ಕನ್ನಡ ಸುದ್ದಿ  /  ಕರ್ನಾಟಕ  /  Tumkur Result: ತುಮಕೂರು ಕ್ಷೇತ್ರದಲ್ಲಿ ಗೆದ್ದ ಸೋಮಣ್ಣ, ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರಿಗೆ ಸೋಲು

Tumkur Result: ತುಮಕೂರು ಕ್ಷೇತ್ರದಲ್ಲಿ ಗೆದ್ದ ಸೋಮಣ್ಣ, ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರಿಗೆ ಸೋಲು

ತುಮಕೂರು ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದಿದೆ. ಕಾಂಗ್ರೆಸ್‌ಗೆ ಮರಳಿದ್ದ ಮುದ್ದಹನುಮೇಗೌಡ ಇಲ್ಲಿ ಸೋತಿದ್ದಾರೆ. ಗೋವಿಂದರಾಜನಗರದಿಂದ ಮೈಸೂರು ಚಾಮರಾಜನಗರ ವಿಧಾನಸಭೆ ಚುನಾವಣೆಯಲ್ಲಿ ವಲಸೆ ಹೋಗಿ ಸೋತಿದ್ದ ಮಾಜಿ ಸಚಿವ ವಿ.ಸೋಮಣ್ಣ ( V somanna) ತುಮಕೂರಲ್ಲೂ 175594 ಮತಗಳ ಭಾರೀ ಅಂತರದಿಂದ ಗೆದ್ದಿದ್ದಾರೆ.

ತುಮಕೂರಲ್ಲಿ ಗೆದ್ದ ಮುದ್ದಹನುಮೇಗೌಡ
ತುಮಕೂರಲ್ಲಿ ಗೆದ್ದ ಮುದ್ದಹನುಮೇಗೌಡ

ತುಮಕೂರು: ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಮುದ್ದ ಹನುಮೇಗೌಡ ಪಕ್ಷಕ್ಕೆ ಮರಳಿದ ಎರಡೇ ತಿಂಗಳಲ್ಲಿ ಸೋಲು ಅನುಭವಿಸಿದ್ದಾರೆ. ಬೆಂಗಳೂರಿನಿಂದ ತುಮಕೂರಿಗೆ ಬಂದ ವಿ.ಸೋಮಣ್ಣ ಭಾರೀ ಅಂತರದ ಜಯಗಳಿಸಿ ಕಳೆದ ವಿಧಾನಸಭೆ ಚುನಾವಣೆಯ ಸೋಲಿನ ಕಹಿ ಮರೆಯುವಂತೆ ಆಗಿದೆ. ಈ ಮೂಲಕ ತುಮಕೂರು ರಾಜಕಾರಣದಲ್ಲಿ ಬದಲಾವಣೆಯ ಲೆಕ್ಕಾಚಾರ ಇದ್ದೇ ಇದೆ ಎನ್ನುವುದನ್ನು ಮತದಾರ ಸಾರಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ರಾಜಕಾರಣದಲ್ಲಿ ಮಾಜಿ ಪ್ರಧಾನಿಯನ್ನೇ ಸೋಲಿಸಿದ್ದ ಇಲ್ಲಿ ರಾಜಕಾರಣ, ಈ ಬಾರಿ ಬಿಜೆಪಿ ಜೆಡಿಎಸ್‌ ಮೈತ್ರಿಯಲ್ಲಿ ವಿ.ಸೋಮಣ್ಣ ಅವರನ್ನು ಗೆಲ್ಲಿಸಿ ಬದಲಾವಣೆಗೆ ನಾಂದಿ ಹಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತುಮಕೂರು ಬರೀ ತೆಂಗಿಗೆ ಮಾತ್ರವಲ್ಲ, ರಾಜಕಾರಣಕ್ಕೆ ಹೆಸರುವಾಸಿಯಾದ ಕ್ಷೇತ್ರ. ಇಲ್ಲಿ ಇತ್ತೀಚಿನ ಮೂರು ದಶಕದಲ್ಲಿ ಒಮ್ಮೆ ಗೆದ್ದವರನ್ನು ಮತ್ತೆ ಗೆಲ್ಲಿಸಿದ್ದು ಕಡಿಮೆ. ಹಿಂದಿನ ಮೂರ್ನಾಲ್ಕು ಚುನಾವಣೆಗಳಿಂದಲೂ ಇದು ಆಗುತ್ತಿದೆ. ಹದಿನೈದು ವರ್ಷದ ಹಿಂದೆ ಬಿಜೆಪಿ ಹಿರಿಯರಾಗಿದ್ದ ಎಸ್‌.ಮಲ್ಲಿಕಾರ್ಜುನಯ್ಯ ಅವರನ್ನು ಬದಲಿಸಿ ಕಾಂಗ್ರೆಸ್ ನಲ್ಲಿದ್ದ ಜಿ.ಎಸ್.ಬಸವರಾಜು ಅವರಿಗೆ ಟಿಕೆಟ್‌ ನೀಡಿತ್ತು ಅವರು ಗೆದ್ದಿದ್ದರು. ಈ ಬಾರಿಯೂ ಅಭ್ಯರ್ಥಿಯನ್ನು ಬದಲಿಸಿದ್ದು ಪ್ರಯೋಜನವಾಗಿದೆ. ಇಲ್ಲಿನ ಬಿಜೆಪಿಯಲ್ಲಿನ ಅಸಮಾಧಾನ, ಒಗ್ಗಟ್ಟಿನ ಕೊರತೆಯಿಂದ ಸೋಮಣ್ಣ ಅವರ ಸೋಲಾಗಬಹುದು ಎನ್ನುವ ಲೆಕ್ಕಾಚಾರಗಳಿದ್ದರೂ ಮುದ್ದಹನುಮೇಗೌಡ ಅವರನ್ನು ಸೋಮಣ್ಣ ಸೋಲಿಸಿದ್ದಾರೆ. ಪರಮೇಶ್ವರ್‌ ಸಹಿತ ಘಟಾನುಘಟಿ ನಾಯಕರಿದ್ದರೂ ಕಾಂಗ್ರೆಸ್‌ ಸೋತಿದೆ. ಹಿಂದೊಮ್ಮೆ ಬೆಂಗಳೂರಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ಸೋಮಣ್ಣ ಆಕಾಂಕ್ಷೆ ಈಡೇರಿದೆ.

ತುಮಕೂರು ಲೋಕಸಭೆ ಎಲೆಕ್ಷನ್ ಕ್ವಿಕ್‌ ಲುಕ್‌

ಲೋಕಸಭಾ ಕ್ಷೇತ್ರದ ಹೆಸರು: ತುಮಕೂರು

ಅಭ್ಯರ್ಥಿಯ ಹೆಸರು ಮತ್ತು ಪಡೆದ ಮತಗಳು

ಮುದ್ದ ಹನುಮೇಗೌಡ (ಕಾಂಗ್ರೆಸ್‌):545352 ಮತಗಳು

ವಿ.ಸೋಮಣ್ಣ (ಬಿಜೆಪಿ): 720946 ಮತಗಳು

ತುಮಕೂರು ಕ್ಷೇತ್ರದಲ್ಲಿ ಗೆಲುವು ಪಡೆದ ಸೋಮಣ್ಣ ಯಾರು

ವಿ.ಸೋಮಣ್ಣ ಮೂಲತಃ ಕನಕಪುರ ತಾಲ್ಲೂಕಿನವರು.1950 ರ ಜುಲೈ 20 ರಂದು ಜನಿಸಿದ ಸೋಮಣ್ಣ ಬೆಂಗಳೂರು ನಗರ ಪಾಲಿಕೆ ಮೂಲಕ ರಾಜಕಾರಣ ಆರಂಭಿಸಿದವರು. ಬೆಂಗಳೂರು ವಿಜಯನಗರ, ಗೋವಿಂದರಾಜನಗರ ಕ್ಷೇತ್ರದಿಂದ ಸತತವಾಗಿ ಶಾಸಕರಾದವರು. ಸೋತ ನಂತರ ಅವರನ್ನು ವಿಧಾನಪರಿಷತ್‌ಗೆ ನೇಮಕ ಮಾಡಲಾಗಿತ್ತು. ಮೂರು ಬಾರಿ ಸಚಿವರಾದವರು. ಜನತಾದಳ, ಕಾಂಗ್ರೆಸ್‌ ನಂತರ ಬಿಜೆಪಿಯಲ್ಲಿದ್ದಾರೆ. ಕಳೆದ ಬಾರಿ ಮೈಸೂರಿನ ವರುಣಾ, ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಎರಡೂ ಕಡೆ ಸೋತಿದ್ದರು. ಈಗ ಸಂಸದರಾಗಿದ್ದಾರೆ.

ಚುನಾವಣಾ ಕಣ: ತುಮಕೂರು ಲೋಕಸಭಾ ಕ್ಷೇತ್ರ

ಕಲ್ಪತರು ನಾಡು ತುಮಕೂರು ಸಿದ್ದಗಂಗಾ ಕ್ಷೇತ್ರದಿಂದಲೂ ಜನಪ್ರಿಯ. ರಾಜಕಾರಣಕ್ಕೂ ಹೆಸರುವಾಸಿ. ಇಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಮೂರು ಪಕ್ಷಗಳಿಗೂ ಮತದಾರ ಮಣೆ ಹಾಕುತ್ತಾ ಬಂದಿದ್ದಾನೆ. ತುಮಕೂರು ಲೋಕಸಭಾ ಇತಿಹಾಸ ಗಮನಿಸಿದರೆ ಹೆಚ್ಚು ಬಾರಿ ಗೆದ್ದವರು ಹಾಲಿ ಬಿಜೆಪಿ ಸದಸ್ಯ ಜಿ.ಎಸ್.‌ಬಸವರಾಜು. ಅವರು ಹಿಂದೆ ಕಾಂಗ್ರೆಸ್‌ ನಲ್ಲಿದ್ದುಈಗ ಬಿಜೆಪಿ ಸೇರಿ ಸಂಸದರು. ಅವರ ಪುತ್ರ ಜ್ಯೋತಿ ಗಣೇಶ್‌ ತುಮಕೂರು ಶಾಸಕ. ಎಸ್.ಮಲ್ಲಿಕಾರ್ಜುನಯ್ಯ ಇಲ್ಲಿಂದಲೇ ಗೆದ್ದು ಸಂಸತ್ತಿನ ಉಪಸಭಾಧ್ಯಕ್ಷರೂ ಆಗಿದ್ದರು. ಜನತಾದಳದಿಂದ ಭಾಸ್ಕರಪ್ಪ ಕೂಡ ಗೆದ್ದಿದ್ದರು. ಈ ಬಾರಿ ಜಿ.ಎಸ್.ಬಸವರಾಜು ಅವರು ಸೋಮಣ್ಣ ಅವರಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಬಿಜೆಪಿ ಅಭ್ಯರ್ಥಿಯಾದರು. ಹಿಂದೆ ಗೆದ್ದಿದ್ದ ಮುದ್ದಹನುಮೇಗೌಡರಿಗೆ ಮತ್ತೊಂದು ಅವಕಾಶ ದೊರೆಯಿತು. ತುಮಕೂರು ನಗರ ಹಾಗೂ ಗ್ರಾಮೀಣ, ಚಿಕ್ಕನಾಯಕಹಳ್ಳಿ,ಗುಬ್ಬಿ, ಮಧುಗಿರಿ, ಕೊರಟಗೆರೆ, ತಿಪಟೂರು, ತುರುವೇಕೆರೆ ಕ್ಷೇತ್ರಗಳಲ್ಲಿ ನಾಲ್ಕು ಕಡೆ ಎನ್‌ಡಿಎ ಹಾಗೂ ನಾಲ್ಕು ಕಡೆ ಕಾಂಗ್ರೆಸ್‌ ಶಾಸಕರು ಇದ್ದಾರೆ.

(Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.)

ಟಿ20 ವರ್ಲ್ಡ್‌ಕಪ್ 2024