ಕನ್ನಡ ಸುದ್ದಿ  /  ಕರ್ನಾಟಕ  /  Nirmala Sitharaman: ನಿರ್ಮಲಾ ಸೀತಾರಾಮನ್‌ ಕರ್ನಾಟಕದ ನಂಟು, ರಾಜಕೀಯವಾಗಿ ಕಡಿಮೆ ಅವಧಿಯಲ್ಲಿ ಬೆಳೆದಿದ್ದು ಹೇಗೆ

Nirmala Sitharaman: ನಿರ್ಮಲಾ ಸೀತಾರಾಮನ್‌ ಕರ್ನಾಟಕದ ನಂಟು, ರಾಜಕೀಯವಾಗಿ ಕಡಿಮೆ ಅವಧಿಯಲ್ಲಿ ಬೆಳೆದಿದ್ದು ಹೇಗೆ

Karnataka politics ಕರ್ನಾಟಕದಿಂದ ನೇರವಾಗಿ ಚುನಾವಣೆ ಎದುರಿಸಿ ಗೆಲ್ಲದೇ ಇದ್ದರೂ ರಾಜ್ಯಸಭೆ ಸದಸ್ಯೆಯಾಗಿ ಕೇಂದ್ರದಲ್ಲಿ ಸಚಿವೆಯಾಗಿ ಗಮನ ಸೆಳೆದವರು ನಿರ್ಮಲಾ ಸೀತಾರಾಮನ್‌. ಅವರ ಕುರಿತ ಚಿತ್ರಣ ಇಲ್ಲಿದೆ.

ನಿರ್ಮಲಾ ಸೀತಾರಾಮನ್‌ ಮತ್ತೆ ಸಂಪುಟ ಸೇರಿದ ನಗು.
ನಿರ್ಮಲಾ ಸೀತಾರಾಮನ್‌ ಮತ್ತೆ ಸಂಪುಟ ಸೇರಿದ ನಗು.

ನಿರ್ಮಲಾ ಸೀತಾರಾಮನ್‌ ಭಾರತೀಯ ರಾಜಕೀಯ ವಲಯದಲ್ಲಿ ಮಾತ್ರವಲ್ಲ ಸಾರ್ವಜನಿಕ ಆಡಳಿತದಲ್ಲೂ ನಿಲ್ಲುವ ಪ್ರಮುಖ ಹೆಸರು. ಯಾವುದೋ ದೇಶದಲ್ಲಿ ಸಣ್ಣದೊಂದು ಕೆಲಸ ಮಾಡಿಕೊಂಡು ಇದ್ದವರು ಭಾರತಕ್ಕೆ ಬಂದು ಇಲ್ಲಿ ಬಿಜೆಪಿ ಪಕ್ಷದ ವಕ್ತಾರರಾದವರು.ಚಾಣಾಕ್ಷತನದಿಂದ ರಕ್ಷಣಾ ಖಾತೆಯನ್ನು ಇಂದಿರಾಗಾಂಧಿ ಅವರ ನಂತರ ನಿಭಾಯಿಸಿದವರು. ಸತತ ಬಾರಿ ಕೇಂದ್ರ ಆಯವ್ಯಯ ಮಂಡಿಸಿ, ತೆರಿಗೆ ಸುಧಾರಣೆ, ಆರ್ಥಿಕ ನಿರ್ವಹಣೆಗೆ ಒತ್ತು ಕೊಟ್ಟವರು. ಸಾಕಷ್ಟು ವಿವಾದಗಳ ಮಧ್ಯೆಯೂ ಎಲ್ಲಿಯೂ ಕೆಲಸದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಂಡು ಬಂದವರು. ನಿರ್ಮಲಾ ಸೀತಾರಾಮನ್‌ ಅವರಿಗೆ ಕರ್ನಾಟಕ ರಾಜಕಾರಣದ ನಂಟು ಗಟ್ಟಿಯಾಗಿದೆ. ಏಕೆಂದರೆ ಎರಡು ಅವಧಿಯಿಂದಲೂ ಅವರು ರಾಜ್ಯ ಸಭೆಯಲ್ಲಿ ಕರ್ನಾಟಕದ ಪ್ರತಿನಿಧಿ. ಇದಕ್ಕೂ ಮೊದಲು ಅವರು ಪ್ರತಿನಿಧಿಸಿದ್ದ ರಾಜ್ಯ ನೆರೆಯ ಆಂಧ್ರಪ್ರದೇಶ.

ಟ್ರೆಂಡಿಂಗ್​ ಸುದ್ದಿ

ನಿರ್ಮಲಾ ಸೀತಾರಾಮನ್‌ ಕೂಡ ಜನಿಸಿದ್ದು 1959 ರ ಆಗಸ್ಟ್18 ರಂದು.ಅದೂ ಅಪ್ಪಟ ಸಾಮಾನ್ಯ ಕುಟುಂಬದಲ್ಲಿ. ತಮಿಳುನಾಡಿನ ಮಧುರೈನ ಐಯ್ಯರ್‌ ಕುಟುಂಬದ ಕುಡಿಯಾಗಿ ಬೆಳೆದವರು. ಚೆನ್ನಾಗಿ ಓದಬೇಕು, ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಕು ಎನ್ನುವ ಆಕಾಂಕ್ಷೆ ಉಳ್ಳವರಾಗಿದ್ದರು ನಿರ್ಮಲಾ. ತಿರುಚ್ಚಿರಾಪಳ್ಳಿಯಲ್ಲಿ ಬಿ.ಎ. ಪದವಿ ಪಡೆದು, ನಂತರ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿಯನು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪಡೆದರು. ಆನಂತರ ಉನ್ನತ ವ್ಯಾಸಂಗಕ್ಕೆಂದು ನಿರ್ಮಲಾ ತೆರಳಿದ್ದು ಲಂಡನ್‌ಗೆ. ಅಲ್ಲಿ ನಿರ್ಮಲಾ ಸೀತಾರಾಮನ್ ಅವರು ಗೃಹಲಂಕಾರ ಅಂಗಡಿಯೊಂದರಲ್ಲಿ ಮಾರಾಟಗಾರರ ಕೆಲಸ ಮಾಡಿ ಅನುಭವ ಪಡೆದುಕೊಂಡರು. ನಂತರ ಬ್ರಿಟನ್ನಿನ ಅಗ್ರಿಕಲ್ಚರಲ್ ಇಂಜಿನಿಯರ್ಸ್ ಅಸೋಸಿಯೇಷನ್‌ನಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದರು. ಇತರೆಡೆಯೂ ಅನುಭವ ಪಡೆದು ಭಾರತಕ್ಕೆ ಹಿಂದಿರುಗಿದರು. 2000ರಲ್ಲಿ ಭಾರತಕ್ಕೆ ಹಿಂದಿರುಗಿದ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಕೆಲಸ ಮಾಡಿದರು. ಆಗಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇವರಿಗೆ ಅವಕಾಶ ಮಾಡಿಕೊಟ್ಟಿತ್ತು. ಇದಾದ ಬಳಿಕ ಬಿಜೆಪಿ ಸಂಘಟನೆಯೊಂದಿಗೆ ಗುರುತಿಸಿಕೊಂಡು ಮೂರು ವರ್ಷ ವಕ್ತಾರರೂ ಆದರು. ಈ ವೇಳೆ ಯುಪಿಎ 2 ಆಡಳಿತ ವೈಫಲ್ಯಗಳ ವಿರುದ್ದ ನಿರ್ಮಲಾ ಸಾಕಷ್ಟು ವಿಚಾರಗಳನ್ನು ಬಯಲಿಗೆಳೆದು ಗಮನ ಸೆಳದರು. ಆಗಲೇ ಅವರನ್ನು ರಾಜ್ಯ ಸಭಾ ಸದಸ್ಯರನ್ನಾಗಿ ಪಕ್ಷ ನೇಮಿಸಿತು. 2014 ರಲ್ಲಿ ಮೋದಿ ಸರ್ಕಾರ ರಚನೆಯಾದಾಗ ಸಂಪುಟದಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಕಾರ್ಪೊರೆಟ್‌ ವ್ಯವಹಾರಗಳ ಸಚಿವೆಯೂ ಆದರು. ಉತ್ತಮ ಕಾರ್ಯನಿರ್ವಹಣೆಗೆ ರಕ್ಷಣಾ ಖಾತೆಗೆ ಬಡ್ತಿಯೂ ಸಿಕ್ಕಿತು. ಐದು ವರ್ಷದಲ್ಲಿಯೇ ಎರಡನೇ ಅವಧಿ ಸರ್ಕಾರದಲ್ಲಿ ಸಿಕ್ಕಿದ್ದು ಮಹತ್ವದ ಹಣಕಾಸು ಖಾತೆ. ಐದು ವರ್ಷ ನಿರಂತರವಾಗಿ ಹಣಕಾಸು ಸಚಿವೆಯಾಗಿ ಏರಳಿತಗಳನ್ನು ಕಂಡರು. ಆದರೆ ಹಗರಣಗಳಿಗೆ ಅವಕಾಶ ನೀಡದೇ ಖಾತೆ ನಿಭಾಯಿಸಿದ ಹಿರಿಮೆ ನಿರ್ಮಲಾ ಅವರದ್ದು.

ನಿರ್ಮಲಾ ಅವರ ಪತಿ ಪರಕಾಲ ಪ್ರಭಾಕರ ಅವರು ಕಾಲೇಜು ದಿನಗಳ ಸಹಪಾಠಿ. ಆಂಧ್ರಪ್ರದೇಶದವರು. ಅವರನ್ನೇ ವಿವಾಹವಾಗಿದ್ದಾರೆ. ಪುತ್ರಿ ವಾಜ್ಞಯಿ ಪತ್ರಕರ್ತೆ. ಕರ್ನಾಟಕದ ಹುಡುಗನ್ನ ವರಿಸಿರುವುದು ವಿಶೇಷ. ಈ ಮೂಲಕ ರಾಜ್ಯ ಸಭಾ ಸ್ಥಾನ ಹಾಗೂ ಅಳಿಯನ ಕಾರಣಕ್ಕೆ ನಿರ್ಮಲಾ ಕರ್ನಾಟಕದ ನಂಟು ಗಟ್ಟಿಗೊಳಿಸಿಕೊಂಡಿದಾರೆ. ಸತತ ಹತ್ತು ವರ್ಷದ ನಂತರವೂ ನಿರ್ಮಲಾ ಅವರು ಮೋದಿ ಅವರ ಸಂಪುಟದ ಭಾಗವಾಗಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅವರು ಕರ್ನಾಟಕದಿಂದಲೇ ಕಣಕ್ಕಿಳಿಯಬಹುದು ಎನ್ನುವ ಲೆಕ್ಕಾಚಾರವಿತ್ತು. ಆದರೆ ಹಣಕಾಸು ಸಚಿವೆಯಾದರೂ ವೈಯಕ್ತಿಕ ಹಣಕಾಸಿನ ಕಾರಣ ನೀಡಿ ಹಿಂದೆ ಸರಿದರು. ಇಲ್ಲದೇ ಇದ್ದರೆ ಲೋಕಸಭೆಯನ್ನೂ ಅವರು ಪ್ರವೇಶಿಸುವುದನ್ನು ತಪ್ಪಿಸಿಕೊಂಡರು. ಆದರೆ ಸಚಿವ ಸ್ಥಾನವನ್ನು ಮಾತ್ರ ಅವರು ತಪ್ಪಿಸಿಕೊಂಡಂತೆ ಕಾಣುತ್ತಿಲ್ಲ !

ಟಿ20 ವರ್ಲ್ಡ್‌ಕಪ್ 2024