Leopard: ಬೆಂಗಳೂರಿನ ಜಿಗಣಿಯಲ್ಲಿ ಕಾಣಿಸಿಕೊಂಡ ಚಿರತೆ; ಆತಂಕದಲ್ಲಿ ಜನ, ಮನೆಯಿಂದ ಹೊರಬರಲು ಪರದಾಟ
ಕನ್ನಡ ಸುದ್ದಿ  /  ಕರ್ನಾಟಕ  /  Leopard: ಬೆಂಗಳೂರಿನ ಜಿಗಣಿಯಲ್ಲಿ ಕಾಣಿಸಿಕೊಂಡ ಚಿರತೆ; ಆತಂಕದಲ್ಲಿ ಜನ, ಮನೆಯಿಂದ ಹೊರಬರಲು ಪರದಾಟ

Leopard: ಬೆಂಗಳೂರಿನ ಜಿಗಣಿಯಲ್ಲಿ ಕಾಣಿಸಿಕೊಂಡ ಚಿರತೆ; ಆತಂಕದಲ್ಲಿ ಜನ, ಮನೆಯಿಂದ ಹೊರಬರಲು ಪರದಾಟ

Leopard: ಬೆಂಗಳೂರು ಹೊರವಲಯದ ಜಿಗಣಿಯ ಕ್ಯಾಲಸನಹಳ್ಳಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಜನರು ಭಯಭೀತರಾಗಿದ್ದಾರೆ. ಮನೆಯಿಂದ ಹೊರಬರಲು ಪರದಾಡುತ್ತಿದ್ದಾರೆ.

ಬೆಂಗಳೂರಿನ ಜಿಗಣಿಯಲ್ಲಿ ಕಾಣಿಸಿಕೊಂಡ ಚಿರತೆ (REPRESENTATIVE PHOTO)
ಬೆಂಗಳೂರಿನ ಜಿಗಣಿಯಲ್ಲಿ ಕಾಣಿಸಿಕೊಂಡ ಚಿರತೆ (REPRESENTATIVE PHOTO) (HT_PRINT)

ಬೆಂಗಳೂರು: ನಗರದ ಹೊರವಲಯ ಜಿಗಣಿಯಲ್ಲಿರುವ ಕ್ಯಾಲಸನಹಳ್ಳಿಯ ಬಿಆರ್‌ಎಸ್ ಲೇಔಟ್‌ನಲ್ಲಿ ಸೆಪ್ಟೆಂಬರ್​ 1ರ ಭಾನುವಾರ ಚಿರತೆ ಕಾಣಿಸಿಕೊಂಡಿದ್ದು, ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಹೀಗಾಗಿ ಮನೆ ಬಿಟ್ಟು ಹೊರಬರಲು ಹೆದರುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಚಿರತೆ ತಮ್ಮ ಪ್ರದೇಶದಲ್ಲಿ ಅಡ್ಡಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಭಾನುವಾರ ನಸುಕಿನಲ್ಲಿ ನಾಯಿಗಳು ಪದೇ ಪದೇ ಬೊಗಳಲು ಪ್ರಾರಂಭಿಸಿದ್ದವು. ಮತ್ತೆ ಸಿಸಿಟಿವಿಗಳನ್ನು ಪರಿಚಯಿಸದ ನಂತರ ಚಿರತೆ ಓಡಾಡಿರುವುದು ಗೊತ್ತಾಗಿದೆ.

ಹೀಗಾಗಿ, ಆತಂಕಕ್ಕೀಡಾದ ನಿವಾಸಿಗಳು ಅರಣ್ಯ ಇಲಾಖೆಯು ಚಿರತೆ ಹಿಡಿದು ಆತಂಕವನ್ನು ದೂರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಜಿಗಣಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲಿದೆ. ಈ ಪ್ರದೇಶದಲ್ಲಿ ಆಗಾಗ್ಗೆ ಚಿರತೆಗಳು ಪ್ರತ್ಯಕ್ಷವಾಗುತ್ತಿರುತ್ತವೆ.

ಯಾರೂ ಮನೆ ಬಿಟ್ಟು ಹೊರ ಬರುತ್ತಿಲ್ಲ!

ಸಿಸಿಟಿವಿ ದೃಶ್ಯಗಳಲ್ಲಿ ಚಿರತೆ ಬಿಂದಾಸ್ ಓಡಾಟ ಕಂಡು ಜನರು ಭಯಬೀತರಾಗಿದ್ದು, ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು, ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಈ ಪ್ರದೇಶದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಚಿರತೆ, ಸಾಕು ಪ್ರಾಣಿಗಳನ್ನು ಬಲಿಪಡೆದಿದ್ದೂ ಇದೆ. ಆದಷ್ಟು ಬೇಗ ವಶಕ್ಕೆ ಪಡೆಯಲು ಒತ್ತಾಯಿಸಿದ್ದಾರೆ.

Whats_app_banner