ಈ ಹಬ್ಬದ ಋತುವಿನಲ್ಲಿ ನೀವು ಹೊಸ ಕಾರು ಖರೀದಿಸಲು ಯೋಜಿಸುತ್ತಿದ್ದೀರಾ: ಮಾರುಕಟ್ಟೆಗೆ ಅಪ್ಪಳಿಸಲಿದೆ ಹೊಸ ಕಾರುಗಳು, ಇಲ್ಲಿದೆ ಪಟ್ಟಿ
ಈ ಐದು ಹೊಸ ವಾಹನಗಳು ಹಬ್ಬದ ಪ್ರಯುಕ್ತ ಶೀಘ್ರದಲ್ಲೇ ಮಾರುಕಟ್ಟೆಗೆ ಅಪ್ಪಳಿಸಲು ತಯಾರಾಗಿದೆ. ಈ ಪಟ್ಟಿಯಲ್ಲಿ ಕಿಯಾ ಮೋಟಾರ್ಸ್, ಮಾರುತಿ ಸುಜುಕಿ, ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್‌ನ ವಾಹನಗಳು ಸೇರಿವೆ. (ಬರಹ: ವಿನಯ್ ಭಟ್)
ಈ ಹಬ್ಬದ ಋತುವಿನಲ್ಲಿ ನೀವು ಹೊಸ ಕಾರು ಖರೀದಿಸಲು ಯೋಜಿಸುತ್ತಿದ್ದೀರಾ? ಹಾಗಾದರೆ ಆತುರದಲ್ಲಿ ಯಾವುದಾದರು ಒಂದು ಕಾರನ್ನು ಖರೀದಿಸುವ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮಗಾಗಿ, ಕೆಲವು ಹೊಸ ಮಾಡೆಲ್‌ಗಳು ಮಾರುಕಟ್ಟೆಯಲ್ಲಿ ಪ್ರವೇಶ ಮಾಡಲು ತಯಾರಾಗಿದೆ. ಈ ಪಟ್ಟಿಯಲ್ಲಿ ಕಿಯಾ ಮೋಟಾರ್ಸ್, ಮಾರುತಿ ಸುಜುಕಿ, ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್‌ನ ವಾಹನಗಳು ಸೇರಿವೆ. ಈ ಐದು ಹೊಸ ವಾಹನಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಅಪ್ಪಳಿಸಲು ತಯಾರಾಗಿದೆ.
ಕಿಯಾ EV9 ಬಿಡುಗಡೆ ದಿನಾಂಕ
ಕಿಯಾ ಮೋಟಾರ್ಸ್‌ನ ಈ ಎಲೆಕ್ಟ್ರಿಕ್ ಎಸ್‌ಯುವಿ ಮುಂದಿನ ತಿಂಗಳು ಅಕ್ಟೋಬರ್ 3 ರಂದು ಬಿಡುಗಡೆ ಆಗಲಿದೆ ಎಂದು ವರದಿ ಹೇಳಿದೆ. ಮೂಲಗಳ ಪ್ರಕಾರ, ಈ 7-ಆಸನಗಳ ಪೂರ್ಣ-ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿ ಒಂದೇ ಪೂರ್ಣ ಚಾರ್ಜ್‌ನಲ್ಲಿ 541 ಕಿಲೋಮೀಟರ್‌ಗಳವರೆಗೆ ಚಲಿಸುತ್ತದೆ.
ಕಿಯಾ ಕಾರ್ನಿವಲ್ ಲಿಮೋಸಿನ್ ಬಿಡುಗಡೆ ದಿನಾಂಕ
ಮುಂದಿನ ತಿಂಗಳು ಅಕ್ಟೋಬರ್ 3 ರಂದೇ ಕಿಯಾದ ಈ ಮುಂಬರುವ ವಾಹನವನ್ನು ಬಿಡುಗಡೆ ಮಾಡಬಹುದು. ಈ ಕಾರು 2.2 ಲೀಟರ್ ಎಂಜಿನ್ ಹೊಂದಿದ್ದು, 191bhp ಪವರ್ ಮತ್ತು 441Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ, ನೀವು 2 ಲಕ್ಷ ರೂಪಾಯಿಗಳ ಬುಕಿಂಗ್ ಮೊತ್ತವನ್ನು ಪಾವತಿಸಿ ಈ ಕಾರನ್ನು ಬುಕ್ ಮಾಡಬಹುದು. ಕಿಯಾ ಅಧಿಕೃತ ಸೈಟ್ ಅಥವಾ ಅಧಿಕೃತ ಡೀಲರ್‌ನಿಂದ ಬುಕ್ ಮಾಡಬಹುದು.
ಮಾರುತಿ ಸುಜುಕಿ ಡಿಜೈರ್ ಬಿಡುಗಡೆ ದಿನಾಂಕ
ಹೊಸ ಸ್ವಿಫ್ಟ್ ಸಿಎನ್ಜಿ ಬಿಡುಗಡೆಯ ನಂತರ, ಈಗ ಮಾರುತಿ ಸುಜುಕಿ ತನ್ನ ಜನಪ್ರಿಯ ವಾಹನವಾದ ಹೊಸ ಡಿಜೈರ್ 2024 ಮಾದರಿಯನ್ನು ದೀಪಾವಳಿಯ ಸಮಯದಲ್ಲಿ ಬಿಡುಗಡೆ ಮಾಡಬಹುದು. ಈ ವಾಹನದಲ್ಲಿ ಹೊಸ Z ಸರಣಿಯ ಎಂಜಿನ್ನೊಂದಿಗೆ ಬರುತ್ತದೆ. ಸಿಎಸ್ನಿ ಆಯ್ಕೆ ಕೂಡ ರಿಲೀಸ್ ಆಗಲಿದೆಯಂತೆ.
ಮಹೀಂದ್ರ XUV 3XO EV ಬಿಡುಗಡೆ ದಿನಾಂಕ
ಮಹೀಂದ್ರಾ ಕೆಲವು ತಿಂಗಳ ಹಿಂದೆ ಈ SUV ಅನ್ನು ಬಿಡುಗಡೆ ಮಾಡಿತ್ತು. ಈಗ ಕಂಪನಿಯು ಈ ಕಾರಿನ ಎಲೆಕ್ಟ್ರಿಕ್ ಅವತಾರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ದೀಪಾವಳಿಯ ಆಸುಪಾಸಿನಲ್ಲಿ ಮಹೀಂದ್ರಾ XUV 3XO EV ಅನಾವರಣಗೊಳ್ಳಲಿದೆ.
ಟಾಟಾ ನೆಕ್ಸಾನ್ ಸಿಎನ್‌ಜಿ ಬಿಡುಗಡೆ ದಿನಾಂಕ
ಟಾಟಾ ನೆಕ್ಸಾನ್ ಟಾಟಾ ಮೋಟಾರ್ಸ್‌ನ ಜನಪ್ರಿಯ ಮತ್ತು ಹೆಚ್ಚು ಮಾರಾಟವಾಗುವ ವಾಹನಗಳಲ್ಲಿ ಒಂದಾಗಿದೆ. ಪ್ರಸ್ತುತ ಕಂಪನಿಯು ಈ ಎಸ್‌ಯುವಿಯ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಅವತಾರಗಳನ್ನು ಮಾರಾಟ ಮಾಡುತ್ತದೆ. ಇದೀಗ ಟಾಟಾ ಮೋಟಾರ್ಸ್ ಈ ವಾಹನದ ಸಿಎನ್‍ಜಿ ರೂಪಾಂತರವನ್ನು ಗ್ರಾಹಕರಿಗೆ ಬಿಡುಗಡೆ ಮಾಡಲು ತಯಾರು ನಡೆಸುತ್ತಿದೆ. ಮಾರಾಟವನ್ನು ಹೆಚ್ಚಿಸಲು ಈ ವಾಹನವನ್ನು ಹಬ್ಬದ ಋತುವಿನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.