ಮಹಾಲಕ್ಷ್ಮೀ ಭೀಕರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಶ್ರಫ್ ಸೇರಿ ನಾಲ್ವರ ಮೇಲೆ ಗಂಡನ ಅನುಮಾನ, ತನಿಖೆಗೆ 8 ತಂಡ ರಚನೆ
ಕನ್ನಡ ಸುದ್ದಿ  /  ಕರ್ನಾಟಕ  /  ಮಹಾಲಕ್ಷ್ಮೀ ಭೀಕರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಶ್ರಫ್ ಸೇರಿ ನಾಲ್ವರ ಮೇಲೆ ಗಂಡನ ಅನುಮಾನ, ತನಿಖೆಗೆ 8 ತಂಡ ರಚನೆ

ಮಹಾಲಕ್ಷ್ಮೀ ಭೀಕರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಶ್ರಫ್ ಸೇರಿ ನಾಲ್ವರ ಮೇಲೆ ಗಂಡನ ಅನುಮಾನ, ತನಿಖೆಗೆ 8 ತಂಡ ರಚನೆ

Mahalakshami Murder case: ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಾಲಕ್ಷ್ಮೀ ಎಂಬ ಮಹಿಳೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ತಿರುವು ಸಿಕ್ಕಿದೆ. ಅಲ್ಲದೆ, ಆರೋಪಿ ಪತ್ತೆಗೆ ಪೊಲೀಸರು 8 ತಂಡಗಳನ್ನು ರಚಿಸಲಾಗಿದೆ.

ಮಹಾಲಕ್ಷ್ಮೀ ಭೀಕರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಶ್ರಫ್ ಸೇರಿ ನಾಲ್ವರ ಮೇಲೆ ಗಂಡನ ಅನುಮಾನ
ಮಹಾಲಕ್ಷ್ಮೀ ಭೀಕರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಶ್ರಫ್ ಸೇರಿ ನಾಲ್ವರ ಮೇಲೆ ಗಂಡನ ಅನುಮಾನ

ಬೆಂಗಳೂರು: ನಗರದ ಮಲ್ಲೇಶ್ವರಂನ ವೈಯಾಲಿಕಾವಲ್​ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರನ್ನು ಕೊಂದು 30 ಪೀಸ್ ಮಾಡಿ ಫ್ರಿಡ್ಜ್​​ನಲ್ಲಿ ತರಕಾರಿ ಜೋಡಿಸಿದ್ದಂತೆ ಜೋಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಹೊಸ ಟ್ವಿಸ್ಟ್ ಸಿಕ್ಕಿದೆ. ಕೊಲೆಯಾದ ಮಹಾಲಕ್ಷ್ಮೀ ಅವರ ಪತಿ ಹೇಮಂತ್ ದಾಸ್ ಎಂಬವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆಕೆಯ ಆಶ್ರಫ್ ಸೇರಿ ನಾಲ್ವರ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಬೆನ್ನತ್ತಿರುವ ಪೊಲೀಸರು, 8 ತಂಡಗಳನ್ನು ರಚಿಸಿದ್ದಾರೆ.

ಮಹಾಲಕ್ಷ್ಮೀ ಕೊಲೆಗೆ ಸಂಬಂಧಿಸಿ ಅಶ್ರಫ್‌, ಮುಕ್ತ, ಶಶಿಧರ್, ಸುನೀಲ್ ಎನ್ನುವವರ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. , ಸುನೀಲ್, ಮುಕ್ತ, ಶಶಿಧರ್‌ ಮೂವರು ಆಕೆಯ ಸಹೋದ್ಯೋಗಿಗಳು ಎಂದು ತಿಳಿದು ಬಂದಿದೆ.‌ ಕೆಲಸ ಮಾಡುತ್ತಿದ್ದ ಜಾಗದಲ್ಲಿ ಮಹಾಲಕ್ಷ್ಮಿ ಜಗಳ ಮಾಡಿಕೊಂಡಿದ್ದಳು ಎಂದು ಹೇಳಲಾಗಿದೆ. ಮತ್ತೊಬ್ಬ ಅಶ್ರಫ್, ಮಹಾಲಕ್ಷ್ಮೀಯೊಂದಿಗೆ ಸಲುಗೆಯಿಂದಿದ್ದ. ಉತ್ತರಾಖಾಂಡ್ ಮೂಲದ ಈತ ಸಲೂನ್​​ ನಡೆಸುತ್ತಿದ್ದ. ತನ್ನ ಹೆಂಡತಿಯೊಂದಿಗೆ ಅಶ್ರಫ್ ಅಕ್ರಮ ಸಂಬಂಧ ಹೊಂದಿದ್ದರ ಬಗ್ಗೆ ಸ್ವತಃ ಗಂಡನೇ ಹೇಳಿದ್ದಾರೆ.

ಹೇಮಂತ್ ದಾಸ್ ಹೇಳಿದ್ದೇನು?

ನಾನು ಮತ್ತು ಮಹಾಲಕ್ಷ್ಮೀ 6 ವರ್ಷದ ಹಿಂದೆ ವಿವಾಹವಾಗಿದ್ದೆವು. ನಾನು ಮೊಬೈಲ್​ ಅಂಗಡಿ ನಡೆಸುತ್ತಿದ್ದೇನೆ. ಇತ್ತೀಚೆಗೆ ಅಂದರೆ 9 ತಿಂಗಳ ಹಿಂದೆ ನಾವು ಬೇರೆ ಬೇರೆಯಾದವು. ನಮ್ಮದು ಲವ್ ಮ್ಯಾರೇಜ್ ಅಲ್ಲ. ಮಹಾಲಕ್ಷ್ಮೀ ಅವರ ತಂದೆ ನೆಲಮಂಗಲದಲ್ಲೇ ನೆಲೆಸಿದ್ದಾರೆ. ಅವರು 35 ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದಾರೆ. ಆದರೆ ಮೊನ್ನೆ ಮಹಾಲಕ್ಷ್ಮೀ ಇದ್ದ ಮನೆ ಮಾಲೀಕರು ಕಾಲ್ ಮಾಡಿ, ಮನೆಯಲ್ಲಿ ದುರ್ವಾಸನೆ ಬರುತ್ತಿದೆ ಎಂದು ಹೇಳಿದ್ದರು. ನಾವು ಬಂದು ನೋಡಿದರೆ ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್​​ನಲ್ಲಿಟ್ಟಿರುವುದು ಗೊತ್ತಾಯಿತು ಎಂದು ಹೇಮಂತ್ ದಾಸ್ ತಿಳಿಸಿದ್ದಾರೆ.

ಇದೇ ವೇಳೆ ಯಾರ ಮೇಲೆ ಅನುಮಾನ ಇದೆ ಎನ್ನುವುದನ್ನು ಬಹಿರಂಗಪಡಿಸಿದರು. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೇಮಂತ್ ದಾಸ್, ಮೊದಲು ಅಶ್ರಫ್​ ಎಂಬ ಹುಡುಗನಿದ್ದ. ಆತನ ಮೇಲೆ ಅನುಮಾನ ಇದೆ. ಈ ಹಿಂದೆ ಆತನ ವಿರುದ್ಧ ನೆಲಮಂಗಲದಲ್ಲಿ ಕೇಸ್ ದಾಖಲಿಸಿದ್ದೆ. ಅವನೊಂದಿಗೆ ಮಹಾಲಕ್ಷ್ಮಿ ಸಲುಗೆ ಹೊಂದಿದ್ದಳು. ಈಗ ಅವರಿಬ್ಬರ ವಿಚಾರವಾಗಿ ನನಗೆ ಹೆಚ್ಚಿನ ಮಾಹಿತಿ ಇಲ್ಲ. ​ಅಂದು ನಾನು ಎಲ್ಲವನ್ನೂ ಟ್ರ್ಯಾಕ್ ಮಾಡಿದ್ದೆ. ಎಲ್ಲವೂ ಸಿಕ್ಕಿತ್ತು. ಯಾರ ಜೊತೆ ಮಾತನಾಡುತ್ತಿದ್ದಾಳೆ ಎಂದು ಪತ್ತೆ ಹಚ್ಚಿದ್ದಾಗ ಅಶ್ರಫ್ ಎಂಬುದು ಗೊತ್ತಾಗಿತ್ತು ಎಂದು ಹೇಮಂತ್ ಹೇಳಿದ್ದಾರೆ.

ಅಶ್ರಫ್ ಉತ್ತರಾಖಾಂಡ್​ ಮೂಲದವ. ಇಲ್ಲಿ ಕಟಿಂಗ್​​ ಶಾಪ್ ನಡೆಸ್ತಿದ್ದ. ಇಬ್ಬರು ಅಕ್ರಮ ಸಂಬಂಧ ಹೊಂದಿದ್ದರು. ಕೊಲೆಗೂ ಮುನ್ನ 25-30 ದಿನಗಳ ಹಿಂದೆ ನನ್ನ ಪತ್ನಿ ಮೊಬೈಲ್​ ಶಾಪ್​ಗೆ ಬಂದಿದ್ದರು. ನನ್ನ ಮತ್ತು ಮಗನನ್ನು ನೋಡಿಕೊಂಡು ಹೋಗಿದ್ದರು. ಆದರೆ, ಯಾವುದೇ ಕಾಂಟಾಕ್ಟ್​​ ಇರಲಿಲ್ಲ ಎಂದು ಹೇಮಂತ್ ದಾಸ್ ತಿಳಿಸಿದ್ದಾರೆ.

8 ತಂಡಗಳ ರಚನೆ

ಮಹಿಳೆಯ ಭೀಕರ ಹತ್ಯೆ ಪ್ರಕರಣದಲ್ಲಿ ಹೊಸ ಬೆಳವಣಿಗೆ ನಡೆದಿದೆ. ಅಪರಾಧದ ತನಿಖೆಗಾಗಿ ನಗರ ಪೊಲೀಸ್ ಇಲಾಖೆ ಎಂಟು ವಿಶೇಷ ತಂಡಗಳನ್ನು ರಚಿಸಿದೆ. ಪೊಲೀಸರು ಘಟನೆ ನಡೆದ ಪ್ರದೇಶದಲ್ಲಿ ವ್ಯಾಪಕವಾದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿದ್ದಾರೆ. ಹತ್ಯೆಯ ಹಿಂದಿನ ಆರೋಪಿಯನ್ನು ಅಧಿಕಾರಿಗಳು ಇನ್ನೂ ಬಂಧಿಸಿಲ್ಲ. ಶೋಧ ಕಾರ್ಯ ಮುಂದುವರೆದಿದೆ. ಮಹಾಲಕ್ಷ್ಮಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ಕೊಲೆಯ ಸುಳಿವುಗಳಿಗಾಗಿ ಅಧಿಕಾರಿಗಳು ಆಕೆಯ ಸಹೋದ್ಯೋಗಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಮಹಿಳೆಗೆ ಸಂಬಂಧಿಸಿದ ಕಾಲ್​ ವಿವರಗಳ ದಾಖಲೆ (ಸಿಡಿಆರ್) ವಿಶ್ಲೇಷಣೆಯನ್ನೂ ನಡೆಸಿದ್ದಾರೆ.

Whats_app_banner