Donkey Milk: ತುಮಕೂರಿನಲ್ಲಿ ಕತ್ತೆ ಹಾಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​; ಒಂದು ಒಳಲೆ​ ಹಾಲು ಬೆಲೆ ಕೇಳಿದ್ರೆ, ತಲೆ ತಿರುಗೋದು ಗ್ಯಾರಂಟಿ!
ಕನ್ನಡ ಸುದ್ದಿ  /  ಕರ್ನಾಟಕ  /  Donkey Milk: ತುಮಕೂರಿನಲ್ಲಿ ಕತ್ತೆ ಹಾಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​; ಒಂದು ಒಳಲೆ​ ಹಾಲು ಬೆಲೆ ಕೇಳಿದ್ರೆ, ತಲೆ ತಿರುಗೋದು ಗ್ಯಾರಂಟಿ!

Donkey Milk: ತುಮಕೂರಿನಲ್ಲಿ ಕತ್ತೆ ಹಾಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​; ಒಂದು ಒಳಲೆ​ ಹಾಲು ಬೆಲೆ ಕೇಳಿದ್ರೆ, ತಲೆ ತಿರುಗೋದು ಗ್ಯಾರಂಟಿ!

ತುಮಕೂರು ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲೂ ಕತ್ತೆ ಮಾಲೀಕರು ಹಾಲು ಮಾರಾಟ ಮಾಡುತ್ತಿದ್ದಾರೆ. ಬೇಸಿಗೆ ಕಾಲವಾದ ಕಾರಣ ಮಕ್ಕಳಿಗೆ ಜ್ವರ, ಕೆಮ್ಮು, ನೆಗಡಿ ಕಾಣುಸಿಕೊಳ್ಳುವುದು ಸಹಜ. ಇದಕ್ಕೆ ಪರಿಹಾರ ಕತ್ತೆ ಹಾಲೇ ರಾಮಬಾಣ ಎನ್ನಲಾಗಿದೆ.

ತುಮಕೂರಿನಲ್ಲಿ ಕತ್ತೆ ಹಾಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ತುಮಕೂರಿನಲ್ಲಿ ಕತ್ತೆ ಹಾಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​

ತುಮಕೂರು: ತಾಯಿಯ ಎದೆ ಹಾಲು ಮಕ್ಕಳ ಪಾಲಿಗೆ ಹೇಗೆ ಅಮೃತವೋ, ಹಸುವಿನ ಹಾಲು ಉತ್ತಮ ಆರೋಗ್ಯಕ್ಕೆ ಒಳ್ಳೆಯದೋ, ಅದೇ ರೀತಿ ಕತ್ತೆ ಹಾಲು ಕೂಡ ಮಕ್ಕಳ ಪಾಲಿಗೆ ಅಷ್ಟೇ ಶ್ರೇಷ್ಠ.

ಕತ್ತೆ ಹಾಲು ಬೇಕಾ ಕತ್ತೆ ಹಾಲು.. ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಮಾಯ.. ಕತ್ತೆ ಹಾಲು.. ಕತ್ತೆ ಹಾಲು ಎಂದು ಕೂಗಿದ್ದೇ ತಡ ಮಕ್ಕಳಿರುವ ಮನೆಯಿಂದ ತಾಯಂದಿರು ಓಡೋಡಿ ಬಂದು ಹಾಲು ಖರೀದಿಸುತ್ತಿರುವ ದೃಶ್ಯ ತುಮಕೂರಲ್ಲಿ ಕಂಡು ಬರುತ್ತಿದೆ.

ತುಮಕೂರು ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲೂ ಕತ್ತೆ ಮಾಲೀಕರು ಹಾಲು ಮಾರಾಟ ಮಾಡುತ್ತಿದ್ದಾರೆ. ಬೇಸಿಗೆ ಕಾಲವಾದ ಕಾರಣ ಮಕ್ಕಳಿಗೆ ಜ್ವರ, ಕೆಮ್ಮು, ನೆಗಡಿ ಕಾಣುಸಿಕೊಳ್ಳುವುದು ಸಹಜ. ಇದಕ್ಕೆ ಪರಿಹಾರ ಕತ್ತೆ ಹಾಲೇ ರಾಮಬಾಣ.

ಈ ಹಿನ್ನೆಲೆಯಲ್ಲಿ ಕತ್ತೆ ಮಾಲೀಕರು ಕತ್ತೆಗಳ ಸಮೇತ ಬಂದು ಹಾಲು ಮಾರಾಟ ಮಾಡುತ್ತಿದ್ದಾರೆ. ಒಂದು ವಾರದಿಂದ ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಕತ್ತೆ ಹಾಲು ಮಾರಾಟ ಜೋರಾಗಿದೆ.

ಒಳಲೆಗೆ 50 ರೂಪಾಯಿ

ಇನ್ನು ಕತ್ತೆ ಹಾಲು ಲೀಟರ್​​ ಬೆಲೆ ಕೇಳಿದರೆ ತಲೆ ತಿರುಗುತ್ತದೆ. ಅರ್ಧ ಲೀಟರ್‌ನಷ್ಟು ಸಿಗುವುದಿಲ್ಲ. ಗ್ರಾಹಕರ ಎದುರೇ ಕತ್ತೆಯ ಹಾಲು ಕರೆದು ಕೊಡಲಾಗುತ್ತದೆ. ಒಂದು ವಳಲೆ ರೂಪದಲ್ಲಿ ಹಾಲು ಮಾರಲಾಗುತ್ತದೆ. ಒಂದು ಒಳಲೆಗೆ 50 ರೂಪಾಯಿ ನಿಗದಿ ಮಾಡಲಾಗಿದೆ. ಆದರೆ ರಿಯಾಯಿತಿ ಮೂಲಕ 3 ವಳಲೆಗೆ 100 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಕತ್ತೆಗಳಿಂದ ಹೆಚ್ಚು ಹಾಲು ಉತ್ಪತ್ತಿ ಆಗುವುದಿಲ್ಲ. ಆದ್ದರಿಂದ ಲಭ್ಯವಾಗುವ ಹಾಲನ್ನೇ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಒಂದು ಕತ್ತೆಯು ದಿನವೊಂದಕ್ಕೆ ಸುಮಾರು 300 ಎಂಎಲ್​​ನಿಂದ ಅರ್ಧ ಲೀಟರ್ ಹಾಲು ನೀಡುತ್ತದೆ.

ಎರಡು ಕತ್ತೆಗಳನ್ನು ವಾಹನದಲ್ಲಿ ತಂದು ಹಳ್ಳಿ ಹಳ್ಳಿ ತಿರುಗಿ ಹಾಲು ಮಾರಲಾಗುತ್ತಿದೆ. ಹೆಚ್ಚೆಂದರೆ ದಿನಕ್ಕೆ 800 ರಿಂದ 1000 ಸಂಪಾದಿಸುತ್ತೇವೆ. ಸದಾ ಇದನ್ನೇ ನಂಬುವುದೂ ಕಷ್ಟ. ಹೀಗಾಗಿ ಕೃಷಿ ಕೆಲಸಗಳಿಗೆ ಕೂಲಿ ಹೋಗಿ ಜೀವನ ನಿರ್ವಹಣೆ ಮಾಡುತ್ತೇವೆ. ಕೃಷಿ ಕಸುಬು ಇಲ್ಲದಿದ್ದಾಗ ಪಟ್ಟಣಗಳಿಗೆ ತೆರಳಿ ಕತ್ತೆ ಹಾಲು ಮಾರುತ್ತೇವೆ ಎನ್ನುತ್ತಾರೆ ಕತ್ತೆಯ ಮಾಲೀಕ ಕೋಲಾರದ ಪಡಿಯಪ್ಪ.

ಚಿಕ್ಕನಾಯಕನಹಳ್ಳಿ ತಾಲೂಕಲ್ಲಿ ಭರ್ಜರಿ ಮಾರಾಟ

ಚಿಕ್ಕನಾಯಕನಹಳ್ಳಿ ತಾಲೂಕಲ್ಲಿ ಕತ್ತೆಗಳ ಮಾಲೀಕರು ದಂಡು ದಂಡಾಗಿ ಬಂದು ಹಾಲು ಮಾರುತ್ತಿದ್ದಾರೆ. ಒದೊಂದು ತಂಡ ಒಂದೊಂದು ಕಡೆ ತೆರಳಿ ಬೆಳಗಿನಿಂದ ಸಂಜೆವರೆಗೆ ಮಾರುತ್ತಿದ್ದಾರೆ. ತಾಲೂಕಿನ ಕೆಸಿ.ಪಾಳ್ಯ, ಲಿಂಗಪ್ಪನಪಾಳ್ಯ, ಕಂಪನಹಳ್ಳಿ, ಗೌಡಗೆರೆ ಗ್ರಾಮಗಳಲ್ಲಿ ಸಂಚರಿಸಿ ಮಾರಾಟ ಮಾಡಿದರು.

ಕೆಲವರು ಸ್ಥಳದಲ್ಲೇ ಖರೀದಿಸಿ ತಮ್ಮ ಮಕ್ಕಳಿಗೆ ಕತ್ತೆ ಹಾಲು ಕುಡಿಸಿದರು. ಅಲ್ಲದೆ ಗುಬ್ಬಿ, ತಿಪಟೂರು, ತುರುವೇಕೆರೆ, ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ ತಾಲೂಕುಗಳಲ್ಲೂ ಕತ್ತೆ ಹಾಲುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಪಕ್ಕದ ಆಂಧ್ರ ಪ್ರದೇಶ ಹಾಗೂ ಕೋಲಾರ ಜಿಲ್ಲೆಗಳಿಂದಲೂ ಕತ್ತೆಗಳೊಂದಿಗೆ ಮಾಲೀಕರು ಬಂದಿದ್ದರು.

ಬೇಸಿಗೆ ವೇಳೆ ಮಕ್ಕಳು ಆರೋಗ್ಯ ಕೆಡುವುದು ಹೆಚ್ಚು. ಅಲ್ಲದೆ ಚಳಿಗಾಲದಲ್ಲಿ ಮಕ್ಕಳಿಗೆ ಶೀತವಾಗುತ್ತದೆ. ಈ 2 ಸಮಯದಲ್ಲೂ ನಾವು ಊರೂರು ಸುತ್ತಿ ಕತ್ತೆ ಹಾಲು ಮಾರುತ್ತೇವೆ. ಹೀಗೆ ಬಹಳ ಹಿಂದಿನಿಂದಲೂ ಮಾಡುತ್ತಿದ್ದೇವೆ ಎನ್ನುತ್ತಾರೆ ಆಂಧ್ರದಿಂದ ಬಂದಿದ್ದ ಕತ್ತೆ ಮಾಲೀಕ ವೆಂಕಟಪ್ಪ.

ಕತ್ತೆ ನಿಕೃಷ್ಟವಲ್ಲ, ಶ್ರೇಷ್ಠ

ಕತ್ತೆ ಹಾಲು ಆರೋಗ್ಯಕ್ಕೆ ಶ್ರೇಷ್ಠ ಎಂಬ ಹೇಳಿಕೆ, ನಂಬಿಕೆಗಳಿಂದಾಗಿ ಜನರು ಕತ್ತೆ ಹಾಲು ಕುಡಿಯುತ್ತಿದ್ದಾರೆ. ಕತ್ತೆಯನ್ನು ನಿಕೃಷ್ಟ ಎನ್ನುತ್ತಿದ್ದವರು, ಈಗ ಅದರ ಹಾಲಿಗಾಗಿಯೇ ಆಸಕ್ತಿ ವಹಿಸಿರುವುದು ನಿಜಕ್ಕೂ ಅಚ್ಚರಿಯೇ ಸರಿ.

ಲೀಟರ್ ಬೆಲೆ ಎಷ್ಟು?

ಕತ್ತೆ ಹಾಲಿಗಿರುವ ಬೇಡಿಕೆಯಿಂದ ಅರ ಬೆಲೆ ಗಗನಕ್ಕೇರಿದೆ. 5 ಮಿಲಿ ಹಾಲಿನ ಬೆಲೆ 50 ರೂಪಾಯಿ ಆಗಿದ್ದು, ಪ್ರತೀ ಲೀಟರ್‌ಗೆ 5 ರಿಂದ ಸಾವಿರ ರೂಪಾಯಿಗೂ ಹೆಚ್ಚಾಗಿದೆ. ಕೆಲವೊಂದು ಕಡೆ ಇದಕ್ಕಿಂತಲೂ ಹೆಚ್ಚಿದೆ. ಒಟ್ಟಿನಲ್ಲಿ ಕತ್ತೆಗೊಂದು ಕಾಲ ಬರುತ್ತೆ ಎಂದು ಹೇಳಿರುವುದು ಇದಕ್ಕೆ ಇರಬಹುದು.

Whats_app_banner