Mangalore Airport: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಒಳಉಡುಪಿನೊಳಗೆ ಪತ್ತೆಯಾಯ್ತು 1.69 ಕೋಟಿ ರೂ ಮೌಲ್ಯದ ವಜ್ರದ ಹರಳು
Mangalore Air Customs seized diamonds: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಣ್ಣುತಪ್ಪಿಸಿ ಕೊಂಡು ಹೋಗಲು ವಿದೇಶಿ ವಿಮಾನದಿಂದ ನಾನಾ ವಿಧಾನದಲ್ಲಿ ಚಿನ್ನ, ವಜ್ರಗಳನ್ನು ತರುತ್ತಾರೆ. ಆದರೆ ಸಿಕ್ಕಿಬೀಳುವುದೇ ಹೆಚ್ಚು ಮೊನ್ನೆ ಏನಾಯಿತು? ಇಲ್ಲಿದೆ ವಿವರ.
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊನ್ನೆ ಪ್ರಯಾಣಿಕನೊಬ್ಬನಿಂದ ಕಸ್ಟಮ್ಸ್ ಅಧಿಕಾರಿಗಳು 1.69 ಕೋಟಿ ರೂ ಮೌಲ್ಯದ ವಜ್ರದ ಹರಳುಗಳನ್ನು ವಶಪಡಿಸಿಕೊಂಡರು. ಅದನ್ನು ಆತ ಎಲ್ಲಿಟ್ಟಿದ್ದ ಗೊತ್ತಾ? ತನ್ನ ಒಳಉಡುಪಿನಲ್ಲಿ ಪೌಚ್ ಗಳಲ್ಲಿ ಹರಳು ತುಂಬಿಸಿ ಯಾರಿಗೂ ಗೊತ್ತಾಗದಂತೆ ಸಾಗಿಸಲು ಪ್ರಯತ್ನಿಸುತ್ತಿದ್ದ. ಆದರೆ ಕಸ್ಟಮ್ಸ್ ಅಧಿಕಾರಿಗಳ ಕೈಯಲ್ಲಿ ಆತ ಸಿಕ್ಕಿಬಿದ್ದ.
ಈ ಕುರಿತು ಬೆಂಗಳೂರು ಕಸ್ಟಮ್ಸ್ ಇಲಾಖೆ ಟ್ವೀಟ್ ಮಾಡಿದೆ.
ಪ್ರಯಾಣಿಕರ ಭದ್ರತಾ ತಪಾಸಣೆ ವೇಳೆ ದುಬೈಗೆ ತೆರಳುತ್ತಿದ್ದ ಪ್ರಯಾಣಿಕರನ್ನು ಚೆಕ್ ಮಾಡಿದಾಗ ಕಾಸರಗೋಡು ಮೂಲದ ವ್ಯಕ್ತಿಯ ಕುರಿತು ಅನುಮಾನ ಬಂದಿದೆ. ಬಳಿಕ ಆತನ ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ ಪೌಚ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಯಾಣಿಕನನ್ನು ಹೆಚ್ಚಿನ ತನಿಖೆಗಾಗಿ ಸಿಐಎಸ್‌ಎಫ್ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಎರಡು ಪೌಚ್‌ಗಳಲ್ಲಿ ಒಟ್ಟು 306.21 ಕ್ಯಾರೆಟ್‌ಗಳಷ್ಟು ತೂಕದ ವಿವಿಧ ಗಾತ್ರದ ವಜ್ರಗಳೊಂದಿಗೆ 13 ಚಿಕ್ಕ ಪ್ಯಾಕೆಟ್‌ಗಳು ಕಂಡುಬಂದಿದ್ದು, ಇದರ ಮೌಲ್ಯ ರೂ.1.69 ಕೋಟಿಯಾಗಿದೆ. ಪ್ರಯಾಣಿಕನನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ತನಿಖೆಗಳು ಪ್ರಗತಿಯಲ್ಲಿವೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ.
ವಿಮಾನ ನಿಲ್ದಾಣದಲ್ಲಿ ಒಳಉಡುಪಿನಲ್ಲಿ ಚಿನ್ನವನ್ನು ಬಚ್ಚಿಡುವುದು, ಗುದದ್ವಾರದಲ್ಲಿ ಅಡಗಿಸಿಡುವುದು, ಪೌಡರ್ ಮಾಡಿ ಯಾವ್ಯಾವುದೋ ಆಟಿಕೆಗಳಲ್ಲಿ ಹುದುಗಿಸಿಡುವುದು ಹೀಗೆ ನಾನಾ ಮೂಲದಲ್ಲಿ ಸ್ಮಗ್ಲಿಂಗ್ ಮಾಡುವ ಪ್ರಯಾಣಿಕರು ಕಂಡುಬರುತ್ತಾರೆ. ಮೊನ್ನೆ ಪತ್ತೆಯಾದ ಪ್ರಕರಣ ಸುದೀರ್ಘ ಅವಧಿಯ ಬಳಿಕ ಪತ್ತೆಯಾದ ಪ್ರಕರಣವಾಗಿದೆ.
ವರದಿ: ಹರೀಶ ಮಾಂಬಾಡಿ
ಅಪ್ಪನ ರಹಸ್ಯ ಪ್ರೇಮಿಯ ಮಗನೇ ಆಕೆಯ ಬಾಸ್; ಡಿಎನ್‌ಎ ಸೀಕ್ರೆಟ್ನಿಂದ ಕೆಲಸ ಕಳೆದುಕೊಂಡ ಯುವತಿ, ವಿಚಿತ್ರ ಸ್ಟೋರಿ ಓದಿ
ಉದ್ಯೋಗ ಕಡಿತಕ್ಕೆ ಕಾರಣಗಳು ಹಲವು ಇರಬಹುದು. ಉದ್ಯೋಗದಲ್ಲಿ ಕಳಪೆ ಪ್ರದರ್ಶನ, ಆರ್ಥಿಕ ಹಿಂಜರಿತ, ಆಫೀಸ್ ರಾಜಕೀಯ, ಸಹೋದ್ಯೋಗಿಗಳ ಕೆಟ್ಟ ವರ್ತನೆ, ಮೂನ್ ಲೈಟಿಂಗ್, ಸೋಷಿಯಲ್ ಮೀಡಿಯಾದಲ್ಲಿ ಕಂಪನಿಯ ಕುರಿತು ಕೆಟ್ಟದಾಗಿ ಬರೆಯುವುದು ಇತ್ಯಾದಿ ಹಲವು ಕಾರಣಗಳಿಂದ ಉದ್ಯೋಗ ಕಳೆದುಕೊಳ್ಳಬಹುದು. ಆದರೆ, ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಮಹಿಳೆಯೊಬ್ಬರ ಉದ್ಯೋಗ ಕಡಿತಕ್ಕೆ ಕಾರಣವಾಗಿರುವ ವಿಷಯವು ನೆಟ್ಟಿಗರನ್ನು ದಿಗ್ಬ್ರಮೆಗೊಳಿಸಿದೆ. ಡಿಎನ್‌ಎ ಪರೀಕ್ಷೆಯಲ್ಲಿ ಈ ಉದ್ಯೋಗಿಯ ಬಾಸ್ ಈಕೆಗೆ ಸಂಬಂಧಿಯೆಂದು ತಿಳಿದುಬಂದಿತ್ತು. ಇದೇ ಕಾರಣವನ್ನು ಇಟ್ಟುಕೊಂಡು ಕಂಪನಿ ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಈ ಸ್ಟೋರಿ ಇಲ್ಲಿದೆ ಓದಿ