ಅಮೆಜಾನ್ ಹಬ್ಬದ ಮಾರಾಟದಲ್ಲಿ ಬೈಕ್, ಸ್ಕೂಟರ್‌ಗೂ ಭರ್ಜರಿ ಡಿಸ್ಕೌಂಟ್; ಕಡಿಮೆ ದರಕ್ಕೆ ಓಲಾ, ಬಜಾಜ್, ಹೀರೋ ದ್ವಿಚಕ್ರವಾಹನ ಖರೀದಿಸಿ
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಮೊಬೈಲ್, ಮನೆಬಳಕೆಯ ವಸ್ತುಗಳಿಗೆ ಮಾತ್ರವಲ್ಲದೆ ವಾಹನ ಖರೀದಿಗೂ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಹೀರೋ ಎಕ್ಸ್‌ಟ್ರೀಮ್, ಓಲಾ ಎಸ್1, ಬಜಾಜ್ ಪ್ಲಾಟಿನಾ 110ಎಸ್, ಬಜಾಜ್ ಚೇತಕ್, ಹೀರೋ ಪ್ಲೆಷರ್‌ಗಳು ಕಡಿಮೆ ದರಕ್ಕೆ ದೊರಕುತ್ತಿದೆ.
ಅಮೆಜಾನ್, ಫ್ಲಿಪ್‌ಕಾರ್ಟ್ ಹಬ್ಬದ ಸೇಲ್‌ನಲ್ಲಿ ಬಹುತೇಕರು ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ ಅಥವಾ ಗೃಹೋಪಯಗಿ ವಸ್ತುಗಳ ಖರೀದಿ ಕುರಿತು ಮಾತ್ರ ಆಲೋಚಿಸುತ್ತಾರೆ. ಆದರೆ, ಇಕಾಮರ್ಸ್ ತಾಣಗಳ ಹಬ್ಬದ ಸೇಲ್ ಅವಧಿಯಲ್ಲಿ ಈಗ ದ್ವಿಚಕ್ರವಾಹನಗಳನ್ನೂ ಖರೀದಿಸಬಹುದು. ಈಗ ಸಾಕಷ್ಟು ವಾಹನಗಳನ್ನು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಲು ಅವಕಾಶವಿದೆ. ಸದ್ಯ ಮಾರಾಟವಾಗುವ ಐದು ಜನಪ್ರಿಯ ದ್ವಿಚಕ್ರವಾಹನಗಳು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಮಾರಾಟಗೊಳ್ಳುತ್ತಿವೆ. ಈ ಸ್ಕೂಟರ್ ಮತ್ತು ಬೈಕ್‌ಗಳಿಗೆ ಎಷ್ಟು ದರ ಕಡಿಮೆಯಾಗಿದೆ ಎಂಬ ವಿವರ ತಿಳಿಯೋಣ ಬನ್ನಿ.
ಹೀರೋ ಎಕ್ಸ್‌ಟ್ರೀಮ್ 125ಆರ್
ಹೀರೋ ಮೋಟೋಕಾರ್ಪ್ ಕಂಪನಿಯು ಹೀರೋ ಎಕ್ಸ್‌ಟ್ರೀಮ್ 125ಆರ್ ಎಂಬ ಬೈಕ್ ಮಾರಾಟ ಮಾಡುತ್ತಿದೆ. ಇದು ಇತರೆ ಬೈಕ್‌ಗಳಂತೆ ಸಾಂಪ್ರದಾಯಿಕ ವಿನ್ಯಾಸ ಹೊಂದಿಲ್ಲ. ಯುವ ಖರೀದಿದಾರರನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಈ ಬೈಕನ್ನು ಬಿಡುಗಡೆ ಮಾಡುತ್ತಿದೆ. ಅಂದಹಾಗೆ ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ ಈ ಬೈಕ್ ದರ 86,750 ರೂಪಾಯಿ ಇದೆ.
ಓಲಾ ಎಸ್1 ಪ್ರೊ
ದೇಶದ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಓಲಾ ಕಂಪನಿಯ ಸ್ಕೂಟರ್‌ಗಳು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಓಲಾ ಎಸ್1 ಪ್ರೊ ದರ ಅಮೆಜಾನ್‌ನಲ್ಲಿ 1,16,399 ರೂಪಾಯಿ ಇದೆ.
ಬಜಾಜ್ ಪ್ಲಾಟಿನಾ 110 ಇಎಸ್ ಡ್ರಮ್
ಇದು ದೇಶದಲ್ಲಿ ಮಾರಾಟವಾಗುವ ಇನ್ನೊಂದು ಜನಪ್ರಿಯ ಕಮ್ಯುಟರ್ ಬೈಕ್. ಇದು ಇತರೆ ಬೈಕ್‌ಗಳಿಗೆ ಹೋಲಿಸಿದರೆ ಇದು ಕಂಫರ್ಟ್ ವಿಷಯದಲ್ಲಿ ದ್ವಿಚಕ್ರವಾಹನ ಸವಾರರಿಗೆ ಇಷ್ಟವಾಗಿದೆ. ಈ ಬೈಕ್‌ನ ಎಕ್ಸ್ ಶೋರೂಂ ದರ 71,300 ರೂಪಾಯಿ ಇದೆ. ಇದನ್ನು ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ 66,305 ರೂಪಾಯಿಗೆ ಖರೀದಿಸಬಹುದು.
ಬಜಾಜ್ ಚೇತಕ್
ಬಜಾಜ್ ಆಟೋ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗೆ ಚೇತಕ್ ಎಂಬ ಹೆಸರಿಟ್ಟಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಸಾಕಷ್ಟು ಬೇಡಿಕೆಯಿದೆ. ಸದ್ಯ ಚೇತಕ್ ಹೆಸರಿನ ಒಂದೇ ಒಂದು ಸ್ಕೂಟರ್ ಅನ್ನು ಕಂಪನಿ ಭಾರತದಲ್ಲಿ ಮಾರಾಟ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲು ಉದ್ದೇಶಿಸಿದೆ. ಸದ್ಯ ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ 84,898 ರೂಪಾಯಿಗೆ ಚೇತಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.
ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್
ಈ 110 ಸಿಸಿ ಸ್ಕೂಟರ್ ಟಿವಿಎಸ್ ಜುಪಿಟರ್, ಹೋಂಡಾ ಆಕ್ಟಿವಾ, ಸುಜುಕಿ ಆಕ್ಸೆಸ್ ಎದುರು ಮಾರುಕಟ್ಟೆಯಲ್ಲಿ ಸ್ಪರ್ಧೆ ನಡೆಸುತ್ತಿದೆ. ಈ ಸ್ಕೂಟರ್ ಮೂರು ಬಣ್ಣಗಳಲ್ಲಿ ದೊರಕುತ್ತಿದೆ. ಇಂಧನ ದಕ್ಷತೆ ಸುಮಾರು 50 ಕಿ.ಮೀ. ಇದೆ ಎಂದು ಕಂಪನಿ ಪ್ರತಿಪಾದಿಸಿದೆ. ಅಮೆಜಾನ್ ಸೇಲ್‌ನಲ್ಲಿ ಹೀರೋ ಪ್ಲೆಸರ್ + ಎಕ್ಸ್‌ಟೆಕ್ ಅನ್ನು 69,363 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಓಲಾ ಎಸ್ ಏರ್
ಸಾಮಾನ್ಯವಾಗಿ ಈ ಸ್ಕೂಟರ್‌ನ ಎಕ್ಸ್ ಶೋರೂಂ ದರ 1.07 ಲಕ್ಷ ರೂಪಾಯಿ ಇದೆ. ಅಮೆಜಾನ್ ಸೇಲ್‌ನಲ್ಲಿ 91,999 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಹೀರೋ ಎಕ್ಸ್‌ಟ್ರೀಮ್ 160 ಆರ್ 4ವಿ
ಈ ಸ್ಟ್ರೀಟ್ ಬೂಕ್ ದರವೂ ಕಡಿಮೆಯಾಗಿದೆ. ಇದು ಮಾರುಕಟ್ಟೆಯಲ್ಲಿ ಸುಜುಕಿ ಜಿಕ್ಸರ್, ಬಜಾಜ್ ಪಲ್ಸರ್ ಎನ್‌ಎಸ್ 160, ಬಜಾಜ್ ಪಲ್ಸರ್ ಎನ್160, ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿಗಳ ಜತೆ ಸ್ಪರ್ಧೆ ನಡೆಸುತ್ತಿದೆ. ಅಮೆಜಾನ್ ಸೇಲ್‌ನಲ್ಲಿ ಈ ಬೈಕನ್ನು 91,212 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಇದೇ ರೀತಿ ಬಜಾಜ್ ಪಲ್ಸರ್, ಹೀರೋ ಡೆಸ್ಟಿನಿ ಬೈಕ್‌ಗಳಿಗೂ ಅಮೆಜಾನ್ ಸೇಲ್‌ನಲ್ಲಿ ಡಿಸ್ಕೌಂಟ್ ನೀಡಲಾಗಿದೆ. ನೀವು ದ್ವಿಚಕ್ರವಾಹನ ಖರೀದಿಸುವ ಆಲೋಚನೆಯಲ್ಲಿದ್ದಾರೆ ಅಮೆಜಾನ್ ವೆಬ್‌ಸೈಟ್‌ಗೆ ಹೋಗಿ ದರ ಪರಿಶೀಲನೆ ನಡೆಸಬಹುದು.