Tata Motors: 2024, 2025ರಲ್ಲಿ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿರುವ 8 ಕಾರುಗಳ ಲಿಸ್ಟ್ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Tata Motors: 2024, 2025ರಲ್ಲಿ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿರುವ 8 ಕಾರುಗಳ ಲಿಸ್ಟ್ ಇಲ್ಲಿದೆ

Tata Motors: 2024, 2025ರಲ್ಲಿ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿರುವ 8 ಕಾರುಗಳ ಲಿಸ್ಟ್ ಇಲ್ಲಿದೆ

2024 ಮತ್ತು 2025ರಲ್ಲಿ ಟಾಟಾ ಮೋಟಾರ್ಸ್ ಹಲವಾರು ಎಲೆಕ್ಟ್ರಿಕ್ ಮತ್ತು ಐಸಿಇ ವಾಹನಗಳನ್ನು ಅನಾವರಣ ಮಾಡಲಿದೆ. ಮುಂದಿನ 2 ವರ್ಷಗಳಲ್ಲಿ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಕಾರುಗಳ ಲಿಸ್ಟ್ ಇಲ್ಲಿದೆ.

ಟಾಟಾ ಮೋಟಾರ್ಸ್ ಪಂಚ್​ ಇವಿ
ಟಾಟಾ ಮೋಟಾರ್ಸ್ ಪಂಚ್​ ಇವಿ

ಭಾರತದ ಮೂರನೇ ಅತಿದೊಡ್ಡ ಕಾರು ತಯಾರಕ ಕಂಪನಿ ಟಾಟಾ ಮೋಟಾರ್ಸ್‌ಗೆ ಮುಂಬರುವ ವರ್ಷವು ಅತ್ಯಂತ ಕಾರ್ಯನಿರತ ವರ್ಷವಾಗಿದೆ. ಏಕೆಂದರೆ ಟಾಟಾ ಮೋಟಾರ್ಸ್‌ ಕಂಪನಿಯು ಹಲವಾರು ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

2024 ಮತ್ತು 2025ರಲ್ಲಿ ಟಾಟಾ ಮೋಟಾರ್ಸ್ ಹಲವಾರು ಎಲೆಕ್ಟ್ರಿಕ್ ಮತ್ತು ಐಸಿಇ ವಾಹನಗಳನ್ನು ಅನಾವರಣ ಮಾಡಲಿದೆ. ಮುಂದಿನ 2 ವರ್ಷಗಳಲ್ಲಿ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಕಾರುಗಳ ಲಿಸ್ಟ್ ಇಲ್ಲಿದೆ.

ಪಂಚ್ ಇವಿ (Punch EV): 2024ರ ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ತನ್ನ ಮೈಕ್ರೋ-ಎಸ್‌ಯುವಿ ಪಂಚ್ ಎಲೆಕ್ಟ್ರಿಕ್​ ಕಾರನ್ನು ಬಿಡುಗಡೆ ಮಾಡಲು ಟಾಟಾ ಮೋಟಾರ್ಸ್ ಸಜ್ಜಾಗಿದೆ.

ಕರ್ವ್​ ಇವಿ (Curvv EV): ಪಂಚ್ ಇವಿ ನಂತರ, ಟಾಟಾ ಮೋಟಾರ್ಸ್ ತನ್ನ ಅತ್ಯಂತ ವಿಶಿಷ್ಟ ಎಸ್​​ಯುವಿ ಆದ ಕರ್ವ್​ ಎಲೆಕ್ಟ್ರಿಕ್ ಕಾರನ್ನು 2024 ಏಪ್ರಿಲ್​ನಲ್ಲಿ ಅನಾವರಣಗೊಳಿಸಲಿದೆ.

ಹ್ಯಾರಿಯರ್ ಇವಿ (Harrier EV): ಕ್ರೆಟಾ ಇವಿ ಮತ್ತು ಮಾರುತಿ ಸುಜುಕಿ ಇವಿಎಕ್ಸ್​ಗೆ ಪೈಪೋಟಿ ನೀಡಲು 2024ರ ಜೂನ್​​ನಲ್ಲಿ ಟಾಟಾ ಮೋಟಾರ್ಸ್ ಹ್ಯಾರಿಯರ್​ ಎಲೆಕ್ಟ್ರಿಕ್ ಎಸ್​ಯುವಿ ಅನ್ನು ಬಿಡುಗಡೆ ಮಾಡಲಿದೆ.

ಸಫಾರಿ ಇವಿ (Safari EV): ಹ್ಯಾರಿಯರ್ ಇವಿ ಬಿಡುಗಡೆಯಾದ ನಂತರ ಸಫಾರಿ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಅಧಿಕೃತವಾಗಿ ಪದಾರ್ಪಣೆ ಮಾಡಲಿದೆ. ಹ್ಯಾರಿಯರ್ ಮತ್ತು ಸಫಾರಿ ಈ ಎರಡೂ ಕಾರುಗಳು ವೆಹಿಕಲ್-ಟು-ಲೋಡ್ (V2L) ಮತ್ತು ವೆಹಿಕಲ್-ಟು-ವೆಹಿಕಲ್ (V2V) ಚಾರ್ಜಿಂಗ್ ಸಾಮರ್ಥ್ಯಗಳಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತವೆ.

ಕರ್ವ್ ಐಸಿಇ (Curvv ICE): ಕರ್ವ್ ಎಲೆಕ್ಟ್ರಿಕ್ ಕಾರಿನ ನಂತರ ಟಾಟಾ ಮೋಟಾರ್ಸ್ ಭಾರತದಲ್ಲಿ ಕರ್ವ್ ಐಸಿಇ ಅನ್ನು ಬಿಡುಗಡೆ ಮಾಡುತ್ತದೆ. ಜುಲೈ 2024 ರ ವೇಳೆಗೆ ಇದು ಅನಾವರಣವಾಗುವ ಸಾಧ್ಯತೆಯಿದೆ.

ಅಲ್ಟ್ರೋಝ್​ ಇವಿ: ಭಾರತದಲ್ಲಿ ಅಲ್ಟ್ರೋಝ್​ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವುದಾಗಿ ಈ ಹಿಂದೆಯೇ ಟಾಟಾ ಮೋಟಾರ್ಸ್ ಹೇಳಿತ್ತು. ಆದರೆ ಅದರ ಬಿಡುಗಡೆ ದಿನಾಂಕದ ಬಗ್ಗೆ ಮೌನ ಮುರಿದಿಲ್ಲ. 2025ರ ಜನವರಿಯಲ್ಲಿ ಇದು ಬಿಡುಗಡೆಯಾಗಬಹುದು ಎಂದು ವರದಿಗಳು ತಿಳಿಸಿವೆ.

ಸಿಯೆರಾ ಇವಿ (Sierra EV): ಟಾಟಾ ಮೋಟಾರ್ಸ್ ಆಧುನಿಕ ಟ್ವಿಸ್ಟ್​ನೊಂದಿಗೆ ಹಳೆಯ ಸಿಯೆರಾ ಅನ್ನು ಮತ್ತೆ ತರುತ್ತಿದೆ. ಮೇ 2025 ರ ಸುಮಾರಿಗೆ ಹೊಸ ಸಿಯೆರಾ ಎಸ್​​ಯುವಿ ಎಲೆಕ್ಟ್ರಿಕ್ ಕಾರು ಮೊದಲು ಬಿಡುಗಡೆ ಆಗಲಿದೆ.

ಸಿಯೆರಾ ಐಸಿಇ (Sierra ICE): ಸಿಯೆರಾ ಎಸ್​​ಯುವಿ ಎಲೆಕ್ಟ್ರಿಕ್ ಕಾರಿನ ಬಳಿಕ 2025ರ ಅಂತ್ಯದ ವೇಳೆಗೆ ಸಿಯೆರಾ ಎಸ್​​ಯುವಿ ಐಸಿಇ ಆವೃತ್ತಿ ಬರಲಿದೆ.

Whats_app_banner