Viral Video: ಮಂಗಳೂರಿನಲ್ಲಿ ರಿಕ್ಷಾದಡಿ ಸಿಲುಕಿದ ಮಹಿಳೆ, ಓಡೋಡಿ ಬಂದು ರಕ್ಷಣೆ ಮಾಡಿದ ಪುತ್ರಿಯ ಸಾಹಸ ವೈರಲ್
Mangalore News ಮಂಗಳೂರಿನಲ್ಲಿ ವೇಗವಾಗಿ ಬಂದ ಆಟೋರಿಕ್ಷಾ ಉರುಳಿ ಬಿದ್ಧಾಗ ಬಾಲಕಿಯೊಬ್ಬಳು ಓಡಿ ಬಂದು ರಕ್ಷಿಸಿದ ವಿಡಿಯೋ ವೈರಲ್ ಆಗಿದೆ.
ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆ ರಿಕ್ಷಾ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ಕಿನ್ನಿಗೋಳಿ ರಾಮನಗರದಲ್ಲಿ ಸಂಭವಿಸಿದೆ. ಪಿಗ್ಗಿ ಕಲೆಕ್ಷನ್ ಮಾಡುತ್ತಿದ್ದ ರಾಜರತ್ನಪುರ ನಿವಾಸಿ ಚೇತನಾ (35) ಗಾಯಗೊಂಡವರು. ಮಹಿಳೆ ಟ್ಯೂಶನ್‌ಗೆ ತೆರಳಿದ್ದ ಮಗಳನ್ನು ಕರೆತರಲು ರಸ್ತೆ ದಾಟಿ ಬರುತ್ತಿದ್ದರು. ಈ ವೇಳೆ ಕಟೀಲು ಕಡೆಯಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಆಟೋ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮಗಳ ಮುಂದೆಯೇ ತಾಯಿಗೆ ಆಟೋ ಡಿಕ್ಕಿಯಾಗಿದ್ದು, ಘಟನೆ ನಡೆದ ತಕ್ಷಣ ಆಟೋವನ್ನು ಸ್ಥಳೀಯರ ನೆರವಿನಿಂದ ಎತ್ತಿ ತಾಯಿಯನ್ನು ಮೇಲಕ್ಕೆತ್ತಿದ್ದಾಳೆ.
ಘಟನೆಯಲ್ಲಿ ಆಟೋ ಚಾಲಕ, ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಬಾಲಕಿ ಧೈರ್ಯ ಹಾಗೂ ಸಮಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.
7ನೇ ತರಗತಿ ವಿದ್ಯಾರ್ಥಿನಿ ವೈಭವಿ
ಸಮೀಪದ ಟ್ಯೂಷನ್ ಸೆಂಟರ್‌ಗೆ ಹೋಗುತ್ತಿದ್ದು, ಸ್ಥಳದಲ್ಲಿದ್ದ ಯುವಕರ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ ದೃಶ್ಯಗಳೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.