Namma Metro: ಬೆಂಗಳೂರು ಟು ತಮಿಳುನಾಡಿಗೆ ನಮ್ಮ ಮೆಟ್ರೋ ಸಂಪರ್ಕ? ಸಿಡಿದೆದ್ದ ಕನ್ನಡಪರ ಸಂಘಟನೆಗಳು, ವಿರೋಧಕ್ಕೆ ಕಾರಣವೇನು?-more migrants will come to bengaluru kannada groups oppose linking namma metro to tamil nadus hosur prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Namma Metro: ಬೆಂಗಳೂರು ಟು ತಮಿಳುನಾಡಿಗೆ ನಮ್ಮ ಮೆಟ್ರೋ ಸಂಪರ್ಕ? ಸಿಡಿದೆದ್ದ ಕನ್ನಡಪರ ಸಂಘಟನೆಗಳು, ವಿರೋಧಕ್ಕೆ ಕಾರಣವೇನು?

Namma Metro: ಬೆಂಗಳೂರು ಟು ತಮಿಳುನಾಡಿಗೆ ನಮ್ಮ ಮೆಟ್ರೋ ಸಂಪರ್ಕ? ಸಿಡಿದೆದ್ದ ಕನ್ನಡಪರ ಸಂಘಟನೆಗಳು, ವಿರೋಧಕ್ಕೆ ಕಾರಣವೇನು?

Bengaluru Namma Metro: ಬೆಂಗಳೂರಿನ ಬೊಮ್ಮಸಂದ್ರದಿಂದ ಹೊಸೂರಿಗೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸುವ ಕುರಿತು ತಮಿಳುನಾಡು ಸರ್ಕಾರ ಪ್ರಸ್ತಾಪ ಮಾಡಿದೆ. ಹೀಗಾಗಿ ಇದರ ವಿರುದ್ಧ ಕನ್ನಡಪರ ಸಂಘಟನೆಗಳು ಸಿಡಿದೆದ್ದಿದ್ದಾರೆ.

ಬೆಂಗಳೂರು ಟು ತಮಿಳುನಾಡಿಗೆ ನಮ್ಮ ಮೆಟ್ರೋ ಸಂಪರ್ಕ; ಸಿಡಿದೆದ್ದ ಕನ್ನಡಪರ ಸಂಘಟನೆಗಳು
ಬೆಂಗಳೂರು ಟು ತಮಿಳುನಾಡಿಗೆ ನಮ್ಮ ಮೆಟ್ರೋ ಸಂಪರ್ಕ; ಸಿಡಿದೆದ್ದ ಕನ್ನಡಪರ ಸಂಘಟನೆಗಳು

ಬೆಂಗಳೂರು: ನಮ್ಮ ಮೆಟ್ರೋವನ್ನು ತಮಿಳುನಾಡು ಕೈಗಾರಿಕಾ ಪಟ್ಟಣ ಹೊಸೂರು ಸಂಪರ್ಕಿಸಬೇಕೆಂಬ ಪ್ರಸ್ತಾಪವು ಕರ್ನಾಟಕದಲ್ಲಿ ಹೊಸ ವಿವಾದ ಹುಟ್ಟು ಹಾಕಿದೆ. ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹೊಸೂರಿಗೆ ನಮ್ಮ ಮೆಟ್ರೋ ಸಂಪರ್ಕವಾದರೆ ಐಟಿ-ಬಿಟಿ ರಾಜಧಾನಿಗೆ ವಲಸಿಗರ ಸಂಖ್ಯೆ ದುಪ್ಪಟ್ಟಾಗುತ್ತಾರೆ ಎನ್ನುವುದೇ ಇದಕ್ಕೆ ಕಾರಣ. ಇದು ಸ್ಥಳೀಯರಿಗೆ ಸಂಕಷ್ಟ ತಂದೊಡ್ಡಲಿದೆ ಎಂಬ ಆತಂಕದ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಚೆನ್ನೈ ಮೆಟ್ರೋ ರೈಲು ಲಿಮಿಟೆಡ್, ಕರ್ನಾಟಕದ ಬೊಮ್ಮಸಂದ್ರವನ್ನು ತಮಿಳುನಾಡಿನ ಹೊಸೂರಿಗೆ ಸಂಪರ್ಕ ಕಲ್ಪಿಸುವ ಪ್ರಸ್ತಾಪ ಕರ್ನಾಟಕ ಸರ್ಕಾರದ ಮುಂದಿಟ್ಟಿದೆ. ಇದು ಸಾಧ್ಯವಾದರೆ ದಕ್ಷಿಣ ಭಾರತದಲ್ಲಿ ಮೊದಲ ಅಂತಾರಾಜ್ಯ ಮೆಟ್ರೋ ಸಂಪರ್ಕ ಆಗಲಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ತಮಿಳುನಾಡಿನಿಂದ 11 ಕಿಮೀ, ಕರ್ನಾಟಕದಿಂದ 12 ಕಿಮೀ ಸೇರಿ 23 ಕಿಲೋಮೀಟರ್ ಉದ್ದ ಒಳಗೊಂಡಿದೆ. 1 ಡಿಪೋ ಸೇರಿ 12 ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕೆ ಈ ಪ್ರಸ್ತಾಪ ಸಲ್ಲಿಸಲಾಗಿದೆ.

ಸಿಡಿದೆದ್ದ ನಾರಾಯಣ ಗೌಡ

ಆದರೆ ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಕನ್ನಡ ಪರ ಸಂಘಟನೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಈ ಕುರಿತು ಧ್ವನಿಯೆತ್ತಿದ್ದು, ನಮ್ಮ ಮೆಟ್ರೋವನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಲಿಂಕ್ ಮಾಡಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ತಮಿಳುನಾಡಿನಿಂದ ಲಕ್ಷಾಂತರ ಮಂದಿ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಅತ್ತಿಬೆಲೆ, ಎಲೆಕ್ಟ್ರಾನಿಕ್ ಸಿಟಿಯಂತಹ ಗಡಿ ಪ್ರದೇಶಗಳಲ್ಲಿ ತಮಿಳುನಾಡಿನವರು ಬಂದು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದನ್ನು ಈಗಾಗಲೇ ನೋಡುತ್ತಿದ್ದೇವೆ ಎಂದಿದ್ದಾರೆ.

ಮಾತು ಮುಂದುವರೆಸಿದ ಅವರು, ನಾವು ಮೆಟ್ರೋವನ್ನು ತಮಿಳುನಾಡಿಗೆ ಜೋಡಿಸಿದರೆ, ಹೆಚ್ಚಿನ ಜನರು ವಲಸೆ ಬರುವುದಕ್ಕೆ ದಾರಿ ಮಾಡಿಕೊಡುತ್ತದೆ. ಇದು ಕನ್ನಡಿಗರ ಜೀವನವನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತದೆ. ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಳಿ ಪ್ರಸ್ತಾಪಿಸಿದ್ದೇವೆ. ಅವರು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕರವೇ ಅಧ್ಯಕ್ಷ ಹೇಳಿದ್ದಾರೆ. ನಾವು ಕೂಡ ಈ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ ನಾರಾಯಣಗೌಡ.

ಹೊಸೂರಿಗೆ ಬಿಡೋ ಮಾತೇ ಇಲ್ಲ ಎಂದ ಹೋರಾಟಗಾರ

ತಮಿಳುನಾಡು ಪ್ರಸ್ತಾಪ ಮುಂದಿಟ್ಟರೂ ಕರ್ನಾಟಕ ಸರ್ಕಾರ ಅದರ ಅನುಮೋದನೆಗೆ ಬದ್ದವಾಗಿಲ್ಲ. ಉತ್ಪಾದನಾ ವಲಯಕ್ಕೆ ಸಂಬಂಧಿಸಿ ಹೊಸೂರಿಗೆ ಕರ್ನಾಟಕ ಹೆಚ್ಚಿನ ಮಟ್ಟದಲ್ಲಿ ಬಿಟ್ಟುಕೊಟ್ಟಿದೆ. ಇದೀಗ ಸಾಕಷ್ಟು ಕಳೆದುಕೊಂಡಿರುವ ಕರ್ನಾಟಕ ಮತ್ತೆ ವೆಚ್ಚ ಹಂಚಿಕೆಗೆ ಉತ್ಸುಕತೆ ತೋರುತ್ತಿಲ್ಲ. ಓಲಾ ಪ್ರಧಾನ ಕಚೇರಿ ಬೆಂಗಳೂರಿನಲ್ಲಿ ಇದ್ದರೂ ಅದರ ಉತ್ಪಾದನಾ ಘಟಕ ಇರುವುದು ತಮಿಗಳುನಾಡಿನ ಕೃಷ್ಣಗಿರಿಯಲ್ಲಿ. ಅದೇ ರೀತಿ ಉತ್ಫಾದನಾ ಘಟಕಗಳು ಹೊಸೂರು-ಕೃಷ್ಣಗಿರಿ ಪ್ರದೇಶಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿವೆ. ಆದರೆ ಇದರಿಂದ ಉದ್ಯೋಗದ ಪ್ರಮಾಣ ನಮ್ಮಲ್ಲಿ ಕಡಿಮೆಯಾಗುವಂತೆ ಮಾಡಿದೆ ಎನ್ನುತ್ತವೆ ಸಂಘಟನೆಗಳು.

ಐಟಿ ರಾಜಧಾನಿಯನ್ನು ಹೊಸೂರಿನೊಂದಿಗೆ ಸಂಪರ್ಕಿಸಲು ಮತ್ತು ನೆರೆಯ ರಾಜ್ಯಕ್ಕೆ ಸಹಾಯ ಮಾಡಲು ಅದರ ಸಂಪನ್ಮೂಲಗಳನ್ನು ವ್ಯಯಿಸಬಾರದು ಎಂದು ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿರುವ ಕನ್ನಡಿಗರ ರಕ್ಷಣೆಯೇ ನಮ್ಮ ಪ್ರಾಥಮಿಕ ಗುರಿಯಾಗಿದೆ. ಕರ್ನಾಟಕದ ರಾಮನಗರ ಅಥವಾ ಬಿಡದಿ ಬದಲು ಹೊಸೂರಿಗೆ ಮೆಟ್ರೋವನ್ನು ವಿಸ್ತರಿಸುವ ಅವಶ್ಯಕತೆ ಏನಿದೆ? ತಮಿಳುನಾಡು ತನ್ನ ಜನರು ಮತ್ತು ತನ್ನ ರಾಜ್ಯದ ಬಗ್ಗೆ ತುಂಬಾ ಸ್ಪಷ್ಟವಾಗಿದೆ. ಅದೇ ರೀತಿ, ಕರ್ನಾಟಕವು ಇರಬೇಕು. ಹೊಸೂರಿಗೆ ಸಂಪರ್ಕ ಕಲ್ಪಿಸಲು ಅವಕಾಶ ಕೊಡುವ ಮಾತೇ ಇಲ್ಲ ಎಂದು ಕನ್ನಡ ಪರ ಹೋರಾಟಗಾರ ಸಜಿತ್ ಎಚ್ಚರಿಸಿದ್ದಾರೆ.

mysore-dasara_Entry_Point