ಕಿಮ್ ಕಾರ್ಡಶಿಯಾನ್ ವಿಲಾಸಿ ಕಾರು ಸಂಗ್ರಹಕ್ಕೆ ಹೊಸ ಸೇರ್ಪಡೆ; ಟೆಸ್ಲಾ ಸೈಬರ್‌ಟ್ರಕ್‌ ಸೊಬಗು ನೋಡಲು ಕಣ್ಣುಗಳೆರಡು ಸಾಲದಣ್ಣ
ಕನ್ನಡ ಸುದ್ದಿ  /  ಜೀವನಶೈಲಿ  /  ಕಿಮ್ ಕಾರ್ಡಶಿಯಾನ್ ವಿಲಾಸಿ ಕಾರು ಸಂಗ್ರಹಕ್ಕೆ ಹೊಸ ಸೇರ್ಪಡೆ; ಟೆಸ್ಲಾ ಸೈಬರ್‌ಟ್ರಕ್‌ ಸೊಬಗು ನೋಡಲು ಕಣ್ಣುಗಳೆರಡು ಸಾಲದಣ್ಣ

ಕಿಮ್ ಕಾರ್ಡಶಿಯಾನ್ ವಿಲಾಸಿ ಕಾರು ಸಂಗ್ರಹಕ್ಕೆ ಹೊಸ ಸೇರ್ಪಡೆ; ಟೆಸ್ಲಾ ಸೈಬರ್‌ಟ್ರಕ್‌ ಸೊಬಗು ನೋಡಲು ಕಣ್ಣುಗಳೆರಡು ಸಾಲದಣ್ಣ

ಅಮೆರಿಕದ ಸೆಲೆಬ್ರಿಟಿ ಕಿಮ್ ಕಾರ್ಡಶಿಯಾನ್ ತನ್ನ ಟೆಸ್ಲಾ ಸೈಬರ್‌ಟ್ರಕ್‌ ಅನ್ನು ಕಸ್ಟಮೈಜ್‌ ಮಾಡಿಕೊಂಡಿದ್ದಾರೆ. ಇದಕ್ಕೆ ಮೇಟ್‌ ಗ್ರೇ ಪೇಂಟ್‌ ಬಳಿದು ಅಂದಹೆಚ್ಚಿಸಿದ್ದಾರೆ. 26 ಇಂಚಿನ ಫಾರ್ಗಿಯೊಟೊ ವೀಲ್‌ ಜೋಡಿಸಿದ್ದಾರೆ. ಇವರ ದುಬಾರಿ ಕಾರು ಕಲೆಕ್ಷನ್‌ಗೆ ಸೇರ್ಪಡೆಯಾದ ಟೆಸ್ಲಾ ಸೈಬರ್‌ಟ್ರಕ್‌ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ಕಿಮ್ ಕಾರ್ಡಶಿಯಾನ್ ವಿಲಾಸಿ ಕಾರು ಸಂಗ್ರಹಕ್ಕೆ ಹೊಸ ಸೇರ್ಪಡೆ; ಟೆಸ್ಲಾ ಸೈಬರ್‌ಟ್ರಕ್‌
ಕಿಮ್ ಕಾರ್ಡಶಿಯಾನ್ ವಿಲಾಸಿ ಕಾರು ಸಂಗ್ರಹಕ್ಕೆ ಹೊಸ ಸೇರ್ಪಡೆ; ಟೆಸ್ಲಾ ಸೈಬರ್‌ಟ್ರಕ್‌

ಅಮೆರಿಕದ ಸೆಲೆಬ್ರಿಟಿ ಕಿಮ್‌ ಕಾರ್ಡಶಿಯಾನ್‌ ಅವರ ಲಗ್ಷುರಿ ಕಾರು ಸಂಗ್ರಹಕ್ಕೆ ಇದೀಗ ಟೆಸ್ಲಾ ಸೈಬರ್‌ಟ್ರಕ್‌ ಸೇರ್ಪಡೆಯಾಗಿದೆ. ಅಂದಹಾಗೆ, ಇವರು ಈ ಎಲೆಕ್ಟ್ರಿಕ್‌ ಕಾರನ್ನು ಸಾಕಷ್ಟು ಮಾರ್ಪಾಡು ಮಾಡಿಕೊಂಡಿದ್ದಾರೆ. ಅಮೆರಿಕದ ಸೆಲೆಬ್ರಿಟಿ ಮತ್ತು ಸಮಾಜ ಸೇವಕಿಯು ಈ ಕಾರಿಗೆ ಕಸ್ಟಮ್‌ ಪೇಂಟ್‌ ಮಾಡಿಕೊಂಡಿದ್ದಾರೆ. ಈ ಮೂಲಕ ಟೆಸ್ಲಾ ಸೈಬರ್‌ ಟ್ರಕ್‌ಗೆ ಹೊಸ ಪೇಂಟ್‌ ಜಾಬ್‌ ನೀಡಿದ ಕೆಲವೇ ಕೆಲವು ಸೆಲೆಬ್ರಿಟಿಗಳ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಈಗಾಗಲೇ ಕಿಮ್‌ ಬಳಿ ಮೆಬಾಕ್‌ಗಳು, ರೇಂಜ್‌ ರೋವರ್‌ಗಳು, ಕಾಡಿಲಾಕ್‌ ಕಾರುಗಳು ಇವೆ. ಇದೀಗ ಈ ಸಾಲಿಗೆ ಟೆಸ್ಲಾ ಸೈಬರ್‌ಟ್ರಕ್‌ ಸೇರ್ಪಡೆಯಾಗಿದೆ.

ಸಾಕಷ್ಟು ಸೈಬರ್‌ಟ್ರಕ್‌ ಮಾಲೀಕರು ತಮ್ಮ ಟ್ರಕ್‌ಗೆ ನಿರ್ದಿಷ್ಟ ಬಾಡಿ ಬಣ್ಣ ಪಡೆದಿದ್ದಾರೆ. ಆದರೆ, ಕೆಲವರು ಮಾತ್ರ ಸಂಪೂರ್ಣವಾಗಿ ಬಾಡಿ ಬಣ್ಣ ಬದಲಾಯಿಸಿಕೊಂಡಿದ್ದಾರೆ. ಇದು ಸ್ಟೇನ್‌ಲೆಸ್‌ ಸ್ಟೀಲ್‌ ಕಾರಾಗಿರುವುದರಿಂದ ಇದಕ್ಕೆ ಹೊಸ ಬಣ್ಣ ನೀಡುವುದು ಕಷ್ಟ. ಹೀಗಿದ್ದರೂ, ಕಿಮ್‌ ಕಾರ್ಡಿಶಿಯಾನ್‌ ಅವರು ಕಾರಿನ ಸಂಪೂರ್ಣ ಬಣ್ಣವನ್ನು ಕಂದಾಗಿಸಿದ್ದಾರೆ. ಈಕೆಯ ಗ್ಯಾರೇಜ್‌ನಲ್ಲಿರುವ ಬಹುತೇಕ ಕಾರುಗಳ ಬಣ್ಣ ಇದೇ ಇದೆ.

ಸಂಪೂರ್ಣ ಕಾರಿಗೆ ಮ್ಯಾಟ್‌ ಬೂದು ಛಾಯೆಯ ಪೇಂಟ್‌ ಬಳಿಯಲಾಗಿದೆ. ಸಾಮಾನ್ಯವಾಗಿ ಸೈಬರ್‌ಟ್ರಕ್‌ ಕಪ್ಪು ಬಣ್ಣದ ಕಮಾನು, ಸೈಡ್‌ ಸ್ಕರ್ಟ್‌, ಬಂಪರ್‌ ಹೊಂದಿರುತ್ತದೆ. ಆದರೆ, ಕಿಮ್‌ ಕಾರಿಗೆ ಬೂದು ಬಣ್ಣದ ಪೇಂಟ್‌ ಜಾಬ್‌ ಮಾಡಲಾಗಿದೆ. ಇದಕ್ಕೆ ತಕ್ಕಂತೆ 26-ಇಂಚಿನ ಫೋರ್ಜಿಯಾಟೊ ಟ್ರಾವಿಸ್ ಸ್ಕಾಟ್ ವೀಲ್‌ಗಳನ್ನೂ ಜೋಡಿಸಿಕೊಂಡಿದ್ದಾರೆ.

ಟೆಸ್ಲಾ ಸೈಬರ್‌ಟ್ರಕ್‌ ಬಗ್ಗೆ ಹೆಚ್ಚಿನ ವಿವರ

ಇದು 2013ರಿಂದ ಮಾರುಕಟ್ಟೆಯಲ್ಲಿದ್ದು, ಈಗ ಸಾಕಷ್ಟು ಹೊಸ ಆವೃತ್ತಿಗಳು ಇವೆ. ಇದು ಬ್ಯಾಟರಿ ಎಲೆಕ್ಟ್ರಿಕ್‌ ಮೀಡಿಯಂ ಡ್ಯೂಟಿ ವಾಹನವಾಗಿದೆ. ಇದು ದೊಡ್ಡ ಪೇಲೋಡ್‌ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಅಂದರೆ, 5 ಕೆಜಿ. ತೂಕ ಹೊರುವ ಸಾಮರ್ಥ್ಯ ಹೊಂದಿದೆ. ಒಂದು ಫುಲ್‌ ಚಾರ್ಜ್‌ಗೆ ಸುಮಾರು 550 ಕಿ.ಮೀ. ದೂರ ಸಂಚರಿಸಬಲ್ಲದು. ಸೈಬರ್‌ಬೀಸ್ಟ್‌, ಆಲ್‌ ವೀಲ್‌ ಡ್ರೈವ್‌ ಮತ್ತು ರಿಯರ್‌ ವೀಲ್‌ ಡ್ರೈವ್‌ ಎಂಬ ಮೂರು ಆವೃತ್ತಿಗಳಲ್ಲಿ ಟೆಸ್ಲಾ ಸೈಬರ್‌ಟ್ರಕ್‌ ಲಭ್ಯವಿದೆ.

ಟೆಸ್ಲಾ ಸೈಬರ್‌ಟ್ರಕ್‌ ಪರ್ಫಾಮೆನ್ಸ್‌ ಹೇಗಿದೆ?

ಟೆಸ್ಲಾ ಸೈಬರ್‌ಟ್ರಕ್‌ ಕೇವಲ 2.6 ಸೆಕೆಂಡ್‌ಗಳಲ್ಲಿ 0-100 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. ಇದರಲ್ಲಿ ಗಂಟೆಗೆ ಗರಿಷ್ಠ 209 ಕಿ.ಮೀ. ವೇಗದಲ್ಲಿ ಸಾಗಬಹುದು. ಇದು 845 ಬಿಎಚ್‌ಪಿ ಉತ್ಪಾದಿಸುತ್ತದೆ. 5 ಸಾವಿರ ಕೆಜಿ ತೂಕ ಟೋ ಮಾಡಬಲ್ಲದು. ಸಿಂಗಲ್‌ ಚಾರ್ಜ್‌ನಲ್ಲಿ ಕನಿಷ್ಠ 484 ಕಿ.ಮೀ. ಸಾಗಬಲ್ಲದು.

ಎಎಂಡಿ ಆವೃತ್ತಿಯು ಕಡಿಮೆ ಪರ್ಫಾಮೆನ್ಸ್‌ ಹೊಂದಿದೆ. ಇದು 600 ಬಿಎಚ್‌ಪಿ ಪವರ್‌ ನೀಡುತ್ತದೆ. ಆದರೆ, ಫುಲ್‌ ಚಾರ್ಜ್‌ಗೆ 550 ಕಿ.ಮೀ. ಸಾಗುತ್ತದೆ. ಆರ್‌ಡಬ್ಲ್ಯುಡಿಯು ಫುಲ್‌ ಚಾರ್ಜ್‌ಗೆ 400 ಕಿ.ಮೀ. ಚಲಿಸುತ್ತದೆ, ಇದರ ಟೋಯಿಂಗ್‌ (ತೂಕ ಹೊರುವ ಸಾಮರ್ಥ್ಯ) 3,400 ಕೆಜಿ ಇದೆ. ಈ ಆವೃತ್ತಿಯು 2025ಕ್ಕೆ ರಸ್ತೆಗಿಳಿಯಲಿದೆ.

ಡಿಸೈನ್‌ ಮತ್ತು ಬಳಕೆ

ಕಂಪನಿಯು ಈ ಕಾರನ್ನು ಅಸಾಂಪ್ರದಾಯಿಕವಾಗಿ ವಿನ್ಯಾಸ ಮಾಡಿದೆ. ಕನಿಷ್ಠ ಸ್ಟೈಲ್‌ ಇದರ ವಿಶೇಷ. ಇದರ ಬಾಡಿ ಆಂಗ್ಯುಲರ್‌ ಶಾರ್ಪ್‌ ಇದೆ. ಇದು ಕ್ಲಿಯರ್‌ ಸ್ಟೇನ್‌ಲೆಸ್‌ ಸ್ಟೀಲ್‌ ಪ್ಯಾನೆಲ್‌ಗಳನ್ನು ಹೊಂದಿದೆ. ಕಾರಿನ ಸುತ್ತಮುತ್ತ ರಿಫ್ಲೆಕ್ಟ್‌ ಆಗುವಂತೆ ಇದೆ. ವಿಜ್ಞಾನ ಕಾಲ್ಪನಿಕ ಕಾದಂಬರಿಗಳಲ್ಲಿ ಇರುವಂತೆ ಈ ಕಾರನ್ನು ವಿನ್ಯಾಸಮಾಡಿದೆ. ಹಿಂಬದಿಯಲ್ಲಿ 6 ಅಡಿ ಉದ್ದದ ಬೆಡ್‌ ಹೊಂದಿದೆ. ಈ ಟ್ರಕ್‌ಮನೆಯೊಂದಕ್ಕೆ 11.5 ಕರೆಂಟ್‌ ನೀಡಬಲ್ಲದು ಎಂದು ಟೆಸ್ಲಾ ಈ ಕಾರಿನ ಜಾಹೀರಾತು ನೀಡಿದೆ.

ಕಿಮ್‌ ಕಾರ್ಡಿಶಿಯಾನ್‌ ಕಾರು ಜಗತ್ತು

ಅಮೆರಿಕದ ಈ ಜನಪ್ರಿಯ ಸೆಲೆಬ್ರಿಟಿ ಮನೆಯಲ್ಲಿ ಹಲವು ವಿಲಾಸಿ ಕಾರುಗಳಿವೆ. ರೋಲ್ಸ್‌ ರಾಯ್ಸ್‌ ಘೋಸ್ಟ್‌ ಎಂಬ ಕಾರನ್ನು ಈಕೆ ಹೊಂದಿದ್ದಾರೆ. ಮರ್ಸಿಡಿಸ್‌ ಬೆಂಜ್‌ ಮೆಬಾಕ್‌ ಕಾರುಗಳೂ ಇವೆ. ಅಂದರೆ, ಜಿಎಲ್‌ಎಸ್‌ 600, ಎಸ್‌580 ಕಾರುಗಳಿವೆ. ಇದೀಗ ಇವರ ಕಾರು ಜಗತ್ತಿಗೆ ಟೆಸ್ಲಾ ಎಲೆಕ್ಟ್ರಿಕ್‌ ಕಾರು ಸೇರ್ಪಡೆಗೊಂಡಿದೆ.

Whats_app_banner