10 ಲಕ್ಷ ಮಾರಾಟಗೊಂಡಿದೆ ಈ ಟಿವಿಎಸ್‌ ಬೈಕ್‌; ಮಿಲಿಯನ್‌ ಸಾಧನೆ ಮಾಡಿದ ಈ ದ್ವಿಚಕ್ರವಾಹನ ನಿಮ್ಮಲ್ಲಿದೆಯ?
ಕನ್ನಡ ಸುದ್ದಿ  /  ಜೀವನಶೈಲಿ  /  10 ಲಕ್ಷ ಮಾರಾಟಗೊಂಡಿದೆ ಈ ಟಿವಿಎಸ್‌ ಬೈಕ್‌; ಮಿಲಿಯನ್‌ ಸಾಧನೆ ಮಾಡಿದ ಈ ದ್ವಿಚಕ್ರವಾಹನ ನಿಮ್ಮಲ್ಲಿದೆಯ?

10 ಲಕ್ಷ ಮಾರಾಟಗೊಂಡಿದೆ ಈ ಟಿವಿಎಸ್‌ ಬೈಕ್‌; ಮಿಲಿಯನ್‌ ಸಾಧನೆ ಮಾಡಿದ ಈ ದ್ವಿಚಕ್ರವಾಹನ ನಿಮ್ಮಲ್ಲಿದೆಯ?

ಟಿವಿಎಸ್‌ ಕಂಪನಿಯು ತುಂಬಾ ಕಡಿಮೆ ಅವಧಿಯಲ್ಲಿ ಟಿವಿಎಸ್‌ ರೈಡರ್‌ 125 ಬೈಕ್‌ ಮಾರಾಟ ಹೆಚ್ಚಿಸಿಕೊಂಡಿದೆ. ಲಾಂಚ್‌ ಆದ ದಿನದಿಂದ ಇಲ್ಲಿಯವರೆಗೆ ಒಂದು ಮಿಲಿಯನ್‌ ಅಂದ್ರೆ ಹತ್ತು ಲಕ್ಷ ರೈಡರ್‌ ಬೈಕ್‌ಗಳು ಮಾರಾಟಗೊಂಡಿವೆ. ಇದು ಕಂಪನಿಯ ಈ ವರ್ಷದ ಅತ್ಯಧಿಕ ಮಾರಾಟದ ಬೈಕ್‌ ಕೂಡ ಹೌದು.

10 ಲಕ್ಷ ಮಾರಾಟಗೊಂಡ ಟಿವಿಎಸ್‌ ರೈಡರ್‌ 125 ಸಿಸಿ
10 ಲಕ್ಷ ಮಾರಾಟಗೊಂಡ ಟಿವಿಎಸ್‌ ರೈಡರ್‌ 125 ಸಿಸಿ

ಟಿವಿಎಸ್‌ ಕಂಪನಿಯ ಅತ್ಯಧಿಕ ಮಾರಾಟದ ದ್ವಿಚಕ್ರವಾಹನ ಯಾವುದು? ಉತ್ತರ ಟಿವಿಎಸ್‌ ರೈಡರ್‌. 2021ರಲ್ಲಿ ಮೊದಲ ಬಾರಿಗೆ ಆಗಮಿಸಿದಾಗಿನಿಂದ ಈ ಬೈಕ್‌ ಮಾರಾಟದಲ್ಲಿ ಉತ್ತಮ ಸಾಧನೆ ಮಾಡಿದೆ. ಈ ಸ್ಪೋರ್ಟ್ಸ್‌ ಬೈಕ್‌ನ ಮಾರಾಟ ಒಂದು ದಶಲಕ್ಷ ಗಡಿ ದಾಟಿದೆ. ಟಿವಿಎಸ್‌ ಮೋಟಾರ್ ಕಂಪನಿಯು ಹೊಸ ರೈಡರ್ ಐಗೊ ಎಂಬ ಮಾದರಿಯನ್ನು ಇತ್ತೀಚಗೆ ಬಿಡುಗಡೆ ಮಾಡಿದೆ. ಇದು ಈ ಬೈಕ್‌ನ ಆರನೇ ರೂಪಾಂತರ. ಇದೀಗ ರೈಡರ್ 125 ಕಡಿಮೆ ಅವಧಿಯಲ್ಲಿ ಒಂದು ಮಿಲಿಯನ್ ಮಾರಾಟದ ಮೈಲಿಗಲ್ಲನ್ನು ದಾಟಿದೆ ಎಂದು ಟಿವಿಎಸ್‌ ಕಂಪನಿಯು ತಿಳಿಸಿದೆ.

ಟಿವಿಎಸ್‌ ರೈಡರ್‌ 125: ಮೂರು ವರ್ಷದ ಸಾಧನೆ

ಎಸ್‌ಐಎಎಂನ ಇತ್ತೀಚಿನ ಸಗಟುಮಾರಾಟ ಅಂಕಿಅಂಶಗಳ ಪ್ರಕಾರ ಟಿವಿಎಸ್‌ ರೈಡರ್‌ 125ಯು ಇಲ್ಲಿಯವರೆಗೆ ಲಾಂಚ್‌ ಆದ ದಿನದಿಂದ 10,07,514 ಯೂನಿಟ್‌ ಮಾರಾಟಗೊಂಡಿದೆ. ಕಂಪನಿಯು ಈ ವರ್ಷ ಏಪ್ರಿಲ್‌ ತಿಂಗಳಿನಿಂದ ಸೆಪ್ಟೆಂಬರ್‌ ತಿಂಗಳವರೆಗೆ 212,941 ಯೂನಿಟ್‌ ಬೈಕ್‌ಗಳನ್ನು ಮಾರಾಟ ಮಾಡಿದೆ. 2024ರ ಆರ್ಥಿಕ ವರ್ಷದವರೆಗೆ ಒಟ್ಟು 787,059 ರೈಡರ್‌ ಬೈಕ್‌ಗಳನ್ನು ಮಾರಾಟ ಮಾಡಿದೆ. ಇದು 2024ರ ಹಣಕಾಸು ವರ್ಷದಲ್ಲಿ ಟಿವಿಎಸ್‌ ಕಂಪನಿಯ ಅತ್ಯಧಿಕ ಮಾರಾಟದ ಬೈಕಾಗಿದೆ. ಭಾರತದಲ್ಲಿ ಜುಪೀಟರ್‌ ಮತ್ತು ಎಕ್ಸ್‌ಎಲ್‌ 100 ಮಾದರಿಗಳ ಬಳಿಕ ಟಿವಿಎಸ್‌ನ ಅತ್ಯಧಿಕ ಮಾರಾಟದ ಮೂರನೇ ಬೈಕಾಗಿದೆ.

ಟಿವಿಎಸ್‌ ರೈಡರ್‌
ಟಿವಿಎಸ್‌ ರೈಡರ್‌

ಟಿವಿಎಸ್‌ ಕಂಪನಿಯ ರೈಡರ್‌ ಬೈಕ್‌ನ ಯಶಸ್ಸು ನೋಡಿ ಹಲವು ಸ್ಪೋರ್ಟ್ಸ್‌ ಬೈಕ್‌ಗಳು ಈ ವಿಭಾಗಕ್ಕೆ ಪ್ರವೇಶಿಸಿದ್ದವು. ಹೀರೋ ಮೊಟೊಕಾರ್ಪ್‌ ಕಂಪನಿಯು ಎಕ್ಸ್‌ಟ್ರೀಮ್‌ 125ಆರ್‌ ಬೈಕನ್ನು ಈ ವರ್ಷದ ಆರಂಭದಲ್ಲಿ ಪರಿಚಯಿಸಿತ್ತು. ಇದೀಗ ಬಜಾಜ್‌ ಪಲ್ಸರ್‌ 125 ಅನಾವರಣಗೊಂಡಿದೆ. 125 ಸಿಸಿ ವಿಭಾಗದಲ್ಲಿ ಬೈಕ್‌ ಪ್ರಿಯರಿಗೆ ಸ್ಪೋರ್ಟ್ಸ್‌ ರೈಡ್‌ ಫೀಲ್‌ ನೀಡುತ್ತಿದೆ.

ಟಿವಿಎಸ್‌ ರೈಡರ್‌ ಐಗೋ

ಟಿವಿಎಸ್‌ ಕಂಪನಿಯು ರೈಡರ್‌ 125 ಐಗೊ ಆವೃತ್ತಿಯನ್ನು ಪರಿಚಯಿಸಿದೆ. ಇದು ಈ ಬೈಕ್‌ನ ಮಾರಾಟ ಇನ್ನಷ್ಟು ಹೆಚ್ಚಿಸಲಿದೆ. ಇದರ ದೆಹಲಿ ಎಕ್ಸ್‌ ಶೋರೂಂ ದರ 98,389 ರೂಪಾಯಿ ಇದೆ. ಹೊಸ ರೈಡರ್‌ನಲ್ಲಿ ಬೂಸ್ಟ್‌ ಮೂಡ್‌ ಇದ್ದು, ಐಗೊ ಅಸಿಸ್ಟ್‌ ಟೆಕ್ನಾಲಜಿ ಇದೆ. ಟಾರ್ಕ್‌ 0.55 ಎನ್‌ಎಂ ಹೆಚ್ಚುವುದರಿಂದ ಇದು 0-60 ಕಿ.ಮೀ. ಆಕ್ಸಿಲರೇಷನ್‌ ಅನ್ನು 5.8 ಸೆಕೆಂಡ್‌ನಲ್ಲಿ ಪಡೆಯಲು ಸಾಧ್ಯವಾಗುತ್ತದೆ.

ಹೊಸ ಟಿವಿಎಸ್‌ ರೈಡರ್ ಐಗೊ ಹೊಸ ನಾರ್ಡೊ ಗ್ರೇ ಪೇಂಟ್ ಸ್ಕೀಮ್‌ನಲ್ಲಿ ಕೆಂಪು-ಮುಗಿದ ಮಿಶ್ರಲೋಹದ ಚಕ್ರಗಳೊಂದಿಗೆ ಲಭ್ಯವಿದೆ. ಬೈಕ್ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್ ಒಳಗೊಂಡಿದೆ. ವಾಯ್ಸ್‌ ಅಸಿಸ್ಟ್‌ , ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್‌ ಅಲರ್ಟ್‌ ಎಚ್ಚರಿಕೆ ಮತ್ತು ಅಧಿಸೂಚನೆ ನಿರ್ವಹಣೆಯಂತಹ ಫೀಚರ್‌ಗಳನ್ನು ಹೊಂದಿದೆ.

ಹೊಸ ಟಿವಿಎಸ್‌ ರೈಡರ್ ಐಗೊನಲ್ಲಿ 124.8 ಸಿಸಿ ಏರ್ ಮತ್ತು ಆಯಿಲ್-ಕೂಲ್ಡ್ ಮೋಟರ್‌ನಿಂದ 7,500 ಆರ್‌ಪಿಎಂನಲ್ಲಿ 11.22 ಬಿಎಚ್‌ಪಿ ಮತ್ತು 6,000 ಆರ್‌ಪಿಎಂನಲ್ಲಿ 11.75 ಎನ್‌ಎಂಗೆ ಟ್ಯೂನ್ ಮಾಡಲ್ಪಟ್ಟಿದೆ. 5-ಸ್ಪೀಡ್ ಗಿಯರ್‌ಬಾಕ್ಸ್‌ ಇದೆ.

Whats_app_banner