ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live November 13, 2024 : ಕರ್ನಾಟಕದಲ್ಲಿ ಪ್ರತಿ ವರ್ಷ 86000ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣ ವರದಿ; ಶ್ವಾಸಕೋಶ, ಸ್ತನ ಕ್ಯಾನ್ಸರ್ ಪ್ರಮಾಣವೇ ಹೆಚ್ಚು
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Wed, 13 Nov 202407:30 AM IST
ಕರ್ನಾಟಕ News Live: ಕರ್ನಾಟಕದಲ್ಲಿ ಪ್ರತಿ ವರ್ಷ 86000ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣ ವರದಿ; ಶ್ವಾಸಕೋಶ, ಸ್ತನ ಕ್ಯಾನ್ಸರ್ ಪ್ರಮಾಣವೇ ಹೆಚ್ಚು
- ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್ ಪ್ರಕರಣ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ ಸಾವಿರಾರು ಪ್ರಕರಣ ವರದಿಯಾಗುತ್ತಿವೆ. ರಾಜ್ಯದಲ್ಲಿ ಅಂದಾಜು 86,563 ಹೊಸ ಪ್ರಕರಣಗಳು ವರದಿಯಾಗುತ್ತವೆ ಎಂದು ಅಂಕಿ-ಅಂಶಗಳು ತಿಳಿಸಿವೆ. ಇದರಲ್ಲಿ ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್ ಪ್ರಮಾಣವೇ ಹೆಚ್ಚು.
Wed, 13 Nov 202406:39 AM IST
ಕರ್ನಾಟಕ News Live: ಒಂಟಿಮನೆಗೆ ಸಶಸ್ತ್ರಧಾರಿ ನಕ್ಸಲೀಯರ ಭೇಟಿ, ಮಲೆನಾಡಿನಲ್ಲಿ ಮತ್ತೆ ಚುರುಕಾದ ಪೊಲೀಸರು
- Chikkmagalur: ನಕ್ಸಲ್ ಚಟುವಟಿಕೆಗಳಲ್ಲಿ ಇತ್ತೀಚೆಗೆ ಕೇಳಿಬರುತ್ತಿರುವ ಪ್ರಮುಖ ಹೆಸರುಗಳಲ್ಲಿ ಮೋಸ್ಟ್ ವಾಂಟೆಡ್ ನಕ್ಸಲೀಯರು ಎಂದೇ ಹೇಳಲಾಗಿರುವ ಮುಂಡಗಾರು ಲತಾ, ಜಯಣ್ಣ ಮತ್ತಿತರ ತಂಡ ಮಲೆನಾಡಿನಲ್ಲಿ ಸಕ್ರಿಯವಾಗಿ ಶಸ್ತ್ರಸಜ್ಜಿತವಾಗಿ ಓಡಾಡುತ್ತಿದ್ದಾರೆ. ನಕ್ಸಲ್ ತುಂಗಾ ತಂಡದ ನಾಯಕತ್ವವನ್ನು ಮುಂಡಗಾರು ಲತಾ ವಹಿಸಿಕೊಂಡಿದ್ದಾರೆ ಎನ್ನಲಾಗಿದೆ.
Wed, 13 Nov 202406:30 AM IST
ಕರ್ನಾಟಕ News Live: ನಮ್ಮ ಮೆಟ್ರೋ ಪ್ರಯಾಣಿಕರ ಬಹು ದೊಡ್ಡ ಸಮಸ್ಯೆ ‘ಪಾರ್ಕಿಂಗ್’; ಇದಕ್ಕಿಲ್ಲವೇ ಪರಿಹಾರ, ಸವಾರರು ಏನು ಮಾಡಬಹುದು?
- Namma Metro Parking: ಬೆಂಗಳೂರಿನ ಅಷ್ಟೂ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ದ್ವಿಚಕ್ರ ವಾಹನಗಳಿಗೆ ಸ್ಥಳಾವಕಾಶದ ಕೊರತೆ ಇರುವಾಗ ಕಾರುಗಳಿಗೆ ಪಾರ್ಕಿಂಗ್ ಜಾಗ ಎಲ್ಲಿದ್ದಿತು? ಪ್ರತಿದಿನ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. (ವರದಿ-ಎಚ್.ಮಾರುತಿ)
Wed, 13 Nov 202403:10 AM IST
ಕರ್ನಾಟಕ News Live: Childrens day 2024: ಮಕ್ಕಳ ಸಮಗ್ರ ಪ್ರಗತಿಗಾಗಿ ಕರ್ನಾಟಕ ಸರ್ಕಾರದಿಂದ ಸಿಗುವ ಸೌಲಭ್ಯಗಳೇನು, ಪಡೆಯುವುದು ಹೇಗೆ
- Children Day 2024: ಮಕ್ಕಳ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಮಕ್ಕಳಿಗೆ ವಿಶೇಷ ಆರ್ಥಿಕ ನೆರವು, ಬೆಂಬಲ ಕೊಡುವ ಯೋಜನೆ ರೂಪಿಸಿದೆ. ಇಂತಹ ಯೋಜನೆಗಳ ವಿವರ ಇಲ್ಲಿದೆ.
Wed, 13 Nov 202402:30 AM IST
ಕರ್ನಾಟಕ News Live: ವಿಜಯಪುರ ಐತಿಹಾಸಿಕ ಗೋಲಗುಮ್ಮಟ ಜಿಲ್ಲೆಯಷ್ಟೇ ಅಲ್ಲ, ಅತೀ ಹೆಚ್ಚು ಮಕ್ಕಳ ಸಾಹಿತಿಗಳನ್ನು ಸೃಷ್ಟಿಸಿದ ತವರೂರು ಹೌದು
- Childrens day: ವಿಜಯಪುರ ಹಲವು ವಿಷಯಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆ.ಮಕ್ಕಳ ಸಾಹಿತ್ಯದ ವಿಚಾರ ಬಂದಾಗ ಸಮೃದ್ದ ಸಾಹಿತ್ಯ ಹಾಗೂ ಸಾಹಿತಿಗಳನ್ನು ನೀಡಿದ ಹಿರಿಮೆ ವಿಜಯಪುರ ಜಿಲ್ಲೆಗೆ ಇದೆ. ಮಕ್ಕಳ ದಿನದ ಸಂದರ್ಭದಲ್ಲಿ ಇಂತಹ ಸಾಹಿತಿಗಳ ಕಿರು ಪರಿಚಯ ಇಲ್ಲಿದೆ.
Wed, 13 Nov 202401:40 AM IST
ಕರ್ನಾಟಕ News Live: Shiggaon Assembly Election: ಶಿಗ್ಗಾಂವಿ-ಸವಣೂರು ಕ್ಷೇತ್ರದ ಉಪಚುನಾವಣೆಗೆ ಇಂದು ಮತದಾನ, ಮತದಾರರು ಎಷ್ಟಿದ್ದಾರೆ
- ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭ ಕ್ಷೇತ್ರದ ಉಪಚುನಾವಣೆ ಮತದಾನಕ್ಕೆ ಸಿದ್ದತೆಗಳು ನಡೆದಿವೆ. ಎಂಟು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು ಅವರ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ
Wed, 13 Nov 202401:28 AM IST
ಕರ್ನಾಟಕ News Live: ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಆಗ್ತಿದೆ ಬೆಂಗಳೂರಿನ ಬಾಡಿಗೆ ಮನೆಗಳ ಕಥೆ; 40 ಸಾವಿರ ಬಾಡಿಗೆ, 5 ಲಕ್ಷ ಅಡ್ವಾನ್ಸ್, ಹೀಗಿದೆ ಸ್ಥಿತಿ
- ಮಹಾನಗರಿ ಬೆಂಗಳೂರು ಹಲವು ವಿಷಯಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗುತ್ತದೆ. ಇದೀಗ ನಗರದಲ್ಲಿ ಗಗನಕ್ಕೇರಿರುವ ಬಾಡಿಗೆ ಮನೆಗಳ ಕಥೆಯೂ ಭಾರಿ ಚರ್ಚೆ ಹುಟ್ಟುಹಾಕಿದೆ. ಬೆಂಗಳೂರು ಬಾಡಿಗೆ ಮನೆ ಕೇಳಿ ಶಾಕ್ ಆಗಿರುವ ದೆಹಲಿ ಮೂಲದ ಉದ್ಯೋಗಿಯೊಬ್ಬರು ಎಕ್ಸ್‌ನಲ್ಲಿ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. ಅವರ ಪೋಸ್ಟ್‌ಗೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Wed, 13 Nov 202401:25 AM IST
ಕರ್ನಾಟಕ News Live: Sandur Assembly Elections: ಗಣಿ ಧೂಳು, ಹಸಿರ ತಾಣ ಸಂಡೂರಿನಲ್ಲಿ ಚುನಾವಣೆ ಗದ್ದಲ, ಇಂದು ಮತದಾನ, ಹೇಗಿದೆ ಮಹಾರಾಜರ ಊರಿನ ತಯಾರಿ
- ಸಂಡೂರು ವಿಧಾನಸಭಾ ಕ್ಷೇತ್ರ ಮಹಾರಾಜರ ಮಹತ್ವದ ಊರು. ಹಸಿರು ತಾಣಗಳ ಊರಿನಲ್ಲಿ ಈಗ ಉಪಚುನಾವಣೆ ಸಮರ. ಬುಧವಾರ ಮತದಾನಕ್ಕಾಗಿ ಸಂಡೂರು ತಾಲ್ಲೂಕಿನಲ್ಲಿ ಸಿದ್ದತೆಗಳು ಪೂರ್ಣಗೊಂಡಿವೆ.
Wed, 13 Nov 202401:20 AM IST
ಕರ್ನಾಟಕ News Live: Channapatna Assembly Elections: ಬೊಂಬೆಯೂರು ಚನ್ನಪಟ್ಟಣದಲ್ಲಿ ಮತದಾನದ ರಂಗು, ಹೇಗಿದೆ ಚುನಾವಣೆಗೆ ಸಿದ್ದತೆ
- ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವೂ ಈ ಬಾರಿಯೂ ಹೈವೋಲ್ಟೇಜ್ ಮಹತ್ವವನ್ನೇ ಪಡೆದಿದೆ. ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಹಣಾಹಣಿಯೇ ಏರ್ಪಟ್ಟಿದೆ. ಇಂತಹ ಸನ್ನಿವೇಶದ ನಡುವೆ ಮತದಾನ ಬುಧವಾರ ನಡೆಯಲಿದೆ.
Wed, 13 Nov 202401:10 AM IST
ಕರ್ನಾಟಕ News Live: Karnataka Rains: ಮೈಸೂರು, ಮಲೆನಾಡು ಕರಾವಳಿ ಭಾಗದಲ್ಲಿ ಇಂದು ಭಾರೀ ಮಳೆ ಮುನ್ಸೂಚನೆ; ಇನ್ನೂ 5 ದಿನ ಉಂಟು ಮಳೆ
- ಕರ್ನಾಟಕದಲ್ಲಿ ಬುಧವಾರ ಮಾತ್ರವಲ್ಲದೇ ಮುಂದಿನ ಭಾನುವಾರದವರೆಗೂ ಮಲೆನಾಡು, ಹಳೆಮೈಸೂರು, ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಬಹುದು ಎನ್ನುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
Wed, 13 Nov 202401:09 AM IST
ಕರ್ನಾಟಕ News Live: ಸಂಪಿಗೆ ಚಿತ್ರಮಂದಿರ ಮಾಲೀಕರ ಮನೆಯಲ್ಲಿ ಕಳ್ಳತನ: ಆರೋಪಿಗಳ ಬಂಧನ; 1.12 ಕೋಟಿ ರೂ ಮೌಲ್ಯದ ಚಿನ್ನಾಭರಣ ವಶ
- Bengaluru Crime News: ಸಂಪಿಗೆ ಚಿತ್ರಮಂದಿರ ಮಾಲೀಕರ ಮನೆಯಲ್ಲಿ ಕಳ್ಳತನವಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕಳ್ಳರಿಂದ 1.12 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. (ವರದಿ-ಎಚ್. ಮಾರುತಿ)
Wed, 13 Nov 202412:42 AM IST
ಕರ್ನಾಟಕ News Live: ಕೆಎಸ್‌ಆರ್‌ಟಿಸಿಯಲ್ಲಿ ಕ್ಯಾಶ್‌ಲೆಸ್ ಆಗಿ ಓಡಾಡಿ: ಯುಪಿಐಗೆ ಮಣೆ ಹಾಕಿದ ಕರ್ನಾಟಕ ಸಾರಿಗೆ, ಚಿಲ್ಲರೆ ತಲೆಬಿಸಿ ಇನ್ನು ಉಪಶಮನ
- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಬಸ್‌ಗಳಲ್ಲಿ ನಗದು ರಹಿತ ಪಾವತಿ ಆಯ್ಕೆಗಳನ್ನು ಆರಂಭಿಸಿದ್ದು, ಪ್ರಯಾಣಿಕರಿಗೆ ಇಡೀ ಕೆಎಸ್‌ಆರ್‌ಟಿಸಿ ನೆಟ್‌ವರ್ಕ್‌ನಲ್ಲಿ ಯುಪಿಐ ಮೂಲಕ ಪಾವತಿಸಲು ಅವಕಾಶ ಕಲ್ಪಿಸಿದೆ. (ವರದಿ-ಎಚ್. ಮಾರುತಿ)