ಸಿದ್ದರಾಮಯ್ಯ ಸಾಮಾಜಿಕ ಮೀಡಿಯಾ ಖರ್ಚು ಬಹಿರಂಗ; ತಿಂಗಳಿಗೆ 54 ಲಕ್ಷ ವ್ಯಯ, ಹಿಂದಿನ ಸಿಎಂಗಳಿಗೆ ಹೋಲಿಸಿದರೆ ತೀರಾ ಕಡಿಮೆ-karnataka chief minister siddaramaiahs office spends 54 lakh per month on social media reveals rti reply prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಸಿದ್ದರಾಮಯ್ಯ ಸಾಮಾಜಿಕ ಮೀಡಿಯಾ ಖರ್ಚು ಬಹಿರಂಗ; ತಿಂಗಳಿಗೆ 54 ಲಕ್ಷ ವ್ಯಯ, ಹಿಂದಿನ ಸಿಎಂಗಳಿಗೆ ಹೋಲಿಸಿದರೆ ತೀರಾ ಕಡಿಮೆ

ಸಿದ್ದರಾಮಯ್ಯ ಸಾಮಾಜಿಕ ಮೀಡಿಯಾ ಖರ್ಚು ಬಹಿರಂಗ; ತಿಂಗಳಿಗೆ 54 ಲಕ್ಷ ವ್ಯಯ, ಹಿಂದಿನ ಸಿಎಂಗಳಿಗೆ ಹೋಲಿಸಿದರೆ ತೀರಾ ಕಡಿಮೆ

Chief Minister Siddaramaiah: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳ ನಿರ್ವಹಣೆಗೆ ಪ್ರತಿ ತಿಂಗಳಿಗೆ ಸುಮಾರು 54 ಲಕ್ಷ ಖರ್ಚು ಮಾಡುತ್ತಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಕಚೇರಿ ಮತ್ತು ವೈಯಕ್ತಿಕ ಎರಡೂ ಸಾಮಾಜಿಕ ಖಾತೆಗಳನ್ನು ನಿರ್ವಹಿಸಲು ಪ್ರತಿ ತಿಂಗಳಿಗೆ ಖರ್ಚು ಮಾಡುತ್ತಿರುವುದೆಷ್ಟು? ಆ ಮೊತ್ತ ಎಷ್ಟೆಂದು ಕೇಳಿದರೆ ನೀವು ಕೂಡ ದಂಗಾಗುತ್ತೀರಿ. ಹೌದು, ತಮ್ಮ ಸಾಮಾಜಿಕ ಖಾತೆಗಳ ನಿರ್ವಹಣೆಗೆ ವ್ಯಯಿಸುತ್ತಿರುವುದು ಬರೋಬ್ಬರಿ 54 ಲಕ್ಷವಂತೆ! ಈ ಕುರಿತು ಆರ್​​ಟಿಐ ಮೂಲಕ ಮಾಹಿತಿ ಬಹಿರಂಗಗೊಂಡಿದೆ.

ಸರ್ಕಾರಕ್ಕೆ ಸಂಬಂಧಿಸಿ ಸಿಎಂ ಆಫ್ ಕರ್ನಾಟಕ ಹಾಗೂ ವೈಯಕ್ತಿಕ ಖಾತೆ ಸಿದ್ದರಾಮಯ್ಯ ಹೆಸರಿನಲ್ಲಿ ಫೇಸ್​ಬುಕ್ ಮತ್ತು ಎಕ್ಸ್​​ನಲ್ಲಿ ಖಾತೆಗಳಿವೆ. ಈ ಖಾತೆಗಳ ನಿರ್ವಹಣೆಗೆ ಪ್ರತಿ ತಿಂಗಳಿಗೂ 54 ಲಕ್ಷ ಖರ್ಚು ಮಾಡುತ್ತಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಮಾರಲಿಂಗಗೌಡ ಮಾಲಿ ಪಾಟೀಲ್ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಬಿಜೆಪಿ, ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ಈ ಕುರಿತು ಮಾತನಾಡಿದ ಮಾರಲಿಂಗಗೌಡ, ಹಣದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಕಾಂಗ್ರೆಸ್ ಸರ್ಕಾರವು ವಿವಿಧ ಇಲಾಖೆಗಳ ಗುತ್ತಿಗೆದಾರರಿಗೆ ಕೆಲಸಕ್ಕೆ ಹಣ ನೀಡಲು ಹೆಣಗಾಡುತ್ತಿದೆ. ಆದರೆ ಈ ಸಮಯದಲ್ಲಿ ವೆಚ್ಚವು ಭಾರೀ ಮೊತ್ತವನ್ನು ಸಾಮಾಜಿಕ ಜಾಲತಾಣಕ್ಕೆ ವ್ಯಯಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಮೂಲಗಳಿಂದ ಮಾಹಿತಿ ಪಡೆದ ಕಾರಣ ನಾನು ಮನವಿ ಸಲ್ಲಿಸಿದ್ದೆ ಎಂದು ಹೇಳಿದ್ದಾರೆ.

ಹಿಂದಿನ ಸಿಎಂಗಳಿಗೆ ಹೋಲಿಸಿದರೆ ತೀರಾ ಕಡಿಮೆ

ಸಿದ್ದರಾಮಯ್ಯ ಅವರಿಗೆ ಹೋಲಿಸಿದರೆ ಈ ಹಿಂದಿನ ಸಿಎಂಗಳು ಖರ್ಚು ಮಾಡಿದ್ದು ತಿಂಗಳಿಗೆ 2 ಕೋಟಿಗಿಂತ ಹೆಚ್ಚು. ಆದರೆ ಸಿದ್ದರಾಮಯ್ಯ ಅವರ ಮೊತ್ತ ಈ ಹಿಂದಿನವರಿಗೆ ಹೋಲಿಸಿದರೆ 54 ಲಕ್ಷ ತೀರಾ ಕಡಿಮೆ ಎಂದು ಸಿಎಂಒ ಅಧಿಕಾರಿಗಳು ದೃಢಪಡಿಸಿದ್ದಾರೆ. ಸರ್ಕಾರಿ ಘಟಕ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ & ಅಡ್ವರ್ಟೈಸಿಂಗ್ ಲಿಮಿಟೆಡ್ (ಎಂಸಿಎ) ಮಾರಲಿಂಗಗೌಡಗೆ ಈ ಮಾಹಿತಿ ನೀಡಿದೆ.

ಪಾಟೀಲ್‌ಗೆ ನೀಡಿದ ಉತ್ತರದ ಪ್ರಕಾರ, ಸಿಎಂಒ ಕಳೆದ ವರ್ಷ ಅಕ್ಟೋಬರ್ 25 ರಿಂದ 2024ರ ಮಾರ್ಚ್​ವರೆಗೂ ಸುಮಾರು 3 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಸಿಎಂಒ ಸುಮಾರು 53.9 ಲಕ್ಷ ರೂಪಾಯಿ ಪಾವತಿಸಿದೆ ಎಂದು ವಿವರಗಳು ತೋರಿಸಿವೆ. 18% ಜಿಎಸ್​ಟಿ. ಸುಮಾರು 35 ಮಂದಿಯನ್ನು ಒಳಗೊಂಡ ತಂಡವು ಸಿದ್ದರಾಮಯ್ಯ ಅವರ ತಂಡವನ್ನು ನಿರ್ವಹಿಸಲಿದೆ. ಈ ಮೊತ್ತವನ್ನು ಖಾತೆಗಳನ್ನು ನಿರ್ವಹಿಸುವ ದಿ ಪಾಲಿಸಿ ಫ್ರಂಟ್ ಕಂಪನಿಗೆ ಪಾವತಿಸಲಾಗಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇಂದು ಸಿಎಂ ವಿಚಾರಣೆ

ಸಿದ್ದರಾಮಯ್ಯ ಅವರ ಮೂಡಾ ಹಗರಣಕ್ಕೆ ಸಂಬಂಧಿಸಿ ಇಂದು (ಸೆಪ್ಟೆಂಬರ್ 2) ವಿಚಾರಣೆ ನಡೆಯಲಿದೆ. ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಯಲಿದ್ದು, ಸಿದ್ದು ಭವಿಷ್ಯ ನಿರ್ಧಾರವಾಗಲಿದೆ. ಮೂಡಾ ಸ್ಕ್ಯಾಮ್​ಗೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಹೋರಾಟಗಾರ ಟಿಜೆ ಅಬ್ರಹಾಂ ರಾಜ್ಯಪಾಲರಿಗೆ ದೂರು ನೀಡಿದ್ದರು. ಅದನ್ನಾಧರಿಸಿ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್​ಗೆ ಆದೇಶ ನೀಡಿದ್ದರು.  ಅದರಂತೆ ಗವರ್ನರ್​ ನೀಡಿದ್ದ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿರುವುದನ್ನು ಪ್ರಶ್ನಿಸಿ ಸಿಎಂ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಇಂದು ಹೈಕೋರ್ಟ್​ ನಡೆಸಲಿದೆ.