ರಾಹುಲ್ ಗಾಂಧಿ-ಸೋನಿಯಾ ಗಾಂಧಿ ಟೀಕಿಸಿದ್ದ ಪತ್ರಕರ್ತನ ವಿರುದ್ಧ ಬಿತ್ತು ಕೇಸ್; ಮತ್ತೊಂದು ಪ್ರಕರಣದಲ್ಲಿ 1.6 ಕೆಜಿ ಚಿನ್ನ ವಶ-complaint has been filed against bangladesh journalist who called rahul gandhi sonia gandhi an agent of pakistan prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ರಾಹುಲ್ ಗಾಂಧಿ-ಸೋನಿಯಾ ಗಾಂಧಿ ಟೀಕಿಸಿದ್ದ ಪತ್ರಕರ್ತನ ವಿರುದ್ಧ ಬಿತ್ತು ಕೇಸ್; ಮತ್ತೊಂದು ಪ್ರಕರಣದಲ್ಲಿ 1.6 ಕೆಜಿ ಚಿನ್ನ ವಶ

ರಾಹುಲ್ ಗಾಂಧಿ-ಸೋನಿಯಾ ಗಾಂಧಿ ಟೀಕಿಸಿದ್ದ ಪತ್ರಕರ್ತನ ವಿರುದ್ಧ ಬಿತ್ತು ಕೇಸ್; ಮತ್ತೊಂದು ಪ್ರಕರಣದಲ್ಲಿ 1.6 ಕೆಜಿ ಚಿನ್ನ ವಶ

Bengaluru Crime News: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಒಂದು ವಾರದಲ್ಲಿ ಕಳ್ಳಸಾಗಾಣೆ ಮಾಡುತ್ತಿದ್ದ 3.2 ಕೋಟಿ ರೂ.ಮೌಲ್ಯದ ವಸ್ತುಗಳ ವಶಪಡಿಸಿಕೊಳ್ಳಲಾಗಿದೆ. ರಾಹುಲ್‌ ಗಾಂಧೀ, ಸೋನಿಯಾ ಗಾಂಧಿ ಟೀಕಿಸಿದ್ದ ಬಾಂಗ್ಲಾದೇಶದ ಪತ್ರಕರ್ತನ ವಿರುದ್ಧ ಎಫ್​ಐಆರ್‌ ದಾಖಲಾಗಿದೆ. (ವರದಿ: ಎಚ್ ಮಾರುತಿ)

ರಾಹುಲ್ ಗಾಂಧಿ-ಸೋನಿಯಾ ಗಾಂಧಿ ಟೀಕಿಸಿದ್ದ ಪತ್ರಕರ್ತನ ವಿರುದ್ಧ ಬಿತ್ತು ಕೇಸ್
ರಾಹುಲ್ ಗಾಂಧಿ-ಸೋನಿಯಾ ಗಾಂಧಿ ಟೀಕಿಸಿದ್ದ ಪತ್ರಕರ್ತನ ವಿರುದ್ಧ ಬಿತ್ತು ಕೇಸ್

ಬೆಂಗಳೂರು: ಆಗಸ್ಟ್‌ 23ರಿಂದ ಆಗಸ್ಟ್‌ 30ರವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 3.2 ಕೋಟಿ ರೂಪಾಯಿ ಮೌಲ್ಯದ ಸಿಗರೇಟ್‌ ಮತ್ತು ಎಲೆಕ್ಟ್ರಾನಿಕ್ಸ್‌ ಗ್ಯಾಜೆಟ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವಸ್ತುಗಳನ್ನು ಕಳ್ಳಸಾಗಾಣೆ ಮಾಡುತ್ತಿದ್ದ 31 ಪ್ರಯಾಣಿಕರನ್ನು ವಿಚಾರಣೆಗೊಳಪಡಿಸಲಾಗಿದೆ.

ಥಾಯ್ಲೆಂಡ್‌, ಮಲೇಷ್ಯಾ, ಸಿಂಗಾಪುರ ಮತ್ತು ಅರಬ್‌ ದೇಶಗಳಿಂದ ಬೆಂಗಳೂರಿಗೆ ವಿವಿಧ ವಿಮಾನಗಳಲ್ಲಿ ಆಗಮಿಸಿದ 31 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿ 3.2 ಕೋಟಿ ರೂಪಾಯಿ ಮೌಲ್ಯದ 5,13,400 ಇ-ಸಿಗರೇಟು, 43 ಲ್ಯಾಪ್‌ ಟಾಪ್​​ಗಳು ಮತ್ತು 16 ಐ ಫೋನ್​​​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್‌ ಇಲಾಖೆ ತಿಳಿಸಿದೆ.

ಆಗಸ್ಟ್‌ 31 ರಂದು ಕೊಲೊಂಬೋದಿಂದ ಬೆಂಗಳೂರಿಗೆ ವಿಮಾನದಲ್ಲಿ ಆಗಮಿಸಿದ ನೇಪಾಳಿ ಪ್ರಜೆಗಳನ್ನು ಬಂಧಿಸಿ, ಅವರಿಂದ 1670 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಈ ನೇಪಾಳಿ ಪ್ರಜೆಗಳು ಚಿನ್ನವನ್ನು ಪೇಸ್ಟ್‌ ರೂಪದಲ್ಲಿ ಗುದನಾಳದಲ್ಲಿ ಇರಿಸಿಕೊಂಡು ಕಳ್ಳ ಸಾಗಾಣೆ ಮಾಡಲು ಪ್ರಯತ್ನಿಸಿದ್ದರು. ಈ ಚಿನ್ನದ ಬೆಲೆ 1.20 ಕೋಟಿ ರೂಪಾಯಿ.

ರಾಹುಲ್‌, ಸೋನಿಯಾ ಟೀಕೆ; ಪತ್ರಕರ್ತನ ವಿರುದ್ಧ ಪ್ರಕರಣ

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಹರಡಿದ್ದ ಆರೋಪದ ಮೇಲೆ ಬಾಂಗ್ಲಾದೇಶದ ಪತ್ರಕರ್ತನೊಬ್ಬನ ವಿರುದ್ಧ ಬೆಂಗಳೂರಿನಲ್ಲಿ ಎಫ್​ಐಆರ್‌ ದಾಖಲಿಸಲಾಗಿದೆ.‌ ಈ ಪತ್ರಕರ್ತ ತಮ್ಮ ಎಕ್ಸ್‌ ಖಾತೆಯಲ್ಲಿ ಸೋನಿಯಾ ಗಾಂಧಿ ಅವರು ಪಾಕಿಸ್ತಾನದ ಐಎಸ್​ಐ ಏಜೆಂಟ್‌ ಎಂದು ಬರೆದುಕೊಂಡಿದ್ದರು.

ಬಾಂಗ್ಲಾದೇಶ ಪತ್ರಕರ್ತನ ಹೆಸರು ಸಲಾಹುದ್ದೀನ್‌ ಶೋಯೆಬ್‌ ಚೌದರಿ. ಕಾಂಗ್ರೆಸ್‌ ಪಕ್ಷದ ಕಾನೂನು ಘಟಕದ ಪದಾಧಿಕಾರಿ ಜಿ ಶ್ರೀನಿವಾಸ್‌ ಅವರು, ರಾಹುಲ್‌ ಗಾಂಧಿ-ಸೋನಿಯಾ ಗಾಂಧಿ ವಿರುದ್ಧ ಬಾಂಗ್ಲಾ ಪತ್ರಕರ್ತ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಶೋಯೆಬ್‌ ಬಾಂಗ್ಲಾದೇಶದ ಬ್ಲಿಟ್ಜ್‌ ಸಂಪಾದಕ ಎಂದು ತಮ್ಮನ್ನು ಎಕ್ಸ್‌ ಖಾತೆಯಲ್ಲಿ ಪರಿಚಯಿಸಿಕೊಂಡಿದ್ದಾರೆ. 2 ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವ ಉದ್ಧೇಶದಿಂದ ಶೋಯೆಬ್‌ ಭಾರತೀಯ ಪೌರತ್ವ ಪಡೆದಿರುವ ಸೋನಿಯಾರನ್ನು ಪಾಕಿಸ್ತಾನದ ಏಜೆಂಟ್‌ ಎಂದು ಟೀಕಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.