ಹಂಪ ನಾಗರಾಜಯ್ಯ: ಮೈಸೂರು ದಸರಾ ಉದ್ಘಾಟನೆ ಗೌರವಕ್ಕೆ ಪಾತ್ರರಾದ ಹಂಪನಾ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು
ಕನ್ನಡ ಸುದ್ದಿ  /  ಕರ್ನಾಟಕ  /  ಹಂಪ ನಾಗರಾಜಯ್ಯ: ಮೈಸೂರು ದಸರಾ ಉದ್ಘಾಟನೆ ಗೌರವಕ್ಕೆ ಪಾತ್ರರಾದ ಹಂಪನಾ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು

ಹಂಪ ನಾಗರಾಜಯ್ಯ: ಮೈಸೂರು ದಸರಾ ಉದ್ಘಾಟನೆ ಗೌರವಕ್ಕೆ ಪಾತ್ರರಾದ ಹಂಪನಾ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು

ಮೈಸೂರು ದಸರಾ: ಕನ್ನಡ ಸಾಹಿತ್ಯ ಕ್ಷೇತ್ರ, ಅಧ್ಯಾಪನ, ಸಂಶೋಧನಾ ಕ್ಷೇತ್ರದಲ್ಲಿ ಅಪರಿಮಿತ ಅನುಭವ ಇರುವ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರನ್ನು ಈ ಬಾರಿ ದಸರಾ ಉದ್ಘಾಟನೆಗೆ ಆಹ್ವಾನಿಸಲಾಗುತ್ತಿದೆ.

ಹಿರಿಯ ಸಾಹಿತಿ ಡಾ ಹಂಪ ನಾಗರಾಜಯ್ಯ ಮೈಸೂರು ದಸರಾ ಉದ್ಘಾಟಿಸಲಿದ್ದಾರೆ.
ಹಿರಿಯ ಸಾಹಿತಿ ಡಾ ಹಂಪ ನಾಗರಾಜಯ್ಯ ಮೈಸೂರು ದಸರಾ ಉದ್ಘಾಟಿಸಲಿದ್ದಾರೆ.

ಮೈಸೂರು ದಸರಾವನ್ನು ವಿವಿಧ ಕ್ಷೇತ್ರದವರಿಂದ ಉದ್ಘಾಟಿಸುವ ಪರಂಪರೆ ಮೂರೂವರೆ ದಶಕದಿಂದ ನಡೆದಿದೆ. ಈ ಬಾರಿ ಹಿರಿಯ ಸಾಹಿತಿ ಹಾಗೂ ಭಾಷಾ ಸಂಶೋಧಕ, ಸಂಘಟಕ, ಕನ್ನಡ ಸಾಹಿತಿ ಪರಿಷತ್‌ ಅಧ್ಯಕ್ಷರೂ ಆಗಿದ್ದ ಹಂಪನಾಗರಾಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಹಿಂದಿನ ವರ್ಷ ನಿರ್ದೇಶಕ ಹಂಸಲೇಖ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಬಾರಿ ಹಂಪನಾ ಹೆಸರು ಅಂತಿಮಗೊಂಡಿದ್ದು, ಮೈಸೂರಿನಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಈ ಹೆಸರನ್ನು ಪ್ರಕಟಿಸಿದ್ದಾರೆ. ಸದ್ಯವೇ ಅವರಿಗೆ ಆಹ್ವಾನ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಹಂಪನಾ ಅವರ ಪರಿಚಯದ ಮಾಹಿತಿ ಇಲ್ಲಿದೆ.

  • ಹಂಪನಾ ಎಂದೇ ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಹಂಪನಾ ಅವರ ಪೂರ್ಣ ಹೆಸರು ಹಂಪಸಂದ್ರ ಪದ್ಮನಾಭಯ್ಯ ನಾಗರಾಜಯ್ಯ
  • ಜನನ 1936ರ ಅಕ್ಟೋಬರ್‌ 07 . ಈಗಿನ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಹಂಪಸಂದ್ರ ಅವ ಹುಟ್ಟೂರು. ತಂದೆ ತಂದೆ ಪದ್ಮನಾಭಯ್ಯ ಮತ್ತು ತಾಯಿ ಪದ್ಮಾವತಮ್ಮ.
  • ಓದಿದ್ದು ಗೌರಿಬಿದನೂರು, ಮಧುಗಿರಿಯಲ್ಲಿ. ನಂತರ ತುಮಕೂರಿನಲ್ಲಿ ಇಂಟರ್ ಮೀಡಿಯೆಟ್. ಮೈಸೂರು ಮಹಾರಾಜ ಕಾಲೇಜನಲ್ಲಿ ಪದವಿ. ಮೈಸೂರಲ್ಲೇ ಎಂಎ ವ್ಯಾಸಂಗ ಪೂರ್ಣ.
  • ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭವಾಗಿದ್ದೂ ಕೂಡ ಮೈಸೂರಿನಲ್ಲಿಯೇ. ಮಹಾರಾಣಿ ಕಾಲೇಜಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ.
  • ಇದಾದ ಬಳಿಕ ದಾವಣಗೆರೆ, ಮಂಡ್ಯ,ಶಿವಮೊಗ್ಗ ಸರಕಾರಿ ಕಾಲೇಜುಗಳಲ್ಲೂ ಸೇವೆ. ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವಾಪಾಸಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಎರಡು ದಶಕಕ್ಕೂ ಅಧಿಕ ಕಾಲ ಸೇವೆ.
  • ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಅಪರಿಮಿತ ಕೆಲಸ. ಕನ್ನಡದ ಪ್ರಮುಖ ಭಾಷಾ ವಿಜ್ಞಾನಿ, ಸಂಶೋಧಕರೂ ಹೌದು. ಗ್ರಂಥ ಸಂಪಾದಕ, ಉತ್ತಮ ವಾಗ್ಮಿ ಆಗಿಹಲವು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ ಹಿರಿಮೆ.ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ‍್ಯದರ್ಶಿ (1966-74), ಅಧ್ಯಕ್ಷ (1978-86)ರಾಗಿಯೂ ಸೇವೆ ಸಲ್ಲಿಸಿ ನಾಡು.ನುಡಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ ಹಂಪನಾ.
  • ಭಾರತದ ಭಾಷಾ ಸಮಸ್ಯೆ, ದ್ರಾವಿಡ ಭಾಷಾ ವಿಜ್ಞಾನ, ಭಾಷಾ ವಿಜ್ಞಾನಿಗಳು, ಭರತೇಶ ವೈಭವ, ಪಂಪಭಾರತ ಸಂಗ್ರಹ, ಧನ್ಯಕುಮಾರ ಚರಿತ್ರೆ, ನೇಮಿನಾಥ ಪುರಾಣ, ಶಾಂತಿ ಪುರಾಣ. ಕಾದಂಬರಿ-ನಾಗಶ್ರೀ, ಸವ್ಯಸಾಚಿ ಪಂಪ. ಜಾನಪದ-ಕರ್ನಾಟಕದ ಜಾತ್ರೆಗಳು, ಲಂಡನ್ ವಿಶ್ವವಿದ್ಯಾಲಯದಿಂದ ಬಾಹುಬಲಿ ಅಂಡ್ ಬಾದಾಮಿ ಚಾಲುಕ್ಯಾಸ್ ಕೃತಿ ಬಿಡುಗಡೆ. ಜಾನಪದ ಕಲಾವಿದರ ಸೂಚಿ ಪ್ರಕಟ.
  • ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಆಚಾರ್ಯ ಸುಮತಿ ಸಾಗರ ಶ್ರುತ ಸಂವರ್ಧನ ಪುರಸ್ಕಾರ, ತಮ್ಮಣರಾವ ಅಮ್ಮಿನಭಾವಿ ಸ್ಮಾರಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಂಬಾ ಜೋಶಿ ಪ್ರಶಸ್ತಿಗಳು ಸಂದಿವೆ.
  • ಪಚ್ಚೆತೆನೆ, ಸಂಕೃತಿ ಸೇರಿ ಐದು ಅಭಿನಂದನಾ ಗ್ರಂಥಗಳನ್ನು ಅವರ ಶಿಷ್ಯರು, ಅಭಿಮಾನಿಗಳು ಹೊರ ತಂದಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ‘ಜೀವನ’ ಪತ್ರಿಕೆ ಸಂಪಾದಕರಾಗಿಯೂ ಹಂಪನಾಗರಾಜಯ್ಯ ಅವರು ಕೆಲಸ ಮಾಡಿದ್ದಾರೆ.
  • ಹಿರಿಯ ಸಾಹಿತಿಯಾಗಿದ್ದ ಕಮಲಾ ಹಂಪನಾ ಅವರು ಹಂಪನಾ ಅವರ ಪತ್ನಿ. ಕೆಲ ದಿನಗಳ ಹಿಂದೆಯಷ್ಟೇ ಕಾಲವಾದರು. ಮಗಳು ಆರತಿ ದೂರದರ್ಶನ ಅಧಿಕಾರಿ.

 

Whats_app_banner