ಮೈಸೂರು ಮುಡಾ ಹಗರಣದಲ್ಲಿ ತನಿಖೆಗೆ ರಾಜ್ಯಪಾಲರ ಅನುಮತಿ ರದ್ದತಿಗೆ ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ: ಮುಂದೇನಾಗಬಹುದು, 10 ಅಂಶಗಳು-karnataka politics karnataka cm siddaramaiah plea cancelled on muda scam at high court 10 major developments kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ಮುಡಾ ಹಗರಣದಲ್ಲಿ ತನಿಖೆಗೆ ರಾಜ್ಯಪಾಲರ ಅನುಮತಿ ರದ್ದತಿಗೆ ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ: ಮುಂದೇನಾಗಬಹುದು, 10 ಅಂಶಗಳು

ಮೈಸೂರು ಮುಡಾ ಹಗರಣದಲ್ಲಿ ತನಿಖೆಗೆ ರಾಜ್ಯಪಾಲರ ಅನುಮತಿ ರದ್ದತಿಗೆ ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ: ಮುಂದೇನಾಗಬಹುದು, 10 ಅಂಶಗಳು

ಮೈಸೂರು ಮುಡಾ ಹಗರಣ: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದದ ತನಿಖೆಗೆ ರಾಜ್ಯಪಾಲರ ಅನುಮತಿ ಕ್ರಮವನ್ನು ಹೈಕೋರ್ಟ್‌ ಎತ್ತಿ ಹಿಡಿದಿದ್ದು ಸಿದ್ದರಾಮಯ್ಯ ವಿರುದ್ದ ಕಾನೂನು, ರಾಜಕೀಯ ಸಂಘರ್ಷದ ಹಾದಿಯನ್ನು ಮುಂದುವರೆಯುವಂತೆ ಮಾಡಿದೆ.

ಕರ್ನಾಟಕ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಚಟುವಟಿಕೆಗಳು ಆಗು ಲಕ್ಷಣ ಗೋಚರಿಸುತ್ತಿವೆ.
ಕರ್ನಾಟಕ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಚಟುವಟಿಕೆಗಳು ಆಗು ಲಕ್ಷಣ ಗೋಚರಿಸುತ್ತಿವೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದದ ಮೈಸೂರುಮುಡಾ ಹಗರಣದಲ್ಲಿನ ನಿವೇಶನ ಹಂಚಿಕೆ ಕುರಿತಾದ ರಾಜ್ಯಪಾಲರ ಪ್ರಾಸಿಕ್ಯೂಷನ್‌ ಅನುಮತಿ ಅರ್ಜಿ ವಜಾ ಆಗಿರುವುದರಿಂದ ಸಾಕಷ್ಟು ಚರ್ಚೆಗಳು ನಡೆದಿವೆ. ಕರ್ನಾಟಕದಲ್ಲಿ ಹೊಸ ರಾಜಕೀಯ ಬೆಳವಣಿಗೆಗಳಿಗೂ ಇದು ನಿಧಾನವಾಗಿ ನಾಂದಿ ಹಾಡಲಿದೆ. ಕರ್ನಾಟಕ ಹೈಕೋರ್ಟ್‌ ಸಿದ್ದರಾಮಯ್ಯ ಅವರು ರಾಜ್ಯಪಾಲರ ಪ್ರಾಸಿಕ್ಯೂಷನ್‌ ಅನುಮತಿ ಆದೇಶ ರದ್ದತಿಗೆ ಕೋರಿದ್ದ ಅರ್ಜಿ ವಜಾಗೊಳಿಸಿದೆ. ಈ ಕುರಿತು ಹೋರಾಟ ನಡೆಸುತ್ತಿದ್ದವರ ಅರ್ಜಿಯನ್ನು ಪುರಸ್ಕರಿಸಿದೆ. ಇದರಿಂದ ಏನೆಲ್ಲಾ ಬೆಳವಣಿಗೆ ಆಗಬಹುದು ಎನ್ನುವ ಮಾಹಿತಿ ಇಲ್ಲಿದೆ

ಮುಂದೆ ಏನಾಗಬಹುದು

  1. ಸಿಎಂ ಸಿದ್ದರಾಮಯ್ಯ ಅವರ ಅರ್ಜಿ ಹೈಕೋರ್ಟ್‌ ಏಕ ಸದಸ್ಯ ಪೀಠದಲ್ಲಿ ವಜಾಗೊಂಡಿರುವುದರಿಂದು ಅವರು ಕಾನೂನು ಹೋರಾಟ ಮುಂದುವರಿಸಿ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಬಹುದು. ಅಲ್ಲಿ ತಡೆಯಾಜ್ಞೆಗೆ ಕೋರಿಕೆ ಸಲ್ಲಿಸಬಹುದು.

    ಇದನ್ನೂ ಓದಿರಿ: ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯಗೆ ಮುಗಿಯದ ಸಂಕಷ್ಟ; ರಿಟ್ ಅರ್ಜಿ ವಜಾ ಮಾಡಿದ ಹೈಕೋರ್ಟ್; Video
  2. ವಿಭಾಗೀಯ ಪೀಠದಲ್ಲಿ ತಮ್ಮ ಅರ್ಜಿಯನ್ನು ಸಲ್ಲಿಸಿ ರಾಜ್ಯಪಾಲರ ಪ್ರಾಸಿಕ್ಯೂಷನ್‌ ಅನುಮತಿ ರದ್ದುಪಡಿಸುವಂತೆ ಕೋರಬಹುದು. ಇಲ್ಲಿ ತಡೆಯಾಜ್ಞೆ ಏನಾದರೂ ಸಿಕ್ಕರೆ ತಕ್ಷಣಕ್ಕೆ ರಿಲೀಫ್‌ ಸಿಗಬಹುದು. ಇಲ್ಲದೇ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಹೆಚ್ಚಾಗಬಹುದು.
  3. ಹೈಕೋರ್ಟ್‌ ವಿಭಾಗೀಯ ಪೀಠದಲ್ಲಿ ತಮ್ಮ ಪರವಾಗಿ ತೀರ್ಪು ಬಾರದೇ ಇದ್ದ ಪಕ್ಷದಲ್ಲಿ ಸಿದ್ದರಾಮಯ್ಯ ಅವರು ಸುಪ್ರೀಂಕೋರ್ಟ್‌ ಮೆಟ್ಟಿಲು ಏರಬಹುದು. ಅಲ್ಲಿನ ತೀರ್ಮಾನವೇ ಅಂತಿಮವಾಗಲಿದೆ. ಇದಕ್ಕಾಗಿ ಹಿರಿಯ ನ್ಯಾಯವಾದಿಗಳ ನೆರವನ್ನು ಸಿಎಂ ಕೋರಬಹುದು.
  4. ಸಿದ್ದರಾಮಯ್ಯ ಅವರ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವ ಆದೇಶ ಆಧರಿಸಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲೂ ದೂರುದಾರರು ಹೋರಾಟ ಮುಂದುವರೆಸಬಹುದು. ಇದು ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಸಂಕಷ್ಟವನ್ನು ತಂದುಕೊಡಬಹುದು.

    ಇದನ್ನೂ ಓದಿರಿ: ಮುಡಾ ವಿಚಾರದಿಂದ ಸಿದ್ದರಾಮಯ್ಯ ಆತಂಕಕ್ಕೆ ಒಳಗಾಗಿದ್ದಾರೆಯೇ: ಸಿಎಂ ರೇಸ್​​ನಲ್ಲಿರುವ ಜಿ ಪರಮೇಶ್ವರ ಹೇಳಿದ್ದೇನು?
  5. ಜನಪ್ರತಿನಿಧಿಗಳ ನ್ಯಾಯಾಲಯವು ದೂರುದಾರರ ಅರ್ಜಿ ಆಧರಿಸಿ ಸಿದ್ದರಾಮಯ್ಯ ಅವರ ವಿರುದ್ದ ಪ್ರಕರಣ ದಾಖಲಿಸಲು ಆದೇಶಿಸಿದರೆ ಎಫ್‌ಐಆರ್‌ ದಾಖಲಾಗಬಹುದು. ಅಲ್ಲದೇ ಲೋಕಾಯುಕ್ತ ಇಲ್ಲವೇ ಎಸ್‌ಐಟಿಯಿಂದ ಈ ಕುರಿತು ವಿಚಾರಣೆಗೂ ಸೂಚನೆ ನೀಡಬಹುದು.
  6. ಜನಪ್ರತಿನಿಧಿಗಳ ನ್ಯಾಯಾಲಯದಿಂದ ಎಫ್‌ಐಆರ್‌ ದಾಖಲು ಮಾಡಲು ಆದೇಶ ಆದರೆ ಅಲ್ಲಿಯೂ ಸಿದ್ದರಾಮಯ್ಯ ಅವರು ಕಾನೂನು ಹೋರಾಟ ಮಾಡುವ ಸನ್ನಿವೇಶಗಳು ಎದುರಾಗಬಹುದು.
  7. ಈಗಾಗಲೇ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಡ ಜೋರಾಗಿಯೇ ಇದೆ. ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಇದನ್ನು ಇನ್ನಷ್ಟು ತೀವ್ರಗೊಳಿಸಬಹುದು. ಹೋರಾಟವನ್ನೂ ಆರಂಭಿಸಬಹುದು. ಇದಕ್ಕಾಗಿ ಜಂಟಿಯಾಗಿ ಪಾದಯಾತ್ರೆ ನಡೆಸಿರುವ ಜೆಡಿಎಸ್‌ ಹಾಗೂ ಬಿಜೆಪಿ ಬೇರೆ ರೀತಿಯ ಹೋರಾಟಗಳನ್ನು ರೂಪಿಸಬಹುದು.
  8. ಕಾಂಗ್ರೆಸ್‌ನಲ್ಲಿಯೂ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಸಲು ಈಗಾಗಲೇ ಸದ್ದಿಲ್ಲದೇ ಪ್ರಯತ್ನಗಳು ನಡೆದಿವೆ. ಇದು ಒಳಗೊಳಗೆ ಇನ್ನಷ್ಟು ತೀವ್ರಗೊಳ್ಳಬಹುದು. ಇದಕ್ಕಾಗಿ ಸಭೆಗಳು ನಡೆಯಬಹುದು. ಈಗಾಗಲೇ ಸಿಎಂ ಸ್ಥಾನದ ಆಕಾಂಕ್ಷಿಗಳು ಮಾತನಾಡುತ್ತಿದ್ದು. ಇದು ಇನ್ನಷ್ಟು ತೀವ್ರವೂ ಆಗಬಹುದು.

    ಇದನ್ನೂ ಓದಿರಿ: Live Telecast; ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ, ಕರ್ನಾಟಕ ಹೈಕೋರ್ಟ್‌ ಕಲಾಪದ ನೇರ ಪ್ರಸಾರ
  9. ಕಾಂಗ್ರೆಸ್‌ ಹೈಕಮಾಂಡ್‌ ಸದ್ಯದ ಮಟ್ಟಿಗೆ ಕರ್ನಾಟಕ ರಾಜಕೀಯದಲ್ಲಿ ಬದಲಾವಣೆಗೆ ಅವಕಾಶ ಮಾಡಿಕೊಡದೇ ಇದ್ದರೂ ನಿಧಾನವಾಗಿ ನಾಯಕತ್ವ ಬದಲಾವಣೆಗೆ ಒತ್ತು ಕೊಡಬಹುದು.
  10. ಸಿದ್ದರಾಮಯ್ಯ ವಿರುದ್ದದ ಕಾನೂನು ಹೋರಾಟದಲ್ಲಿ ಆಗುತ್ತಿರುವ ಅಡೆತಡೆಗಳು ಕರ್ನಾಟಕದ ಆಡಳಿತದಲ್ಲೂ ವ್ಯತ್ಯಯಗಳನ್ನು ಉಂಟು ಮಾಡಬಹುದು. ಬಿಗಿ ಹಿಡಿತ ತಪ್ಪಿ ಕಾಂಗ್ರೆಸ್‌ ನಲ್ಲಿ ಇನ್ನಷ್ಟು ಪವರ್‌ ಸೆಂಟರ್‌ಗಳು ಸೃಷ್ಟಿಯಾಗಬಹುದು.

mysore-dasara_Entry_Point