Karnataka Rains: ವಾರದ ಮಳೆ ಮಾಹಿತಿ: ಬೆಳಗಾವಿಯಲ್ಲಿ ದಾಖಲೆ, ಬೆಂಗಳೂರಲ್ಲಿ ಕೊರತೆ: ಮೈಸೂರು, ಕೊಡಗಲ್ಲಿ ಇಲ್ಲವೇ ಇಲ್ಲ
Karnataka Rains ಕರ್ನಾಟಕದಲ್ಲಿ ಕಳೆದ ವಾರ ಸುರಿದ ಮಳೆ ಬೆಳಗಾವಿಯಲ್ಲಿ( Belagavi) ದಾಖಲೆ ನಿರ್ಮಿಸಿದೆ. ಬೆಂಗಳೂರು( Bengaluru) ಸಹಿತ ಹಲವು ಜಿಲ್ಲೆಗಳಲ್ಲಿ ಕೊರತೆ ಕಂಡು ಬಂದಿದೆ.
ಬೆಂಗಳೂರು: ಕರ್ನಾಟಕದಲ್ಲಿ ಒಂದು ವಾರದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮಿತಿ ಮೀರಿದ ಮಳೆ. ಅದೇ ಬೆಂಗಳೂರು ನಗರದಲ್ಲಿ ಮಳೆ ಕೊರತೆ. ಮೈಸೂರು, ಕೊಡಗ ಸೇರಿದಂತೆ 12 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ.
ಬುಧವಾರದಿಂದ ( ನವೆಂಬರ್ 29)ರಿಂದ ಬುಧವಾರಕ್ಕೆ(ಡಿಸೆಂಬರ್ 6 ) ಅಂತ್ಯಗೊಂಡ ವಾರದ ವಾಡಿಕೆ ಮಳೆ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ( IMD) ಬೆಂಗಳೂರು ಪ್ರಾದೇಶಿಕ ಕೇಂದ್ರವು ಬಿಡುಗಡೆ ಮಾಡಿದೆ. ಇದರಲ್ಲಿ ಐದು ರೀತಿಯ ಮಳೆಯಾಗಿರುವ ವಿಭಿನ್ನ ಜಿಲ್ಲೆಗಳಿವೆ. ಇದರಲ್ಲಿ ಉತ್ತಮ ಮಳೆ, ಮಳೆ ಕೊರತೆ ಹಾಗೂ ಮಳೆಯಾಗದೇ ಜಿಲ್ಲೆಗಳ ಪಟ್ಟಿ ಮಾಡಲಾಗಿದೆ. ಇದರಲ್ಲಿ ಎರಡು ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗಿದ್ದರೆ, ಐದು ಜಿಲ್ಲೆಗಳಲ್ಲಿ ವಾಡಿಕೆಗಿಂತ ಭಾರೀ ಪ್ರಮಾಣದಲ್ಲಿಯೇ ಮಳೆ ಸುರಿದಿದೆ. ಏಳು ಜಿಲ್ಲೆಗಳಲ್ಲಿ ಕೊರತೆ ಪ್ರಮಾಣ ಕಂಡು ಬಂದಿದೆ. ಈ ಅವಧಿಯೊಳಗೆ 12 ಜಿಲ್ಲೆಗಳಲ್ಲಿ ಮಳೆಯೇ ಆಗಿಲ್ಲ.
ಅಧಿಕ ಮಳೆ ಎಲ್ಲಿ, ಎಷ್ಟು
ಉತ್ತರ ಒಳನಾಡಿನ ಬೆಳಗಾವಿ, ಮಲೆನಾಡು ಭಾಗದ ಚಿಕ್ಕಮಗಳೂರು, ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವಾಡಿಕೆಗಿಂತ ಮಳೆಯಾಗಿರುವ ವರದಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ದಾಖಲೆಯ ಶೇ. 3194 ರಷ್ಟು ಅಧಿಕ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ. 117ರಷ್ಟು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.109. ಕೋಲಾರ ಜಿಲ್ಲೆಯಲ್ಲಿ ಶೇ. 306ರಷ್ಟು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ.63 ರಷ್ಟು ಅಧಿಕ ಮಳೆಯಾಗಿದೆ.
ವಾಡಿಕೆ ಮಳೆಯಾಗಿರುವ ಪಟ್ಟಿಯಲ್ಲಿ ಧಾರವಾಡ ಹಾಗೂ ಯಾದಗಿರಿ ಇದೆ. ಧಾರವಾಡ ಜಿಲ್ಲೆಯಲ್ಲಿ ಶೇ.10 ರಷ್ಟು ಯಾದಗಿರಿ ಜಿಲ್ಲೆಯಲ್ಲಿ ಶೇ. 17ರಷ್ಟು ಮಳೆ ಸುರಿದ ವರದಿಯಾಗಿದೆ.
ಕೊರತೆ ಎಲ್ಲೆಲ್ಲಿ
ಮಳೆ ಕೊರತೆಯಾಗಿರುವ ಜಿಲ್ಲೆಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಶೇ 49, ಬೆಂಗಳೂರು ನಗರ ಶೇ.58, ಹಾವೇರಿ ಶೇ. 20, ರಾಯಚೂರು ಶೇ 37, ವಿಜಯಪುರ ಶೇ 39 ಬಾಗಲಕೋಟೆ ಶೇ45, ಬೀದರ್ ಶೇ.65. ರಷ್ಟಿವೆ,
ಇನ್ನು ತೀವ್ರ ಮಳೆ ಕೊರತೆಯಾಗಿರುವ ಜಿಲ್ಲೆಗಳ ಪಟ್ಟಿಯಲ್ಲಿ ಕಲಬುರಗಿ ಶೇ. 90, ಉತ್ತರ ಕನ್ನಡ ಜಿಲ್ಲೆ ಶೇ89. ದಾವಣಗೆರೆ ಜಿಲ್ಲೆಶೇ79, ತುಮಕೂರು ಜಿಲ್ಲೆ ಶೇ.81 ಇವೆ.
ಮಳೆಯಾಗದೇ ಇರುವ ಜಿಲ್ಲೆಗಳ ಪಟ್ಟಿ ಈ ವಾರ ದೊಡ್ಡದೇ ಇದೆ. ಚಾಮರಾಜನಗರ, ಕೊಡಗು, ಮೈಸೂರು, ರಾಮನಗರ, ಮಂಡ್ಯ, ಹಾಸನ, ಉಡುಪಿ, ಶಿವಮೊಗ್ಗ, ಚಿತ್ರದುರ್ಗ, ವಿಜಯನಗರ ಸೇರಿದಂತೆ ಬಳ್ಳಾರಿ. ಕೊಪ್ಪಳ. ಗದಗ ಜಿಲ್ಲೆಗಳಿವೆ.
ಮಾನದಂಡ ಹೇಗೆ
ಅತೀ ಹೆಚ್ಚು ಮಳೆಯಾದ ಜಿಲ್ಲೆಗಳನ್ನು ನೀಲಿ ಬಣ್ಣದ ಪಟ್ಟಿಗೆ ಸೇರಿಸಲಾಗಿದ್ದು, ಇಲ್ಲಿ ವಾಡಿಕೆಗಿಂತ ಶೇ. 60 ರಷ್ಟು. ಕೊಂಚ ಅಧಿಕ ಮಳೆಯಾಗಿರುವ ಜಿಲ್ಲೆಗಳಲ್ಲಿ ತೆಳು ನೀಲಿ ಬಣ್ಣದ ಪಟ್ಟಿಗೆ ಸೇರಿಸಲಾಗಿದೆ. ಇಲ್ಲಿ ವಾಡಿಕೆ ಮಳೆ ಶೇ.20 ರಿಂದ ಶೇ 59ರಷ್ಟಿರುತ್ತದೆ. ಸಾಮಾನ್ಯ ಮಳೆಯಾಗುವ ಜಿಲ್ಲೆಗಳನ್ನು ಹಸಿರು ಪಟ್ಟಿಗೆ ಸೇರಿಸಲಾಗುತ್ತದೆ. ಇದರಲ್ಲಿ ಶೇ.19 ರಿಂದ ಶೇ 19 ವರೆಗೆ ಮಳೆಯಾದ ಜಿಲ್ಲೆಗಳಿರುತ್ತವೆ. ಕಡಿಮೆ ಮಳೆ ಕೊರತೆ ಇರುವ ಜಿಲ್ಲೆಗಳನ್ನು ಕೆಂಪು ಪಟ್ಟಿಗೆ ಸೇರಿಸಲಾಗುತ್ತದೆ. ಇಲ್ಲಿ ಶೇ.20 ರಿಂದ ಶೇ 59 ರ ಕೊರತೆ ಇರುತ್ತದೆ.
ಇನ್ನು ಅತಿ ಕಡಿಮೆ ಮಳೆಯಾದ ಜಿಲ್ಲೆಗಳನ್ನು ಹಳದಿ ಬಣ್ಣದ ಪಟ್ಟಿಯಡಿ ಸೇರಿಸಲಾಗುತ್ತದೆ. ಇದರಲ್ಲಿ ಕೊರತೆ ಪ್ರಮಾಣ ಶೇ.60ರಿಂದ ಶೇ.99 ರಷ್ಟಿರುತ್ತದೆ. ಮಳೆಯೇ ಆಗದ ಜಿಲ್ಲೆಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಇದರಡಿ ಶೇ. 100 ರಷ್ಟು ಮಳೆ ಕೊರತೆ ಕಂಡುಬಂದಿರುತ್ತದೆ. ಅಂದರೆ ಮಳೆಯೇ ಆಗದ ಜಿಲ್ಲೆಗಳ ಪಟ್ಟಿಯಡಿ ಇದು ಬರುತ್ತದೆ.
ವಿಭಾಗ