2024 ಹೀರೋ ಡೆಸ್ಟಿನಿ 125 ಟೆಸ್ಟ್‌ ಡ್ರೈವ್‌ ವಿಮರ್ಶೆ: ಹೋಂಡಾ ಆಕ್ಟಿವಾ, ಟಿವಿಎಸ್‌ ಜುಪಿಟರ್‌ಗಿಂತ ಸೂಪರ್‌ ಇದೆಯೇ ಈ ಸ್ಕೂಟರ್‌?-automobile news 2024 hero destini 125 test ride report can it pose a threat to honda activa and tvs jupiter pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  2024 ಹೀರೋ ಡೆಸ್ಟಿನಿ 125 ಟೆಸ್ಟ್‌ ಡ್ರೈವ್‌ ವಿಮರ್ಶೆ: ಹೋಂಡಾ ಆಕ್ಟಿವಾ, ಟಿವಿಎಸ್‌ ಜುಪಿಟರ್‌ಗಿಂತ ಸೂಪರ್‌ ಇದೆಯೇ ಈ ಸ್ಕೂಟರ್‌?

2024 ಹೀರೋ ಡೆಸ್ಟಿನಿ 125 ಟೆಸ್ಟ್‌ ಡ್ರೈವ್‌ ವಿಮರ್ಶೆ: ಹೋಂಡಾ ಆಕ್ಟಿವಾ, ಟಿವಿಎಸ್‌ ಜುಪಿಟರ್‌ಗಿಂತ ಸೂಪರ್‌ ಇದೆಯೇ ಈ ಸ್ಕೂಟರ್‌?

2024 ಹೀರೋ ಡೆಸ್ಟಿನಿ 125 ಟೆಸ್ಟ್‌ ಡ್ರೈವ್‌ ವಿಮರ್ಶೆ: ಹೀರೋ ಮೋಟೋಕಾರ್ಪ್‌ ಪರಿಚಯಿಸಿದ ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್‌ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿರುವ ಆಕ್ಟಿವಾ 125 ಮತ್ತು ಜುಪಿಟರ್‌ 125 ಜತೆ ಸ್ಕೂಟರ್‌ ಮಾರುಕಟ್ಟೆಯಲ್ಲಿ ಸ್ಪರ್ಧೆ ನಡೆಸಲಿದೆ. ನೂತನ ಸ್ಕೂಟರ್‌ನ ಟೆಸ್ಟ್‌ ಡ್ರೈವ್‌ ವಿಮರ್ಶೆ ಇಲ್ಲಿದೆ.

2024 ಹೀರೋ ಡೆಸ್ಟಿನಿ 125 ಟೆಸ್ಟ್‌ ಡ್ರೈವ್‌ ವಿಮರ್ಶೆ. ಇಂಧನ ದಕ್ಷತೆ, ಎಂಜಿನ್‌, ಬ್ರೇಕ್‌, ಫೀಚರ್‌ಗಳು ಹೇಗಿವೆ. ಆಕ್ಟಿವಾ ಮತ್ತು ಜುಪಿಟರ್‌ ಸ್ಕೂಟರ್‌ಗಳಿಗಿಂತ ಉತ್ತಮವಾಗಿರುವುದೇ ಇತ್ಯಾದಿ ವಿವರ ಇಲ್ಲಿದೆ.
2024 ಹೀರೋ ಡೆಸ್ಟಿನಿ 125 ಟೆಸ್ಟ್‌ ಡ್ರೈವ್‌ ವಿಮರ್ಶೆ. ಇಂಧನ ದಕ್ಷತೆ, ಎಂಜಿನ್‌, ಬ್ರೇಕ್‌, ಫೀಚರ್‌ಗಳು ಹೇಗಿವೆ. ಆಕ್ಟಿವಾ ಮತ್ತು ಜುಪಿಟರ್‌ ಸ್ಕೂಟರ್‌ಗಳಿಗಿಂತ ಉತ್ತಮವಾಗಿರುವುದೇ ಇತ್ಯಾದಿ ವಿವರ ಇಲ್ಲಿದೆ.

2024 ಹೀರೋ ಡೆಸ್ಟಿನಿ 125 ಟೆಸ್ಟ್‌ ಡ್ರೈವ್‌ ವಿಮರ್ಶೆ: ದೇಶದಲ್ಲಿ ಬೈಕ್‌ಗಳು ಹೆಚ್ಚು ಫೇಮಸ್‌. ಆದರೆ, ಕುಟುಂಬ ಸವಾರಿಗೆ ಸೂಕ್ತ ವಾಹನವಾಗಿ ಈಗ ಸ್ಕೂಟರ್‌ ಜನಪ್ರಿಯತೆ ಪಡೆಯುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ ಸ್ಕೂಟರ್‌ ಇದ್ರೆ ಅನುಕೂಲ ಎಂಬ ಮಾತಿದೆ. ಕರ್ನಾಟಕದ ಹಳ್ಳಹಳ್ಳಿಗಳಲ್ಲೂ ಸ್ಕೂಟರ್‌ಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಭಾರತದಲ್ಲಿ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಮೂರನೇ ಒಂದು ಭಾಗವನ್ನು ಈಗ ಸ್ಕೂಟರ್‌ಗಳು ಪಡೆದಿವೆ. ಇದು ಸ್ಕೂಟರ್‌ಗಳ ಜನಪ್ರಿಯತೆಗೆ ಸಾಕ್ಷಿ. ಈಗಾಗಲೇ ಹೀರೋ ಮೋಟೋಕಾರ್ಪ್‌ ಕಂಪನಿಯು ಭಾರತದ ಅತಿದೊಡ್ಡ ದ್ವಿಚಕ್ರವಾಹನ ಕಂಪನಿಯೆಂದು ಜನಪ್ರಿಯತೆ ಪಡೆದಿದೆ. ಕಂಪನಿಯ ಬೈಕ್‌ಗಳು ದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಸ್ಕೂಟರ್‌ ವಿಷಯದಲ್ಲಿ ಹೀರೋ ಪಾಲು ಕಡಿಮೆ ಎಂದೇ ಹೇಳಬಹುದು. ಆದರೆ, ಹೀರೋ ಮೋಟೋಕಾರ್ಪ್‌ ಕಂಪನಿಯು ಡೆಸ್ಟಿನಿ 125 ಪರಿಚಯಿಸಿದ ಬಳಿಕ ಸ್ಕೂಟರ್‌ ಮಾರುಕಟ್ಟೆಯಲ್ಲಿ ಷೇರು ಹೆಚ್ಚಾಗುವ ನಿರೀಕ್ಷೆಯಿತ್ತು. ಇದೇ ಸಮಯದಲ್ಲಿ ಹೀರೋ ಡೆಸ್ಟಿನಿ ಮಾರುಕಟ್ಟೆಗೆ ಆಗಮಿಸಿತ್ತು. ಆದರೆ, ಹೋಂಡಾ ಆಕ್ಟಿವಾ ಸ್ಕೂಟರ್‌ ಮಾರುಕಟ್ಟೆಯಲ್ಲಿ ಡೆಸ್ಟಿನಿಗೆ ಪ್ರಬಲ ಪೈಪೋಟಿ ನೀಡಿತ್ತು. ಇದಾದ ಬಳಿಕ ಟಿವಿಎಸ್‌ ಜುಪಿಟರ್‌ ಆಗಮಿಸಿತು. ಹೀರೋ ಡೆಸ್ಟಿನಿ ತೆರೆಮರೆಗೆ ಹೋಯಿತು. ಇದೀಗ ಆಕ್ಟಿವಾ ಮತ್ತು ಜುಪಿಟರ್‌ಗೆ ಮತ್ತೆ ಪೈಪೋಟಿ ನೀಡಲು ಹೊಸ 2024ರ ಹೀರೋ ಡೆಸ್ಟಿನಿ 125 ಅನ್ನು ಹೀರೋಮೋಟೋಕಾರ್ಪ್‌ ಪರಿಚಯಿಸಿದೆ. ಇದನ್ನು ಆಕ್ಟಿವಾ ಮತ್ತು ಜುಪಿಟರ್‌ ಕಡೆಗಣಿಸುವಂತೆ ಇಲ್ಲ ಅನ್ನೋದು ಸುಳ್ಳಲ್ಲ.

ಹೊಸ ಹೀರೋ ಡೆಸ್ಟಿನಿ ಹೇಗಿದೆ ಎಂದು ತಿಳಿಯಲು ಹಿಂದೂಸ್ತಾನ್‌ ಟೈಮ್ಸ್‌ನ "ಎಚ್‌ಟಿ ಆಟೋ"ದ ಗೆಳೆಯ ಪಾರ್ಥ್‌ ಖಟ್ರಿ ಗೋವಾದಲ್ಲಿ ಟೆಸ್ಟ್‌ ರೈಡ್‌ ಮಾಡಿದ್ದಾರೆ. ಹೀರೋ ಡೆಸ್ಟಿನಿ ಟೆಸ್ಟ್‌ ಡ್ರೈವ್‌ ವಿಮರ್ಶೆ ಇಲ್ಲಿ ನೀಡಲಾಗಿದೆ. ಹೇಗಿದೆ ಬನ್ನಿ ನೋಡೋಣ.

2024 ಹೀರೋ ಡೆಸ್ಟಿನಿ 125: ಅಂದ ಹೇಗಿದೆ?

ಹೀರೋ ಡೆಸ್ಟಿನಿ 125 ವಿಮರ್ಶೆ
ಹೀರೋ ಡೆಸ್ಟಿನಿ 125 ವಿಮರ್ಶೆ

2024 ಹೀರೋ ಡೆಸ್ಟಿನಿ 125 ವಿನ್ಯಾಸವೇ ಪ್ರಮುಖ ಆಕರ್ಷಣೆ ಎಂದರೆ ತಪ್ಪಾಗದು. ಈ ಸ್ಕೂಟರ್‌ಗೆ ಎಲ್ಲಾ ಮೆಟಲ್‌ ಬಾಡಿ ಅಳವಡಿಸಲಾಗಿದೆ. ಪ್ಲಾಸ್ಟಿಕ್‌ ಬಾಡಿಗೆ ಹೋಲಿಸಿದರೆ ಇದು ಉತ್ತಮವಾಗಿದೆ. ಮುಂಭಾಗದಲ್ಲಿ ಪ್ರಾಜೆಕ್ಟರ್‌ ಸೆಟಪ್‌ನೊಂದಿಗೆ ಹೊಸತನದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳಿವೆ. ಎಚ್‌ ಆಕಾರದ ಎಲ್‌ಇಡಿ ಹಗಲು ಬೆಳಗುವ ಲ್ಯಾಂಪ್‌ ಇದೆ. ಆವೃತ್ತಿಗೆ ತಕ್ಕಂತೆ ಕೂಪರ್‌ ಅಥವಾ ಕ್ರೋಮ್‌ ಅಸೆಂಟ್‌ನಲ್ಲಿ ಖರೀದಿಸಬಹುದು. ಸ್ಕೂಟರ್‌ನ ಹಿಂಭಾಗದಲ್ಲೂ ಹೊಸ ಎಲ್‌ಇಡಿ ಟೇಲ್‌ ಲ್ಯಾಂಪ್‌ ಗಮನ ಸೆಳೆಯುತ್ತದೆ. ಎಚ್‌ ಆಕಾರದ ಎಲ್‌ಇಡಿ ಡೇಟೈಮ್‌ ರನ್ನಿಂಗ್‌ ಲ್ಯಾಂಪ್‌ ಕೂಡ ಇದೆ. ಟಾಪ್‌ ಎಂಡ್‌ ಸ್ಕೂಟರ್‌ನಲ್ಲಿ ಹಿಂಬದಿ ಸವಾರನಿಗೆ ಒರಗಲು ಬ್ಯಾಕ್‌ರೆಸ್ಟ್‌ ಕೂಡ ಇದೆ. ಲೋವರ್‌ ವರ್ಷನ್‌ ಸ್ಕೂಟರ್‌ಗಳಿಗೆ ಗ್ರಾಹಕರು ಬೇಕಾದ್ರೆ ಈ ಬ್ಯಾಕ್‌ರೆಸ್ಟ್‌ ಅಳವಡಿಸಿಕೊಳ್ಳಬಹುದು. ಈ ಸೆಗ್ಮೆಂಟ್‌ನಲ್ಲಿಯೇ ಡೆಸ್ಟಿನಿ ಸೀಟುಗಳು ಹೆಚ್ಚು ಉದ್ದವಾಗಿವೆ ಎಂದು ಹೀರೋ ಹೇಳಿದೆ. 12 ಇಂಚಿನ ಅಲಾಯ್‌ ವೀಲ್‌ ಇದೆ. ಇದು ವಿದಾ ಸ್ಕೂಟರ್‌ನಿಂದ ಸ್ಪೂರ್ತಿ ಪಡೆದಿರುವುದು.

2024 ಹೀರೋ ಡೆಸ್ಟಿನಿ 125: ಎಂಜಿನ್‌ ಬದಲಾಗಿರುವುದೇ?

ಈ ಹಿಂದಿನ ಡೆಸ್ಟಿನಿಯಲ್ಲಿದ್ದ ಎಂಜಿನ್‌ ಇದರಲ್ಲಿದೆ. ಆದರೆ, ಈ ಎಂಜಿನ್‌ನ ರಿಫೈನ್‌ಮೆಂಟ್‌ ಲೆವೆಲ್‌ ಉತ್ತಮಪಡಿಸಲಾಗಿದೆ. ಇಂಧನ ದಕ್ಷತೆಯೂ ಹೆಚ್ಚಾಗಿದೆ. ಸಿವಿಟಿ ಗಿಯರ್‌ಬಾಕ್ಸ್‌ ಜೋಡಿಸಲಾಗಿದೆ. ಈ ಎಂಜಿನ್‌ 7 ಸಾವಿರ ಆವರ್ತನಕ್ಕೆ ಗರಿಷ್ಠ 9 ಬಿಎಚ್‌ಪಿ ಗರಿಷ್ಠ ಪವರ್‌ ನೀಡಲಿದೆ. 5,500 ಆವರ್ತನದಲ್ಲಿ 10.4 ಎನ್‌ಎಂ ಟಾರ್ಕ್‌ ಒದಗಿಸುತ್ತದೆ.

ಎಂಜಿನ್‌ ಪರ್ಫಾಮೆನ್ಸ್‌ ಹೇಗಿದೆ?

ನಾವು ಟೆಸ್ಟ್‌ ರೈಡ್‌ ಮಾಡಿದಾಗ ಇದರ ಎಂಜಿನ್‌ ಗಮನ ಸೆಳೆಯಿತು. ತುಂಬಾ ಸ್ಮೂತ್‌ ಎಂಜಿನ್‌ ಇದಾಗಿದೆ. ಯಾವುದೇ ವೈಬ್ರೆಷನ್‌ ಅನುಭವಕ್ಕೆ ಬರಲಿಲ್ಲ. 60-80 ಕಿ.ಮೀ. ವೇಗದಲ್ಲಿ ನೇರ ರಸ್ತೆಯಲ್ಲಿ ಓಡಿಸಿದಾಗ ಯಾವುದೇ ಕರಕರ ಅನುಭವವಾಗಲಿಲ್ಲ. ನಾವು ಗರಿಷ್ಠ 86 ಕಿ.ಮೀ. ವೇಗದಲ್ಲಿ ಓಡಿಸಿದಾಗ ಸಿವಿಟಿ ರಬ್ಬರ್‌ ಬ್ಯಾಂಡ್‌ ತುಸು ಎಳೆದಂತೆ ಅನಿಸಿತು.

2024 ಹೀರೋ ಡೆಸ್ಟಿನಿ 125: ಮೈಲೇಜ್‌ ಎಷ್ಟು?

ಹೀರೋ ಮೋಟೋಕಾರ್ಪ್‌ ಪ್ರಕಾರ ನೂತನ ಡೆಸ್ಟಿನಿ ಸ್ಕೂಟರ್‌ ಪ್ರತಿಲೀಟರ್‌ ಪೆಟ್ರೋಲ್‌ಗೆ 59 ಕಿ.ಮೀ. ಇಂಧನ ದಕ್ಷತೆ ನೀಡುತ್ತದೆ. ಈ ಸ್ಕೂಟರ್‌ನ ಇಂಧನ ದಕ್ಷತೆ ಹೆಚ್ಚಿಸಲು ಐ3ಎಸ್‌ ಟೆಕ್ನಾಲಜಿ ಅಳವಡಿಸಲಾಗಿದೆ. ಸ್ಕೂಟರ್‌ ಐಡಲಿಂಗ್‌ ಸಮಯದಲ್ಲಿ ಎಂಜಿನ್‌ ಆಫ್‌ ಮಾಡುವ ತಂತ್ರಜ್ಞಾನ ಇದಾಗಿದೆ. ಈ ಸಮಯದಲ್ಲಿ ಈ ತಂತ್ರಜ್ಞಾನದಿಂದ ರೈಡರ್‌ ಬ್ರೇಕ್‌ ಅದುಮಿದಾಗ ಮತ್ತೆ ಎಂಜಿನ್‌ ಸ್ಟಾರ್ಟ್‌ ಆಗುತ್ತದೆ. ಆದರೆ, ಈ ಸ್ಕೂಟರ್‌ನಲ್ಲಿ ಸೈಲೆಂಟ್‌ ಸ್ಟಾರ್ಟರ್‌ ಮಿಸ್‌ ಆಗಿದೆ. ಸ್ಕೂಟರ್‌ ಸ್ಟಾರ್ಟ್‌ ಮಾಡಿದಾಗ ಎಂಜಿನ್‌ ಸದ್ದು ಮಾಡುತ್ತದೆ.

ಹ್ಯಾಂಡ್ಲಿಂಗ್‌ ಮತ್ತು ರೈಡ್‌ ಗುಣಮಟ್ಟ ಹೇಗಿದೆ?

ಇದರ ಹ್ಯಾಂಡ್ಲಿಂಗ್‌ ಸುಲಭ. ತಿರುವುಗಳಲ್ಲಿಯೂ ಆತ್ಮವಿಶ್ವಾಸದಿಂದ ಚಾಲನೆ ಮಾಡಲು ಸಾಧ್ಯವಾಗುತ್ತದೆ. ಟ್ರಾಫಿಕ್‌ ರಸ್ತೆಯಲ್ಲೂ ಸುಲಭವಾಗಿ ಹ್ಯಾಂಡಲ್‌ ಮಾಡುವಂತಹ ತೂಕ ಹೊಂದಿದೆ. ಗುಣಮಟ್ಟದ ಸವಾರಿಯ ಅನುಭವ ಆಗುತ್ತದೆ. ನಮ್ಮ ರಸ್ತೆಯಲ್ಲಿ ಉಬ್ಬುತಗ್ಗು ಹೆಚ್ಚು. ಹೀಗಿದ್ದರೂ ಡೆಸ್ಟಿನಿಯಲ್ಲಿ ಸ್ಮೂತ್‌ ಆಗಿ ಪ್ರಯಾಣಿಸಬಹುದು. ಚಕ್ರದ ಗಾತ್ರ 12 ಇಂಚಿನವರೆಗೆ ಹೋಗಿರುವುದರಿಂದ ಸ್ಥಿರತೆ ಹೆಚ್ಚಾಗಿದೆ.

ಬ್ರೇಕ್‌ಗಳು ಉತ್ತಮವಾಗಿರುವುದೇ?

ನೂತನ ಹೀರೋ ಡೆಸ್ಟಿನಿ ಸ್ಕೂಟರ್‌ ಮುಂಬದಿ ಮತ್ತು ಹಿಂಬದಿಯಲ್ಲಿ ಡ್ರಮ್‌ ಬ್ರೇಕ್‌ ಅಥವಾ ಮುಂಬದಿಯಲ್ಲಿ ಡಿಸ್ಕ್‌ ಬ್ರೇಕ್‌ ಮತ್ತು ಹಿಂಬದಿಯಲ್ಲಿ ಡ್ರಮ್‌ ಬ್ರೇಕ್‌ ಆಯ್ಕೆಯಲ್ಲಿ ಲಭ್ಯ. ನಾವು ಎರಡೂ ಮಾಡೆಲ್‌ಗಳನ್ನು ರೈಡ್‌ ಮಾಡಿ ನೋಡಿದ್ದೇವೆ. ಆದರೆ, ಬ್ರೇಕ್‌ಗಳು ಹೆಚ್ಚು ಖುಷಿ ಅಥವಾ ಸ್ಪೂರ್ತಿ ನೀಡಿಲ್ಲ. ಮುಂಭಾಗದ ವೀಲ್‌ ಕೆಲವು ಬಾರಿ ಲಾಕ್‌ಅಪ್‌ ಆದ ಫೀಲ್‌ ಆಯ್ತು. ಹಿಂಬದಿಯ ಬ್ರೇಕ್‌ ಉತ್ತಮವಾಗಿಯೇ ಕಾರ್ಯನಿರ್ವಹಿಸಿತು. ಈ ಸ್ಕೂಟರ್‌ನಲ್ಲಿ ಸಿಬಿಎಸ್‌ ಸ್ಟಾಂಡರ್ಡ್‌ ಫೀಚರ್‌ ಆಗಿದೆ.

ಏನೆಲ್ಲ ಫೀಚರ್‌ಗಳು ಇವೆ?

ಹೊಸ ಡೆಸ್ಟಿನಿ ಸ್ಕೂಟರ್‌ನಲ್ಲಿ ಫೀಚರ್‌ ಲಿಸ್ಟ್‌ ದೊಡ್ಡದಾಗಿದೆ. ಬೇಸ್‌ ಮಾಡೆಲ್‌ನಲ್ಲಿ ಸೆಮಿ ಡಿಜಿಟಲ್‌ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ ಇದೆ. ಟಾಪ್‌ ಎಂಡ್‌ನಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್‌ ನಗೆಟಿವ್‌ ಎಲ್‌ಸಿಡಿ ಡಿಸ್‌ಪ್ಲೇ ಇದೆ. ಫೋನ್‌ ಕರೆ ಮತ್ತು ಎಸ್‌ಎಂಎಸ್‌ ನೋಟಿಫಿಕೇಷನ್‌ ಪಡೆಯಲು ಬ್ಲೂಟೂಥ್‌ ಕನೆಕ್ಟಿವಿಟಿಯೂ ಇದೆ. ಈ ಸ್ಕೂಟರ್‌ನಲ್ಲಿ ಟರ್ನ್‌ ಬೈ ಟರ್ನ್‌ ನ್ಯಾವಿಗೇಷನ್‌ ಇರುವುದು ವಿಶೇಷ. ಎಲ್ಲಾದರೂ ಸ್ಕೂಟರ್‌ ಕ್ರ್ಯಾಶ್‌ ಆದಾಗ ಎಂಜಿನ್‌ ಕಟ್‌ ಆಫ್‌ ಫೀಚರ್‌ ಅನ್ನೂ ಡೆಸ್ಟಿನಿ ಹೊಂದಿದೆ. ಆಟೋ ಕ್ಯಾನ್ಸಲ್‌ ವಿಂಕರ್ಸ್‌, ಮಿಣುಗುವ ಸ್ಟಾರ್ಟ್‌ ಸ್ವಿಚ್‌, ಬೂಟ್‌ ಲ್ಯಾಂಪ್‌ ಮುಂತಾದ ಫೀಚರ್‌ಗಳು ಇವೆ.

ಹೊಸ ಹೀರೋ ಡೆಸ್ಟಿನಿಯನ್ನು ಖರೀದಿಸಬಹುದೇ?

ಟಿವಿಎಸ್‌ ಜುಪಿಟರ್‌ 125 ಮತ್ತು ಹೋಂಡಾ ಆಕ್ಟಿವಾ 125 ಮಾತ್ರ ಪ್ರ್ಯಾಕ್ಟಿಕಲ್‌ ಸ್ಕೂಟರ್‌ ಎಂದು ಈಗ ಜನರು ನಂಬಿದ್ದಾರೆ. ಇದೀಗ ಇವರೆಡರ ನಡುವೆ ಹೀರೋ ಡೆಸ್ಟಿನಿ 125 ಸಮರ್ಥವಾಗಿ ಸ್ಪರ್ಧಿಸುವಂತೆ ಇದೆ ಎನ್ನುವುದು ನಮ್ಮ ಅಭಿಪ್ರಾಯ. ಇದರಲ್ಲಿ ಡೀಸೆಂಟ್‌ ಆದ ಫೀಚರ್‌ ಲಿಸ್ಟ್‌ ಇದೆ. ಪ್ರಯಾಣವೂ ಆರಾಮದಾಯಕವಾಗಿದೆ. ಇಂಧನದಕ್ಷತೆಯೂ ಉತ್ತಮವಾಗಿದೆ. ಎಲ್ಲಾದರೂ ನೀವು ಈಗ ಹೊಸ ಸ್ಕೂಟರ್‌ ಖರೀದಿಸಲು ಯೋಜನೆ ಮಾಡುತ್ತಿದ್ದರೆ ಒಮ್ಮೆ ಹೀರೋ ಡೆಸ್ಟಿನಿಯನ್ನು ಟೆಸ್ಟ್‌ ರೈಡ್‌ ಮಾಡಿ ನೋಡಿ ಮುಂದುವರೆಯಿರಿ ಎನ್ನುವುದು ನಮ್ಮ ಸಲಹೆ.

mysore-dasara_Entry_Point