Pumpkin Seeds Health Benefits: 'ಕುಂಬಳಕಾಯಿ ಕಳ್ಳ'ನಿಗೂ ಗೊತ್ತಿರಬೇಕು ಅದರ ಬೀಜದ ಪ್ರಯೋಜನ: ಜನಹಿತಕ್ಕಾಗಿ ಜಾರಿ..
ಎಲ್ಲಾ ತರಕಾರಿಗಳಲ್ಲಿ ಇರುವಂತೆ ಕುಂಬಳಕಾಯಿಯಲ್ಲೂ ಅನೇಕ ಪೋಷಕಾಂಶಗಳಿವೆ. ಕುಂಬಳಕಾಯಿಯಲ್ಲಿ ಮೆಗ್ನಿಶಿಯಂ, ಕಬ್ಬಿಣಾಂಶ ಮತ್ತು ನಾರಿನಾಂಶ ಅಧಿಕವಾಗಿದೆ. ಆದರೆ ಕೇವಲ ಕುಂಬಳಕಾಯಿ ಮಾತ್ರವಲ್ಲದೇ, ಅದರ ಬೀಜಗಳು ಆರೋಗ್ಯದ ದೃಷ್ಟಿಯಿಂದ ನಮಗೆ ಪ್ರಯೋಜನಕಾರಿವಾಗಿವೆ. ಹಾಗಿದ್ದಲ್ಲಿ ಕುಂಬಳಕಾಯಿ ಬೀಜಗಳಿಂದಾಗುವ ಆರೋಗ್ಯಕರ ಪ್ರಯೋಜನಗಳೇನು ಎಂಬುದನ್ನು ನಾವು ತಿಳಿದುಕೊಳ್ಳೋಣ.
ಬೆಂಗಳೂರು: ಕುಂಬಳಕಾಯಿ ಎಂದರೆ ಕೆಲವರು ಮೂಗು ಮುರಿಯುತ್ತಾರೆ. ಮತ್ತೆ ಕೆಲವರು ಆಹಾ..! ಎಂದುಕೊಂಡು ತಟ್ಟೆ ಖಾಲಿ ಮಾಡುತ್ತಾರೆ. ಕುಂಬಳಕಾಯಿ ಕೆಲವರಿಗೆ ಇಷ್ಟವಾದರೆ, ಮತ್ತೆ ಕೆಲವರಿಗೆ ಕಷ್ಟ. ಆದರೆ ಎಲ್ಲಾ ತರಕಾರಿಗಳಲ್ಲಿ ಇರುವಂತೆ ಕುಂಬಳಕಾಯಿಯಲ್ಲೂ ಅನೇಕ ಪೋಷಕಾಂಶಗಳಿವೆ. ಕುಂಬಳಕಾಯಿಯಲ್ಲಿ ಮೆಗ್ನಿಶಿಯಂ, ಕಬ್ಬಿಣಾಂಶ ಮತ್ತು ನಾರಿನಾಂಶ ಅಧಿಕವಾಗಿದೆ.
ಆದರೆ ಕೇವಲ ಕುಂಬಳಕಾಯಿ ಮಾತ್ರವಲ್ಲದೇ, ಅದರ ಬೀಜಗಳು ಆರೋಗ್ಯದ ದೃಷ್ಟಿಯಿಂದ ನಮಗೆ ಪ್ರಯೋಜನಕಾರಿವಾಗಿವೆ. ಹಾಗಿದ್ದಲ್ಲಿ ಕುಂಬಳಕಾಯಿ ಬೀಜಗಳಿಂದಾಗುವ ಆರೋಗ್ಯಕರ ಪ್ರಯೋಜನಗಳೇನು ಎಂಬುದನ್ನು ನಾವು ತಿಳಿದುಕೊಳ್ಳೋಣ.
ಕುಂಬಳಕಾಯಿ ಬೀಜದಲ್ಲಿ ಉರಿಯೂತ ಶಮನಕಾರಿ ಗುಣಗಳಿದ್ದು, ಇದು ಸಂಧಿವಾತದ ನೋವು ಕಡಿಮೆ ಮಾಡುವುದು. ಗಂಟು ನೋವು ಕಡಿಮೆ ಮಾಡಲು ಇದು ಒಳ್ಳೆಯ ಮನೆಮದ್ದು ಎಂಬುದು ಹಲವು ಸಂಶೋಧನೆಗಳಿಂದ ಸಾಬೀತಾಗಿದೆ.
ಪುರುಷರ ಫಲವತ್ತತೆ ಸಮಸ್ಯೆಗಳನ್ನು ಕಡಿಮೆ ಮಾಡಲು ಸತು ತುಂಬಾ ಲಾಭಕಾರಿ. ಕುಂಬಳಕಾಯಿ ಬೀಜದಲ್ಲಿ ಕುಂಬಳಕಾಯಿ ಬೀಜದಲ್ಲಿ ಅಧಿಕ ಮಟ್ಟದ ಸತುವಿನ ಅಂಶವಿದ್ದು, ಇದನ್ನು ಸೇವನೆ ಮಾಡಿವುದರಿಂದ ವೀರ್ಯದ ಗುಣಮಟ್ಟವನ್ನು ಕೂಡ ಹೆಚ್ಚಿಸಬಹುದು. ಇದರಲ್ಲಿರುವ ವಿವಿಧ ರೀತಿಯ ಆ್ಯಂಟಿಆಕ್ಸಿಡೆಂಟ್‌ಗಳು ಟೆಸ್ಟೋಸ್ಟೆರಾನ್ ಮಟ್ಟ ಸುಧಾರಣೆ ಮಾಡುವುದು. ಇವೆಲ್ಲಾ ಸೇರಿದಾಗ ಸಂತಾನೋತ್ಪತ್ತಿ ಕ್ರಿಯೆಯು ಉತ್ತಮವಾಗುವುದು.
ಈ ಬೀಜದಲ್ಲಿ ಅಧಿಕ ಮಟ್ಟದ ಆ್ಯಂಟಿಆಕ್ಸಿಡೆಂಟ್ ಮತ್ತು ಫೈಥೋಕೆಮಿಕಲ್ ಇದ್ದು, ಪ್ರತಿರೋಧಕ ಶಕ್ತಿ ವೃದ್ಧಿಸುವಲ್ಲಿ ಇದು ಪ್ರಯೋಜನಕಾರಿಯಾಗಿದೆ. ಅದೇ ರೀತಿ ಬೊಜ್ಜು ದೇಹವನ್ನು ಕರಗಿಸಲು ಬಯಸುವವರು ಕುಂಬಳಕಾಯಿ ಬೀಜ ಬಳಕೆ ಮಾಡಿದರೆ ಉತ್ತಮ. ಈ ಬೀಜದಲ್ಲಿ ಅತ್ಯಧಿಕ ಪ್ರಮಾಣದ ಪೋಷಕಾಂಶಗಳಿದ್ದು, ಇದು ಹೊಟ್ಟೆಯನ್ನು ದೀರ್ಘಕಾಲ ತುಂಬಿರುವಂತೆ ಮಾಡುತ್ತದೆ.
ಇಷ್ಟೇ ಅಲ್ಲದೇ ಕುಂಬಳಕಾಯಿ ಬೀಜಗಳಲ್ಲಿ ಉತ್ತಮ ಪ್ರಮಾಣದ ಸೆರೊಟೊನಿನ್ ಅಂಶವಿದ್ದು, ಇದು ಒಂದು ರೀತಿಯ ನ್ಯೂರೋಕೆಮಿಕಲ್ ಆಗಿದೆ. ಹೀಗಾಗಿ ಇದು ನೈಸರ್ಗಿಕವಾಗಿ ನಿದ್ರಾಜನಕ ಔಷಧಿಯಾಗಿ ಕೆಲಸ ಮಾಡುತ್ತದೆ. ಕುಂಬಳಕಾಯಿ ಬೀಜದಲ್ಲಿ ಇರುವ ಅಮಿನೋ ಆಮ್ಲ ಟ್ರೈಪ್ಟೊಫಾನ್ ಅಂಶವು, ಸೆರೊಟೊನಿನ್ ಆಗಿ ಪರಿವರ್ತನೆಗೊಂಡು ಉತ್ತಮ ನಿದ್ರೆಗೆ ಸಹಕರಿಸುವುದು.
ಕುಂಬಳಕಾಯಿ ಬೀಜದಲ್ಲಿರುವ ಏಕಪರ್ಯಾಪ್ತ ಕೊಬ್ಬಿನಾಮ್ಲಗಳು, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ವೃದ್ಧಿಸುತ್ತವೆ. ಹಾಗೆಯೇ ಇದರಲ್ಲಿರುವ ಮೆಗ್ನಿಶಿಯಂ ಅಂಶವು ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ.
ಕುಂಬಳಕಾಯಿ ಬೀಜದಲ್ಲಿ ಇರುವ ಕುಕುರ್ಬಿಟಾಸಿನ್ ಎನ್ನುವ ಅಮಿನೋ ಆಮ್ಲವು ಕೂದಲಿನ ಬೆಳವಣಿಗೆಗೆ ತುಂಬಾ ಸಹಕಾರಿ. ಕುಂಬಳಕಾಯಿ ಬೀಜದ ಎಣ್ಣೆಯನ್ನು ತಲೆಗೆ ಹಾಕಬಹುದು ಅಥವಾ ನಿತ್ಯವೂ ಕುಂಬಳಕಾಯಿ ಬೀಜ ಸೇವನೆ ಮಾಡಬಹುದು.
ಕುಂಬಳಕಾಯಿ ಬೀಜದ ಸೇವನೆಯಿಂದ ಹೊಟ್ಟೆ, ಶ್ವಾಸಕೋಶ, ಸ್ತನ, ಕರುಳು ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಕುಂಬಳಕಾಯಿ ಬೀಜ ಸೇವನೆ ಮಾಡುವುದರಿಂದ ಮಹಿಳೆಯರಲ್ಲಿ ಋತುಬಂಧದ ಬಳಿಕ ಕಂಡುಬರುವ ಸ್ತನಗಳ ಕ್ಯಾನ್ಸರ್ ಅಪಾಯ ಕೂಡ ತಗ್ಗಿಸಬಹುದಾಗಿದೆ.
ಕುಂಬಳಕಾಯಿ ಬೀಜವು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ. ಹೀಗಾಗಿ ಮಧುಮೇಹಿಗಳು ಕುಂಬಳಕಾಯಿ ಬೀಜವನ್ನು ಸೇವಿಸುವುದು ಒಳಿತು.
ಒಟ್ಟಿನಲ್ಲಿ ಕುಂಬಳಕಾಯಿ ಬೀಜದ ಸೇವನೆಯಿಂದ ಹಲವಾರು ಆರೋಗ್ಯ ಸಂಬಂಧಿ ಪ್ರಯೋಜನಗಳಿದ್ದು, ಇದನ್ನು ನಿಮ್ಮ ದೈನಂದಿನ ಆಹಾರ ಪದ್ದತಿಯಲ್ಲಿ ಸೇರಿಸಿಕೊಳ್ಳುವುದು ಉತ್ತಮ.
ಸಂಬಂಧಿತ ಸುದ್ದಿ
ನಿಮಗೆ ಉತ್ತಮ ಆರೋಗ್ಯ ನೀಡುವ ಬೀಜಗಳಿವು..ಇದರ ಪ್ರಯೋಜನಗಳೇನು ತಿಳಿದುಕೊಳ್ಳಿ
ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವವರು, ಆರೋಗ್ಯ ವೃದ್ಧಿಸುವ ಆಹಾರ ಪದಾರ್ಥಗಳನ್ನೇ ಹೆಚ್ಚಾಗಿ ಸೇವಿಸುತ್ತಾರೆ. ಅದರಲ್ಲಿ ಚಿಯಾಸೀಡ್, ಫ್ಲಾಕ್ಸ್ ಸೀಡ್, ಎಳ್ಳು ಹಾಗೂ ಇನ್ನಿತರ ಪದಾರ್ಥಗಳು ನಿಮಗೆ ಬಹಳ ಆರೋಗ್ಯ ಲಾಭಗಳನ್ನು ನೀಡುತ್ತವೆ. ಇದರ ಬಗ್ಗೆ ನ್ಯೂಟ್ರಿಷಿಯನಿಸ್ಟ್ ಭಕ್ತಿ ಕಪೂರ್ ನಿಮಗೆ ತಿಳಿಸಿಕೊಡಲಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ವಿಭಾಗ