್ನಡದ ಪುತ್ತೂರು, ಉಡುಪಿ, ಕುಂದಾಪುರ, ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾದಿಂದ ಕಾರವಾರಕ್ಕೆ ಹೋಗುವವರಿಗೆ ಈ ವಿಶೇಷ ರೈಲಿನ ಉಪಯೋಗ ಸಿಗಲಿದೆ. ಈ ಬಾರಿ ದೀಪಾವಳಿ ಹಬ್ಬದ ಪ್ರಯುಕ್ತ ರೈಲು ಸಂಖ್ಯೆ 06565/66 ಯಶವಂತಪುರ ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ರೈಲಿನ ಜೊತೆಗೆ ನೈರುತ್ಯ ರೈಲ್ವೆ ವಲಯವು ಬೆಂಗಳೂರಿನಿಂದ ಕಾರವಾರಕ್ಕೆ ಪಡೀಲು ಬೈಪಾಸ್ ವಿಶೇಷ ರೈಲು ಓಡಿಸಲಿದೆ.

ರೈಲು ಸಂಖ್ಯೆ 06597 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಕಾರವಾರ ವಿಶೇಷ ರೈಲು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ದಿನಾಂಕ 30.10.2024ರಂದು ಮಧ್ಯಾಹ್ನ 1 ಗಂಟೆಗೆ ಹೊರಟು ಕುಣಿಗಲ್, ಹಾಸನ, ಪಡೀಲು ಬೈಪಾಸ್ ಮಾರ್ಗವಾಗಿ ಮರುದಿನ(31.10.2024) ಬೆಳಗ್ಗೆ 4 ಗಂಟೆಗೆ ಕಾರವಾರ ತಲುಪಲಿದೆ. 

ರೈಲು ಸಂಖ್ಯೆ 06598 ಕಾರವಾರ-ಸರ್. ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ರೈಲು ಅದೇ ದಿನ(31.10.2024) ಮಧ್ಯಾಹ್ನ 12 ಗಂಟೆಗೆ ಕಾರವಾರದಿಂದ ಹೊರಟು ಮರುದಿನ(01.11.2024) ಬೆಳಗ್ಗೆ 4 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ತಲುಪಲಿದೆ. ಈ ರೈಲಿಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಹಾಗು ಕಾರವಾರ ನಡುವೆ ಚಿಕ್ಕ ಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ ಜಂಕ್ಷನ್, ಸಕಲೇಶಪುರ, ಸುಬ್ರಹ್ಮಣ್ಯರೋಡ್, ಕಬಕಪುತ್ತೂರು,ಬಂಟ್ವಾಳ,ಸುರತ್ಕಲ್,ಮುಲ್ಕಿ,ಉಡುಪಿ,ಬಾರ್ಕೂರು,ಕುಂದಾಪುರ,ಬೈಂದೂರು ಮೂಕಾಂಬಿಕ ರೋಡ್,ಭಟ್ಕಳ,ಮುರುಡೇಶ್ವರ,ಹೊನ್ನಾವರ,ಕುಮಟಾ,ಗೋಕರ್ಣ ರೋಡ್, ಅಂಕೋಲಾ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಈಗಾಗಲೇ ಬೆಂಗಳೂರು-ಮಂಗಳೂರು ದೀಪಾವಳಿ ಹಬ್ಬದ ವಿಶೇಷ ರೈಲಿನ ಜೊತೆಗೆ ಈ ವಿಶೇಷ ರೈಲಿನ ಟಿಕೇಟು ಬುಕ್ಕಿಂಗ್ ಆರಂಭಗೊಂಡಿದೆ. ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸ್ಲೀಪರ್,3 ಟೈರ್ ಎಸಿ(ತೃತೀಯದ ದರ್ಜೆಯ ಎಸಿ) ಕೋಚುಗಳಲ್ಲಿ ಬುಕ್ ಮಾಡಿ ಅಥವಾ ಸಾಮಾನ್ಯ ದರ್ಜೆಯ ಕೋಚುಗಳಲ್ಲಿ ಪ್ರಯಾಣಿಸಬಹುದು. ಹಬ್ಬದ ಪ್ರಯುಕ್ತ ಮಧ್ಯಾಹ್ನವೇ ಹೊರಟು ಸುಬ್ರಹ್ಮಣ್ಯ,ಪುತ್ತೂರು,ಬಂಟ್ವಾಳ,ಮಂಗಳೂರು ಕಡೆಗೆ(ಈ ರೈಲು ಮಂಗಳೂರಿಗೆ ಹೋಗುವುದಿಲ್ಲ. ಹೀಗಾಗಿ ಬಂಟ್ವಾಳ ಅಥವ ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದು ಮಂಗಳೂರಿಗೆ ಹೋಗಬಹುದು) ಪ್ರಯಾಣಿಸುವವರು ಈ ರೈಲಿನಲ್ಲಿ ಟಿಕೇಟು ಬುಕ್ ಮಾಡುವವರು ಈಗಲೇ ಬುಕ್ ಮಾಡಿ ಎಂದು ದಕ್ಷಿಣ ಕನ್ನಡ ರೈಲ್ವೆ ಬಳಕೆದಾರರ ಸಂಘ ತಿಳಿಸಿದೆ.

(ವರದಿ:ಹರೀಶ ಮಾಂಬಾಡಿ, ಮಂಗಳೂರು)

 

Whats_app_banner