Gogoro CrossOver GX250: ಗೊಗೊರೊ ಕ್ರಾಸ್‌ಓವರ್ ಸ್ಮಾರ್ಟ್‌ಸ್ಕೂಟರ್ ಅನಾವರಣ: ವೈಶಿಷ್ಟ್ಯ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Gogoro Crossover Gx250: ಗೊಗೊರೊ ಕ್ರಾಸ್‌ಓವರ್ ಸ್ಮಾರ್ಟ್‌ಸ್ಕೂಟರ್ ಅನಾವರಣ: ವೈಶಿಷ್ಟ್ಯ ಹೀಗಿದೆ

Gogoro CrossOver GX250: ಗೊಗೊರೊ ಕ್ರಾಸ್‌ಓವರ್ ಸ್ಮಾರ್ಟ್‌ಸ್ಕೂಟರ್ ಅನಾವರಣ: ವೈಶಿಷ್ಟ್ಯ ಹೀಗಿದೆ

CrossOver GX250 Smartscooter: ಭಾರತದ ವಿವಿಧ ಪ್ರದೇಶಗಳಲ್ಲಿನ ವಿವಿಧ ರಸ್ತೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಕ್ರಾಸ್‌ಓವರ್ ಜಿಎಕ್ಸ್​250 ಸ್ಮಾರ್ಟ್‌ಸ್ಕೂಟರ್ ಅನ್ನು ಗೊಗೊರೊ ನಿರ್ಮಿಸಿದೆ.

ಗೊಗೊರೊ ಕ್ರಾಸ್‌ಓವರ್ ಜಿಎಕ್ಸ್​250 ಸ್ಮಾರ್ಟ್‌ಸ್ಕೂಟರ್
ಗೊಗೊರೊ ಕ್ರಾಸ್‌ಓವರ್ ಜಿಎಕ್ಸ್​250 ಸ್ಮಾರ್ಟ್‌ಸ್ಕೂಟರ್

ತೈವಾನ್ ಮೂಲದ ಗೊಗೊರೊ ಕಂಪನಿ ಭಾರತದಲ್ಲಿ ಇತ್ತೀಚೆಗೆ ತನ್ನ ಕ್ರಾಸ್‌ಓವರ್ ಜಿಎಕ್ಸ್​250 (CrossOver GX250) ಸ್ಮಾರ್ಟ್‌ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಬ್ಯಾಟರಿ-ಸ್ವಾಪಿಂಗ್ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಹೆಸರುವಾಸಿಯಾಗಿರುವ ಗೊಗೊರೊ ಕಂಪನಿಯು ಭಾರತದಲ್ಲಿ ತಯಾರಿಸಿದ ಮೊದಲ ಸ್ಮಾರ್ಟ್‌ಸ್ಕೂಟರ್ ಇದಾಗಿದೆ.

ಭಾರತದ ವಿವಿಧ ಪ್ರದೇಶಗಳಲ್ಲಿನ ವಿವಿಧ ರಸ್ತೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಕ್ರಾಸ್‌ಓವರ್ ಜಿಎಕ್ಸ್​250 ಅನ್ನು ನಿರ್ಮಿಸಲಾಗಿದೆ. ಇದು 174mm ಗ್ರೌಂಡ್​ ಕ್ಲಿಯರೆನ್ಸ್ ಹೊಂದಿದೆ. ಇದು 2.5kw ಡೈರೆಕ್ಟ್​ ಡ್ರೈವ್​ ಬಳಸುತ್ತದೆ. ಗಂಟೆಗೆ 60 ಕಿಲೋ ಮೀಟರ್​ಗಿಂತ ಗರಿಷ್ಠ ವೇಗ ಹಾಗೂ 111km ಪ್ರಮಾಣೀಕೃತ ರೇಂಜ್​ ಒದಗಿಸುತ್ತದೆ. ಹಿಂದಿನ ಸೀಟಿನಲ್ಲಿ ಸರಕು ಇಟ್ಟುಕೊಳ್ಳಲು, ಮಡಚಲು ಅಥವಾ ತೆಗದುಹಾಕಲು ವ್ಯವಸ್ಥೆ ಇದೆ.

ಕ್ರಾಸ್‌ಓವರ್ GX250 ಸ್ಮಾರ್ಟ್‌ಸ್ಕೂಟರ್ ಆರಂಭದಲ್ಲಿ ದೆಹಲಿ ಮತ್ತು ಗೋವಾದಲ್ಲಿ B2B ಗ್ರಾಹಕರಿಗೆ ಮಾತ್ರ ಲಭ್ಯವಿದೆ. 2024ರ ಮೊದಲಾರ್ಧದಲ್ಲಿ ಮುಂಬೈ ಮತ್ತು ಪುಣೆಯಲ್ಲಿ ಕೂಡ ಗ್ರಾಹಕರಿಗೆ ಲಭ್ಯವಿರಿಸಲು ಕಂಪನಿ ಪ್ಲಾನ್ ಮಾಡಿದೆ. 2024ರ 2ನೇ ತ್ರೈಮಾಸಿಕದಲ್ಲಿ ಗ್ರಾಹಕರ ಬೇಡಿಕೆಗಳನ್ನು ನೋಡಿಕೊಂಡು ಇತರ ನಗರಗಳಿಗೆ ವಿಸ್ತರಿಸಲಿದೆ.

3 ಸೀರೀಸ್​​ನಲ್ಲಿ ಗೊಗೊರೊ ಕ್ರಾಸ್‌ಓವರ್

ಭಾರತದಲ್ಲಿ 3 ಸೀರೀಸ್​​ನಲ್ಲಿ ಗೊಗೊರೊ ಕ್ರಾಸ್‌ಓವರ್ ಲಭ್ಯವಿರಲಿದೆ. ಅವು ಈ ಕೆಳಕಂಡಂತಿವೆ.

1) ಕ್ರಾಸ್‌ಓವರ್ GX250

2) ಕ್ರಾಸ್‌ಓವರ್ 50

3) ಕ್ರಾಸ್‌ಓವರ್ S

ಸದ್ಯ ಕ್ರಾಸ್‌ಓವರ್ GX250 ಮಾತ್ರ ಲಭ್ಯವಿದೆ. ಉಳಿದ ಎರಡು ಮಾದರಿಗಳು 2024ರಲ್ಲಿ ಬಿಡುಗಡೆಯಾಗಲಿದೆ.

Whats_app_banner