Channapatna election results 2024: ಚನ್ನಪಟ್ಟಣದಲ್ಲಿ ಜೆಡಿಎಸ್ ಎಡವಿದ್ದೆಲ್ಲಿ, ಅತೀ ಕುಟುಂಬ ರಾಜಕಾರಣಕ್ಕೆ ಬಿದ್ದ ಹೊಡೆತವೇ: 5 ಅಂಶಗಳು
Channapatna election results 2024: ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣವೇನು. ಇಲ್ಲಿವೆ ಐದು ಅಂಶಗಳು
Channapatna election results 2024: ಜೆಡಿಎಸ್ ಕರ್ನಾಟಕದ ಪ್ರಮುಖ ರಾಜಕೀಯ ಪ್ರಾದೇಶಿಕ ಪಕ್ಷ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಜೆಡಿಎಸ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಸೇರಿ ಬಲ ಪಡೆದುಕೊಂಡಿತ್ತು. ಜೆಡಿಎಸ್‌ನಿಂದ ಬಿಜೆಪಿಗೂ ಬಲ ಬಂದಿತ್ತು. ಆದರೆ ಆರು ತಿಂಗಳಿನಲ್ಲಿ ನಡೆದ ಉಪ ಚುನಾವಣೆಯಲ್ಲಿ ಚನ್ನಪಟ್ಟಣದ ಮತದಾರ ಅಪ್ಪ ಮಕ್ಕಳನ್ನು ತಿರಸ್ಕರಿಸಿದ್ದಾರೆ. ಅದರಲ್ಲೂ ಕುಮಾರಸ್ವಾಮಿಗೆ ಸತತ ಎರಡು ಬಾರಿ ಶಾಸಕ ಸ್ಥಾನ, ಗೌಡರ ಅಳಿಯ ಡಾ.ಮಂಜುನಾಥ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಬಲ ತುಂಬಿದ್ದ ಮತದಾರ ಮತ್ತೆ ಅವರದ್ಧೇ ಕುಟುಂಬದ ಸದಸ್ಯರನ್ನು ಒಪ್ಪಿಲ್ಲ. ಬದಲಿಗೆ ಸ್ಥಳೀಯರಾದ ಯೋಗೇಶ್ವರ್‌ಗೆ ಶಕ್ತಿ ತುಂಬಿದ್ದಾರೆ.ಅತಿಯಾದ ಆತ್ಮವಿಶ್ವಾಸದಿಂದಲೇ ಜೆಡಿಎಸ್‌ನ ನಾಯಕ ಹಾಗೂ ಕೇಂದ್ರ ಸಚಿವ ಎಚ್ ಡಿಕುಮಾರಸ್ವಾಮಿ ಎರಡು ಬಾರಿ ಸೋತಿದ್ದ ಮಗ ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ಭವಿಷ್ಯ ರೂಪಿಸಲು ಹೋಗಿ ಜೆಡಿಎಸ್ ಚನ್ನಪಟ್ಟಣದಲ್ಲಿ ಎಡವಿದ್ದು ಎಲ್ಲಿ ಎನ್ನುವ ಕುರಿತಾದ ಅಂಶಗಳು ಇಲ್ಲಿವೆ.
ಇದನ್ನೂ ಓದಿರಿ: Shiggaon byelection results 2024: ಶಿಗ್ಗಾಂವಿ ಬಿಜೆಪಿ ಲೆಕ್ಕಾಚಾರಕ್ಕೆ ಒಳಹೊಡೆತದ ರಾಜಕೀಯ: ಬೊಮ್ಮಾಯಿಗೆ ಒಳೇಟು ಕೊಟ್ಟವರು ಯಾರು
- ಚನ್ನಪಟ್ಟಣದಲ್ಲಿ ಹಿಂದೆ ಜನತಾದಳ ಗೆದ್ದಿದೆ. ಇಲ್ಲಿ ಅನಿತಾ ಕುಮಾರಸ್ವಾಮಿ ಸೋತಿದ್ದರು. ಎಚ್ ಡಿಕುಮಾರಸ್ವಾಮಿ ಅವರನ್ನು ಎರಡು ಬಾರಿ ಇಲ್ಲಿನ ಜನ ಗೆಲ್ಲಿಸಿದ್ದರು. ಕುಟುಂಬಕ್ಕೆ ಒತ್ತು ನೀಡಿದ್ದರು. ಈ ಬಾರಿಯೂ ಕುಟುಂಬದ ಮತ್ತೊಬ್ಬ ಸದಸ್ಯರನ್ನು ನಿಲ್ಲಿಸಿದ್ದು ಕಾರಣವಾಗಿದೆ ಎನ್ನುವ ವಿಶ್ಲೇಷಣೆ ಇದೆ. ಅದರಲ್ಲೂ ಎಚ್‌ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ ಅವರು ಕ್ಷೇತ್ರವನ್ನು ಬಿಟ್ಟು ಕದಲದೇ ಪ್ರಚಾರ ಮಾಡಿದರೂ ಮತ್ತೊಂದು ಕಡೆ ಅತಿಯದ ಅಭಿಮಾನವೂ ಮುಳುವಾಯಿತೇ ಎನ್ನುವ ಪ್ರಶ್ನೆಯೂ ಎದುರAಗಿದೆ.
- ಕ್ಷೇತ್ರವನ್ನು ತಮ್ಮ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಎಚ್ ಡಿ ಕುಮಾರಸ್ವಾಮಿ ಯೋಚಿಸಿದರು. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಗೆ ಡಾ.ಮಂಜುನಾಥ್ ಅವರಿಗೆ ಟಿಕೆಟ್ ನೀಡಿದ ರೀತಿ ಯೋಗೇಶ್ವರ್ ಅವರಿಗೆ ಅವಕಾಶ ಮಾಡಿಕೊಡಬೇಕಿತ್ತು. ಆಗ ಕ್ಷೇತ್ರ ಉಳಿಯುತ್ತಿತ್ತು. ಕೊಡು ಕೊಳ್ಳುವಿಕೆ ವಿಚಾರದಲ್ಲಿ ಜೆಡಿಎಸ್ ನಾಯಕರು ಗೌರವಯುತವಾಗಿ ನಡೆದುಕೊಳ್ಳಲಿಲ್ಲ. ಇದು ಕೂಡ ಹಿನ್ನಡೆ ಆಗಿರುವ ಅಂಶವಾಗಿದೆ.
ಇದನ್ನೂ ಓದಿರಿ: ನಿಖಿಲ್ ಕುಮಾರಸ್ವಾಮಿ ನಿಮಗೆ ರಾಜಕೀಯ ಆಗಿಬರೋಲ್ಲ, ಸಿನಿಮಾಕ್ಕೆ ವಾಪಸ್ ಬನ್ನಿ, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ತಮಾಷೆ - ಸಿ.ಪಿ.ಯೋಗೇಶ್ವರ್ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಡಾ.ಮಂಜುನಾಥ್ ಪರವಾಗಿ ಕೆಲಸ ಮಾಡಿದ್ದರು. ಈ ಬಾರಿ ಟಿಕೆಟ್ ಅವರಿಗೆ ನೀಡುವ ವಿಚಾರದಲ್ಲಿ ಜೆಡಿಎಸ್‌ನವರು ಸೂಕ್ತ ತೀರ್ಮಾನ ಕೈಗೊಳ್ಳಲಿಲ್ಲ. ಅವರು ಪಕ್ಷ ಬಿಡುವಾಗಲೂ ಉಳಿಸಿಕೊಳ್ಳುವ ಪ್ರಯತ್ನ ಆಗಿಲಿಲ್ಲ. ಇದರ ಲಾಭವನ್ನು ಕಾಂಗ್ರೆಸ್ ಪಡೆಯಿತು.
- ಕುಮಾರಸ್ವಾಮಿ ಹಿಂದಿನ ಎರಡು ಚುನಾವಣೆಯನ್ನು ಪ್ರತ್ಯೇಕವಾಗಿಯೇ ಎದುರಿಸಿದ್ದರು. ಇದರಿಂದ ಮುಸ್ಲೀಂ ಮತಗಳೂ ಅಧಿಕವಾಗಿರುವ ಚನ್ನಪಟ್ಟಣದಲ್ಲಿ ಅವರಿಗೆ ಈ ಸಮುದಾಯದ ಬಲವೂ ಸಿಕ್ಕಿತ್ತು. ಈ ಬಾರಿ ಬಿಜೆಪಿ ಜತೆಗೆ ಹೋಗಿದ್ದರಿಂದ ಆ ಸಮುದಾಯದ ಮತಗಳು ಕೈತಪ್ಪಿರಬಹುದು ಎಂಬ ಚರ್ಚೆಗಳು ನಡೆದಿವೆ.
ಇದನ್ನೂ ಓದಿರಿ: Karnataka by election results 2024: ಉಮೇದಿನಲ್ಲಿದ್ದ ಬಿಜೆಪಿಗೆ ಭಾರೀ ಹಿನ್ನಡೆಯಾಗಿದ್ದು ಎಲ್ಲಿ, ಕಮಲ ಬಣ ಬಡಿದಾಟ ಫಲವೇ: 10 ಅಂಶಗಳು - ಪ್ರಚಾರದ ವಿಚಾರದಲ್ಲೂ ಜೆಡಿಎಸ್ ಹಲವು ನಾಯಕರನ್ನು ನಿರ್ಲಕ್ಷಿಸಿತು. ಹಿರಿಯ ನಾಯಕ ಜಿ.ಟಿ.ದೇವೇಗೌಡ ಅವರ ಪುತ್ರ, ಶಾಸಕ ಜಿ.ಡಿ.ಹರೀಶ್‌ಗೌಡ ಪ್ರಚಾರಕ್ಕೆ ಹೋದರೂ ಜಿ.ಟಿ.ದೇವೇಗೌಡ ಬರಲಿಲ್ಲ. ಎಚ್ ಡಿ.ದೇವೇಗೌಡರು ವಿಶೇಷ ಮುತುವರ್ಜಿ ವಹಿಸಿದರೂ ನಾಯಕರನ್ನು ಕಡೆಗಣಿಸಿದರೂ ಎನ್ನುವ ಮಾತುಗಳು ಕೇಳಿ ಬಂದಿವೆ.